LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ವಿಜ್ಞಾನ

ಪ್ರೊ || ಸಿ. ಎನ್. ಆರ್. ರಾವ್

ಚಿಂತಾಮಣಿ ನಾಗೇಶ್ ರಾವ್ ರಾಮಚಂದ್ರರಾವ್ ಪೂರ್ಣ ಹೆಸರಿನ ಇವರು ಸಿ.ಎನ್.ಆರ್. ರಾವ್ ಎಂದೇ ಚಿರಪರಿಚಿತರು. ನಮ್ಮ ರಾಷ್ಟ್ರದ ಅತ್ಯುನ್ನತ ನಾಗರೀಕ ಪ್ರಶಸ್ತಿ “ಭಾರತ ರತ್ನ”ಕ್ಕೆ ಭಾಜನರಾಗಿರುವ ಇವರು ಕನ್ನಡ ನಾಡಿನವರು ಎನ್ನುವುದು ನಮಗೆ ಇನ್ನೂ ಹೆಮ್ಮೆಯ ವಿಷಯ. ಜಗತ್ತಿನ ಪ್ರತಿಷ್ಠಿತ ರಸಾಯನ ಶಾಸ್ತ್ರ ವಿಜ್ಞಾನಿಗಳ ಸಾಲಿನಲ್ಲಿ ಕಂಗೊಳಿಸುತ್ತಿರುವ ಇವರು ಸುಮಾರು ೧೬೫೦ಕ್ಕೂ ಹೆಚ್ಚು ಸಂಶೋಧನಾ ಲೇಖನ ಹಾಗೂ ೫೦ಕ್ಕೂ ಹೆಚ್ಚು ಪುಸ್ತಕಗಳ ಕರ್ತೃ, ಪರ್ಡ್ಯೂ, ಬೋರ್ಡೆಕ್ಸ್, ಆಕ್ಸ್ಫರ್ಡ್, ಮ್ಯಾಂಚೆಸ್ಟರ್, ಬನಾರಸ್, ಕೋಲ್ಕತ್ತಾ ಸೇರಿದಂತೆ ಜಗತ್ತಿನ ೭೭ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿವೆ. ರಾಯಲ್ ಸೊಸೈಟಿ ಆಫ್ ಲಂಡನ್, ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ರಷ್ಯನ್, ಫ್ರೆಂಚ್, ಜಪಾನ್ ಅಕಾಡೆಮಿಗಳು ಸೇರಿದಂತೆ ಹಲವಾರು ಪ್ರತಿಷ್ಠಿತ ಅಕಾಡಮಿಗಳ ಸದಸ್ಯತ್ವ ಇವರಿಗಿದೆ.
ಪದಾರ್ಥ ವಿಜ್ಞಾನದಲ್ಲಿನ ಅತ್ಯುನ್ನತ ಸಂಶೋಧನೆಗಾಗಿ ೨೦೦೫ ರಲ್ಲಿ ಜಗದ್ವಿಖ್ಯಾತ ಡಾನ್ ಡೇವಿಡ್ ಪ್ರಶಸ್ತಿ ಮತ್ತು ಈ ವಿಜ್ಞಾನ ಕ್ಷೇತ್ರದ ಅತ್ಯುನ್ನತ ಗೌರವ ವಾನ್ ಹಿಪ್ಪಲ್ ಪ್ರಶಸ್ತಿ ೨೦೧೭ರಲ್ಲಿ ಇವರ ಮುಡಿಗೇರಿವೆ. ಹದಿನಾಲ್ಕು ವರ್ಷಗಳ ಕಾಲ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾಗಿ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ೧೦ ವರ್ಷಗಳ ಕಾಲ ಅವಿರತ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜವಹರಲಾಲ್ ನೆಹರೂ ಅತ್ಯುನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಗೌರವ ಅಧ್ಯಕ್ಷರಾಗಿ ಹಾಗೂ ಲೈನಸ್ ಪೌಲಿಂಗ್ ಸಂಶೋಧನಾ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಂತ ಹಂತವಾಗಿ ಮೇಲೇರಿ ಜಾಗತಿಕ ಮಟ್ಟದ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಹಿರಿಮೆ ಇವರದ್ದು. ೮೪ನೇ ವರ್ಷದ ಇಳಿ ವಯಸ್ಸಿನಲ್ಲೂ ಸಹ ದಣಿವರಿಯದೆ ವೈಜ್ಞಾನಿಕ ಸಂಶೋಧನೆ ನಡೆಸುತ್ತಾ ನೂರಾರು ಸಂಶೋಧಕರಿಗೆ ಮಾರ್ಗದರ್ಶಕರಾಗಿ, ಚೈತನ್ಯದ ಚಿಲುಮೆಯಂತಿರುವ ಇವರ ದೈತ್ಯ ಪ್ರತಿಭೆಗೆ ಸರಿಸಾಟಿಯಿಲ್ಲ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *