ಕನ್ನಡ ಕೀಲಿಮಣೆ ಬಳಸುವ ಬಗ್ಗೆ

ಕೃಪೆಃ ಬರಹ.ಕಾಂ

ಕಣಜದಲ್ಲಿ ಕನ್ನಡ ಅಕ್ಷರಗಳನ್ನು ಬರೆಯುವುದು ನಮ್ಮ ಹೆಸರುಗಳನ್ನು ಇಂಗ್ಲೀಷಿನಲ್ಲಿ ಬರೆದಷ್ಟೇ ಸುಲಭ. ಉದಾಹರಣೆಗೆ “ಚೆಲುವ ಕನ್ನಡ ನಾಡು” ಎಂದು ಬರೆಯಲು “cheluva kannaDa nADu”. ನಿಮ್ಮ ಸಹಾಯಕ್ಕಾಗಿ ಇಲ್ಲಿ ಕೆಲವು ಉದಾಹರಣೆಗಳೊಂದಿಗೆ ವಿವರಿಸಲಾಗಿದೆ.

ಸ್ವರಾಕ್ಷರಗಳು(vowels):

ಅ=a, ಆ=A/aa, ಇ=i, ಈ=I/ee, ಉ=u, ಊ=U/oo, ಋ=Ru, ೠ=RU, ಎ=e, ಏ=E, ಐ=ai, ಒ=o, ಓ=O, ಔ=au,ou

ಂ = M

ಃ = H

ವ್ಯಂಜನಗಳು(Consonant):

ಕ್=k, ಖ್=kh, ಗ್=g, ಘ್=gh, ಙ್= NG

ಚ್=ch, ಛ್=Ch, ಜ್=j, ಝ್=z, ಞ್=NY

ಟ್=T, ಠ್=Th, ಡ್=D, ಢ್=Dh, ಣ್=N

ತ್=t, ಥ್=th, ದ್=d, ಧ್=dh, ನ್=n

ಪ್=p, ಫ್=ph, ಬ್=b, ಭ್=bh, ಮ್=m

ಯ್=y, ರ್=r, ಱ್=Rr, ಲ್=l, ವ್=v,w, ಶ್=S/sh, ಷ್=Sh, ಸ್=s, ಹ್=h, ಳ್=L, ೞ್=LL, ಕ್ಷ್=x, ತ್ರ್=tr, ಜ್ಞ್=jNY/Gy

ಚಿಹ್ನೆಗಳುಃ

ಆಂಗ್ಲ ಭಾಷೆಯ  [ ] { } ( ) – + * / = | ; : . , ” ? ! % \ ~ _ ಮೊದಲಾದ ಚಿಹ್ನೆಗಳು ಹಾಗೆಯೇ ಕನ್ನಡದಲ್ಲೂ ಬಳಕೆಯಾಗುತ್ತದೆ.


ವ್ಯಂಜನಗಳನ್ನು ಸ್ವರಾಕ್ಷರಗಳಿಲ್ಲದೇ ಬಳಸಿದಾಗ, ಅನು ಮೂಲವ್ಯಂಜನ (dead consonant) ಆಗಿ ಉಳಿದುಕೊಳ್ಳುಕೊತ್ತದೆ.

ಉದಾಃ k, c, T, t, p – ಕ್, ಚ್, ಟ್, ತ್, ಪ್

ವ್ಯಂಜನಗಳ ಮುಂದೆ ಸ್ವರಾಕ್ಷರಗಳನ್ನು ಸೇರಿಸಿದಾಗ, ಅದು ಗುಣಿತಾಕ್ಷರ(live consonant)ವಾಗಿ ಬದಲಾಗುತ್ತದೆ.

ಉದಾಃ ka kA ki kI ku kU kRu kRU ke kE kai ko kO kau kaM kaH

ಕ ಕಾ ಕಿ ಕೀ ಕು ಕೂ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕಃ

kUDi bALONa. sEri duDiyONa.

ಕೂಡಿ ಬಾಳೋಣ. ಸೇರಿ ದುಡಿಯೋಣ.

ಎರಡು ಅಥವಾ ಹೆಚ್ಚು ವ್ಯಂಜನಗಳನ್ನು ಜೊತೆಯಾಗಿ ಬಳಸಿದಾಗ, ಅದು ಒತ್ತಕ್ಷರ(consonant conjunct). ಮೊದಲ ವ್ಯಂಜನವು ಪೂರ್ಣ ರೂಪ ಹಾಗೂ ಮುಂದಿನ ವ್ಯಂಜನಗಳು ಅರ್ಧಕ್ಷರವಾಗಿ ಬದಲಾಗುತ್ತವೆ.

ಉದಾ: rAjkumAr – ರಾಜ್ಕುಮಾರ್,

sAPTwEr – ಸಾಫ್ಟ್ವೇರ್


ಒಂದು ಶಬ್ದದ ಮಧ್ಯದಲ್ಲಿ ಮೂಲವ್ಯಂಜನ(dead consonant)ಗಳು ಅಗತ್ಯವಿದ್ದರೆ,‌ ^ಅಕ್ಷರವನ್ನು ಬಳಸಿ ಬರೆಯಬಹುದು.(ಉದಾಹರಣೆ ನೋಡಿ).

Example: rAjkumAr – ರಾಜ್ಕುಮಾರ್

rAj^kumAr – ರಾಜ್‍ಕುಮಾರ್

rAj^^kumAr – ರಾಜ್‌ಕುಮಾರ್

sAPTwEr – ಸಾಫ್ಟ್ವೇರ್

sAphT^wEr – ಸಾಫ್ಟ್‍ವೇರ್

sAphT^^wEr – ಸಾಫ್ಟ್‌ವೇರ್

 

ಎರಡು ಇಂಗ್ಲಿಷ್ ಅಕ್ಷರಗಳು ಸೇರಿ ಒಂದು ಕನ್ನಡ ಅಕ್ಷರವಾಗುತ್ತಿರುವಲ್ಲಿ ಅವುಗಳನ್ನು ಪ್ರತ್ಯೇಕವಾಗಿ ಬಳಸಲು ^ ಅನ್ನು ಬಳಸಬಹುದು.

Example: iMDiyainPo = ಇಂಡಿಯೈನ್ಫೊ

iMDiya^inPo = ಇಂಡಿಯ‍ಇನ್ಫೊ

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