ಚಿಕ್ಕಮಗಳೂರು ಜಿಲ್ಲಾ ರಂಗಮಾಹಿತಿ

ಚಿಕ್ಕಮಗಳೂರು ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಚಿಕ್ಕಮಗಳೂರು ಜಿಲ್ಲಾ ರಂಗಮಾಹಿತಿ ಬಿ. ಎನ್‌. ಜ್ವಾಲನಪ್ಪ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 73

Download  View 

   ಸೃಜನಶೀಲ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಮ್ಮಿಶ್ರ ಮತ್ತು ತುಂಬಾ ಸಂಕೀರ್ಣ ಕಲೆಯಾದ ನಾಟಕ ಒಂದು ಅತ್ಯಂತ ವಿಶಿಷ್ಟವಾದ ಮತ್ತು ಪರಿಣಾಮಕಾರಿ ದೃಶ್ಯಮಾಧ್ಯಮವಾಗಿದೆ. ರಂಗಭೂಮಿ ನಿರಂತರವಾಗಿ ಅಸ್ತಿತ್ವದಲ್ಲಿರುವಂತಹ ಚಲನಶೀಲ ಕ್ರಿಯೆ. ಅಂತೆಯೇ ಈ ಕಲೆ ಅನುಕರಣೆ, ವಿಡಂಬನೆ, ಸ್ವಂತಿಕೆ, ಅಳವಡಿಸುವಿಕೆ, ವ್ಯಂಗ್ಯ, ಹಾಸ್ಯ, ವೈಚಾರಿಕತೆ ಇತ್ಯಾದಿ ವಿವಿಧ ಮಜಲು-ಮಗ್ಗಲುಗಳಿಂದ ಆವಿಷ್ಕಾರಗೊಂಡಿದ್ದು ಸಹೃದಯ ಪ್ರೇಕ್ಷಕರನ್ನು ಸುಲಭವಾಗಿ ತಲುಪುವಂತಹ ಕಲೆಯಾಗಿದೆ.