LOADING

ಹುಡುಕಲು ಟೈಪ್ ಮಾಡಿ

ನಾಟಕ ಮನೆಯಂಗಳದಲ್ಲಿ ಮಾತುಕತೆ

ಶ್ರೀಮತಿ ಸುಭದ್ರಮ್ಮ ಮನ್ಸೂರ್

ವೃತ್ತಿರಂಗಭೂಮಿಯಲ್ಲಿ ಅಭಿನಯ ಮತ್ತು ಹಾಡುಗಾರಿಕೆಗೆ ಪ್ರಸಿದ್ಧರಾದವರು ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರು. ಏಣಗಿ ಬಾಳಪ್ಪನವರ ನೇತೃತ್ವದ ‘ಕಲಾವೈಭವ ನಾಟಕ ಮಂಡಲಿ’ಯ ಎಲ್ಲಾ ವಿಖ್ಯಾತ ನಾಟಕಗಳಲ್ಲೂ ನಾಯಕಿಯ ಪಾತ್ರ ನಿರ್ವಹಿಸಿದ ಸುಪ್ರಸಿದ್ಧ ಅಭಿನೇತ್ರಿಯಾದ ಇವರು ಅತ್ಯುತ್ತಮ ಗಾಯಕಿಯೂ ಹೌದು. ಶ್ರೀಧರರಾವ್ ಅವರ ‘ಶ್ರೀ ಸುಮಂಗಳಿ ನಾಟ್ಯ ಸಂಘ’ ಮತ್ತು ‘ಕಟೀಲು ದುರ್ಗಾಪರಮೇಶ್ವರಿ ನಾಟ್ಯಸಂಘ’ದ ಹಲವು ನಾಟಕಗಳಲ್ಲಿ ನಾಯಕಿಯಾಗಿ ಬೆಳಕಿಗೆ ಬಂದು ಜನಮನ ಸೂರೆಗೊಂಡವರು. ‘ಜಗಜ್ಯೋತಿ ಬಸವೇಶ್ವರ’ ನಾಟಕದ ಕಲಾವತಿಯಾಗಿ ಜನಪ್ರಿಯತೆ ಗಳಿಸಿದವರು. ಅವರ ಅಭಿನಯ ಪ್ರತಿಭೆ ಪೌರಾಣಿಕ, ಐತಿಹಾಸಿಕ ನಾಟಕಗಳಿಗೆ ಸೀಮಿತವಾಗದೆ ನಾಟಕಗಳಲ್ಲೂ ಪ್ರಕಾಶಗೊಂಡಿದೆ.
ಹಿರಣ್ಣಯ್ಯ ಮಿತ್ರಮಂಡಲಿಯಲ್ಲಿ ಮಾಸ್ಟರ್ ಹಿರಣ್ಣಯ್ಯನವರ ‘ಲಂಚಾವತಾರ’ ನಾಟಕದಲ್ಲಿ ಸೀತೆಯ ಪಾತ್ರ ನಿರ್ವಹಿಸಿ, ಅಕ್ಕನ ವಚನಗಳ ಹಾಡುಗಾರಿಕೆಯ ವಿಶಿಷ್ಟ ಶೈಲಿಯಿಂದ ಜನರ ಮೆಚ್ಚುಗೆ ಗಳಿಸಿದರು.
ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರು ಬಹುಭಾಷಾ ಪ್ರವೀಣೆ. ಅವರ ಅಭಿನಯದ ನಾಟಕಗಳು ಸಹಸ್ರಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ. ಅವರನ್ನು ಅರಸಿಬಂದ ಪ್ರಶಸ್ತಿಗಳು, ಸನ್ಮಾನಗಳು ಹಲವಾರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ ಪಡೆದಿದ್ದಾರೆ. ೧೯೯೬ರಲ್ಲಿ ರಾಜ್ಯ ಪ್ರಶಸ್ತಿಯ ಗೌರವಕ್ಕೂ ಶ್ರೀಮತಿಯವರು ಪಾತ್ರರಾಗಿದ್ದಾರೆ.
ನಿರ್ವಹಿಸುವ ಪಾತ್ರ ಯಾವುದೇ ಆದರೂ ಆ ಪಾತ್ರಕ್ಕೆ ಜೀವಕಳೆ ತುಂಬಿ, ತನ್ಮಯತೆಯಿಂದ ಸಹೃದಯ ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸುವ ರಂಗಭೂಮಿಯ ಹಿರಿಯ ಅಭಿನೇತ್ರಿ ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *