ಪ್ರೊ.ಬಿ.ಎಂ.ಶ್ರೀಕಂಠಯ್ಯ

ಪ್ರೊ.ಬಿ.ಎಂ.ಶ್ರೀಕಂಠಯ್ಯ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಪ್ರೊ.ಬಿ.ಎಂ.ಶ್ರೀಕಂಠಯ್ಯ ಟಿ.ಎಸ್‌.ದಕ್ಷಿಣಾಮೂರ್ತಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 109

Download  View 

Epub  Text 

  ಶ್ರೀ ಎನ್ನುವ ಕಾವ್ಯನಾಮದಿಂದ ಪ್ರಖ್ಯಾತರಾದ ಪ್ರೊಫೆಸರ್‌ ಬಿ.ಎಂ.(ಬೆಳ್ಳೂರು ಮೈಲಾರಪ್ಪ) ಶ್ರೀಕಂಠಯ್ಯನವರು ಪ್ರಾತಃಸ್ಮರಣೀಯರು. ತಮ್ಮ ಕಾಲದ ಕನ್ನಡಿಗರಲ್ಲಿ ಅಗ್ರಗಣ್ಯರು. ಶ್ರೀಕಂಠಯ್ಯನವರಿಗೆ ಅವರ ಕಾಲದ ಹಿರಿಯ ಅಥವಾ ಕಿರಿಯರಲ್ಲಿ ಸರಿಸಾಟಿಯಾಗಿ ನಿಲ್ಲುವವರು ಅತಿವಿರಳ. ಪ್ರಾಧ್ಯಾಪಕರಾಗಿ ಇಂಗ್ಲಿಷ್‌ ಹಾಗೂ ಕನ್ನಡ ಸಾಹಿತ್ಯವನ್ನು ಭಾವನಾತ್ಮಕವಾಗಿ, ಹೃದಯಸ್ಪರ್ಶಿಯಾಗಿ ಬೋಧಿಸುವುದರ ಮೂಲಕ ಮೇಧಾವಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಮ್ಮ ಕಡೆ ಆಕರ್ಷಿಸಿದರು. ಕವಿಯಾಗಿ ಹೊಸ ರೀತಿಯ ಕವಿತೆಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಹೊಸಗನ್ನಡ ಕಾವ್ಯ ರಚನೆಗೆ ನಾಂದಿ ಹಾಡಿದವರು.