ಮುಕ್ತಿ

ಮುಕ್ತಿ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಮುಕ್ತಿ ಶಾಂತಿನಾಥ ದೇಸಾಯಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 298

Download  View 

Epub  Text 

  ಕೊನೆಗೆ ! ಕೊನೆಗೊಮ್ಮೆ- ನನ್ನ ಭೂತಕಾಲದ ಭೂತದಿಂದ ಒಮ್ಮೆ ಮುಕ್ತನಾಗುವೆ ! ನನ್ನ ಪಾಸ್‌ಪೋರ್ಟು ಸಿದ್ಧವಾಗಿದೆ. 'ಎಸ್‌. ಎಸ್‌. ಒಲಿಂಪಿಯಾದಲ್ಲಿ ಒಂದು ಬರ್ಥ್‌ ಕೂಡ ರಿಝರ್ವ್‌ ಆಗಿದೆ. ನೈರೋಬಿ! ಎಂಥ ಊರೋ ಏನೋ ! ಒಳ್ಳೆಯ ನೌಕರಿ ! ... ಒಳ್ಳೆಯದೋ ಕೆಟ್ಟದ್ದೋ ? ಯಾರಿಗೆ ಗೊತ್ತು ? ನಾನು ಹೋಗುತ್ತಿರುವುದು.... ಒಳ್ಳೆಯದೋ ? ಇದು ಒಳ್ಳೆಯದು, ಇದು ತಪ್ಪು, ಇದು ಕೆಟ್ಟದ್ದು - ಎಂದು ಯಾರು ತಾನೆ ಶಾಶ್ವತವಾಗಿ ಹೇಳಬಲ್ಲರು ?