ಇತಿಹಾಸ

ಇತಿಹಾಸ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಇತಿಹಾಸ ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 82

Download  View 

  ಕರ್ನಾಟಕ ರಾಜ್ಯದ ಆಗ್ನೇಯ ಭಾಗದಲ್ಲಿರುವ ತುಮಕೂರು ಜಿಲ್ಲೆಯು ರಾಜಧಾನಿ ಬೆಂಗಳೂರಿಗೆ 70 ಕಿ.ಮೀ. ಅಂತರದಲ್ಲಿದೆ. ಭೌಗೋಳಿಕವಾಗಿ ಬಯಲು ಪ್ರದೇಶದಿಂದ ಕೂಡಿದ್ದು ಇದರ ಒಟ್ಟು ಭೂವಿಸ್ತೀರ್ಣ 10597 ಚ.ಕಿ.ಮೀ.ಗಳು. ಇದು 120 45” ದಿಂದ 140 20” ಉತ್ತರ ಅಕ್ಷಾಂಶ ಮತ್ತು 760 20” ರಿಂದ 770 31” ಪೂರ್ವ ರೇಖಾಂಶಗಳ ನಡುವಿದೆ. ಈ ಜಿಲ್ಲೆಯ ಈಶಾನ್ಯ ಭಾಗಕ್ಕೆ ಆಂಧ್ರಪ್ರದೇಶ, ಪೂರ್ವಕ್ಕೆ ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳು, ದಕ್ಷಿಣಕ್ಕೆ ಮಂಡ್ಯ, ಪಶ್ಚಿಮ ಮತ್ತು ವಾಯವ್ಯ ಭಾಗಕ್ಕೆ ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಿವೆ. ಇದರ ಈಶಾನ್ಯ ಭಾಗದಲ್ಲಿರುವ ಪಾವಗಡ ತಾಲೂಕನ್ನು ನೆರೆಯ ರಾಜ್ಯ ಆಂಧ್ರಪ್ರದೇಶದ ಗಡಿಯು ಎಲ್ಲಾ ಕಡೆಯಿಂದಲೂ ಸುತ್ತುವರಿದಿದ್ದರೂ ಪಾವಗಡ ತಾಲೂಕಿನ ಪಶ್ಚಿಮ ಗಡಿಯು ಸ್ವಲ್ಪ ದೂರ ಚಿತ್ರದುರ್ಗ ಜಿಲ್ಲಾ ಗಡಿಗೆ ಅಂಟಿಕೊಳ್ಳುವ ಮೂಲಕ ಸಂಪರ್ಕ ಹೊಂದಿರುವುದು ಉಲ್ಲೇಖಾರ್ಹ.

ಸಂಬಂಧಿತ ಪುಸ್ತಕಗಳು