ಎಂ. ಎಲ್. ರಾಘವೇಂದ್ರರಾವ್

Wednesday, March 13th, 2013 ಎಂ. ಎಲ್. ರಾಘವೇಂದ್ರರಾವ್

೨೦.೧೨.೧೯೪೨ ಕ್ರಮಬದ್ಧವಾದ ಯಾವುದೇ ಒಂದು ವಿದ್ಯಾಭ್ಯಾಸ ಸೌಲಭ್ಯವೂ ದೊರೆಯದಿದ್ದರೂ ಕನ್ನಡ ಸಾಹಿತ್ಯ ರಚನೆಯಲ್ಲಷ್ಟೇ ಅಲ್ಲದೆ ಹಲವಾರು ಮೌಲಿಕ ಕೃತಿಗಳ ಪ್ರಕಾಶಕರಾಗಿಯೂ ಪ್ರಸಿದ್ಧರಾಗಿರುವ ರಾಘವೇಂದ್ರರಾವ್‌ರವರು ಹುಟ್ಟಿದ್ದು ಮೈಸೂರಿನಲ್ಲಿ. ಬೆಳದದ್ದೆಲ್ಲ ಆಂಧ್ರಪ್ರದೇಶದ ಹಿಂದುಳಿದ ಗ್ರಾಮವಾದ ‘ಮೋದ’ ಎಂಬಲ್ಲಿ. ತಂದೆ ಲಕ್ಷ್ಮಣರಾವ್‌, ತಾಯಿ ಅನಸೂಯಾಬಾಯಿ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಪದ್ಮಾ ಶೆಣೈ

Wednesday, March 13th, 2013 ಪದ್ಮಾ ಶೆಣೈ

೦೩.೧೧.೧೯೩೩ ಮನುಷ್ಯರು ಬೆಳೆಸಿಕೊಂಡಿರುವ ಸಂಸ್ಕಾರ, ನಂಬಿಕೆ, ಬದಲಾಗುತ್ತಿರುವ ಜೀವನ ಮೌಲ್ಯಗಳು, ಸಂಘರ್ಷ, ಮಾನಸಿಕ ದ್ವಂದ್ವಗಳು ಇವುಗಳನ್ನೇ ತಮ್ಮ ಕಥಾವಸ್ತುವಿನಲ್ಲಿ ಮೂಡಿಸಿ ಜನಪ್ರಿಯ ಲೇಖಕಿ ಎನಿಸಿರುವ ಪದ್ಮಾ ಶೆಣೈರವರು ಹುಟ್ಟಿದ್ದು ಚೆನ್ನೈನಲ್ಲಿ. ತಂದೆ ರಾಮ ಬಾಳಿಗ, ತಾಯಿ ಲಕ್ಷ್ಮಿದೇವಿ. ಮುಂಬೈ, ಮಂಗಳೂರು, ಬ್ರಹ್ಮಾವರ, ಕಟಪಾಡಿ, ಉಡುಪಿ ಮುಂತಾದಡೆಯಲ್ಲೆಲ್ಲ ಸುತ್ತಾಟದ ನಡುವೆಯೂ ಮೆಟ್ರಿಕ್ ಪಾಸು ಮಾಡಿದ ಜಾಣ ಹುಡುಗಿ. Blog this! Bookmark on Delicious Digg this post Recommend on Facebook share via Reddit Share [...]

ಬಿ. ತಿಪ್ಪೇರುದ್ರಪ್ಪ

Wednesday, March 13th, 2013 ಬಿ. ತಿಪ್ಪೇರುದ್ರಪ್ಪ

೨೦.೧೦.೧೯೪೨ ೨೭.೦೨.೨೦೧೧ ವ್ಯಂಗ್ಯ, ವಿನೋದ, ವಿಡಂಬನೆಗಳ ಲೇಖನಗಳ ಜೊತೆಗೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿ, ಮಕ್ಕಳ ಮುಗ್ಧ ಮನಸ್ಸುಗಳು ವಿಕಸಿಸುವಂತೆ ನಾಟಕ, ಪದ್ಯ, ಸಣ್ಣ ಕಥೆಗಳನ್ನು ಬರೆದಿರುವ ತಿಪ್ಪೇರುದ್ರಪ್ಪನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಅದೇ ತಾಲ್ಲೂಕಿನ ಮೂಡನಾಯಕನ ಹಳ್ಳಿಯಲ್ಲಿ. ತಂದೆ ಬಸಪ್ಪ, ತಾಯಿ ಗೌರಮ್ಮ. ಪ್ರಾರಂಭಿಕ ಶಿಕ್ಷಣ ಮಾಡನಾಯಕನಹಳ್ಳಿಯಲ್ಲಿ. ಚಿತ್ರದುರ್ಗದಲ್ಲಿ ಎಸ್.ಎಸ್.ಎಲ್.ಸಿ. ನಂತರ ತುಮಕೂರಿನ ಕಾಲೇಜಿನಿಂದ ಪಡೆದ ಬಿ.ಎ., ಮತ್ತು ಎಂ.ಎ. ಪದವಿಗಳು. ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಬಸವಾ ಪಟ್ಟಣ, ರಾಣಿ [...]

ಡಾ. ಪಿ.ಕೆ. ರಾಜಶೇಖರ

Wednesday, March 13th, 2013 ಡಾ. ಪಿ.ಕೆ. ರಾಜಶೇಖರ

೧೩.೧೦.೧೯೪೬ ಜಾನಪದ ಸಂಶೋಧನೆ, ಗ್ರಂಥ ಸಂಪಾದನೆ, ವಿಮರ್ಶೆ – ವಿಶ್ಲೇಷಣೆಗಳ ಜೊತೆಗೆ ಜಾನಪದ ಗಾಯನದಲ್ಲಿ ತೊಡಗಿಸಿಕೊಂಡಿದ್ದು ಜಾನಪದ ಗಾಯಕ ರತ್ನ, ಜಾನಪದ ಜೋಗಿ ಮುಂತಾದ ಬಿರುದುಗಳಿಗೂ ಪಾತ್ರರಾಗಿರುವ ರಾಜಶೇಖರರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ. ತಂದೆ ಕೆಂಪೇಗೌಡರು ಜನಪದ ವೈದ್ಯರಾಗಿದ್ದಲ್ಲದೆ ಲಕ್ಷ್ಮೀಶನ ಜೈಮಿನಿ ಭಾರತ, ದೇವಿಮಹಾತ್ಮೆ ಮುಂತಾದ ಕೃತಿಗಳನ್ನು ಓದಿಕೊಂಡಿದ್ದರು. ತಾಯಿ ಪುಟ್ಟಮ್ಮ ಸಂಪ್ರದಾಯದ ಹಾಡುಗಳ ಹಾಡುಗಾರ್ತಿಯಾಗಿದ್ದರೆ ಅಜ್ಜಿ ಸಣ್ಣಮ್ಮ ಜಾನಪದ ತ್ರಿಪದಿಗಳನ್ನು ಹಾಡುತ್ತಿದ್ದರು. Blog this! Bookmark on Delicious Digg this post [...]

ಡಾ. ಬಸವರಾಜ ಮಲಶೆಟ್ಟಿ

Wednesday, March 13th, 2013 ಡಾ. ಬಸವರಾಜ ಮಲಶೆಟ್ಟಿ

೧೦.೦೮.೧೯೪೯ ಜನಪದ ಸಾಹಿತ್ಯದ ತೌರುಮನೆ ಎನಿಸಿರುವ ಬೆಳಗಾವಿ ಜಿಲ್ಲೆಯು ಹಲವಾರು ಜಾನಪದ ವಿದ್ವಾಂಸರಿಗೆ ಜನ್ಮ ನೀಡಿದ ಸ್ಥಳ. ಬೆಟಗೇರಿ ಕೃಷ್ಣ ಶರ್ಮ, ಚಂದ್ರಶೇಖರ ಕಂಬಾರ, ಎಂ.ಎಸ್. ಲಠ್ಠೆ, ನಿಂಗಣ್ಣ ಸಣ್ಣಕ್ಕಿ, ಜ್ಯೋತಿ ಹೊಸೂರ ಇವರ ಸಾಲಿಗೆ ಸೇರಿದ ಮತ್ತೊಬ್ಬ ಜಾನಪದ ವಿದ್ವಾಂಸರೆಂದರೆ ಬಸವರಾಜ ಮಲಶೆಟ್ಟಿಯವರು. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರಿನ ಸಮೀಪದ ತಿಗಡೊಳ್ಳಿ ಎಂಬ ಹಳ್ಳಿಯಲ್ಲಿ ಕಲಾವಿದರ, ಕುಸ್ತಿ ಪಟುಗಳ ಕುಟುಂದಲ್ಲಿ. ತಂದೆ ಮರಿಕಲ್ಲಪ್ಪ ಮಲಶೆಟ್ಟಿಯವರು, ಕುಸ್ತಿ ಪಟುಗಳು. ಅಜ್ಜ ರುದ್ರಪ್ಪ ಕೂಡಾ ಕುಸ್ತಿಯಲ್ಲಿ [...]

ಡಾ. ಸರೋಜಿನಿ ಶಿಂತ್ರಿ

Wednesday, March 13th, 2013 ಡಾ. ಸರೋಜಿನಿ ಶಿಂತ್ರಿ

೦೪.೦೭.೧೯೩೦ ಶತಶತಮಾನಗಳಿಂದಲೂ ಕತ್ತಲೆಯ ಬದುಕಿನಲ್ಲೇ ಕಳೆದ ಮಹಿಳೆಯರ ಶೋಷಣೆ, ಏಳುಬೀಳು, ಸೋಲು ಗೆಲವುಗಳಿಂದ ಸ್ಫೂರ್ತಿ ಪಡೆದು, ಸಮಾಜ ಸೇವೆ-ಶಿಕ್ಷಣ-ಮಹಿಳೆಯರ ಜಾಗೃತಿಗಾಗಿ ಜೀವನದುದ್ದಕ್ಕೂ ದುಡಿಯುತ್ತಾ ಬಂದಿರುವ ಸರೋಜಿನಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಕ ತಾಲ್ಲೂಕಿನ ಮಿಶ್ರಿ ಕೋಟಿ ಎಂಬಲ್ಲಿ. ತಂದೆ ಬಸಪ್ಪ ಶಿಂತ್ರಿಯವರು ಶಿಕ್ಷಕರಾಗಿ, ವಿದ್ಯಾಧಿಕಾರಿಗಳಾಗಿ ಸಮಯಪಾಲನೆ, ಅಧ್ಯಯನ ಶೀಲತೆ, ತತ್ತ್ವಾದರ್ಶಗಳಿಗೆ ಹೆಸರಾಗಿದ್ದು ‘ಶಿಂತ್ರಿ ಮಾಸ್ತರ’ ಎಂದೇ ಪ್ರಸಿದ್ಧರಾಗಿದ್ದವರು. ತಾಯಿ ಗಂಗಮ್ಮ. Blog this! Bookmark on Delicious Digg this post Recommend on Facebook share [...]

ದೇವನೂರ ಮಹಾದೇವ

Wednesday, March 13th, 2013 ದೇವನೂರ ಮಹಾದೇವ

೧೦.೦೬.೧೯೪೮ ಬರೆದದ್ದು ಕಡಿಮೆ ಎನಿಸಿದರೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿ ಚರ್ಚೆಗೆ ಒಳಗಾಗಿ, ದಲಿತರ ನೋವು-ನಲಿವು, ಬದುಕು-ಬವಣೆಗಳ ಬಗ್ಗೆ ಮೇಲ್ವರ್ಗದ ಸಾಹಿತಿಗಳು ಸಾಹಿತ್ಯ ರಚಿಸಿದ್ದರೂ, ದಲಿತ ವರ್ಗದವರಿಂದಲೇ ತಮ್ಮ ದುಃಖ ದುಮ್ಮಾನಗಳಿಗೆ ಸಾಹಿತ್ಯದ ಅಭಿವ್ಯಕ್ತಿ ನೀಡಲಾರಂಭಿಸಿದ ಎನ್. ಮಹಾದೇವಯ್ಯನವರು ಹುಟ್ಟಿದ್ದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ತಂದೆ ನಂಜಯ್ಯ, ತಾಯಿ ನಂಜಮ್ಮ, ತಂದೆ ಕಾನ್‌ಸ್ಟೇಬಲ್ ಹುದ್ದೆಯಲ್ಲಿದ್ದವರು. Blog this! Bookmark on Delicious Digg this post Recommend on Facebook share [...]

ಶಿವೇಶ್ವರ ದೊಡ್ಡಮನಿ

Wednesday, March 13th, 2013 ಶಿವೇಶ್ವರ ದೊಡ್ಡಮನಿ

೦೭.೦೫.೧೯೨೫ ೨೬.೦೩.೧೯೫೦ ಎಳೆಯ ವಯಸ್ಸಿನಲ್ಲಿಯೇ ಭಾವಗೀತೆ, ತ್ರಿಪದಿಗಳನ್ನು ತಮ್ಮ ಪ್ರಖರ ಬರವಣಿಗೆಯಲ್ಲಿ ಮೂಡಿಸಿದ್ದಲ್ಲದೆ, ಜಾನಪದ ಸಂಗ್ರಹಕಾರರಾಗಿಯೂ ಪ್ರಸಿದ್ಧರಾಗಿದ್ದ ಭಾವಜೀವಿ, ಕವಿ, ಪರೋಪಕಾರವೇ ಪ್ರಮುಖ ಗುಣದ ಶಿವಬಸಪ್ಪನವರು ಹುಟ್ಟಿದ್ದು ಧಾರವಾಡದ ನವಲೂರಿನಲ್ಲಿ. ತಂದೆ ಈಶ್ವರಪ್ಪ ನೇಕಾರರ ಕುಟುಂಬಕ್ಕೆ ಸೇರಿದವರು. ತಾಯಿ ಚೆನ್ನವೀರಮ್ಮ. ತಮ್ಮ ಹೆಸರಿನ ಶಿವ ಹಾಗೂ ತಂದೆಯ ಹೆಸರಿನ ಈಶ್ವರ ಸೇರಿಸಿ ಶಿವೇಶ್ವರರಾದರು. Blog this! Bookmark on Delicious Digg this post Recommend on Facebook share via Reddit Share with Stumblers [...]

ಪ್ರೊ. ಡಿ.ಕೆ. ರಾಜೇಂದ್ರ

Wednesday, March 13th, 2013 ಪ್ರೊ. ಡಿ.ಕೆ. ರಾಜೇಂದ್ರ

೦೩.೦೪.೧೯೪೨ ಜನಪದ ಸಾಹಿತ್ಯ, ವಿಮರ್ಶೆ, ಸಂಪಾದನೆ, ವಿಚಾರ ಸಾಹಿತ್ಯ – ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದು ಅತ್ಯಮೂಲ್ಯ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ರಾಜೇಂದ್ರರವರು ಹುಟ್ಟಿದ್ದು ಕವಿ ಕಲಾವಿದರ, ಕಲೆಗಳ ಬೀಡಾದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನ ಶಿವರದ ಪಟೇಲರ ಮನೆತನದಲ್ಲಿ ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ. Blog this! Bookmark on Delicious Digg this post Recommend on Facebook share via Reddit Share with Stumblers Tweet about it [...]

ಡಾ. ಲೀಲಾವತಿ ದೇವದಾಸ್

Wednesday, March 13th, 2013 ಡಾ. ಲೀಲಾವತಿ ದೇವದಾಸ್

೩೦.೦೩.೧೯೩೦ ಜನಪ್ರಿಯ ವೈದ್ಯೆಯಾಗಿ, ಶಸ್ತ್ರಚಿಕಿತ್ಸಾ ಪರಿಣಿತೆಯಾಗಿ, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿಯಾಗಿ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿ ವೈದ್ಯಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಲೀಲಾವತಿ ದೇವದಾಸ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಡಬ್ಲೂ.ಡಿ. ಪಿಚ್ಚುಮುತ್ತು, ತಾಯಿ ರತ್ನ. ತಂದೆ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದರೆ ತಾತಾ ಕೂಡಾ ಯುನೈಟೆಡ್ ಮಿಷಿನ್ ಶಾಲೆಯ ಶಿಕ್ಷಕರಾಗಿ ಬೆಂಗಳೂರಿಗೆ ಬಂದು ನೆಲೆಸಿದವರು. ಸ್ವತ: ಕವಿಗಳಾಗಿದ್ದು ಇಂಗ್ಲಿಷ್ ಮತ್ತು ತಮಿಳು ಭಾಷಾ ವಿದ್ವಾಂಸರು. Blog this! Bookmark on Delicious Digg [...]

ಗೀತಾ ನಾಗಭೂಷಣ

Wednesday, March 13th, 2013 ಗೀತಾ ನಾಗಭೂಷಣ

೨೫.೦೩.೧೯೪೨ ಕೆಳಸ್ತರದ ಸಮುದಾಯದ ಮೇಲಿನ ದೌರ್ಜನ್ಯ, ಮೇಲ್ವರ್ಗದ ಗೌಡ, ಕುಲಕರ್ಣಿ, ಸಾಹುಕಾರರಿಂದ ನಿರ್ಗತಿಕ ಹೆಂಗಸರ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆ, ಮೂಢ ನಂಬಿಕೆಗಳು- ಇವುಗಳ ವಿರುದ್ಧ ಆಡುನುಡಿಗಳ ಅಸಲೀ ಜವಾರಿ ಭಾಷೆಯಲ್ಲಿ ದಿಟ್ಟತನದಿಂದ ಬರೆದ ಗೀತಾ ನಾಗಭೂಷಣರವರು ಹುಟ್ಟಿದ್ದು ತೀರಾ ಕೆಳವರ್ಗದ ಅನಕ್ಷರಸ್ಥ ಬಡ ಕುಟುಂದಲ್ಲಿ. ತಂದೆ ಶಾಂತಪ್ಪ, ಕಲಬುರ್ಗಿಯ ಬಟ್ಟೆ ಗಿರಣಿಯಲ್ಲಿ ಕಾರ್ಮಿಕನಾಗಿದ್ದರೆ ತಾಯಿ ಶಾಂತವ್ವ ಎಮ್ಮೆ ಕಟ್ಟಿಕೊಂಡು ಹಾಲು ಮಾರಿ ಜೀವಿಸುತ್ತಿದ್ದ ಬಡ ಹೆಣ್ನು ಮಗಳು. Blog this! Bookmark on Delicious Digg [...]

ಅಡ್ಯನಡ್ಕ ಕೃಷ್ಣಭಟ್

Wednesday, March 13th, 2013 ಅಡ್ಯನಡ್ಕ ಕೃಷ್ಣಭಟ್

೧೫.೦೩.೧೯೩೮ ಸಮಾಜದಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ವೈಜ್ಙಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ವೈಜ್ಞಾನಿಕ ಬರಹಗಳ ಮೂಲಕ, ಸಂವಾದ ಉಪನ್ಯಾಸಗಳ ಮೂಲಕ ಜನಪ್ರಿಯಗೊಳಿಸುತ್ತಿರುವವರಲ್ಲಿ ಅತಿಮುಖ್ಯರೆನೆಸಿರುವ ಕೃಷ್ಣಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ-ಕಾಸರಗೋಡು ಹಾದಿಯಲ್ಲಿ ವಿಟ್ಲದಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಪ್ರಾಕೃತಿಕ ಸೌಂದರ್ಯದ ನಿಧಿಯಂತಿರುವ ಅಡ್ಯನಡ್ಕ ಎಂಬಲ್ಲಿ. ತಂದೆ ತಿಮ್ಮಣ್ಣ ಭಟ್, ತಾಯಿ ಲಕ್ಷ್ಮಿ ಅಮ್ಮ. Blog this! Bookmark on Delicious Digg this post Recommend on Facebook share via Reddit Share with [...]

ಸರಸ್ವತಿದೇವಿ ಗೌಡರ

Wednesday, March 13th, 2013 ಸರಸ್ವತಿದೇವಿ ಗೌಡರ

೨೮.೦೨.೧೯೨೩ ೦೧.೦೭.೧೯೭೩ ಉತ್ತರ ಕರ್ನಾಟಕದ ಹಲವಾರು ಲೇಖಕಿಯರು ಸ್ವಾತಂತ್ರ‍್ಯಪೂರ್ವದಲ್ಲಿಯೇ ಸ್ತ್ರೀಪರ ಕಾಳಜಿಗಳ ಬಗ್ಗೆ, ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವರಲ್ಲಿ ಪ್ರಮುಖರಾಗಿದ್ದ ಸರಸ್ವತಿದೇವಿ ಗೌಡರ ರವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸಂಪಗಾವಿ ತಾಲ್ಲೂಕಿನ ತಿಗಡಿ ಎಂಬ ಹಳ್ಳಿಯಲ್ಲಿ. ತಂದೆ ಮುಂಬೈ ಪ್ರಾಂತ್ಯದ ಆಡಳಿತಗಾರರಾಗಿದ್ದ ಬಸವಲಿಂಗಪ್ಪ ಅಡಿವೆಪ್ಪ ನಿರಡಿ. ತಾಯಿ ಪಾರ್ವತಿದೇವಿ ನಿರಡಿ. ವಿದ್ಯಾವಂತ ಮನೆತನದಲ್ಲಿ ಹುಟ್ಟಿದ್ದರಿಂದ ವಿದ್ಯೆಗೆ ಎಲ್ಲ ರೀತಿಯ ಸೌಕರ್ಯಗಳೂ ದೊರೆತು ಪ್ರಾರಂಭಿಕ ಶಿಕ್ಷಣ ಪಡೆದುದು ಬೆಳಗಾವಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ. ಹತ್ತಿರದಲ್ಲಿ ಹೆಣ್ಣು [...]

ಎಚ್.ಜಿ. ರಾಧಾದೇವಿ

Wednesday, March 13th, 2013 ಎಚ್.ಜಿ. ರಾಧಾದೇವಿ

೩೦.೦೧.೧೯೫೨ ೦೯.೧೧.೨೦೦೬ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತ, ರಮ್ಯ ಪಾತ್ರಗಳನ್ನು ಸೃಷ್ಟಿಸುತ್ತ, ಮಧ್ಯಮ ವರ್ಗದ ಓದುಗರನ್ನು ಕನಸಿನ ಲೋಕಕ್ಕೆ ಕೊಂಡೊಯ್ಯುವಂತಹ ಮಾಂತ್ರಿಕ ಪಾತ್ರಗಳನ್ನು ಸೃಷ್ಟಿಸಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ರಾಧಾಮಣಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಸಂಪ್ರದಾಯಸ್ಥ ಕುಟುಂಬದ ಗೋಪಿನಾಥಾಚಾರ್‌ರವರು ಪ್ರಾಥಮಿಕ ಶಾಲಾ ಶಿಕ್ಷಕರು. ತಾಯಿ ಸರಸ್ವತಮ್ಮ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print [...]

ಡಾ. ಲಕ್ಷ್ಮೀನಾರಾಯಣ ಹೆಗಡೆ (ಡಾ. ಎಲ್. ಆರ್. ಹೆಗಡೆ)

Wednesday, March 13th, 2013 ಡಾ. ಲಕ್ಷ್ಮೀನಾರಾಯಣ ಹೆಗಡೆ (ಡಾ. ಎಲ್. ಆರ್. ಹೆಗಡೆ)

೦೨.೦೧.೧೯೨೩ ೨೦೦೫ ನಾಡವರು, ಸಿಧ್ಧಿಯರು, ಹಸಲರು, ಹಾಲಕ್ಕಿ ಒಕ್ಕಲಿಗರು ಮುಂತಾದ ಜನಾಂಗಗಳಲ್ಲಿನ ಜಾನಪದ ಸಿರಿಯನ್ನು ಸಂಗ್ರಹಿಸಿ ಹೊಸ ಪ್ರಪಂಚಕ್ಕೆ ತೆರೆದಿಟ್ಟವರಲ್ಲಿ ಪ್ರಮುಖರಾದವರೆಂದರೆ ಲಕ್ಷ್ಮೀನಾರಾಯಣ ಹೆಗಡೆಯವರು. ಉತ್ತರ ಕನ್ನಡ ಜಿಲ್ಲೆಯು ಜಾನಪದ ಹಾಗೂ ಯಕ್ಷಗಾನ ಪ್ರಕಾರಗಳಿಗೆ ತೌರುಮನೆಯಿದ್ದಂತೆ. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಎಂಬಲ್ಲಿ. ತಂದೆ ರಾಮಕೃಷ್ಣ ಹೆಗಡೆಯವರು. ಕುಮಟಾದ ಗಿಬ್ಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ತಾಯಿ ಮಹಾಲಕ್ಷ್ಮಿ. Blog this! Bookmark on Delicious Digg this post Recommend on Facebook share [...]

