LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ರಂಗಭೂಮಿ

ಶ್ರೀ ಕೆ.ವಿ.ಅಕ್ಷರ

ಮಲೆನಾಡಿನ ಮಡಿಲಿನಲ್ಲಿರುವ ಸಾಗರದ ಹೆಗ್ಗೋಡಿನವರಾದ ಕೆ.ವಿ. ಅಕ್ಷರ ಪ್ರಸಿದ್ಧ ಚಿಂತಕರು, ಲೇಖಕರು, ರಂಗಕರ್ಮಿಗಳು ಆದ ಕೆ.ವಿ.ಸುಬ್ಬಣ್ಣನವರ ಪುತ್ರರು. ಎಳೆಯ ವಯಸ್ಸಿನಿಂದಲೇ ಕಲಾವಾತಾವರಣದಲ್ಲಿ ಬೆಳೆದು ಬಂದ ಕೆ.ವಿ. ಅಕ್ಷರಾರವರು ಪ್ರಸ್ತುತ ಪ್ರತಿಷ್ಠಿತ ನೀನಾಸಂನ ಮುಖ್ಯಸ್ಥರು.
ರಂಗಭೂಮಿಯಲ್ಲಿ ಪೂರ್ಣವಾಗಿ ತೊಡಗಿಕೊಂಡಿರುವ ಕೆ.ವಿ.ಅಕ್ಷರಾ ಅವರು ಅನೇಕ ಪತ್ರಿಕೆಗಳ ಅಂಕಣಗಳಿಗೂ ಬರೆಯುತ್ತಾರೆ. ಈಗಾಗಲೇ ಹೆಸರಾಗಿರುವ ನೀನಾಸಂ ಮೂಲಕ ರಂಗಶಿಕ್ಷಣ ನೀಡುವುದನ್ನು ಮಾಡುತ್ತಲೇ ಹೊಸ ಹೊಸ ಪ್ರಯೋಗಗಳಿಗೆ ನೀನಾಸಂ ಅನ್ನು ಒಡ್ಡುತ್ತಿದ್ದಾರೆ.
ಅನೇಕ ನಾಟಕಗಳನ್ನು ಅನುವಾದಿಸಿರುವ ಕೆ.ವಿ. ಅಕ್ಷರ, ನಾಟಕ ನಿರ್ದೇಶನದಲ್ಲಿಯೂ ನೈಪುಣ್ಯತೆ ಪಡೆದಿದ್ದಾರೆ. ರಂಗಭೂಮಿ ಚರಿತ್ರೆಯಲ್ಲಿ ದಾಖಲಾಗಿರುವ ನಿನಾಸಂ ಸಂಸ್ಥೆಯನ್ನು ಅರ್ಥಪೂರ್ಣವಾಗಿ ಮುನ್ನೆಡೆಸುತ್ತಿದ್ದಾರೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *