LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ವಿಜ್ಞಾನ

ಡಾ|| ಎಸ್.ಕೆ.ಶಿವಕುಮಾರ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಮುಖ ವಿಜ್ಞಾನಿಗಳಲ್ಲಿ ಶ್ರೀರಂಗಪಟ್ಟಣ ಕೃಷ್ಣಮೂರ್ತಿ ಶಿವಕುಮಾರ್ ಅವರು ಒಬ್ಬರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮದಲ್ಲಿ ೧೯೫೩ ಮಾರ್ಚ್ ೧೭ರಂದು ಜನಿಸಿದ ಶ್ರೀಯುತರು, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಪದವಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಿ.ಎ., ಎಂ.ಟೆಕ್ ಪದವಿ ಪಡೆದರು.
ಇಸ್ರೋದ ಅನೇಕ ಯಶಸ್ಸಿನಲ್ಲಿ ಭಾಗಿಯಾಗಿರುವ ಇವರು ಇಸ್ರೋ ಅಭಿವೃದ್ಧಿಪಡಿಸಿದ ಪೂರ್ಣ ದೇಶಿ ತಂತ್ರಜ್ಞಾನದ ೧೦೦ ಅಡಿ ಸುತ್ತಳತೆಯ ಅಂತರಿಕ್ಷ ಜಾಲ ಆಂಟೆನಾ ಅಭಿವೃದ್ಧಿಪಡಿಸುವ ಯೋಜನಾ ನಿರ್ದೇಶಕರೂ ಆಗಿ ಭಾರತದ ಪ್ರಥಮ ಚಂದ್ರಯಾನ-೧ ಯೋಜನೆಗೆ ನೆರವಾಗುವುದರ ಜೊತೆಗೆ ಭವಿಷ್ಯದ ಅಂತರಿಕ್ಷ ಯಾತ್ರೆಗಳಿಗೆ ನೆರವಾಗಿದ್ದಾರೆ.
ಶ್ರೀಯುತರು ಪ್ರಸ್ತುತ ಇಸ್ರೋ ಉಪಗ್ರಹ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದು ಭಾಸ್ಕರ, ಆಪಲ್, ಐಆರ್ಎಸ್ ಮತ್ತು ಇನ್ಸಾಟ್ ಉಪಗ್ರಹ ಉಡಾವಣೆ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ.
ಭಾರತೀಯ ರಾಷ್ಟ್ರೀಯ ದೂರ ಸಂವೇದಿ ಪ್ರಶಸ್ತಿ, ಬಾಹ್ಯಾಕಾಶ ಮೂಲಸೌಕರ್ಯ ನಿರ್ವಹಣೆಯ ದಕ್ಷತೆಗಾಗಿ ಇಸ್ರೋ ಮೆರಿಟ್ ಪ್ರಶಸ್ತಿ ಪಡೆದಿರುವ ಶ್ರೀಯುತರು ೧೯೯೮ ರಿಂದ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ನೆಟ್ವರ್ಕ್ನ ನಿರ್ದೇಶಕರಾಗಿ ದೂರ ಸಂವೇದಿ ಉಪಗ್ರಹಗಳ ನಿರ್ವಹಣೆ, ನಿಯಂತ್ರಣ ಘಟಕದ ಮುಖ್ಯಸ್ಥರಾಗಿ ಅಂತರಿಕ್ಷ ಕ್ಷೇತ್ರದಲ್ಲಿ ಸ್ವಾಯತ್ತತೆ ಪಡೆದಿರುವ ಸಂಬಂಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ೪೦೦ ವಿಜ್ಞಾನಿಗಳ ತಂಡವನ್ನು ಮುನ್ನೆಡೆಸುತ್ತಿದ್ದಾರೆ.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸತತವಾಗಿ ಸೇವೆ ಸಲ್ಲಿಸುತ್ತಿರುವ ಪ್ರಯೋಗಶೀಲ ವಿಜ್ಞಾನಿ ಶ್ರೀ ಎಸ್.ಕೆ. ಶಿವಕುಮಾರ್ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ೨೦೦೮ನೇ ಸಾಲಿನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *