ಮನಸ್ಸಿನ ಸುಖ-ದುಃಖ

ಮನಸ್ಸಿನ ಸುಖ-ದುಃಖ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಮನಸ್ಸಿನ ಸುಖ-ದುಃಖ ಡಾ. ಸಿ.ಆರ್‌. ಚಂದ್ರಶೇಖರ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 146

Download  View 

  ನಮ್ಮ ಕಣ್ಣಿಗೆ ಕಾಣದ್ದು ನಮ್ಮೊಳಗಿನ ಚೇತನವೇ ಮನಸ್ಸು. ಸ್ವಭಾವತಃ ಮನಸ್ಸು ಚಂಚಲವಾದದ್ದು. ವಸ್ತುವಿನಿಂದ ವಸ್ತುವಿಗೆ, ವಿಷಯದಿಂದ ವಿಷಯಕ್ಕೆ, ಒಂದು ಚಿಂತೆಯಿಂದ ಮತ್ತೊಂದಕ್ಕೆ ನೆಗೆಯುತ್ತದೆ. ಒಂದು ಕ್ಷಣ ಸುಖ, ಮತ್ತೊಂದು ಕ್ಷಣ ದುಃಖ. ಒಂದು ಕ್ಷಣ ಆಸೆ, ಮತ್ತೊಂದು ಕ್ಷಣ ನಿರಾಶೆ. ಒಂದು ಸಂದರ್ಭದಲ್ಲಿ ಉತ್ಸಾಹ, ಮತ್ತೊಂದು ಸಂದರ್ಭದಲ್ಲಿ ಉದಾಸೀನ. ಹೀಗೆ ಬದಲಾಗುತ್ತಲೇ ಇರುತ್ತದೆ. ಈ ಮನಸ್ಸೆ ನಮ್ಮ ಸಫಲತೆಗೆ, ವಿಫಲತೆಗೆ ಕಾರಣವಾಗುತ್ತದೆ.