ಆಸರ

ಆಸರ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಆಸರ ಶಾಂತಿ ನಾಯಕ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 81

Download  View 

   50ರ ದಶಕದ ಒಂದು ನೆನಪು. ಇಂದು ಕೇರಳ ದಕ್ಕಿಸಿಕೊಂಡಿರುವ ಕನ್ನಡ ಕಾಸರಗೋಡಿನ ಪೆರ್ಲದಲ್ಲಿ ಬಸ್ಸಿಳಿದು ಆರು ಕಿಲೋಮಿಟರು ದೂರ ಕಲ್ಲುಮುಳ್ಳು ತೋಡು ತಡಮೆಗಳ ಕಾಡು ದಾರಿಯಲ್ಲಿ ನನ್ನೊಂದಿಗೆ ನಡೆದು ಬಂದರು ನಮ್ಮನೆಗೆ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರ ತರಾಸು (ತಳಕಿನ ರಾಮಚಂದ್ರ ಸುಬ್ಬರಾಯರು). ಬಂದೊಡನೆ ನಮ್ಮ ಪದ್ಧತಿ ಪ್ರಕಾರ ಕೈಕಾಲು ಮುಖ ತೊಳೆದು ಒರಸಿಕೊಳ್ಳಲು ತಂಬಿಗೆ ನೀರು ಬೈರಾಸು ಕೊಟ್ಟರು.