LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಹಿಂದೂಸ್ತಾನಿ ಸಂಗೀತಗಾರರು

ಗಣಪತಿ ಭಟ್ ಹಾಸಣಗಿ

ರಾಷ್ಟ್ರದ ಮಹತ್ವದ ಹಿಂದೂಸ್ತಾನಿ ಗಾಯಕರಲ್ಲಿ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರೂ ಒಬ್ಬರು.
ಹಸಿರು ತುಂಬಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಗಣಪತಿ ಭಟ್ ಆಂಗ್ಲ ಸಾಹಿತ್ಯದಲ್ಲಿ ಪದವೀಧರರು. ಕಿರಾಣ ಘರಾಣದಲ್ಲಿ ಹಿಂದೂಸ್ತಾನಿ ದಿಗ್ಗಜರಾದ ಪಂಡಿತ್ ಬಸವರಾಜ್ ರಾಜಗುರು ಅವರಿಂದ ಪಂಡಿತ್ ಸಿ. ಆರ್. ವ್ಯಾಸ್ರಿಂದ ಗ್ವಾಲಿಯರ್ ಘರಾಣದಲ್ಲಿ ತರಬೇತಿ ಪಡೆದ ಗಣಪತಿ ಭಟ್ ಪಟಿಯಾಲ ಘರಾಣದಲ್ಲೂ ಪರಿಣಿತರು.
ಹುಟ್ಟೂರಿನಲ್ಲೆ ನೆಲೆನಿಂತು ಹಿಂದೂಸ್ತಾನಿ ಸಂಗೀತದಲ್ಲಿ ಶಿಷ್ಯರನ್ನು ತರಬೇತುಗೊಳಿಸುತ್ತಿರುವ ಅವರು ದೇಶ-ವಿದೇಶಗಳ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಸಂಗೀತ ರಸಗಂಗೆ ಹರಿಸಿದ್ದಾರೆ.
ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಗೀತ ಸಂಘ – ಸಂಸ್ಥೆಗಳೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡು ಹಿಂದೂಸ್ತಾನಿ ಸಂಗೀತದ ಬೆಳವಣಿಗೆಗೆ ದುಡಿಯುತ್ತಿರುವ ಗಣಪತಿ ಭಟ್ ಹಾಸಣಗಿ ಪ್ರತಿಷ್ಟಿತ ಶ್ರೀ ನಿಜಗುಣ – ಪುರಂದರ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ – ಸನ್ಮಾನಗಳಿಗೆ ಪಾತ್ರರು.

ಟ್ಯಾಗ್‌ಗಳು:
ಹಿಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *