LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ

ಮನೆಯಂಗಳದಲ್ಲಿ ಮಾತುಕತೆ

ಪ್ರತಿ ಮನೆಯೂ ಸಮಾಜದ ಹ್ರಸ್ವ ಸ್ವರೂಪ. ಎಲ್ಲರೂ ಸಮಾವೇಶಗೊಳ್ಳಬಹುದಾದ ಸ್ಥಳವೇ ಮನೆಯ ಅಂಗಳ.
ಕಳೆದ ಎರಡೂ ಸಾವಿರಕ್ಕೂ ಮಿಕ್ಕಿ ವರ್ಷಗಳ ಪರಂಪರೆಯಲ್ಲಿ ಕನ್ನಡ ನಾಡು ಮತ್ತು ನುಡಿ ಬೆಳೆದು ಬಂದ ಬಗೆಯನ್ನು ಅವಲೋಕಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು.
ಕನ್ನಡ ನಾಡು-ನುಡಿ, ಸಾಹಿತ್ಯ-ಪರಂಪರೆ ಕಲೆ-ಸಂಸ್ಕೃತಿಯಲ್ಲಿ ಸಾಧನೆ ಮಾಡುತ್ತ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚುಗೊಳಿಸಿದವರ ಬಹು ದೊಡ್ಡ ಪರಂಪರೆ ಈ ನಾಡನ್ನು ಪೊರೆಯುತ್ತ ಬಂದಿದೆ. ಇದನ್ನು ಅರಿಯುವ ಸಲುವಾಗಿ ಪ್ರತಿ ತಿಂಗಳ ಮೂರನೆಯ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಾಧಕರನ್ನು ಆಹ್ವಾನಿಸಿ ಅವರ ವಯುಕ್ತಿಕ ಬದುಕಿನ ಸಾಧನೆಗಳನ್ನು ಅರಿಯುವ ಮತ್ತು ಆ ಮೂಲಕ ಅವರ ಬದುಕಿನ ಕಾಲಘಟ್ಟದ ಸಾಂಸ್ಕೃತಿಕ ಸಂಕಥನಗಳನ್ನು ಅರಿಯುವ ಪ್ರಯತ್ನವೇ ಈ ಕಾರ್ಯಕ್ರಮ.
19.01.2001ರಲ್ಲಿ ಆರಂಭವಾದ ಈ ಕಾರ್ಯಕ್ರಮದಲ್ಲಿ ಎ.ಎನ್.ಮೂರ್ತಿರಾಯರು ಮೊದಲ ತಿಂಗಳ ಅತಿಥಿಯಾಗಿ ತಮ್ಮ ಮನದಂಗಳವನ್ನು ತೆರೆದಿಟ್ಟರೆ 200ನೆಯ ತಿಂಗಳ ಅತಿಥಿಯಾಗಿ ದಿನಾಂಕ: 23.06.2018ರಂದು ಹಿರಿಯ ವಿಜ್ಞಾನಿ ಪ್ರೊ|| ಸಿ.ಎನ್.ಆರ್‍.ರಾವ್ ಅವರು ಮನದಂಗಳವನ್ನು ತೆರೆದಿಟ್ಟಿದ್ದಾರೆ. ಈ ಎಲ್ಲ ಮಾತುಕತೆಗಳ ಧ್ವನಿ ರೂಪದ ಸಂಗ್ರಹವೇ ಕಣಜ ಜಾಲತಾಣದಲ್ಲಿ ಈ ಮೂಲಕ ಒದಗಿಸಲಾಗುತ್ತಿದೆ.