LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಹಿಂದೂಸ್ತಾನಿ ಸಂಗೀತ

ಡಾ|| ಗಂಗೂಬಾಯಿ ಹಾನಗಲ್

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಖ್ಯಾತ ವಿದ್ವಾಂಸರೂ ಗಾಯಕರೂ ಆದ ಪದ್ಮವಿಭೂಷಣ ಡಾ|| ಗಂಗೂಬಾಯಿ ಹಾನಗಲ್ ಅವರು ದಿನಾಂಕ:೦೫.೦೩.೧೯೧೩ರಂದು ಧಾರವಾಡ ಜಿಲ್ಲೆಯ ಶ್ಯಾಮನಕಟ್ಟೆಯಲ್ಲಿ ಜನಿಸಿದರು. ತಾಯಿ ಅಂಬಾಬಾಯಿ ಕರ್ನಾಟಕ ಸಂಗೀತದಲ್ಲಿ ಪರಿಣಿತರು. ಜನನದಾರಭ್ಯ ಸಂಗೀತವನ್ನು ಕೇಳಿಯೇ ಬೆಳೆದ ಗಂಗೂಬಾಯಿ ಹಾನಗಲ್ ಅವರು ಹಲಗೂರು ಕೃಷ್ಣಾಚಾರ್ಯರ ಬಳಿ ಒಂದು ವರ್ಷದ ಸಂಗೀತ ಶಿಕ್ಷಣವನ್ನು ಪೂರೈಸಿದರು.ಮುಂದೆ ಪ್ರತಾಪ್ಪಾಲ್ ಮತ್ತು ದತ್ತೋಪಂತ್ ದೇಸಾಯಿ ಇವರುಗಳಲ್ಲಿ ಠುಮ್ರಿ ಕಲಿತು ನಂತರ ಸವಾಯಿ ಗಂಧರ್ವರಲ್ಲಿ ಏಳೆಂಟು ವರ್ಷ ಸಂಗೀತಾಭ್ಯಾಸ ನಡೆಸಿದರು.
ಪ್ರಪ್ರಥಮ ಬಾರಿಗೆ ೧೯೩೩ರಲ್ಲಿ ಗ್ರಾಮಾಫೋನ್ ಸಂಸ್ಥೆಯಿಂದ ಇವರ ಧ್ವನಿ ಮುದ್ರಿಕೆ ಬಿಡುಗಡೆಯಾಯಿತು.ನಂತರ ಇವರು ಪ್ರಖ್ಯಾತರಾದದ್ದು ೧೯೩೪ರಲ್ಲಿ ಕಲ್ಕತ್ತೆಯಲ್ಲಿ ಹಾಡುವ ಮೂಲಕ.ಮುಂದೆ ಇವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ತಮ್ಮ ಕಲಾ ಪ್ರೌಢಿಮೆಯಿಂದ ಪ್ರಸಿದ್ಧರಾದರು. ನಾಡಿನ ಮತ್ತು ರಾಷ್ಟ್ರದ ಬಹುತೇಕ ಕಡೆ ಸಂಗೀತ ಕಛೇರಿಗಳನ್ನು ನಡೆಸಿ ಜನ ಮೆಚ್ಚುಗೆ ಪಡೆದ ಇವರು, ನೆರೆರಾಷ್ಟ್ರಗಳಾದ ನೇಪಾಳ, ಪಾಕಿಸ್ತಾನಗಳಲ್ಲಿಯೂ ಸಂಗೀತ ಕಛೇರಿ ನಡೆಸಿದ ಕೀರ್ತಿಗೆ ಪಾತ್ರರಾದರು.
ಡಾ|| ಗಂಗೂಬಾಯಿ ಹಾನಗಲ್ ಅವರ ಅದ್ಭುತ ಪ್ರತಿಭೆಗೆ ಸಂದ ಪ್ರಶಸ್ತಿ-ಪುರಸ್ಕಾರಗಳು ಅಪಾರ. ಪ್ರಯಾಗ ಸಂಗೀತ ಸಮಿತಿಯಿಂದ ೧೯೬೮ರಲ್ಲಿ ಸ್ವರಶಿರೋಮಣಿ ಪ್ರಶಸ್ತಿ, ಮೈಸೂರು ರಾಜ್ಯ ಸಂಗೀತ ಅಕಾಡೆಮಿಯಿಂದ ಸನ್ಮಾನ, ಕೇಂದ್ರ ಅಕಾಡೆಮಿ ಪ್ರಶಶ್ತಿ, ಬೇಗಂ ಅಖ್ತರ್ ರೂಹೆ ಫಜಲ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ೧೯೮೪ರಲ್ಲಿ ತಾನ್ಸೇನ್ ಪ್ರಶಸ್ತಿ, ಕರ್ನಾಟಕದ ಪ್ರತಿಷ್ಠಿತ ಕನಕ ಪುರಂದರ ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನ ಅಧ್ಯಕ್ಷಿಣಿಯಾಗಿ ಸಂಗೀತ ರತ್ನ ಪ್ರಶಸ್ತಿ ಮುಂತಾದವು. ಇವೆಲ್ಲಾ ಪ್ರಶಸ್ತಿ ಸನ್ಮಾನಗಳಿಗೆ ಗರಿಯಿಟ್ಟಂತೆ ಭಾರತ ಸರ್ಕಾರದ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳು ಇವರ ಕಲಾ ಪ್ರೌಢಿಮೆಗೆ ಸಂದ ಅತ್ಯಂತ ಉನ್ನತ ಗೌರವವಾಗಿದೆ.೧೯೮೪ರವರೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕೂಡ ಸೇವೆ ಸಂದಿದೆ.
ದೇಶದಾದ್ಯಂತ ಈ ಕಲಾವಿದೆಯ ಹೆಸರು ಮನೆಮಾತು.ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ ಕ್ಷೇತ್ರಕದಕೆ ಅತ್ಯಮೂಲ್ಯ ಕೊಡುಗೆಯಾದ ಇವರು ರಾಷ್ಟ್ರದ ಸಂಗೀತ ಕ್ಷೇತ್ರದ ಒಂದು ಅತ್ಯಮೂಲ್ಯ ರತ್ನ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *