LOADING

ಹುಡುಕಲು ಟೈಪ್ ಮಾಡಿ

ಜಾನಪದ ಮನೆಯಂಗಳದಲ್ಲಿ ಮಾತುಕತೆ

ಡಾ|| ಎಸ್.ಕೆ.ಕರೀಂಖಾನ್

ಜಾನಪದವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ಡಾ||ಎಸ್.ಕೆ.ಕರೀಂಖಾನರು ಹುಟ್ಟಿದ್ದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.೮ನೇ ತರಗತಿಯವರೆಗೆ ಓದಿದ ಕರೀಂಖಾನರು ವಿಶೇಷವಾಗಿ ಕಲಿತದ್ದು ಸಂಸ್ಕೃತವನ್ನಾದರೂ ಒಲವು ಬೆಳೆದದ್ದು ಜಾನಪದದಲ್ಲಿ.ಗ್ರಾಮೀಣ ನೆಲದ ಜನಪದ ಕರೀಂಖಾನರನ್ನು ಕೈಬೀಸಿ ಕರೆಯಿತು.ಹಳ್ಳಿ-ಹಳ್ಳಿಗಳನ್ನು ಸುತ್ತಿ ಜನಪದ ಸಾಹಿತ್ಯವನ್ನು ಸಂಗ್ರಹಿಸಿದರು.ಸ್ವಾತಂತ್ರ್ಯ ಹಾಗೂ ಏಕೀಕರಣ ಚಳುವಳಿಗಳಲ್ಲಿ ತಮ್ಮ ಅದ್ಭುತ ಕಂಠದಿಂದ ಹಾಡುತ್ತ ಜನಜಾಗೃತಿಗೊಳಿಸಿದರು.ದೇಶಪ್ರೇಮಿಯಾದ ಇವರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೆರೆಮನೆ ವಾಸವನ್ನೂ ಅನುಭವಿಸಿದರು.
ಮುಂದೆ ಸಿನಿಮಾ ಜಗತ್ತು ಇವರ ಅಭೂತಪೂರ್ವ ಸೇವೆಯನ್ನು ಪಡೆದುಕೊಂಡಿತು.ಇವರು ರಚಿಸಿದ ಗೀತೆಗಳು ಇಂದಿಗೂ ಜನಪ್ರಿಯ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜಾನಪದ.ಸಾಹಿತ್ಯ, ಸಂಸ್ಕೃತಿ ಹಾಗೂ ಸಿನಿಮಾರಂಗಕ್ಕೆ ಡಾ|| ಎಸ್.ಕೆ.ಕರೀಂಖಾನರು ನೀಡಿದ ಕೊಡುಗೆ ಅಪಾರ. ಕನ್ನಡದ ಕರೀಂಖಾನರ ನಿಸ್ವರ್ಥ ಸೇವೆಗೆ ಸಂದ ಪ್ರಶಸ್ತಿ-ಪುರಸ್ಕಾರಗಳು ಹಲವು ಹತ್ತು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *