LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾವಯವ ಕೃಷಿ ಸಾಧಕರು

ಎಲ್‌. ನಾರಾಯಣರೆಡ್ಡಿ

ಕನ್ನಡ ನಾಡು, ನುಡಿಗೆ ಹೆಮ್ಮೆ ತಂದ ಸಾಧಕರ ಮನದಾಳವನ್ನು ಬಿಚ್ಚಿಡಲು ಇದು ಒಂದು ಮಹತ್ವದ ವೇದಿಕೆ. ಸಾಧಕರನ್ನು ನೋಡಲು ನಾಡಿನ ಜನತೆಗೆ ಒಂದು ಅವಕಾಶ. ಅವರ ಮಾತನ್ನು ಕೇಳುವುದಲ್ಲದೆ ಅವರ ಜೊತೆ ಸಂವಾದ ಮಾಡುವ ಅಪೂರ್ವ ಕ್ಷಣಕ್ಕೆ ‘ಮನೆಯಂಗಳದಲ್ಲಿ ಮಾತುಕತೆ’ ದಾರಿ ಮಾಡಿಕೊಟ್ಟಿದೆ. ಸಾಧಕರಿಗೂ ತಮ್ಮ ಅದೃಶ್ಯ ಓದುಗರನ್ನು ಕಾಣುವ, ಅವರ ಅನಿಸಿಕೆಯನ್ನೂ ಕೇಳಲು ಇದು ಒಂದು ಅಪೂರ್ವ ಅವಕಾಶ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಕೇಂದ್ರ ಕನ್ನಡ ಭವನದಲ್ಲಿ ಇರುವ ‘ನಯನ’ ರಂಗಮಂದಿರದಲ್ಲಿ ಪ್ರತೀ ತಿಂಗಳ ಮೂರನೆಯ ಶನಿವಾರ ಈ ಮನೆಯಂಗಳದಲ್ಲಿ ಮಾತುಕತೆ ಜರುಗುತ್ತದೆ. ಈ ದಿನಕ್ಕಾಗಿಯೇ ಕಾತರಿಸುವ ಮನಸ್ಸುಗಳು ಹಲವಾರು.
ಇದುವರೆಗೂ ೧೯೩ ಸಾಧಕರು ಮನೆಯಂಗಳದಲ್ಲಿ ಮಾತುಕತೆಗೆ ಅತಿಥಿಯಾಗಿ ಬಂದಿದ್ದಾರೆ. ತಮ್ಮ ಬದುಕು, ಸಾಧನೆಯನ್ನು ಕೇಳುಗರಿಗೆ ದಾಟಿಸಿದ್ದಾರೆ. ನಾಡು ನುಡಿಗೆ ಕೆಲಸ ಮಾಡುವ ಉತ್ಸಾಹ ತುಂಬಿದ್ದಾರೆ. ಇಂತಹ ೧೯೪ ನೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುತ್ತಿರುವವರು ಕೃಷಿ ಕ್ಷೇತ್ರದ ಮಹತ್ವದ ಸಾಧಕ ನಾರಾಯಣ ರೆಡ್ಡಿ ಅವರು.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *