ಹಬ್ಬದ ಹಾಡುಗಳು(ಸಂಪುಟ-೨)

ಹಬ್ಬದ ಹಾಡುಗಳು(ಸಂಪುಟ-೨)

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಹಬ್ಬದ ಹಾಡುಗಳು(ಸಂಪುಟ-2) ಡಾ.ಡಿ.ಬಿ.ನಾಯಕ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪುಟ ಸಂಖ್ಯೆ 337

Download  View 

Epub  Text 

 

1. ಗಂಗಿ ಗೌರೀ ಹಾಡು

ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ ||
ಕೊಂಬಣಸ ಕೊರಳs ಹುಲಗೆಜ್ಜೆ | ಕೋಲ || 1 ||
ಕೊಂಬುs ಅಣಸ ಕೊರಳ ಹುಲಗೆಜ್ಜಿ ಶಿವರಾಯಾ ||
ಗಂಗಿsನ ತರವೋs ನಡದಾರ | ಕೋ || 2 ||
ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ |
ಲಿಂಗಕೊಂದ್ಹೊವs ದಯಮಾಡ | ಕೋ || 3 ||
ಲಿಂಗಕೊಂದ್ಹೊವs ದಯಮಾಡಿದ್ರ ಮಾಡೇನ ||
ನಮ್ಮವ್ವ ನಮಗs ಬೈದಾಳ | ಕೋ || 4 ||
ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ ||
ಲಿಂಗಕ್ಕೆರಡ್ಹೊವs ದಯಮಾಡ | ಕೋ || 5 ||