LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ವನ್ಯಜೀವಿ ಛಾಯಾಗ್ರಾಹಕರು

ಕೃಪಾಕರ ಸೇನಾನಿ

ಕನ್ನಡ ನಾಡು, ನುಡಿಗೆ ಹೆಮ್ಮೆ ತಂದ ಸಾಧಕರ ಮನದಾಳವನ್ನು ಬಿಚ್ಚಿಡಲು ಇದು ಒಂದು ಮಹತ್ವದ ವೇದಿಕೆ. ಸಾಧಕರನ್ನು ನೋಡಲು ನಾಡಿನ ಜನತೆಗೆ ಒಂದು ಅವಕಾಶ. ಅವರ ಮಾತನ್ನು ಕೇಲುವುದಲ್ಲದೆ ಅವರ ಜೊತೆ ಸಂವಾದ ಮಾಡುವ ಅಪೂರ್ವ ಕ್ಷಣಕ್ಕೆ ‘ಮನೆಯಂಗಳದಲ್ಲಿ ಮಾತುಕತೆ’ ದಾರಿ ಮಾಡಿಕೊಟ್ಟಿದೆ. ಸಾಧಕರಿಗೂ ತಮ್ಮ ಅದೃಶ್ಯ ಓದುಗರನ್ನು ಕಾಣುವ. ಅವರ ಅನಿಸಿಕೆಯನ್ನೂ ಕೇಳಲು ಇದು ಒಂದು ಅಪೂರ್ವ ಅವಕಾಶ.
ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಜೋಡಿ. ಕೃಪಾಕರ ಸೇನಾನಿ.
ಪತ್ರಕರ್ತ ಕೃಪಾಕರ, ಸಿವಿಲ್ ಇಂಜಿನಿಯರ್ ಸೇನಾನಿ ಕೈಹಿಡಿದದ್ದು ಫೋಟೋಗ್ರಫಿಯನ್ನು. ಆನಂತರ ನಡೆದದ್ದು ಒಂದು ಜಾದೂ. ಈ ಜೋಡಿ ನಿರ್ಮಿಸಿದ ಸೀಳು ನಾಯಿಗಳ ಕುರಿತ ‘ವೈಲ್ಡ್ ಡಾಗ್ ಡೈರೀಸ್’ ಎಂಬ ವನ್ಯಜೀವಿ ಚಿತ್ರ ಆರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿತು. ಕೃಪಾಕರ ಹಾಗೂ ಸೇನಾನಿ ಜಾಗತಿಕ ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಬಂಡೀಪುರದ ದಟ್ಟ ಕಾಡಿನಲ್ಲಿ ಈ ಜೋಡಿ ವನ್ಯಜೀವಿ ಛಾಯಾಗ್ರಹಣ ಎಂಬ ತಪ್ಪಸ್ಸಿಗೆ ತಮ್ಮನ್ನು ತೆತ್ತುಕೊಂಡಿದ್ದಾರೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *