LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಮಾನವ ಹಕ್ಕುಗಳ ಹೋರಾಟಗಾರರು

ಶ್ರೀ ಬೇಜವಾಡ ವಿಲ್ಸನ್‌

ಶ್ರೀ ಬೇಜವಾಡ ವಿಲ್ಸನ್‌
ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲೊಂದು ಮನೆಯಂಗಳದಲ್ಲಿ ಮಾತುಕತೆ;
ಕನ್ನಡ ನಾಡು ನುಡಿಗೆ ಹೆಮ್ಮೆ ತಂದ ಸಾಧಕರ ಮನದಾಳವನ್ನು ಬಿಚ್ಚಿಡಲು ಇದೊಂದು ಮಹತ್ವದ ವೇದಿಕೆ. ಸಾಧಕರನ್ನು ನೋಡಲು ನಾಡಿನ ಜನತೆಗೆ ಒಂದು ಅವಕಾಶ. ಅವರ ಮಾತನ್ನು ಕೇಳುವುದಲ್ಲದೆ ಅವರ ಜೊತೆ ಸಂವಾದ ಮಾಡುವ ಅಪೂರ್ವ ಕ್ಷಣಕ್ಕೆ ಮನೆಯಂಗಳದಲ್ಲಿ ಮಾತುಕತೆ ದಾರಿ ಮಾಡಿಕೊಟ್ಟಿದೆ.
ಇಂತಹ 202ನೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುತ್ತಿರುವವರು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್‌‌ ಅವರು.
ಕೆ.ಜಿ.ಎಫ್‌ನಲ್ಲಿ ಜನಿಸಿದ ಬೇಜವಾಡ ವಿಲ್ಸನ್‌‌ ಸಾಫಾಯಿ ಕರ್ಮಚಾರಿ ಆಂದೋಲನದ ಮೂಲಕ ನೊಂದವರ ಬದುಕಿಗೆ ಬೆಳಕು ತರಲು ಶ್ರಮಿಸಿದವರು. ದೇಶಾದ್ಯಂತ ಮಲ ಹೊರುವ ಪದ್ಧತಿ ಜೀವಂತವಾಗಿರುವುದನ್ನು ಕಂಡು ನೊಂದ ವಿಲ್ಸನ್‌‌ ಕಳೆದ ಮೂರು ದಶಕಗಳಿಂದ ಈ ಪದ್ಧತಿಯ ವಿರುದ್ಧ ದೇಶಾದ್ಯಂತ ಹೋರಾಟವನ್ನು ಸಂಘಟಿಸಿದ್ದಾರೆ. ಇವರ ಕಾಳಜಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ಬೇಜವಾಡ ವಿಲ್ಸನ್‌ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *