ರಂಗ ಸಂಘಟಕರು

ರಂಗ ಸಂಘಟಕರು

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ರಂಗ ಸಂಘಟಕರು ಸಿ. ಜಿ. ಕೃಷ್ಣಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 125

Download  View 

   ಬೆಳಗಾವಿಯ ನೆಲ ಮೊದಲಿನಿಂದಲೂ ರಂಗಭೂಮಿಗೆ ನೀಡಿದ ಕೊಡುಗೆ ಅಮೂಲ್ಯವಾದದ್ದು. ಇಲ್ಲಿ ಕನ್ನಡ ಭಾಷೆ ಹಾಗೂ ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳು ಮರಾಠಿಯ ಪ್ರಭಾವ ವಲಯದ ಬೆಳಕಿನಲ್ಲಿ ಮಸಕಾಗಿ ಕಂಡುಬಂದರೂ, ಆರದ ನಂದಾದೀಪದಂತೆ ನಿರಂತರವಾಗಿ ಮಿನುಗುತ್ತಿವೆ ಎಂಬಲ್ಲಿ ಎರಡು ಮಾತಿಲ್ಲ. ರಂಗಭೂಮಿಯೂ ಅಷ್ಟೇ. ಉಳಿದೆಲ್ಲ ಸಾಂಸ್ಕೃತಿಕ ಚಟುವಟಿಕೆಗಳಂತೆ ರಂಗಭೂಮಿಯೂ ಸಹ ದಟ್ಟವಾದ ಮರಾಠೀ ವಾತಾವರಣದಲ್ಲಿ ಬೆಳೆದು ನಿಂತ ಇತಿಹಾಸ ನಮ್ಮ ಕಣ್ಣ ಮುಂದಿದೆ.