ಗುರುವಿನೊಡನೆ ದೇವರಡಿಗೆ : ೧೦೧. ಪಾಶ್ಚಾತ್ಯ ವಿಜ್ಞಾನ ಮತ್ತು ನೈಜಸುಖ

Friday, July 27th, 2012

ಬೇಲೂರು ಮಠ ಸೋಮವಾರ, ಮೇ ೩೧, ೧೯೩೨   ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನದ ಉನ್ನತಿಯ ಫಲವಾಗಿ, ಅದರ ಜೊತೆ ಜೊತೆಗೇ, ಮಾನವನ ದೈನಂದಿನ ಜೀವನದಲ್ಲಿ ಸುಖಸ್ವಾಚ್ಛಂದ್ಯ ಮತ್ತು ಆರಾಮದ ವ್ಯವಸ್ಥೆ ಹಚ್ಚಿರುವುದೆಂದೂ, ಆ ದೃಷ್ಟಿಯಿಂದ ನೋಡಿದರೆ ಭಾರತೀಯರ ಬದುಕಿಗಿಂತಲೂ ಪಾಶ್ಚಾತ್ಯರು ಬದುಕಿನಲ್ಲಿ ಹೆಚ್ಚು ಸುಖಿಗಳಾಗಿರುವರೆಂದೂ ಮಾತು ಬಂದಾಗ ಮಹಾಪುರುಷಜಿ ಹೇಳಿದರು: “ ಆ ಎಲ್ಲ ಸುಖವೂ ಎಂಥಾದ್ದು? ಕ್ಷಣಿಕ ಸುಖ. ಅದರಲ್ಲೇನಿದೆ? ಅವರು ಭಗವದಾನಂದದ ಅಸ್ವಾದವನ್ನು ಯಾವಾಗಲೂ ಸವಿದಿಲ್ಲವಾದ್ದರಿಂದಲೆ ಈ ಕ್ಷಣಿಕ ಆನಂದದಿಂದ ಉನ್ಮತ್ತರಾಗಿದ್ದಾರೆ. ಅಯ್ಯಾ, ಯಾರು [...]

ಗುರುವಿನೊಡನೆ ದೇವರಡಿಗೆ : ೯೮. ಭಕ್ತಿ ಉಂಟಾದೊಡನೆ ಸರ್ವವೂ ಸ್ವರ್ಗ!

Friday, July 27th, 2012

  ಬೇಲೂರು ಮಠ ಬುಧವಾರ, ಏಪ್ರಿಲ್ ೨೭, ೧೯೩೨ ಅಮೆರಿಕಾದಿಂದ ಪ್ರಕಾಶಿತವಾಗಿದ್ದ  ‘ಏಶಿಯಾ’ ಮಾಸಪತ್ರಿಕೆಯನ್ನು ಓದುತ್ತಾ ಓದುತ್ತಾ ಅಲ್ಲಿ ರಷ್ಯಾದೇಶವು ಕಾನೂನಿನಿಂದಲೆ ನಿರುದ್ಯೋಗವನ್ನು ನಿರ್ಮೂಲ ಮಾಡಿದೆ ಎಂಬ ಸುದ್ದಿಯನ್ನು ಕೇಳಿ ಮಹಾಪುರುಷಜಿಗೆ ಮಹದಾನಂದವಾಗಿ ಹೇಳಿದರು : “ಭೇಷ್! ಬಹಳ ಒಳ್ಳೇದ. ಅಂತಹ ಸುದ್ದಿ ಕೇಳಿದರೇ ಎಷ್ಟೋ ಆನಂದವಾಗುತ್ತದೆ. ಆಹಾ! ಭಾರತದೇಶದ ಕಾರ್ಮಿಕರದು ಎಂತಹ ದುರ್ದಶ! ಪರಾಧೀನ ದೇಶದಲ್ಲಿ ಗರೀಬರನ್ನು ಕೇಳುವವರಾರು? ಅವರಿಗೆ ಎಂದಾದರೂ ಸುದಿನ ಬಂದೀತೆ? ಠಾಕೂರ್, ಇವರಿಗೆ ಏನಾದರೂ ಗತಿ ಕಾಣಿಸುತ್ತೀರಾ? ನೀವೂ ದೀನ ಜನರಿಗಾಗಿಯೆ [...]

ಗುರುವಿನೊಡನೆ ದೇವರಡಿಗೆ : ೯೪. ಸಂನ್ಯಾಸಿಯ ಹೊರೆ ಮತ್ತು ಹೊಣೆ

Friday, July 27th, 2012

  ಬೇಲೂರು ಮಠ ೧೯೩೧ ಮಹಾಪುರುಷ ಮಹಾರಾಜ್ ಒಂದು ದಿನ ಸಂನ್ಯಾಸಿಯ ಕರ್ತವ್ಯ ಸಂಬಂಧವಾಗಿ ಹೇಳಿದರು: “ಸಾಧುವಾದವನು ಬೆಳಗಿನ ಜಾವದಲ್ಲಿಯೆ ಬಹು ಮುಂಚಿತವಾಗಿ ಹಾಸಿಗೆ ಬಿಟ್ಟೇಳಬೇಕು. ರಾತ್ರಿ ಮೂರು ಗಂಟೆ ಅಥವಾ ನಾಲ್ಕು ಗಂಟೆ ಮೇಲೆ ಮಲಗಿರಬಾರದು. ಸಾಧುವಾದವನು ಆಮೇಲೆ ಏತಕ್ಕೆ ತಾನೆ ಮಲಗಬೇಕು? ಠಾಕೂರರನ್ನು ನೋಡಿದ್ದೇವಲ್ಲಾ, ಅವರು ಮೂರು ನಾಲ್ಕು ಗಂಟೆ ಮೇಲೆ ಎಂದೂ ನಿದ್ದೆ ಮಾಡುತ್ತಿರಲಿಲ್ಲ. ದೇವರನಾಮ ಹೇಳುತ್ತಿದ್ದರು. ಸಂನ್ಯಾಸಿ ಬೆಳಗ್ಗೆ ಮುಂಚೆ ಸ್ನಾನ ಮಾಡಬೇಕು. ಸ್ನಾನದ ತರುವಾಯ ಧ್ಯಾನ ಧಾರಣಾದಿಗಳಲ್ಲಿ ತೊಡಗಬೇಕು. ಅವನು [...]

ಗುರುವಿನೊಡನೆ ದೇವರಡಿಗೆ : ೧೦೭. ಅಜಾಮಿಳೋಪಾಖ್ಯಾನ

Friday, July 27th, 2012

  ಬೇಲೂರು ಮಠ  ಬುಧವಾರ, ಡಿಸೆಂಬರ್ ೭, ೧೯೩೨ ವೇಳೆ ಅಪರಾಹ್ನ. ಮಹಾಪುರುಷ ಮಹಾರಾಜ್ ಒಬ್ಬ ಸೇವಾರ್ಥಿಗೆ ಹೇಳಿದರು: “ಶ್ರೀಮದ್ ಭಾಗವತ ತರುತ್ತೀಯಾ? ಅಜಾಮಿಳನ ಉಪಾಖ್ಯಾನ ಕೇಳಬೇಕು ಎಂದು ಒಂದಿಷ್ಟು. ಇಚ್ಛೆಯಾಗಿದೆ.” ತದನುಸಾರವಾಗಿ ಭಾಗವತವನ್ನು ತಂದು ಆ ಭಾಗವನ್ನು ಓದತೊಡಗಲಾಯಿತು. ರಾಜಾ ಪರೀಕ್ಷಿತನು ಶುಕದೇವನನ್ನು ಕೇಳುತ್ತಾನೆ: “ಹೇ ಮಹಾಭಾಗ, ಮನುಷ್ಯನು ಪಾಪಕರ್ಮದಿಂದ ಯಾವ  ಪ್ರಕಾರ ನಿರತನಾಗಬಲ್ಲನು; ಮತ್ತು ಪಾಪಕರ್ಮಜನಿತವಾದ ವಿವಿಧ ಉಗ್ರ ಯಾತನಾಪೂರ್ಣ ನರಕ ಭೋಗದಿಂದ ಯಾವ ಪ್ರಕಾರವಾಗಿ ನಿಷ್ಕೃತಿ ಹೊಂದಲು ಸಮರ್ಥನಾಗುತ್ತಾನೆ?” ಅದಕ್ಕೆ ಉತ್ತರವಾಗಿ ಶುಕದೇವ [...]

