LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಂಗಸಜ್ಜಿಕೆ

ಶ್ರೀನಿವಾಸ ಜಿ. ಕಪ್ಪಣ್ಣ

ಕನ್ನಡ ನಾಡು, ನುಡಿಗೆ ಹೆಮ್ಮೆ ತಂದ ಸಾಧಕರ ಮನದಾಳವನ್ನು ಬಿಚ್ಚಿಡಲು ಇದು ಒಂದು ಮಹತ್ವದ ವೇದಿಕೆ. ಸಾಧಕರನ್ನು ನೋಡಲು ನಾಡಿನ ಜನತೆಗೆ ಒಂದು ಅವಕಾಶ. ಅವರ ಮಾತನ್ನು ಕೇಳುವುದಲ್ಲದೆ ಅವರ ಜೊತೆ ಸಂವಾದ ಮಾಡುವ ಅಪೂರ್ವ ಕ್ಷಣಕ್ಕೆ ‘ಮನೆಯಂಗಳದಲ್ಲಿ ಮಾತುಕತೆ’ ದಾರಿ ಮಾಡಿಕೊಟ್ಟಿದೆ. ಸಾಧಕರಿಗೂ ತಮ್ಮ ಅಭಿಮಾನಿಗಳನ್ನು ಕಾಣುವ, ಅವರ ಅನಿಸಿಕೆಯನ್ನು ಆಲಿಸುವ ಅಪೂರ್ವ ಅವಕಾಶ.
ಇಂತಹ ೧೯೬ ನೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುತ್ತಿರುವವರು ರಂಗ ಭೂಮಿಯ ಮಹತ್ವದ ಸಾಧಕ ಶ್ರೀನಿವಾಸ್ ಜಿ. ಕಪ್ಪಣ್ಣ ಅವರು. ‘ನಾನೊಬ್ಬ ಸಾಂಸ್ಕೃತಿಕ ಸಂಘಟಕ’ ಎಂದು ಹೆಮ್ಮೆಯಿಂದ ತಮ್ಮನ್ನು ಬಣ್ಣಿಸಿಕೊಳ್ಳುವ ಶ್ರೀನಿವಾಸ್ ಜಿ. ಕಪ್ಪಣ್ಣ ಕನ್ನಡ ರಂಗಭೂಮಿಯ ಪ್ರಮುಖ ಹೆಸರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಓದುವಾಗ ಡಾ. ಹೆಚ್. ನರಸಿಂಹಯ್ಯ ಹಾಗೂ ಮೇಕಪ್ ನಾಣಿಯವರ ಪ್ರಭಾವಕ್ಕೆ ಒಳಗಾಗಿ ರಂಗಭೂಮಿಯನ್ನು ಪ್ರವೇಶಿಸಿದರು. ಜಿ. ಶ್ರೀನಿವಾಸ್ ನಂತರದ ದಿನಗಳಲ್ಲಿ ಶ್ರೀನಿವಾಸ್ ಜಿ. ಕಪ್ಪಣ್ಣ ಆಗಿ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿದರು.
ಬ್ಯಾಕ್ ಸ್ಟೇಜ್, ರಂಗವಿನ್ಯಾಸ, ಲೈಟಿಂಗ್ನಲ್ಲಿ ವಿಶೇಷ ಪರಿಣತಿ, ನೂರಾರು ನಾಟಕಗಳನ್ನು ರಂಗಕ್ಕೆ ತಂದ ಖ್ಯಾತಿ ಇವರದ್ದು. ವಾರ್ತಾ ಇಲಾಖೆಯಲ್ಲಿ ಸಂಗೀತ ಮತ್ತು ನಾಟಕ ಅಧಿಕಾರಿಯಾಗಿದ್ದ ಕಪ್ಪಣ್ಣ ಅನೇಕ ರಂಗತಂಡಗಳ ಮೂಲಕ, ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಹಲವು ಹೊಸ ಯೋಜನೆಗಳಿಗೆ ಮುನ್ನುಡಿ ಬರೆದರು. ರಂಗಭೂಮಿ, ಸಂಘಟನೆಯನ್ನು ಉಸಿರಾಡುತ್ತಲೇ ೭೦ರ ಹರೆಯಕ್ಕೆ ಕಾಲಿಟ್ಟಿರುವ ಕಪ್ಪಣ್ಣ ನೂರಾರು ಕಲಾವಿದರಿಗೆ ರಂಗವೀಕ್ಷಣೆ ನೀಡಿದ್ದಾರೆ.
ತಮ್ಮದೇ ‘ಕಪ್ಪಣ್ಣ ಅಂಗಳ’ವನ್ನು ರೂಪಿಸಿ ಹಲವರ ರಂಗ ಕನಸಿಗೆ ವೇದಿಕೆ ಒದಗಿಸಿದ್ದಾರೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *