ಮಂಗಳವೇಡೆ ಶ್ರೀನಿವಾಸರಾಯರು

ಮಂಗಳವೇಡೆ ಶ್ರೀನಿವಾಸರಾಯರು

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಮಂಗಳವೇಡೆ ಶ್ರೀನಿವಾಸರಾಯರು ಶ್ರೀಮತಿ ಕವಿತಾ ಕುಲಕರ್ಣಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 50

Download  View 

Epub  Text 

  'ನಖಶಿಖಾಂತ ಕನ್ನಡಿಗ'ನೆಂದು ತಾವೇ ಹೇಳಿಕೊಂಡಿರುವ ಬಲು ಅಪರೂಪದ ಧೀಮಂತ ವ್ಯಕ್ತಿ ಮಂಗಳವೇಢೆ ಶ್ರೀನಿವಾಸರಾಯರು. ಇವರೇ ನಮ್ಮ ಒಲವಿನ ಅಜ್ಜ. ಅವರು ನಮ್ಮನ್ನಗಲಿದ್ದರೂ ಸಹ ನಮ್ಮ ನಡೆ-ನುಡಿಗಳಲ್ಲಿ ಹಾಸುಹೊಕ್ಕಾಗಿ ಆವರಿಸಿ ಇಂದಿಗೂ ಪ್ರತಿ ಹೆಜ್ಜೆ ಅವರೇ ಇಡಿಸುತ್ತಿದ್ದಾರೆಂಬುವಷ್ಟು ಪ್ರಭಾವ ಬೀರಿರುವುದು ಉತ್ಪ್ರೇಕ್ಷೆಯ ಮಾತಲ್ಲ! ಯಾವುದೇ ಕೆಲಸವನ್ನು ಮಾಡಿದಾಗಲೂ 'ನಮಗೆ ಬಾಬಾ ಹೀಗೆ ಹೇಳಿಕೊಟ್ಟಿದ್ದರೆಂದು' ಬಹಳ ಗೌರವದಿಂದ ಸ್ಮರಿಸುತ್ತೇವೆ.