ಗುರುವಿನೊಡನೆ ದೇವರಡಿಗೆ : ೧೦೮. ಭಗವಂತನೊಬ್ಬನೆ ನಿತ್ಯಬಂಧು

Friday, July 27th, 2012

  ಬೇಲೂರು ಮಠ ಬುಧವಾರ, ಡಿಸೆಂಬರ್ ೨೮, ೧೯೩೨ ಇಡಿಯ ದಿನ ಬಿಡುವಿದಲ್ಲದ ದಿನವಾಗಿತ್ತು; ಭಕ್ತರೂ ದರ್ಶನಾಕಾಂಕ್ಷಿಗಳೂ ನಿಬಿಡವಾಗಿ ಬಂದು ಹೋಗುತ್ತಲೆ ಇದ್ದರೆ. ಢಾಕಾದ ಒಬ್ಬರು ದೊಡ್ಡ ಮನುಷ್ಯರು ಪರಲೋಕಗತನಾದ ತನ್ನ ಮಗನ ಒಂದು ಪೆಟ್ಟಿಗೆಯಲ್ಲಿ ಮಹಾಪುರುಷ ಮಹಾರಾಜರ ಒಂದು ಫೋಟೋವನ್ನೂ ಒಂದು ಜಪಮಾಲೆಯನ್ನೂ ಕಂಡ ಮೇಲೆ ಸ್ವತಃ ಪ್ರಚೋದಿತರಾಗಿ ಮಹಾಪುರುಷಜಿಯ ದರ್ಶನಕ್ಕಾಗಿ ಸಾಯಂವೇಳೆ ಮಠಕ್ಕೆ ಬಂದರು. ಅವರು ತಮ್ಮ ಮಗನ ಮರಣದ ಸಂದರ್ಭದ ಎಲ್ಲ ಘಟನೆಗಳನ್ನೂ ಹೇಳಿ ಅವನಿಗಾಗಿ ತುಂಬ ಶೋಕಿಸತೊಡಗಿದರು. ಮಹಾಪುರುಷಜಿ ಧೀರಭಾವದಿಂದ ಎಲ್ಲವನ್ನೂ [...]

ಗುರುವಿನೊಡನೆ ದೇವರಡಿಗೆ : ೯೦. ಸಾಮಾನ್ಯತಾ ಅವತಾರಿಣಿ ಶ್ರೀ ಶ್ರೀಮಾತೆಯ ಜನ್ಮ ತಿಥಿ

Friday, July 27th, 2012

  ಬೇಲೂರು ಮಠ ಡಿಸೆಂಬರ್ ೨೨, ೧೯೩೦ ಇಂದು ಶ್ರೀ ಶ್ರೀಮಾತೆಯ ಶುಭ ಜನ್ಮತಿಥಿ. ಬೆಳಗಿನಿಂದಲೂ ಮಹಾಪುರುಷಜಿಯ ಬಾಯಲ್ಲಿ ಒಂದೇ ಶಬ್ಧ: ‘ಅಮ್ಮಾ, ಅಮ್ಮಾ ಅಮ್ಮಾ!’ ಮಾತೃಗತಪ್ರಾಣವಾದ ಒಂದು ಶಿಶುವಿನಂತೆ! ಕೈ ಜೋಡಿಸಿ ಕಣ್ಣುಮುಚ್ಚಿಕೊಂಡು ಪ್ರಾರ್ಥನೆ ಮಾಡುತ್ತಿದ್ದಾರೆ: ‘ತಾಯೆ, ತಾಯೆ, ಮಹಾಮಾಯೆ, ಜಯ್ ಮಾ! ಜಯ್ ಮಾ! ಅಮ್ಮಾ, ನಮಗೆ ಭಕ್ತಿ, ವಿಶ್ವಾಸ, ಪೂರ್ಣವಿಶ್ವಾಸ, ಜ್ಞಾನ, ವೈರಾಗ್ಯ, ಅನುರಾಗ, ಧ್ಯಾನ-ಸಮಾಧಿಗಳನ್ನು ದಯಪಾಲಿಸು. ಠಾಕೂರರ ಈ ಮಹಾಸಂಘಕ್ಕೆ ಕಲ್ಯಾಣವುಂಟಾಗುವಂತೆ ಮಾಡು; ಲೋಕಕ್ಕೆ ಶಾಂತಿ ದೊರೆಯುವಂತೆ ಕೃಪೆ ಮಾಡು.’ ಆಮೇಲೆ [...]

ಗುರುವಿನೊಡನೆ ದೇವರಡಿಗೆ : ೮೬. ಆತನ ರಾಜ್ಯದಲ್ಲಿ ಅವಿಚಾರವಿಲ್ಲ

Friday, July 27th, 2012

  ಬೇಲೂರು ಮಠ ಶುಕ್ರವಾರ-ಮೇ ೧೧, ೧೯೩೦ ರಾತ್ರಿವೇಳೆಯಲ್ಲಿ ದಕ್ಷಿಣದೇಶಿಯ ಸಂನ್ಯಾಸಿಯೊಬ್ಬರು ಮಹಾಪುರುಷ ಮಹಾರಾಜರಿಗೆ ಪ್ರಣಾಮ ಮಾಡಿ ತಮ್ಮ ಹೃದಯದ ಆರ್ತಿಯನ್ನು ಈ ರೀತಿ ಹೇಳಿಕೊಂಡರು: “ಮಹಾರಾಜ್, ಭಗವಂತನನ್ನು ಸರ್ವಭೂತಗಳಲ್ಲಿಯೂ ದರ್ಶನಮಾಡುವ ಹಂಬಲ ನನಗಿದೆ. ಏನು ಮಾಡಿದರೆ ಅದು ಸಾಧ್ಯವಾಗುತ್ತದೆ? ತಾವು ದಯೆತೋರಿ ನನಗೆ ತಿಳಿಯಹೇಳಬೇಕಾಗಿ ಬೇಡುತ್ತೇನೆ.” ಮಹಾಪುರುಷಜಿ: “ಅಯ್ಯಾ, ದೇವರನ್ನು ಮೊದಲು ನಿನ್ನ ಹೃದಯದಲ್ಲಿ ದರ್ಶನ ಮಾಡಬೇಕು. ಅಂತರ್ಯದಲ್ಲಿ ಆತನ ದರ್ಶನವಾಗದಿದ್ದರೆ ಬಾಹಿರದಲ್ಲಿ ಸರ್ವಭೂತಗಳಲ್ಲಿರುವ ಆತನನ್ನು ನೋಡಲು ಹೇಗಾಗುತ್ತದೆ? ಆತ್ಮಾನುಭೂತಿಯಲ್ಲಿ ಚೆನ್ನಾಗಿ ದೃಢಭಾವದಿಂದ ಪ್ರತಿಷ್ಠಿತವಾದರೆ ಆಮೇಲೆ [...]

ಗುರುವಿನೊಡನೆ ದೇವರಡಿಗೆ : ೧೦೨. ಅದ್ಭುತ ಅತೀಂದ್ರಿಯ ಅನುಭವಾಳಿ

Friday, July 27th, 2012

  ಬೇಲೂರು ಮಠ  ೧೯೩೨ ಈಗೀಗ ಮಹಾಪುರುಷಜಿ ಮಹಾರಾಜ್ ಅಹೋರಾತ್ರಿಯೂ ಒಂದು ಅನಿರ್ವಚನೀಯವಾದ ದಿವ್ಯಭಾವದಲ್ಲಿ ಅವಸ್ಥಾನ ಮಾಡಿರುತ್ತಾರೆ. ಒಮ್ಮೊಮ್ಮೆ ಆ ಭಾವ ಎಷ್ಟು ಅತಿಶಯವಾಗಿರುತ್ತದೆ ಎಂದರೆ ಇಡೀ ರಾತ್ರಿಯೂ ನಿದ್ದೆಯಿಲ್ಲದೆ ಆ ಗಭೀರಭಾವದಲ್ಲಿ ನಿಮಗ್ನರಾಗಿರುತ್ತಾರೆ. ಶರೀರದ ಕಡೆ ಲಕ್ಷ್ಯವಿರುವುದಿಲ್ಲ. ಆ ವಿಚಾರವಾಗಿ ಯಾರಾದರೂ ಪ್ರಶ್ನೆ ಕೇಳಿದರೆ, ಹಸುಳೆಯೋಪಾದಿ ಮುಗುಳು ನಗೆ ಬೀರಿ, ಹೇಳುತ್ತಾರೆ “ಕಾಯೆ ಕೃಷ್ಣ, ಕೊಲುವರಾರು?’ ಎಲ್ಲಿಯವರೆಗೆ ಶ್ರಿ ಗುರುಮಹಾರಾಜ್ ತನ್ನ ಕೆಲಸ ಮಾಡಿಕೊಳ್ಳುವುದಕ್ಕಾಗಿ ಇದನ್ನು ಇಲ್ಲಿ ಇರಿಸುತ್ತಾರೆಯೊ ಅಲ್ಲಿಯವರೆಗೆ ಈ ಶರೀರ ಏನು ಮಾಡಿದರೂ [...]

ಗುರುವಿನೊಡನೆ ದೇವರಡಿಗೆ : ೮೧. ದೀಕ್ಷಾಪ್ರದಾನ ಮತ್ತು ಭಟ್ಟಾಚಾರ್ಜಿಗಿರಿ!

Friday, July 27th, 2012

  ಬೇಲೂರು ಮಠ ಡಿಸೆಂಬರ್‌ ೯,೧೯೨೯ ಹಿರಿಯ ಸಂನ್ಯಾಸಿಯೊಬ್ಬರು ಪ್ರಣಾಮ ಮಾಡಿ ಕುಶಲ ಪ್ರಶ್ನೆ ಕೇಳಿದರು ಮಹಾಪುರುಷ ಮಹಾರಾಜ್ ನಗುನಗುತ್ತ ಪಕ್ಕದಲ್ಲಿದ್ದ ಸೇವಕ ಸಾಧುವಿನ ಕಡೆ ಕೈ ತೋರಿಸಿ ‘ಶರೀರ ಹೇಗಿದೆ ಎಂಬುದರ ವಿಚಾರ ಬೇಕಾದರೆ ಈತನನ್ನು ಕೇಳುವುದು ಮೇಲು. ಆ ವಿಚಾರದಲ್ಲಿ ನನಗೇನೂ ಆಸಕ್ತಿ ಇಲ್ಲ. ಎಷ್ಟೊ ಸಾರಿ ನನಗೊಂದು ದೇಹವಿದೆ ಎಂಬ ಪ್ರಜ್ಞೆಯೇ ನನಗಿರುವುದಿಲ್ಲ. ನಿಜಾಂಶ ಅದು. ಆದರೆ ಜನ ಬಂದು ಯೋಗಕ್ಷೇಮ ವಿಚಾರಿಸುತ್ತಾರೆ; ಆ ಸಮಯಕ್ಕೆ ಏನು ಮನಸ್ಸಿಗೆ ಬರುತ್ತದೆಯೋ ಹಾಗೆ ಹೇಳಿಬಿಡುತ್ತೇನೆ. [...]

ಗುರುವಿನೊಡನೆ ದೇವರಡಿಗೆ : ೮೨. ತಾರಕನಾಥನ ತಾಯಿ ತಂದೆ

Friday, July 27th, 2012

  ಬೇಲೂರು ಮಠ   ಡಿಸೆಂಬರ್‌ ೧೮, ೧೯೨೯ ಮಾತು ದಕ್ಷಿಣಭಾರತ ಮತ್ತು ಸಿಂಹಳದ ವಿಚಾರವಾಗಿ ನಡೆದಿತ್ತು ಮಹಾಪುರುಷಜಿ ಹೇಳಿದರು “ಹೌದು, ಸಿಲೋನಿಗೆ ಹೋಗಿದ್ದೆ. ಸ್ವಾಮೀಜಿ ಭಾರತವರ್ಷಕ್ಕೆ ಹಿಂತಿರುಗಿ ಬಂದು ಕೆಲವು ತಿಂಗಳಾದ ಮೇಲೆ ನನ್ನನ್ನು ವೇದಾಂತ ಪ್ರಚಾರಕ್ಕಾಗಿ ಅಲ್ಲಿಗೆ ಕಳುಹಿಸಿದರು. ನಾನು ಕೊಲಂಬೋದಲ್ಲಿ ಏಳೆಂಟ ತಿಂಗಳಿದ್ದೆ, ಒಂದು ಸತ್ರದಲ್ಲಿ. ಗೊತ್ತುಮಾಡಿದಂತೆ ಕ್ರಮವಾಗಿ ಗೀತಾ ತರಗತಿಗಳನ್ನು ಮತ್ತು ಧರ್ಮ ಪ್ರಸಂಗಾದಿಗಳನ್ನುಇಟ್ಟುಕೊಂಡಿದ್ದೆ; ಅನೇಕ ಜನರು ಬರುತ್ತಿದ್ದರು. ಚೆನ್ನಾಗಿತ್ತು. ಅಲ್ಲಿಯ ಪ್ರಸಿದ್ಧ ದೇವಾಲಯಗಳನ್ನು ಹೋಗಿ ನೋಡಿದೆ. ಅಲ್ಲಿ ಬುದ್ಧ ದೇವನ ಒಂದು [...]

ಗುರುವಿನೊಡನೆ ದೇವರಡಿಗೆ : ೮೭. ಆತನ ನಾಮದಲ್ಲಿ ಸರ್ವಶಕ್ತಿಯೂ ಅಡಗಿದೆ

Friday, July 27th, 2012

  ಬೇಲೂರು ಮಠ ಮಂಗಳವಾರ, ಜೂನ್ ೨೪, ೧೯೩೦ ಮಹಾಪುರುಷಜಿ ಅತ್ಯಂತ ತನ್ಮಯ ಭಾವದಿಂದ ಈ ಹಾಡು ಹಾಡಿದರು: “ಎಂತಹ ಗೊಂಬೆಯ ರಚಿಸಿರುವಳೊ ಶ್ಯಾಮೆ; ಅಹಾ ಎಂತಹ ಗೊಂಬೆಯ ರಚಿಸಿರುವಳೋ ಶ್ಯಾಮೆ! ನಾಳ್ಮೊಳದುದ್ದದ ಈ ಗೊಂಬೆಯಲಿ ಏನದ್ಭುತವಾಡಿಸುತಿಹಳು? ಯುತ್ರದೊಳಗೆ ತಾನೆಯೆ ಕದ್ದಡಗಿ ಸೂತ್ರವ ಹಿಡಿದಾಡಿಸುತಿಹಳು; ಗೊಂಬೆ ಹೇಳುವುದು, ತಾನೆಯೆ ತಿರುಗವೆನೆಂದು, ಅರಿಯದೆ ತನ್ನನಾಡಿಸುವರಾರೆಂದು.” ಇತ್ಯಾದಿ Blog this! Bookmark on Delicious Digg this post Recommend on Facebook share via Reddit Share with [...]

ಗುರುವಿನೊಡನೆ ದೇವರಡಿಗೆ : ೯೧. “ಇದಕ್ಕೆ ಸಮನಾದುದು ಮತ್ತೆಲ್ಲಿಯೂ ಇಲ್ಲ!”

Friday, July 27th, 2012

  ಬೇಲೂರು ಮಠ  ಗುರುವಾರ, ಫೆಬ್ರವರಿ ೧೯, ೧೯೩೧ ಶ್ರೀ ಶ್ರೀಠಾಕೂರರ ಶುಭಜನ್ಮ ತಿಥಿ. ಇಡಿಯ ದಿನ ಪೂಜೆ ಪಠನ ಭಜನೆ ಕೀರ್ತನೆ ನೈವೇದ್ಯಾರ್ಪಣೆ ಮತ್ತು ಪ್ರಸಾದ ವಿತರಣಾದಿಗಳಿಂದ ಸಮಗ್ರ ಮಠವೂ ಆನಂದಮುಖರಿತವಾಗಿತ್ತು. ಸಹಸ್ರ ಸಹಸ್ರ ನರನಾರಿ ಭಕ್ತರು ನೆರೆದು ಆ ಆನಂದ ಸಾಗರದಲ್ಲಿ ತೇಲಿ ಮುಳುಗಿದರು. ಮಹಾಪುರುಷಜಿ ಬೆಳಗಿನಿಂದಲೂ ತಮ್ಮಷ್ಟಕ್ಕೆ ತಾವೆ ಎಂಬಂತೆ “ಜಯ ರಾಮಕೃಷ್ಣ! ಜಯ ಪ್ರಭೂ ! ಜಯ ಭಗವಾನ್ ! ಇದು ಮಹಾಶುಭದಿನ ! ಭಗವಂತ ತಾನೆ ಸ್ವಯಂ ಅಹೈತುಕೀ ಕೃಪೆಯಿಂದ [...]

ಗುರುವಿನೊಡನೆ ದೇವರಡಿಗೆ : ೯೫. ಅಳು ಅಳು, ಮತ್ತೂ ಅಳು!

Friday, July 27th, 2012

  ಬೇಲೂರು ಮಠ ಮಾರ್ಚಿ ೪, ೧೯೩೨ ಮಹಾಪುರುಷಜಿಗೆ ಶರೀರಾರೋಗ್ಯ ಸರಿಯಾಗಿರಲಿಲ್ಲವಾದ್ದರಿಂದ ಎಲ್ಲಾ ಸಮಯದಲ್ಲಿಯೂ ಅವರೇ ಸ್ವತಃ ಕಾಗದಪತ್ರಗಳನ್ನು ನೋಡಲು ಆಗುತ್ತಿರಲಿಲ್ಲ. ಅಪರಾಹ್ನ ವೇಳೆಯಲ್ಲಿ ಅನುಚರನೊಬ್ಬನು ಅವರಿಗೆ ಕಾಗದಗಳನ್ನು ಓದಿ ಕೇಳಿಸುತ್ತಿದ್ದನು; ಅವರೂ ಚೆನ್ನಾಗಿ ಮನಸ್ಸಿಟ್ಟು ಆಲಿಸುತ್ತಿದ್ದರು. ಭಕ್ತನೊಬ್ಬನು ಅತ್ಯಂತ ಕಾತರನಾಗಿ ತನ್ನ ಪ್ರಾಣದ ವೇದನೆಯನ್ನು ತಿಳಿಸಿ ಬರೆದಿದ್ದನು: “ಹೃದಯದಲ್ಲಿ ಮಹಾ ಅಶಾಂತಿ. ಸಾಧ್ಯವಾದಷ್ಟೂ ಸಾಧನೆ ಭಜನೆ ಮಾಡುತ್ತಾ ಹೋಗುತ್ತಿದ್ದೇನೆ. ಆದರೆ ಅದರಲ್ಲಿ ಶಾಂತಿ ಎಂಬುದು ಏನೂ ದೊರೆಯುತ್ತಿಲ್ಲ. ಏನು ಮಾಡಿದರೆ ಶಾಂತಿ ಉಂಟಾಗುತ್ತದೆ? ಏನು ಮಾಡಿದರೆ [...]

ಗುರುವಿನೊಡನೆ ದೇವರಡಿಗೆ : ೯೯. ಬರಿಯ ತಿರುಗುತನ ತಪಸ್ಯೆಯಲ್ಲ

Friday, July 27th, 2012

  ಬೇಲೂರು ಮಠ ಗುರುವಾರ, ಏಪ್ರಿಲ್ ೨೮, ೧೯೩೨ ಸಂನ್ಯಾಸಿಯೊಬ್ಬರು ಹಿಮಾಲಯದ ದೂರ ಮೂಲೆಯಲ್ಲಿದ್ದ ಉತ್ತರ ಕಾಶಿಗೆ ತಪಸ್ಸು ಮಾಡಲು ಹೋಗಿ ತುಂಬ ಕಾಯಿಲೆ ಬಿದ್ದು, ಅಲ್ಲಿರುವ ನಾನಾ ವಿಧವಾದ ಕಷ್ಟ ಮತ್ತು ಅನಾನುಕೂಲಗಳ ವಿಚಾರವಾಗಿ ತಿಳಿಸಿ ಕಾಗದ ಬರೆದಿದ್ದರು. ಮಹಾಪುರುಷಜಿ ಉತ್ತರ  ರೂಪವಾಗಿ ಹೀಗೆ ಬರೆಯಲು ಹೇಳಿದರು : “ಅಲ್ಲಿ ಹಾಗೆ ಕಷ್ಟಪಡುತ್ತಾ ತೊಂದರೆಗೊಳಗಾಗಿರುವುದಕ್ಕೆ ಬದಲಗಿ ಬೇಗನೆ ಹಿಂತಿರುಗಿ ಬಂದುಬಿಡು. ಏನು ಉತ್ತರಕಾಶಿಯಲ್ಲಿಯೆ ಮುಕ್ತಿಲಾಭ ಎಂದು ಯಾರಾದರೂ ಗೊತ್ತು ಮಾಡಿದ್ದಾರೆಯೆ? ಮುಕ್ತಿಲಾಭ ಸಮಾಧಿಲಾಭ ಯಾವ ಜಾಗದಲ್ಲಿ [...]

ಗುರುವಿನೊಡನೆ ದೇವರಡಿಗೆ : ೧೦೫. “ನಮ್ಮನ್ನು ಇತರ ಮನುಷ್ಯರಂತೆ ಭಾವಿಸಬೇಡ”

Friday, July 27th, 2012

  ಬೇಲೂರು ಮಠ ೧೯೩೨ ಈ ಸಮಯದಲ್ಲಿ ಮಹಾಪುರುಷ ಮಹಾರಾಜರಿಗೆ ಹೆಚ್ಚೇನೂ ನಿದ್ದೆ ಬರುತ್ತಿರಲಿಲ್ಲ. ಯಾವಾಗಲೂ ಒಂದಲ್ಲ ಒಂದು ದಿವ್ಯಭಾವದಿಂದ ಪ್ರೇರಿತವಾದ ವಿಮಲಾನಂದದಲ್ಲಿ ಮುಳುಗಿಯೆ ಇರುತ್ತಿದ್ದರು. ಹಗಲು ಹೊತ್ತು ಮಠದ ಸಾಧು ಬ್ರಹ್ಮಚಾರಿಗಳೊಡನೆಯೂ ಮತ್ತು ಅಗಣಿತ ಭಕ್ತರೊಡನೆಯೂ ನಾನಾವಿದ ಪ್ರಸಂಗದಲ್ಲಿ ತೊಡಗಿರುವಾಗ ಅವರ ಹೃದಯದ ಆ ಆನಂದಭಾವದ ಒಂದಿನಿತೆ ಪ್ರಕಾಶನಾಂಶವನ್ನು ಕಾಣಬಹುದಾಗಿತ್ತು. ಒಮ್ಮೊಮ್ಮೆ ಎಂತಹ ಉಚ್ಚಾವಸ್ಥೆಯ ವಿಚಾರವಾಗಿ ಮಾತಾಡುತ್ತಿದ್ದರು ಎಂದರೆ, ಅನೇಕರು ಅದರ ಮರ್ಮಗ್ರಹಣ ಮಾಡಲು ಸಮರ್ಥರಾಗುತ್ತಿರಲಿಲ್ಲ. ರಾತ್ರಿಯಲ್ಲಿ ಭಾವಾವಸ್ಥೆಯನ್ನು ವಿಶೇಷ ರೀತಿಯಲ್ಲಿ ಲಕ್ಷಿಸಬಹುದಾಗಿತ್ತು. ಒಮ್ಮೊಮ್ಮೆ ಆತ್ಮಾರಾಮರಾಗಿ, [...]

ಗುರುವಿನೊಡನೆ ದೇವರಡಿಗೆ : ೬೮. ಆಂಗ್ಲೇಯ ವಿದ್ಯಾಭ್ಯಾಸ: ನಮ್ಮ ಸಂಸ್ಕೃತಿ ವೈಶಿಷ್ಟ್ಯ ವಿನಾಶ: ಕಲ್ಪತರು ದಿನೋತ್ಸವ

Friday, July 27th, 2012

ಇಂದು ಕ್ರೈಸ್ತ ಹೊಸ ವರುಷದ ಪ್ರಾರಂಭದ ದಿನ. ಕಾಂಕುರ್ಗಾಚಿ ಯೋಗೋದ್ಯಾನದಲ್ಲಿ ‘ಕಲ್ಪತರು’* ಉತ್ಸ ಆಚರಿಸುತ್ತಾರೆ. ಮಠದಲ್ಲಿಯೂ ಶ್ರೀಠಾಕೂರರಿಗೆ ವಿಶೇಷ ಪೂಜೆಯ ಮತ್ತು ನೈವೇದ್ಯಾದಿಗಳ ಏರ್ಪಾಟಾಗಿತ್ತು. ಬೆಳಗಿನಿಂದಲೂ ಭಕ್ತರು ವೃಂದವೃಂದವಾಗಿ ಬರತೊಡಗಿದ್ದಾರೆ. ವಿಶೇಷವಾಗಿ ರಜಾದಿನವಾದ್ದರಿಂದಲೂ ಅವರೆಲ್ಲ ಶ್ರೀ ಗುರುದೇವರ ದರ್ಶನಾನಂತರ ಪೂಜಾಮಂದಿರದಿಂದ ಹಿಂತಿರುಗಿ ಮಹಾಪುರುಷಜಿಯ ಕೊಠಡಿಯಲ್ಲಿ ನೆರೆದಿದ್ದಾರೆ. ಅವರೂ ಆನಂದದಿಂದ ಎಲ್ಲರ ಸಂಗಡವೂ ನಾನಾ ವಿಷಯಗಳನ್ನು ಕುರಿತು ಮಾತನಾಡುತ್ತಿದ್ದರು. ಭಕ್ತನೊಬ್ಬನು ಮಹಾಪುರುಷಜಿಗೆ ಪ್ರಣಾಮ ಸಮರ್ಪಿಸಿ ‘Happy New Year’ (ಶುಭ ನವ ವರ್ಷ) ‘Happy English Year’ (ಶುಭ [...]

ಗುರುವಿನೊಡನೆ ದೇವರಡಿಗೆ : ೬೭. “ದಕ್ಷಿಣೇಶ್ವರ ಎಂದರೆ ಸರ್ವ ತೀರ್ಥಗಳ ಸಮಾವೇಶ”

Friday, July 27th, 2012

ಬೆಳಗಿನ ಹೊತ್ತು. ಮಹಾಪುರುಷಜಿ ದೇವರ ಮನೆಯಿಂದ ಹಿಂತಿರುಗುತ್ತಿದ್ದರು. ತಮ್ಮ ಭಾವದಲ್ಲಿಯೆ ತನ್ಮಯರಾಗಿ ಬಾಯಲ್ಲಿ ಏನೊ ಮೆಲ್ಲನೆ ಹಾಡಿಕೊಳ್ಳುತ್ತಿದ್ದರು, ಮೃಗಚರ‍್ಮಾಸನವನ್ನು ಬಗಲಲ್ಲಿಟ್ಟುಕೊಂಡು. ತಮ್ಮ ಕೊಠಡಿಯನ್ನು ದೇವರಮನೆಗೆ ಜೋಡಿಸಿದ್ದ ತಾರಸಿದಾರಿಯಲ್ಲಿ ನಡೆದು ಬರುತ್ತಾ ದಕ್ಷಿಣೇಶ್ವರದ ಕಡೆ ಮುಖಮಾಡಿ ಕೈ ಜೋಡಿಸಿ ಪ್ರಣಾಮ ಮಾಡಿದರು; ಹಾಗೆಯೆ ಎದುರು ಹರಿಯುತ್ತಿದ್ದ ಗಂಗಾಮಾತೆಗೂ ನಮಿಸಿ, ತಮ್ಮ ಕೊಠಡಿಗೆ ಹೋದರು. ಮಠದ ಸಂನ್ಯಾಸಿಗಳೂ ಬ್ರಹ್ಮಚಾರಿಗಳೂ ತಮ್ಮ ಧ್ಯಾನ ಜಪಗಳನ್ನು ಪೂರೈಸಿ, ಒಬ್ಬೊಬ್ಬರಾಗಿ ಬಂದು ಅವರಿಗೆ ಪ್ರಣಾಮ ಸಲ್ಲಿಸಿ ಹೊರಗೆ ಹೋದರು. ಅವರು ಯಾರೊಬ್ಬರೊಡನೆಯೂ ಏನನ್ನೂ ಮಾತನಾಡಲಿಲ್ಲ. [...]

ಗುರುವಿನೊಡನೆ ದೇವರಡಿಗೆ : ೬೬. ಭಗವಂತನೊಬ್ಬನೆ ನಿಜವಾದ ಗುರು

Friday, July 27th, 2012

ಸಿಂಧು ದೇಶದಿಂದ ಬಂದ ಭಕ್ತರೊಬ್ಬರಿಗೆ ಇಂದು ಮಹಾಪುರುಷಜಿ ಮಂತ್ರ ದೀಕ್ಷೆ ಕೊಟ್ಟರು. ಆ ಭಕ್ತರಿಗೆ ಅವರು ತಮ್ಮ ಮನೆಯಲ್ಲಿದ್ದಾಗಲೆ ಕನಸಿನಲ್ಲಿ ಒಂದು ಮಂತ್ರದೀಕ್ಷೆ ಲಭಿಸಿತ್ತು. ಆದರೆ ಅವರಿಗೆ ಅದರ ಮಹತ್ವ ಏನು ಎಂದು ಒಂದೂ ಅರ್ಥವಾಗದ ಮನಸ್ಸಿನಲ್ಲಿ ಕಳವಳವಾಗಿತ್ತು. ಆದ್ದರಿಂದ ಅವರು ಮಹಾಪುರುಷಜಿಗೆ ಕಾಗದ ಬರೆದು ತಮ್ಮ ಮನೋವ್ಯಗ್ರತೆಯನ್ನು ಹೇಳಿಕೊಂಡಿದ್ದರು; ಅಲ್ಲದೆ ಪ್ರತ್ಯಕ್ಷ ಸಂದರ್ಶನಕ್ಕೆ ಅವಕಾಶ ದಯಪಾಲಿಸಬೇಕೆಂದು ಬೇಡಿಕೊಂಡಿದ್ದರು. ಅಪ್ಪಣೆ ದೊರತೊಡನೆಯ ಆ ದೂರದ ಸ್ಥಳದಿಂದ ಅವರು ಬೇಲೂರಿಗೆ ಧಾವಿಸಿದ್ದರು, ಮಹಾಪುರುಷಜಿಯ ಪದತಲಕ್ಕೆ. Blog this! Bookmark [...]

ಗುರುವಿನೊಡನೆ ದೇವರಡಿಗೆ : ೧೦೩. ಸಾಧುಸಂಗ ಮಹಿಮೆ

Friday, July 27th, 2012

  ಬೇಲೂರು ಮಠ ಬುಧವಾರ, ಜೂನ್ ೨೩, ೧೯೩೨ ಇವತ್ತು ಬೆಳಿಗ್ಗೆಯಿಂದಲೂ ತುಂಬ ಮಳೆಹೊಯ್ಯುತ್ತಿದೆ. ಮಹಾಪುರುಷ ಮಹಾರಾಜರಿಗೆ ತುಂಬ ಆನಂದವಾಗಿಬಿಟ್ಟಿದೆ. ಕೈಜೋಡಿಸಿಕೊಂಡು ಜಗನ್ಮಾತೆಯನ್ನುದ್ದೇಶಿಸಿ ಹೇಳುತ್ತಾರೆ: “ಅಮ್ಮಾ, ನೀನು ಬದುಕಿಸದಿದ್ದರೆ ಇನ್ನಾರು ಬದುಕಿಸಬಲ್ಲರು ನಿನ್ನ ಸೃಷ್ಟಿಯನ್ನು? ಮಳೆ ಇಲ್ಲದೆ ಎಲ್ಲ ಧ್ವಂಸವಾಗುತ್ತಾ ಇತ್ತು!” ತರುವಾಯ ಅವರ ನಿರ್ದೇಶನದಂತೆ ಪಕ್ಕದ ತಾರಸಿಯ ಮೇಲೆ ಗುಬ್ಬಚ್ಚಿ, ಪಾರಿವಾಳ ಮತ್ತು ಇತರ ಹಕ್ಕಿಗಳಿಗಾಗಿ ಧಾನ್ಯ ಎರಚಲಾಯಿತು. ಗುಂಪು ಗುಂಪಾಗಿ ಹಕ್ಕಿಗಳೆಲ್ಲ ಹಾರಿಬಂದು ನಾಮುಂದೆ ತಾಮುಂದೆ ಎಂದು ನುಗ್ಗಿ ಕಾಳುಗಳನ್ನು ಮುಕ್ಕುತ್ತಿರುವುದನ್ನು ನೋಡಿ ಮಹಾಪುರುಷಜಿಗೆ [...]

ಗುರುವಿನೊಡನೆ ದೇವರಡಿಗೆ : ಭಾಗ-೨ : ೬೩. ಶ್ರೀ ರಾಮಕೃಷ್ಣ ನಾಮವೆ ಈ ಯುಗದ ಮಹಾಮಂತ್ರ!

Friday, July 27th, 2012

ತರುಣ ಭಕ್ತನೊಬ್ಬನು ತನಗೆ ಸ್ವಪ್ನದಲ್ಲಿ ಮಹಾಪುರುಷಜಿಯ ದರ್ಶನವಾದ ವಿಚಾರವನ್ನು ಒಂದು ಕಾಗದ ಬರೆದು ತಿಳಿಸಿದ್ದನು. ಈಗ ಆತನು ಅವರ ಅಪ್ಪಣೆ ಪಡೆದು ಕೆಲವು ದಿನಗಳ ಮಟ್ಟಿಗೆ ಬೇಲೂರ ಮಠದಲ್ಲಿಯೆ ಇರಲು ಬಂದಿದ್ದನು. ಒಂದು ದಿನ ಬೆಳಗ್ಗೆ ಮಹಾಪುರುಷಜಿ ದೇವರ ಮನೆಯಿಂದ ಆಗ ತಾನೆ ಹಿಂತಿರುಗಿದ್ದ ಸಮಯದಲ್ಲಿ, ಆ ತರುಣ ಭಕ್ತನು ಕೊಠಡಿಯನ್ನು ಪ್ರವೇಶಿಸಿ, ಭಕ್ತಿಭರದಿಂದ ಪ್ರಣಾಮಮಾಡಿ, ಅವರಿಂದ ಮಂತ್ರ ದೀಕ್ಷೆಯನ್ನು ಪಡೆಯುವ ತನ್ನ ಪ್ರಾರ್ಥನೆಯನ್ನು ಮುಂದಿಟ್ಟನು. “ಮಹಾರಾಜ್, ತಾವು ದಯೆ ತೋರಿ ನನಗೆ ಕನಸಿನಲ್ಲಿ ದರ್ಶನವಿತ್ತಿರಿ. ನನ್ನ [...]

ಗುರುವಿನೊಡನೆ ದೇವರಡಿಗೆ : ೬೫. ಬರಿಯ ಸಿದ್ಧಗುರು ಅಲ್ಲ, ಸ್ವಯಂ ಭಗವಂತನ ಸಂಗಾತಿ

Friday, July 27th, 2012

ಸ್ವಾಮಿ ಬ್ರಹ್ಮಾನಂದ ಮಹಾರಾಜರ ದೇಹತ್ಯಾಗದ ಅನಂತರ ನಾಲ್ಕು ಐದು ತಿಂಗಳಾದ ಮೇಲೆ ಒಂದು ಸಂಜೆ ಒಬ್ಬ ಉಚ್ಚಪದಸ್ಥ ಸರಕಾರೀ ಅಧಿಕಾರಿ ಮಹಾಪುರುಷ ಮಹಾರಾಜರ ದರ್ಶನಾರ್ಥಿಯಾಗಿ ಮಠಕ್ಕೆ ಬಂದನು. ಆತನು ಅತ್ಯಂತ ಭಕ್ತಿಭಾವದಿಂದ ಮಹಾಪುರುಷಜಿಗೆ ಪಾದವಂದನೆ ಮಾಡಿ, ನೆಲದ ಮೇಲೆ ಕುಳಿತುಕೊಂಡು, ತನ್ನ ಪರಿಚಯ ಮಾಡಿಕೊಳ್ಳುತ್ತಾ ಹೇಳಿದನು: “ನಾನು ರಾಜಾಮಹಾರಾಜರನ್ನು ಮೊದಲ ಸಲ ಸಂಧಿಸಿದ್ದು ಮೂರು ವರುಷಗಳ ಹಿಂದೆ. ಅಂದಿನಿಂದ ಸಮಯಸಿಕ್ಕಿದಾಗಲೆಲ್ಲ ನಾನು ಬಂದು ಅವರ ದರ್ಶನ ತೆಗೆದುಕೊಳ್ಳುತ್ತಿದ್ದೆ. ಅವರು ನನ್ನ ಮೇಲೆ ದಯೆತೋರಿ ಅನೇಕ ಉಪದೇಶಗಳನ್ನು ನೀಡುತ್ತಿದ್ದರು. [...]

ಗುರುವಿನೊಡನೆ ದೇವರಡಿಗೆ : ೬೨. ಶ್ರೀರಾಮಕೃಷ್ಣರೆ ವೇದ, ಸ್ವಾಮಿ ವಿವೇಕಾನಂದರೆ ಭಾಷ್ಯ!

Friday, July 27th, 2012

ಒಂದು ದಿನ ಮಧ್ಯಾಹ್ನ ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ್ದರು. ಒಬ್ಬ ಸಂನ್ಯಾಸೀ ಶಿಷ್ಯರು ಪಕ್ಕದಲ್ಲಿ ನಿಂತು ನಿಶ್ಯಬ್ದವಾಗಿ ಬೀಸಣಿಗೆ ಬೀಸುತ್ತಿದ್ದರು. ಕೋಣೆಯಲ್ಲಿ ಮತ್ತಾರೂ ಇರಲಿಲ್ಲ. ಮಹಾಪುರುಷಜಿ ಹಠಾತ್ತನೆ ಹೇಳಿದರು: “ನೋಡು, ಸಂಸಾರಬದ್ಧರಾದ ಜೀವರು ಯೋಚಿಸುತ್ತಾರೆ, ಬ್ರಹ್ಮಜ್ಞಾನ ಎಂಬುದು ಒಂದು ಅಸಂಭವ ವ್ಯಾಪಾರ ಎಂದು. ಆದರೆ ಬ್ರಹ್ಮಜ್ಞಾನಿ ಯೋಚಿಸುತ್ತಾನೆ, ಮನುಷ್ಯರಾಗಿ ಹುಟ್ಟಿಯೂ ಸಂಸಾರ ಬದ್ಧರಾಗಿ ಆತ್ಮವಿಸ್ಮೃತಿರೂಪವಾದ ಅಜ್ಞಾನದಿಂದಿರುವುದೇ ಅಸಂಭವ ವ್ಯಾಪಾರ ಎಂದು.” ಆ ಶಾಂತ, ಗಂಭೀರ, ಕರುಣಾಸಿಕ್ತ ವಾಣಿ ಎಷ್ಟು ಮರ್ಮ ಸ್ಪರ್ಶಿಯಾಗಿತ್ತು ಎಂದರೆ ಶಿಷ್ಯನ ಸ್ಮೃತಿಪಟಲದಲ್ಲಿ [...]

ಗುರುವಿನೊಡನೆ ದೇವರಡಿಗೆ : ೯೬. ಮರಣ ಸಮಯದಲ್ಲಿ ಭಕ್ತರಿಗೆ ದರ್ಶನಗಳು

Friday, July 27th, 2012

  ಬೇಲೂರು ಮಠ ಮಾರ್ಚಿ ೧೮, ೧೯೩೨ ಅಪರಾಹ್ನ. ಸೇವಾಕಾರ್ಯದಲ್ಲಿ ಸಂನ್ಯಾಸಿಯೊಬ್ಬರು ಕಾಗದ ಪತ್ರಗಳನ್ನು ಓದಿ ಕೇಳಿಸುತ್ತಿದ್ದರು. ಒಂದು ಕಾಗದದಲ್ಲಿ ಶ್ರೀ ಶ್ರೀ ಮಹಾರಾಜ್ (ಸ್ವಾಮಿ ಬ್ರಹ್ಮಾನಂದರ) ಕೃಪೆಗೆ ಪಾತ್ರರಾಗಿ ಅವರಿಂದ ದೀಕ್ಷೆ ಪಡೆದಿದ್ದ ಹರಿಮಹಾಂತಿಯವರ ದೇಹತ್ಯಾಗದ ವಾರ್ತೆ ಬಂದಿತ್ತು. ಅದೊಂದು ಅದ್ಭುತ ಮೃತ್ಯುವಾಗಿತ್ತು! ಶರೀರ ತ್ಯಾಗಕ್ಕೆ ಮುಂಚೆ ಮಹಾಂತಿಯವರಿಗೆ, ಸ್ವಾಮಿ ಬ್ರಹ್ಮಾನಂದ ಮಹಾರಾಜರು ಕೈಯಲ್ಲಿ ಒಂದು ಸುಂದರ ಪುಷ್ಪಟವನ್ನು ಹಿಡಿದು, ತಮಗೆ ಕೊಡಲು ಬಂದಿರುವಂತೆ ಕಾಣಿಸಿತು. ಮಹಾರಾಜ್‌ಜಿಯವರನ್ನು ನೋಡಿ ಮಹಾಂತಿಯವರು ಆನಂದೋತ್ಫುಲ್ಲರಾಗಿ ಅವರಿಗೆ ಪ್ರಣಾಮಮಾಡಲು ಮೇಲೇಳುವ [...]

ಗುರುವಿನೊಡನೆ ದೇವರಡಿಗೆ : ೬೧. ಆಕಾಶವೆ ಭಗವಂತನ ಪ್ರತೀಕ!

Friday, July 27th, 2012

ಒಂದು ದಿನ ಸಂಧ್ಯೆಯ ಧ್ಯಾನದ ಅನಂತರ ಮಠದ ಕೆಲವರು ಸಂನ್ಯಾಸಿಗಳೂ ಮಹಾಪುರುಷಜಿಯ ಕೊಠಡಿಯಲ್ಲಿ ನೆರೆದಿದ್ದರು. ಅವರು ತಡೆದು ತಡೆದು ಅಗೊಂದು ಈಗೊಂದು ಮಾತಾಡುತ್ತಿದ್ದರು. ಒಂದೊಂದು ನುಡಿಯಲ್ಲಿಯೂ ಧ್ಯಾನದ ಆನಂದ ಅರಳಿ ತೋರುತ್ತಿತ್ತು. ಜೊತೆಗೆ ಅದೆಂತಹ ಮಧುರ ಮನೋಹರ ಮುಗುಳುನಗೆ? ತಮ್ಮ ಸ್ವಂತ ಜೀವನದ ಅನುಭವ ವಿಚಾರವಾಗಿ ಅವರು ಹೀಗೆಂದರು: “ನನಗೆ ಚಿಕ್ಕಂದಿನಿಂದಲೂ ಭಗವಂತನ ನಿರಾಕಾರಭಾವದಲ್ಲಿಯೆ ವಿಶೇಷ ರುಚಿ; ಅಲ್ಲದೆ ಅದೇ ಭಾವದಿಂದಲೆ ಧ್ಯಾನವನ್ನು ಮಾಡುತ್ತಿದ್ದೆ. ಆದರೆ ಶ್ರೀ ಠಾಕೂರರ ಸಂಸರ್ಗ ದೊರೆತ ಮೇಲೆ ಸಾಕಾರಭಾವದಲ್ಲಿಯೂ ವಿಶ್ವಾಸ ಮೂಡಿ [...]

ಗುರುವಿನೊಡನೆ ದೇವರಡಿಗೆ : ೬೦. ದಾರಿ ತಪ್ಪಿದವರಿಗೆ ದೀಪದಾರಿ

Friday, July 27th, 2012

ಮಹಾಪುರುಷರ ದಯೆ ತಿಂಗಳಬೆಳಕಿನಂತೆ ತಂಪಾಗಿ ಮಧುರವಾಗಿ ಜಗತ್ತನ್ನೆಲ್ಲ ಪ್ಲಾವಿತವನ್ನಾಗಿ ಮಾಡುತ್ತದೆ. ಅವರಲ್ಲಿ ಪಾತ್ರಾಪಾತ್ರ ಭೇದವಿರುವುದಿಲ್ಲ; ಜಾತಿ ವರ್ಣಧ ವಿಚಾರವಿರುವುದಿಲ್ಲ. ಶ್ರೀಮಂತ ಬಡ, ಬ್ರಾಹ್ಮಣ ಶೂದ್ರ, ಧಾರ್ಮಿಕ ಆಧಾರ್ಮಿಕ ಎಲ್ಲರನ್ನೂ ತೃಪ್ತಗೊಳಿಸುತ್ತಾ ಅವರ ಹೃದಯದಿಂದ ಕರುಣಾಜಾಹ್ನವಿ ಪ್ರವಹಿಸುತ್ತಿರುತ್ತದೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಗುರುವಿನೊಡನೆ ದೇವರಡಿಗೆ : ೬೯. ಆಕಸ್ಮಿಕ ಘಟನೆಗಳಲ್ಲಿಯೂ ಭಗವದಿಚ್ಛೆಯ ಹಸ್ತವಿದೆ

Friday, July 27th, 2012

ದೇವಘಡದಲ್ಲಿ ನೂತನವಾಗಿ ನಿರ್ಮಿತವಾದ ಶ್ರೀರಾಮಕೃಷ್ಣ ಮಹಾಸಂಘದ ವಿದ್ಯಾಪೀಠದ ಕಟ್ಟಡಗಳನ್ನು ಉದ್ಘಾಟಿಸುವ ಸಲುವಾಗಿ ಮಹಾಪುರುಷಜಿ ಬೇಲೂರು ಮಠದಿಂದ ಅನೇಕ ಜನ ಸಾಧು ಸಂನ್ಯಾಸಿಗಳೊಡನೆ ಅಲ್ಲಿಗೆ ಹೋದರು. ಅವರ ಶುಭಾಗಮನದಿಂದ ಅಲ್ಲಿದ್ದವರಿಗೆಲ್ಲ ನಿತ್ಯವೂ ಆನಂದೋತ್ಸವವಾಗಿ ಪರಿಣಮಿಸಿತು. ಮಹಾಪುರಷಜಿಯ ಪೂತಸಂಗದಲ್ಲಿ ಅವರೆಲ್ಲರ ಹೃದಯಗಳಲ್ಲಿಯೂ ಒಂದು ಆಧ್ಯಾತ್ಮಿಕ ಪ್ರೇರಣವಾದಂತೆ ಅನುಭವವಾಗಿ ಧನ್ಯರಾದರು. ಅವರೂ ಕೂಡ ಆ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ತುಂಬ ಹರ್ಷಚಿತ್ತರಾಗಿದ್ದರು. ಒಂದು ದಿನ ಅನೇಕ ಸಾಧುಗಳೂ ಬ್ರಹ್ಮಚಾರಿಗಳೂ ಅವರ ಬಳಿ ನೆರೆದಿದ್ದಾಗ ಸಂನ್ಯಾಸಿಯೊಬ್ಬರು ಕೇಳಿದರು: “ಮಹರಾಜ್, ತಮ್ಮ ಪರಿವ್ರಾಜಕ ಜೀವನದ ಸಂಗತಿಗಳನ್ನು [...]

ಗುರುವಿನೊಡನೆ ದೇವರಡಿಗೆ : ೫೯. ನನ್ನನ್ನು ಸ್ತ್ರೋತ್ರಮಾಡುವಲ್ಲಿ ನಾನು ಮೈದೋರುತ್ತೇನೆ

Friday, July 27th, 2012

ಸಂನ್ಯಾಸಿಯೊಬ್ಬರು ಬೇಲೂರು ಮಠದಲ್ಲಿ ಸ್ವಲ್ಪಕಾಲ ವಿಶ್ರಾಂತಿ ಪಡೆಯುತ್ತಿದ್ದು, ತರುವಾಯ ತಮ್ಮ ಕರ್ಮಕ್ಷೇತ್ರವಾದ ಶ್ರೀರಾಮಕೃಷ್ಣ ಮಿಶನ್ನಿನ ಒಂದು ಶಾಖಾಕೇಂದ್ರಕ್ಕೆ ಹೊರಡಲು ಹವಣಿಸುತ್ತಿದ್ದರು. ಬೆಳಿಗ್ಗೆ ಅವರು ಮಹಾಪುರುಷಜಿಗೆ ಪ್ರಣಾಮ ಸಲ್ಲಿಸಲು ಬಂದಾಗ ಅವರಿಗೆ ಮಹಾಪುರುಷಜಿ ವಿಶ್ವಾಸದಿಂದ ಹೇಳಿದರು: “ಇವತ್ತು ಯ…ಅಲ್ಲಿಗೆ ಹೊರಡುತ್ತಾರೆ. ಈ ಸಾರಿ ನೀನು ಬಹಳ ದಿನ ಬೇಲೂರು ಮಠದಲ್ಲಿ ಇದ್ದು ಬಿಟ್ಟೆ. ಆ ನಿನ್ನ ಕರ್ಮಕೇಂದ್ರವೂ ಶ್ರೀರಾಮಕೃಷ್ಣಶ್ರಮವೇ: ಅದೂ ಶ್ರೀಗುರುಮಹಾರಾಜರ ಸ್ಥಾನವೇ: ಅಲ್ಲಿಗೇ ಹಿಂತಿರುಗಿ ಹೋಗು. ನೀವೆಲ್ಲ ಭಕ್ತರು; ನೀವೆಲ್ಲಿಗೆ ಹೋದರೆ ಅಲ್ಲಿಗೆ ನಿಮ್ಮೊಡನೆ ಶ್ರೀಗುರು ಬರುತ್ತಾರೆ. [...]

ಗುರುವಿನೊಡನೆ ದೇವರಡಿಗೆ : ೮೩. ಕ್ರಿಸ್‌ಮಸ್ ಈವ್ ಮತ್ತು ಯೇಸುಕ್ರಿಸ್ತ

Friday, July 27th, 2012

  ಬೇಲೂರು ಮಠ   ಬುಧವಾರ, ಡಿಸಂಬರ್‌ ೨೫, ೧೯೨೯ ಕಳೆದ ರಾತ್ರಿ ‘ಕ್ರಿಸ್‌ಮಸ್ ಈವ್’ ಉತ್ಸವ ತುಂಬ ಆನಂದದಿಂದ ಸಂಭ್ರಮಪೂರ್ಣವಾಗಿ ನಡೆದಿತ್ತು. ಮಹಡಿಯ ಕೆಳಗಣ ಸಂದರ್ಶನದ ಕೊಠಡಿಯಲ್ಲಿ ‘ಶಿಶು ಯೇಸುವಿನೊಡನೆ ಮೇರಿತಾಯಿ’ ಇರುವ ವರ್ಣಚಿತ್ರವನ್ನು ಪತ್ರ, ಪುಷ್ಟ ಮತ್ತು ಮಾಲ್ಯಾದಿಗಳಿಂದ ಅತಿ ರಮಣೀಯವಾಗಿ ಸಜ್ಜಿತಗೊಳಿಸಿ, ನಾನಾ ವಿಧವಾದ ಪಳ ಮೃಷ್ಟಾನ್ನ ಮತ್ತು ಕೇಕ್ ಮೊದಲಾದ ಭೋಗ ನೈವೇದ್ಯವನ್ನು ಅರ್ಪಿಸಲಾಗಿತ್ತು. ಮಠದ ಸಾಧು ಬ್ರಹ್ಮಚಾರಿಗಳು ಮಾತ್ರವಲ್ಲದೆ ಅನೇಕ ಭಕ್ತರೂ ಆ ಉತ್ಸವದಲ್ಲಿ ಭಾಗಿಗಳಾಗಿದ್ದರು. ಬೈಬಲ್ಲಿನಿಂದ ಜೇಸುವಿನ ಜನ್ಮ ಮತ್ತು [...]

ಗುರುವಿನೊಡನೆ ದೇವರಡಿಗೆ : ೫೮. ಭಾವಲೋಕದಲ್ಲಿ ಶ್ರೀರಾಮಕೃಷ್ಣರ ಪರಿವರ್ತಕ ಪ್ರಭಾವ

Friday, July 27th, 2012

ಮಹಾಪುರುಷಜಿಯ ಶರೀರ ಅಸ್ವಸ್ಥ. ರಕ್ತದ ಒತ್ತಡ ತುಂಬಾ ಹೆಚ್ಚಾಗಿದೆ. ಡಾಕ್ಟರುಗಳು ಚಿಕಿತ್ಸಾಧೀನದಲ್ಲಿ ಇದ್ದಾರೆ. ತಿರುಗಾಡುವುದಾಗಲಿ ಮಾತಾಡುವುದಾಗಲಿ ಯಾವ ವಿಧವಾದ ಶ್ರಮವೂ ಆಗಬಾರದೆಂದು ಹೇಳಿದ್ದಾರೆ. ಇತ್ತೀಚೆಗೆ ಅವರು ಉಪ್ಪರಿಗೆಯಿಂದ ಇಳಿದುಬಂದು ಎಂದಿನಂತೆ ತಿರುಗಾಡುವುದಕ್ಕೂ ಸಾಧ್ಯವಾಗದೆ ನಿಲ್ಲಿಸಿಬಿಟ್ಟಿದಾರೆ. ಯಾವೊತ್ತಾದರೂ ಸಾಯಂಕಾಲ ಒಮ್ಮೆ ತಮ್ಮ ಕೊಠಡಿಯ ಪಶ್ಚಿಮ ವರಾಂಡದಲ್ಲಿ ತುಸು ಕಾಲಾಡುತ್ತಿದ್ದರು; ಅಥವಾ ಒಮ್ಮೊಮ್ಮೆ ಗಂಗಾನದಿಗೆ ಅಭಿಮುಖವಾಗಿರುವ ವರಾಂಡದಲ್ಲಿ. ಇವತ್ತು ಸಾಯಂ ಸಮಯದಲ್ಲಿ ಗಂಗಾಭಿಮುಖವಾಗಿರುವ ವರಾಂಡಕ್ಕೆ ಕಾಲಾಡಲು ಹೋದರು. ಗಂಗಾದರ್ಶನವಾದೊಡನೆ ಕೈಮುಗಿದು “ಜಯ ತಾಯಿ ಗಂಗೆ!” ಎಂದು ಪ್ರಣಾಮ ಸಲ್ಲಿಸುತ್ತಾ “ಠಾಕೂರರು [...]

ಗುರುವಿನೊಡನೆ ದೇವರಡಿಗೆ : ೮೮. ಬರಿಯ ಶಾಸ್ತ್ರದ ಓದು ಯಾತಕ್ಕೆ ಬರುತ್ತದೆ?

Friday, July 27th, 2012

  ಬೇಲೂರು ಮಠ ಮಂಗಳವಾರ, ಜುಲೈ ೧೫, ೧೯೩೦ ಇವತ್ತು ಬೆಳಿಗ್ಗೆಯಿಂದ ಮಠದಲ್ಲಿ ಅನೇಕ ಸಾಧುಗಳೂ ಮತ್ತು ಭಕ್ತರೂ ನೆರೆಯತೊಡಗಿದ್ದಾರೆ, ಯಾವುದಾದರೂ ಒಂದು ಉತ್ಸವಕ್ಕೆ ಕಿಕ್ಕಿರಿಯುವಂತೆ. ಮಹಾಪುರುಷಜಿಯ ಬಳಿ ದರ್ಶನಾಕಾಂಕ್ಷಿಗಳೂ ದೀಕ್ಷಾರ್ಥಿಗಳು ತುಂಬಿ ಹೋಗಿದ್ದಾರೆ. ಅವರೂ ಆಕ್ಲಾಂತಭಾವದಿಂದ ಉಪದೇಶಾದಿಗಳನ್ನು ನೀಡಿ ಸಕಲರನ್ನೂ ಪರಿತೃಪ್ತರನ್ನಾಗಿಮಾಡುತ್ತಿದ್ದಾರೆ. ಅಪರಾಹ್ನ, ಸುಮಾರು ಮೂರುವರೆ ಗಂಟೆ ಇರಬಹುದು. ಸೇವಕ ಸಾಧು ಒಬ್ಬರು ಮಹಾಪುರುಷಜಿಗೆ ತಿಳಿಸಿದರು: “ಮಹಾರಾಜ್, ಯ-ತಮ್ಮ ದರ್ಶನ ತೆಗೆದುಕೊಳ್ಳಲು ಅಪ್ಪಣೆಯಾಗಬೇಕೆಂದು ಕೇಳುತ್ತಿದ್ದಾರೆ. ತುಂಬ ಕಾತರರಾಗಿದ್ದಾರೆ, ತಮ್ಮ ದರ್ಶನಕ್ಕಾಗಿ, ಮನಸ್ಸಿಗೆ ಮಹಾ ಅಶಾಂತಿಯಂತೆ. ತಮ್ಮ [...]

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