LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತಿಗಳು

ಡಾ|| ಗಿರಿಜಮ್ಮ

ವೈದ್ಯಕೀಯ ಕ್ಷೇತ್ರದಲ್ಲಿ ಮೌಲಿಕ ಸಾಹಿತ್ಯ ಕೃತಿಗಳು ಅತ್ಯಂತ ಅಪರೂಪ. ಈ ಕೊರತೆಯನ್ನು ನೀಗುವಲ್ಲಿ ಕೇವಲ ಬೆರಳೆಣಿಕೆಯಷ್ಟು ಲೇಖಕರು ಮಾತ್ರ ಶ್ರಮಿಸಿದ್ದಾರೆ. ಅಂತಹ ಲೇಖಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಡಾ|| ಎಚ್.ಗಿರಿಜಮ್ಮ ಅವರು. ಸ್ತ್ರೀರೋಗ ತಜ್ಞರಾಗಿ ಮತ್ತು ಸೃಜನಶೀಲ ಸಾಹಿತಿಯಾಗಿ ಕನ್ನಡಿಗರ ಮನಸಿನಲ್ಲಿ ನೆಲೆಸಿದ್ದಾರೆ.
೧೯೫೧ರಲ್ಲಿ ಜನಿಸಿದ ಡಾ|| ಗಿರಿಜಮ್ಮನವರು ವೃತ್ತಿಯಿಂದ ವೈದ್ಯರು. ತಮ್ಮ ತಾಯಿಯ ಆಸೆಯಂತೆ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಿ ಬಡರೋಗಿಗಳ ಅನಾರೋಗ್ಯ ನಿವಾರಣೆಗೆ ಆಶಾದೀಪವಾಗಿದ್ದಾರೆ. ಆನಂತರ ವೃತ್ತಿಗೆ ಪೂರಕವಾಗಿ ಪ್ರವೃತ್ತಿಯಂತೆ ವೈದ್ಯಕೀಯ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವೈದ್ಯಕೀಯ ವಿಷಯಗಳ ಬಗ್ಗೆ ದಿನಪತ್ರಿಕೆ ಮತ್ತು ನಿಯತಕಾಲಿಗಳಲ್ಲಿ ಅಂಕಣ ಮತ್ತು ಲೇಖನಗಳನ್ನು ಬರೆಯಲು ಆರಂಭಿಸಿದರು. ಈ ಲೇಖನಗಳು ಅಪಾರ ಜನಪ್ರಿಯತೆಯನ್ನು ಗಳಿಸಿವೆ.
ಹೀಗೆ ಅಂಕಣ ಮತ್ತು ಲೇಖನಗಳಲ್ಲಿ ಮೂಡಿಬಂದ ಅಂಕಣಗಳು ಸಂಗ್ರಹವಾಗಿ ಮತ್ತು ನಿರ್ದಿಷ್ಟ ವಿಷಯವಸ್ತು ಆಧಾರಿತ ಕೈಪಿಡಿ ಮಾದರಿಯ ಹಲವು ಆರೋಗ್ಯ ವಿಜ್ಞಾನ ಕೃತಿಗಳನ್ನು ರಚಿಸಿದ್ದಾರೆ. ಮನುಷ್ಯ ದೇಹ ಮತ್ತು ಆರೋಗ್ಯ, ನಿಮ್ಮ ಮಗು, ಬಸಿರು, ಬಂಜೆತನ ಮತ್ತು ಪರಿಹಾರೋಪಾಯಗಳು, ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ, ರಕ್ತದ ಕಾಯಿಲೆಗಳು ಮುಂತಾದವು ವೈದ್ಯಕಿಯ ಕ್ಷೇತ್ರದ ಇವರ ಪ್ರಮುಖ ಕೃತಿಗಳಾಗಿವೆ. ಅಲ್ಲದೆ ಮಂದಾರಹೂವು, ಹೂಬಳ್ಳಿಗೆಲ್ಲಿ ಆಸರೆ, ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಕೆಲವು ಕತೆ – ಕಾದಂಬರಿಗಳು ಟಿ.ವಿ ವಾಹಿನಿಗಳಲ್ಲಿ ಧಾರಾವಾಹಿಗಳಾಗಿ ಮೂಡಿ ಬಂದಿವೆ.
ಡಾ|| ಗಿರಿಜಮ್ಮ ಅವರು ಮಾನವೀಯ ನೆಲೆಯನ್ನು ಪ್ರಮುಖವಾಗಿ ಪ್ರತಿಪಾದಿಸಿದ್ದು, ಅವರ ಬರಹಗಳಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಅವರು ತಮ್ಮ ಸಾಹಿತ್ಯ ಕೃತಿಗಳಲ್ಲಿ ಸಾಮಾಜಿಕ ಅಂತಃಕರಣದ ತುಡಿತಗಳನ್ನು ಮಿಡಿದಿದ್ದಾರೆ.
ಡಾ|| ಗಿರಿಜಮ್ಮ ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಸರೋಜಾದೇವಿ ದತ್ತಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಸಂದಿವೆ.

ಟ್ಯಾಗ್‌ಗಳು:
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *