ದೊಡ್ಡಪ್ಪ ಅಪ್ಪ

ದೊಡ್ಡಪ್ಪ ಅಪ್ಪ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ದೊಡ್ಡಪ್ಪ ಅಪ್ಪ ಡಾ. ಎಸ್‌.ಎಂ.ಹಿರೇಮಠ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 117

Download  View 

Epub  Text 

  ಪೂಜ್ಯ ದೊಡ್ಡಪ್ಪ ಅಪ್ಪ ಅವರ ಜೀವನದ ಪೂರ್ವಾರ್ಧವು ಭಾರತ ಮತ್ತು ಕನ್ನಡ ನಾಡಿನ ದೃಷ್ಟಿಯಿಂದ ಪರದಾಸ್ಯದ ಕಾಲಮಾನವೇ ಆಗಿದ್ದಿತು. ಭಾರತದ ನೆಲದಲ್ಲಿ ಭಾರತೀಯರು ಬ್ರಿಟಿಷರ ಗುಲಾಮರಾಗಿ ಜೀವಿಸುತ್ತಿದ್ದಂತೆ, ಕನ್ನಡದ ನೆಲದಲ್ಲಿ ಕನ್ನಡಿಗರು ಬ್ರಿಟಿಷರು-ಪೇಶ್ವೆ-ನೈಜಾಮರ ಆಡಳಿತ ವ್ಯವಸ್ಥೆಯಲ್ಲಿ ಸಿಲುಕಿ, ತಮ್ಮ ಕನ್ನಡತನವನ್ನೇ ಹ್ರಾಸವಾಗಿಸಿಕೊಳ್ಳುವ ದುರಂತ ಸ್ಥಿತಿಯಲ್ಲಿ ಇದ್ದರು. ಇಂತಹ ಸ್ಥಿತಿಯಲ್ಲಿ ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಚೈತನ್ಯ ತುಂಬಲು ಮತ್ತು ಕಳೆದು ಹೋಗುತ್ತಲಿದ್ದ ಕನ್ನಡಕ್ಕೆ ನ್ಯಾಯಯುತವಾದ ಸ್ವತಂತ್ರ ಸ್ಥಾನಮಾನಗಳನ್ನು ದೊರಕಿಸಿಕೊಡಲು ಕೋಟ್ಯಾನು ಕೋಟಿ ನೆಲನುಡಿಭಕ್ತರು ಹುಟ್ಟಿಬಂದರೂ ಕಡಿಮೆಯೆಂಬಂತಹ ಸ್ಥಿತಿಯೆ ಇದ್ದಿತು. ಹೀಗಿರುವಾಗ ದೊಡ್ಡಪ್ಪ ಅಪ್ಪನಂತಹ ಮಹಾತ್ಮರ ಜನನವು ಈ ಕಾಲಮಾನದ ಅವಶ್ಯಕತೆಯಾಗಿದ್ದಿತು.