LOADING

ಹುಡುಕಲು ಟೈಪ್ ಮಾಡಿ

ಕ್ಯಾನ್ಸರ್ ತಜ್ಞೆ ಮನೆಯಂಗಳದಲ್ಲಿ ಮಾತುಕತೆ

ಡಾ. ವಿಜಯಲಕ್ಷ್ಮಿ ದೇಶಮಾನೆ

ಜನಸೇವೆಯೇಜನಾರ್ದನ ಸೇವೆ, ನೊಂದವರ ಕಂಬನಿ ಒರೆಸುವುದೇದೈವಾರಾಧನೆಎಂಬುದುಜನಪದೀಯ ನಂಬಿಕೆಯ ನಿಜರೂಪವಾಗಿ, `ಸೇವೆ’ ಪದಕ್ಕೆಅನ್ವರ್ಥಕವಾಗಿ ಬದುಕಿರುವಚೇತನಡಾ. ವಿಜಯಲಕ್ಷ್ಮಿದೇಶಮಾನೆ. ದೇಶದ ಹೆಸರಾಂತಕ್ಯಾನ್ಸರ್‌ ತಜ್ಞೆ, ರೋಗಿಗಳ ಪಾಲಿನ ಸಾಕ್ಷಾತ್‌ ಧನ್ವಂತರಿ. ಕನ್ನಡ ನಾಡಿನ ಹೆಮ್ಮೆಯ ಹೆಣ್ಣುಮಗಳು.
ನೂರಾರುಕ್ಯಾನ್ಸರ್ ಪೀಡಿತರ ಬಾಳು ಬೆಳಗಿದ ವೈದ್ಯೆ ವಿಜಯಲಕ್ಷ್ಮಿದೇಶಮಾನೆಅವರ ಬದುಕೇ ಮಹಾಹೋರಾಟ.ಬದ್ಧತೆ, ಪ್ರಾಮಾಣಿಕತೆ, ದಕ್ಷತೆ ಮತ್ತುಕಠಿಣ ಪರಿಶ್ರಮದಿಂದ ಮೈದಳೆದ ಯಶೋಗಾಥೆ.ಬಡತನ, ಅಪಮಾನ, ಸಾಮಾಜಿಕಅಸಡ್ಡೆಯ ನಡುವೆ ತಳಸಮುದಾಯದ ಹೆಣ್ಣುಮಗಳು ದೇಶದ ಗಣ್ಯಮಾನ್ಯಳಾಗಿ ಅರಳಿನಿಂತಿದ್ದೇ ಸೋಜಿಗ.
ಡಾ. ವಿಜಯಲಕ್ಷ್ಮಿದೇಶಮಾನೆಗುಲ್ಬರ್ಗಾದ ಕೊಳಗೇರಿಯಲ್ಲಿ ಅರಳಿದ ಮಹಾಪ್ರತಿಭೆ. ತಂದೆ ಸ್ವಾತಂತ್ರ್ಯ ಹೋರಾಟಗಾರ ಬಾಬುರಾವ್‍ದೇಶಮಾನೆ, ತಾಯಿತರಕಾರಿ ವ್ಯಾಪಾರಿರತ್ನಮ್ಮ. ಕಡುಬಡತನದ ಬಾಲ್ಯದಲ್ಲೂಅಕ್ಷರದ್ದೇಕನವರಿಕೆ. ತಳಸಮುದಾಯದ ಹೆಣ್ಣುಮಕ್ಕಳಿಗೆ ಮರೀಚಿಕೆಯೇಆಗಿದ್ದ ಶಿಕ್ಷಣದ ಭಾಗ್ಯ ದೊರಕಿಸಿದ ಅಪ್ಪನ ಪ್ರೋತ್ಸಾಹವೇದಾರಿದೀಪ. ಅಕ್ಷರಲೋಕತೆರೆದಜ್ಞಾನದ ಚುಂಗು ಹಿಡಿದು ಮುನ್ನಡೆದ ವಿಜಯಲಕ್ಷ್ಮಿಅವರಛಲ, `ತಾಳಿ’ ಮಾರಿ ಶುಲ್ಕ ಕಟ್ಟಿದಅಮ್ಮನತ್ಯಾಗದ ಫಲವಾಗಿ 1980ರಲ್ಲಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೈದ್ಯಕೀಯ ಪದವಿ, 1985ರಲ್ಲಿ ಬಳ್ಳಾರಿಯ ವೈದ್ಯಕೀಯಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಾರ್ಥಕತೆ. 1985ರಲ್ಲಿ ಕಿದ್ವಾಯಿ ಸ್ಮಾರಕಕ್ಯಾನ್ಸರ್‌ ಆಸ್ಪತ್ರೆಗೆ ಸೇರ್ಪಡೆ.1989ರಲ್ಲಿ ಮುಂಬಯಿನ ಟಾಟಾ ಸ್ಮಾರಕಆಸ್ಪತ್ರೆಯಲ್ಲಿಕ್ಯಾನ್ಸರ್ ಶಸ್ತ್ರಚಿಕಿತ್ಸೆಕುರಿತುಆರು ತಿಂಗಳ ತರಬೇತಿ.1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದಎಫ್‍ಎಐಎಸ್ ಫೆಲೋಶಿಪ್‍ಗೆ ಪಾತ್ರ.ಸತತ ಮೂರು ದಶಕಗಳ ಕಾಲ ಕ್ಯಾನ್ಸರ್ ಪೀಡಿತರ ಸೇವೆ. ಸಾಲುಸಾಲು ಯಶಸ್ವಿ ಶಸ್ತ್ರಚಿಕಿತ್ಸೆ.ನೂರಾರು ರೋಗಿಗಳಿಗೆ ಮರುಜನ್ಮ ನೀಡಿದಧನ್ಯತೆ.
ಕಿದ್ವಾಯಿ ಸ್ಮಾರಕಕ್ಯಾನ್ಸರ್ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ, ಮುಖ್ಯಸ್ಥೆ, ಸಂಸ್ಥೆಯ ನಿರ್ದೇಶಕಿಯಾಗಿಅನನ್ಯ ಸೇವೆ. ಪ್ರೌಢಪ್ರಬಂಧಗಳ ಮಂಡನೆ, ಸ್ತನಕ್ಯಾನ್ಸರ್‌ ಕುರಿತುಗ್ರಾಮೀಣ ಭಾಗದಲ್ಲಿಜಾಗೃತಿಅಭಿಯಾನ. ಸಂಶೋಧನಾತ್ಮಕ ಲೇಖನ-ಪುಸ್ತಕಗಳ ಪ್ರಕಟಣೆ.
ಕರ್ನಾಟಕಕ್ಯಾನ್ಸರ್ ಸೊಸೈಟಿಯಉಪಾಧ್ಯಕ್ಷೆಯಾಗಿಯೂ ಸೇವೆಸಲ್ಲಿಸಿರುವ ಈ ವೈದ್ಯಚೇತನ ಪ್ರತಿಷ್ಠಿತರಾಜ್ಯೋತ್ಸವ ಪ್ರಶಸ್ತಿ, ಮಹಿಳಾ ವಿಶ್ವವಿದ್ಯಾಲಯದಗೌರವಡಾಕ್ಟರೇಟ್, ಅಂತರಾಷ್ಟ್ರೀಯ ವಲಯದರಾಷ್ಟ್ರೀಯರತ್ನ, ಕೆಂಪೇಗೌಡ ಪ್ರಶಸ್ತಿಗಳಿಗೆ ಭಾಜನ. ಅವಿವಾಹಿತರಾಗಿಯೇ ಉಳಿದು ರೋಗಿಗಳ ಸೇವೆಗೇ ಬದುಕು ಮುಡುಪಿಟ್ಟಿರುವ ಮಾತೃಸ್ವರೂಪಿ ಡಾ. ವಿಜಯಲಕ್ಷ್ಮಿದೇಶಮಾನೆ ವೈದ್ಯಲೋಕದದೈತ್ಯ-ಮಾನವೀಯ ಪ್ರತಿಮೆ, ನಾಡು ಮೆಚ್ಚಿದಕನ್ನಡತಿ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *