LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಮಾಜಸೇವಕರು

ಕೆ.ನೀಲಾ

ಕೆ. ನೀಲಾ ಕರ್ನಾಟಕ ಗ್ರಾಮೀಣ ಮಹಿಳಾ ಹೋರಾಟಗಾರ್ತಿಯರಲ್ಲಿ ಬಹುದೊಡ್ಡ ಹೆಸರು. ಪ್ರಸ್ತುತ ಕಲಬುರಗಿಯಲ್ಲಿ ಪೂರ್ಣಾವಧಿ ಸಾಮಾಜಿಕ ಕಾರ್ಯಕರ್ತೆಯಾಗಿರುವ ಇವರು ‘ಅಖಿಲ ಭಾರತ ಜನವಾದಿ ಸಂಘಟನೆ’ಯ ರಾಜ್ಯ ಘಟಕದ ಉಪಾಧ್ಯಕ್ಷೆ. ಸಾಹಿತ್ಯ ಕ್ಷೇತ್ರದಲ್ಲೂ ಕೂಡ ಸಕ್ರಿಯವಾಗಿರುವ ಇವರು ಇದುವರೆಗೆ ಏಳು ಕೃತಿಗಳನ್ನು ಪ್ರಕಟಿಸಿದ್ದಾರೆ. ಉತ್ತಮ ಕವಿಯಿತ್ರಿ, ಕತೆಗಾರ್ತಿ ಹಾಗೂ ಅಂಕಣ ಬರಹಗಾರರಾಗಿ ಖ್ಯಾತಿ ಗಳಿಸಿದ್ದಾರೆ.
ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಭಾಗದಲ್ಲಿ ಹಿಳೆಯು ಸಮಸ್ಯೆಗಳ ಬಗ್ಗೆ ಬಹು ದೊಡ್ಡ ಆಂದೋಲನ ರೂಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಜನಪರ ಕಾಳಜಿಯ ಹೋರಾಟಗಳಲ್ಲಿ ಸಕ್ರಿಯರು. ಒಳ್ಳೆಯ ವಾಗ್ಮಿ ಹಾಗೂ ಅಭಿನೇತ್ರಿ ಕೂಡ. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಗ್ರಾಮೀಣ ಸ್ತ್ರೀ ಸಮುದಾಯದ ಹೋರಾಟಗಳ ಚೈತನ್ಯದ ಚಿಲುಮೆಯಂತಿದ್ದಾರೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *