LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಹಿಂದೂಸ್ತಾನಿ ಸಂಗೀತಗಾರರು

ಪಂ. ರಾಜಶೇಖರ್‌ ಮನ್ಸೂರ್‌

ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ಕಲಾವಿದರಾದ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರ ಸುಪುತ್ರರಾಗಿ ಪರಂಪರೆಯ ಮುಂದುವರಿಕೆಯಲ್ಲಿಯೇ ಪ್ರಯೋಗಶೀಲತೆಯನ್ನು ಅನುಷ್ಠಾನ ಮಾಡುತ್ತ ಕಳೆದ ಐದು ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಜೈಪುರ-ಅತ್ರೌಲಿ ಘರಾನಗಳಲ್ಲಿ ತಮ್ಮ ಖ್ಯಾಲ್ಗಳ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ಕಲಾವಿದರಾಗಿರುವುದೇ ಅಲ್ಲದೆ ಇಂದಿಗೂ ತಮ್ಮನ್ನು ಸಂಗೀತ ವಿದ್ಯಾರ್ಥಿ ಎಂದೇ ಕರೆದುಕೊಳ್ಳುವ ಸಜ್ಜನ ಸಂಗೀತ ವಿದ್ವಾಂಸರು ಪಂಡಿತ್ ರಾಜಶೇಖರ ಮನ್ಸೂರ್ ಅವರು.
೧೯೪೨ರ ಡಿಸೆಂಬರ್ ೧೬ ರಂದು ಧಾರವಾಡದಲ್ಲಿ ಜನಿಸಿದ ರಾಜಶೇಖರ್ ಮನ್ಸೂರ್ ಅವರು ವಿದ್ಯಾಭ್ಯಾಸ ಜೊತೆಯಲ್ಲಿಯೇ ಸಂಗೀತದ ಅಭ್ಯಾಸವನ್ನು ಕೈಗೊಂಡಿರುವ ರಾಜಶೇಖರ್ ಅವರು ತಮ್ಮ ಕಾಲೇಜು ವಿದ್ಯಾಭ್ಯಾಸ ದಿನಗಳಲ್ಲಿಯೇ ರಾಗ ಮಾಲಕೌಂಸ್ ಅನ್ನು ತಮ್ಮ ಕಾಲೇಜು ಉತ್ಸವಗಳಲ್ಲಿ ಹಾಡುವ ಮೂಲಕ ರಂಗಪ್ರವೇಶ ಮಾಡಿದರು.
ರಾಜಶೇಖರ್ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಮನ್ಸೂರ್ ಅವರ ಶಿಷ್ಯರಾಗಿ ಸಂಗೀತ ಶಿಕ್ಷಣ ಪಡೆದರಲ್ಲದೆ ಆಕಾಶವಾಣಿ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದರಲ್ಲದೆ ಸಂಗೀತ ವಿಶಾರದ ಪರೀಕ್ಷೆಯನ್ನು ಬಂಗಾರದ ಪದಕದೊಂದಿಗೆ ಪೂರೈಸಿದರು. ತಮ್ಮ ಇಪ್ಪತ್ತನೆಯ ವಯಸ್ಸಿನಿಂದ ತಂದೆಯವರ ಕಚೇರಿಗಳಲ್ಲಿ ಸಂಗೀತ ಸಾಥಿಯಾಗಿದ್ದರು.
ಸಂಗೀತವನ್ನು ಪೂರ್ಣಕಾಲಿಕ ವೃತ್ತಿಯಾಗಿಕೊಳ್ಳದೆ ಪ್ರವೃತ್ತಿಯಾಗಿಸಿಕೊಂಡ ರಾಜಶೇಖರ ಮನ್ಸೂರ್ ಅವರು ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನವನ್ನು ಪಡೆದು ಇಂಗ್ಲಿಷ್ ಸಾಹಿತ್ಯ ಮತ್ತು ಭಾಷಾ ವಿಜ್ಞಾನದಲ್ಲಿ ಎಂ.ಎ ಪದವಿ ಪೂರೈಸಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಮತ್ತು ಭಾಷಾ ವಿಜ್ಞಾನದ ಪ್ರಾಧ್ಯಾಪಕರಾಗಿ ಸುಮಾರು ಮುವ್ವತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಲ್ಲದೆ, ಗುಲಬರ್ಗಾದ ಸ್ನಾತಕೋತ್ತರ ಕೇಂದ್ರದಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ.
೨೦೦೯ರಲ್ಲಿ Footsteps and Beyond ಎಂಬ ಸಂಗೀತ ಆಲ್ಬಂ ಹೊರತಂದಿರುವ ರಾಜಶೇಖರ ಮನ್ಸೂರ್ ಅವರು ೨೦೦೫-೦೮ನೆಯ ಸಾಲಿನಲ್ಲಿ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಂಗೀತ ಸಾಧನೆಯನ್ನು ಭೋಪಾಲದ ಇಂದಿರಾಗಾಂಧಿ ಮಾನವ ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿದೆ.
ಆಕಾಶವಾಣಿಯ ಎ ಟಾಪ್ ಸಂಗೀತ ಕಲಾವಿದರಾಗಿ ಮಾನ್ಯತೆ ಪಡೆದಿರುವ ಕಲಾವಿದರಾಗಿ ರಾಷ್ಟ್ರಾದ್ಯಂತ ಹಲವು ಪ್ರತಿಷ್ಠಿತ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ತಮ್ಮ ಸೇವಾನಿವೃತ್ತಿಯ ನಂತರ ಪೂರ್ಣಕಾಲಿಕ ಸಂಗೀತಗಾರರಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ೧೯೯೭ನೆಯ ಸಾಲಿನ ರಾಜ್ಯೋತ್ಸವ ಪ್ರಶಸ್ತಿ, ೨೦೦೯ನೆಯ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ೨೦೧೨ನೆಯ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ೨೦೧೬ರಲ್ಲಿ ಚೆನ್ನೈನ ತಾನಸೇನ್ ಮ್ಯೂಸಿಕ್ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಪಂಡಿತ್ ಸಣ್ಣ ಭರಮಣ್ಣ ಸ್ಮಾರಕ ರಾಷ್ಟ್ರೀಯ ಪುರಸ್ಕಾರವೂ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *