LOADING

ಹುಡುಕಲು ಟೈಪ್ ಮಾಡಿ

ಪರಿಸರವಾದಿ ಮನೆಯಂಗಳದಲ್ಲಿ ಮಾತುಕತೆ

ಡಾ. ಅ.ನ. ಯಲ್ಲಪ್ಪರೆಡ್ಡಿ

ಪರಿಸರದ ಬಗ್ಗೆ ಅಪಾರ ಅನುಭವವುಳ್ಳ ಯಲ್ಲಪ್ಪರೆಡ್ಡಿಯವರು ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ ಭಾರತೀಯ ಅರಣ್ಯಸೇವೆಯ ನಿವೃತ್ತ ಅಧಿಕಾರಿ.
ಅರಣ್ಯೀಕರಣ ಕುರಿತ ಅನೇಕ ರಾಜ್ಯ ಮತ್ತು ರಾಷ್ಟ್ರದ ಉನ್ನತ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ನಗರವೂ ಸೇರಿದಂತೆ ಪ್ರಮುಖ ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛ ಗಾಳಿಗಾಗಿ ಹಲವು ಉದ್ಯಾನಗಳ ಆರಂಭಕ್ಕೆ ಇವರು ಕಾರಣಕರ್ತರು. ಕೆರೆಗಳ ಸಂರಕ್ಷಣೆ, ಒಣಭೂಮಿ ಬೇಸಾಯ, ಮಕ್ಕಳಲ್ಲಿ ಪರಿಸರ ಶಿಕ್ಷಣ, ಬುದ್ಧಿಮಾಂದ್ಯ ಮಕ್ಕಳ ಪುನಶ್ಚೇತನ ಇತ್ಯಾದಿ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳ ಚಿರಂತನ ಚಿಲುಮೆ.
ಪರಿಸರ ಸಮತೋಲನದ ಬಗ್ಗೆ ಜನತೆಗೆ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಅರಣ್ಯಗಳ ನಾಶದಿಂದ ಆಗುವ ದುಷ್ಪರಿಣಾಮಗಳನ್ನು ವಿವರಿಸುವ ಅನೇಕ ಬರಹಗಳನ್ನು- ಕೃತಿಗಳನ್ನು ಹೊರತಂದಿದ್ದಾರೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *