‘ಷೇಕ್ಸ್ಪಿಯರ್’ ಹುಟ್ಟಿ ನಾಲ್ಕುನೂರು ವರ್ಷಗಳಾದುವಂತೆ. ಆದರೆ ನನಗೇನು? ‘ಷೇಕ್ಸ್ಪಿಯರ್’ ಎಂಬುವನಿದ್ದ-ಎನ್ನುವುದನ್ನೇ ಎಷ್ಟೋ ಮಂದಿಸಂದೇಹಿಸುತ್ತಿಲ್ಲವೆ? ಅವನೇನು ನನ್ನ ದೇಶದವನೆ, ನನ್ನ ಭಾಷೆಯವನೆ? ನಮ್ಮದೇಶದಲ್ಲಿ ಹಿರಿಯ ಸಾಹಿತಿಗಳು ಆಗಿಹೋಗಿಲ್ಲವೇ? ಇಷ್ಟಾಗಿಯೂ ಆತ ಬರೆದುದುನನ್ನ ನಾಡಿಗೆ ಸಂಕೋಲೆಯನ್ನು ತೊಡಿಸಿದ್ದವರ ಭಾಷೆಯಲ್ಲಿ. ಅವನ ಭಾಷೆಯನ್ನು ಕಲಿಯುವುದು, ಅವನ ವಿಷಯ ಮಾತನಾಡುವುದು ಪ್ರತಿಷ್ಠೆಯ ಚಿಹ್ನೆಯಾಗಿದ್ದ ಕಾಲ ಒಂದಿತ್ತು. |