ಆರೋಗ್ಯ ಆಧಾರ: ನೈರ್ಮಲ್ಯ

ಆರೋಗ್ಯ ಆಧಾರ: ನೈರ್ಮಲ್ಯ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಆರೋಗ್ಯ ಆಧಾರ: ನೈರ್ಮಲ್ಯ ಡಾ. ಪ್ರಕಾಶ್‌ ಸಿ. ರಾವ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 103

Download  View 

Epub  Text 

  ಸ್ವಚ್ಛತೆಯಿಂದ ಆರೋಗ್ಯ ಖಚಿತ ಎಂಬುದು ಎಲ್ಲರೂ ತಿಳಿಯಬೇಕಾದ ವಿಷಯ. ಆದರೆ ರಸ್ತೆಯ ಪಕ್ಕದಲ್ಲಿರುವ ಕೊಳೆ, ಮಾರುಕಟ್ಟೆಯಲ್ಲಿ ಕಂಡುಬರುವ ಕೊಳೆತು ನಾರುವ ತರಕಾರಿ ರಾಶಿ, ಬಸ್‌ ನಿಲ್ದಾಣಗಳಲ್ಲಿ ಗೋಡೆಗಳ ಮೇಲಿರುವ ಎಲೆಡಕೆಯ ಕರೆ, ದುರ್ನಾತದ ಸಾರ್ವಜನಿಕ ಶೌಚಾಲಯಗಳು, ಆಸ್ಪತ್ರೆ ಸುತ್ತಲೂ ಇರುವ ಕಸದ ಗುಡ್ಡೆ, ರೈಲು ಹಳಿಗಳ ಪಕ್ಕದಲ್ಲಿ ಸಾಲಾಗಿ ಮಲ ವಿಸರ್ಜನೆಗೆ ಕುಳಿತ ದೃಶ್ಯ ಮುಂತಾದವುಗಳಿಂದ ಸ್ವಚ್ಛತೆ ಬಗ್ಗೆ ಯಾರಿಗಾದರೂ ಆತಂಕ ಉಂಟಾಗುವುದು ಸಹಜ. ಆ ವಿಷಯದ ಬಗ್ಗೆ ಯಾರೂ ಗಮನ ಹರಿಸದಿರುವುದು ಅನೈರ್ಮಲ್ಯಕ್ಕೆ ಮುಖ್ಯ ಕಾರಣ.