ಸುದರ್ಶನ ದೇಸಾಯಿ

Monday, January 14th, 2013 ಸುದರ್ಶನ ದೇಸಾಯಿ

೧೪.೦೧.೧೯೪೫ ೩೧.೦೭.೨೦೧೨ ಸಣ್ಣ ಸಣ್ಣ ವಾಕ್ಯಸರಣಿ, ಮೊನಚಾದ ಪದಗಳು, ಲಯಬದ್ಧವಾದ ಮಾತುಗಳು, ಓದುಗರು ಹೀಗೇ ಆಗುತ್ತದೆಂದು ಭಾವಿಸುತ್ತಿದ್ದಂತೆ ಪಡೆದುಕೊಳ್ಳುತ್ತಿದ್ದ  ಅನಿರೀಕ್ಷಿತ ತಿರುವುಗಳಿಂದ ಓದುಗರನ್ನು ಕಾತರದ ಮೇಲೆ ಕೂಡಿಸುತ್ತಿದ್ದು, ಪತ್ತೇದಾರಿ ಕಾದಂಬರಿ ಲೇಖಕರ ಸಮ್ಮೇಳನ, ಪತ್ತೇದಾರಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಪತ್ತೇದಾರಿ ಸಾಹಿತ್ಯ ಪ್ರಕಾರಕ್ಕೊಂದು ಘನತೆ, ಗೌರವಗಳನ್ನು ತಂದುಕೊಟ್ಟ ಪತ್ತೇದಾರಿ ಕಾದಂಬರಿಕಾರರಾದ ಸುದರ್ಶನ ದೇಸಾಯಿಯವರು ಹುಟ್ಟಿದ್ದು ಕವಿ ಪುಂಗವರ ನಾಡಾದ ಧಾರವಾಡದಲ್ಲಿ. ತಂದೆ ಕೃಷ್ಣರಾವ ರಾಮರಾವ ದೇಸಾಯಿ, ತಾಯಿ ರಾಧಾಬಾಯಿ. Blog this! Bookmark on Delicious Digg [...]

ಎಚ್. ಎಂ. ಶಂಕರನಾರಾಯಣರಾವ್

Monday, January 14th, 2013 ಎಚ್. ಎಂ. ಶಂಕರನಾರಾಯಣರಾವ್

೨೧.೧೧.೧೯೧೩ ೧೭.೦೯.೧೯೯೭ ಸಾಹಿತಿಗಳಾಗಿದ್ದು ಮಾತ್ರವಲ್ಲದೆ ಸಾಹಿತಿಗಳಿಗೆ ದೊರೆಯಬೇಕಾದ ಯುಕ್ತ ಗೌರವವನ್ನು ಸಾಹಿತಿಗಳಿಗೆ ದೊರಕಿಸಿಕೊಟ್ಟು, ಒಂದು ಪ್ರಕಾಶನ ಸಂಸ್ಥೆಯನ್ನು ಕಟ್ಟಿ ಯಶಸ್ವಿಯಾಗಿ ನಡೆಸಿದ ಶಂಕರನಾರಾಯಣರಾವ್‌ರವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹರಿಹರದಲ್ಲಿ (ಈಗ ದಾವಣಗೆರೆ ಜಿಲ್ಲೆಗೆ ಸೇರಿದೆ). ಹಾಸ್ಯ ಸಾಹಿತಿ ನಾಡಿಗೇರ್ ಕೃಷ್ಣರಾಯರಿಗೂ ಜನ್ಮಕೊಟ್ಟ ಸ್ಥಳ. ಶಂಕರನಾರಾಯಣರಾಯರ ತಂದೆ ಮಲ್ಲಾರ ಭಟ್ಟ, ತಾಯಿ ಭೀಮಕ್ಕ. Blog this! Bookmark on Delicious Digg this post Recommend on Facebook share via Reddit Share with Stumblers Tweet [...]

ಚಂದ್ರಕಾಂತ ಕುಸನೂರ

Monday, January 14th, 2013 ಚಂದ್ರಕಾಂತ ಕುಸನೂರ

೨೧.೧೦.೧೯೩೧ ಚಿತ್ರಕಲೆ, ಸಂಗೀತ, ಸಾಹಿತ್ಯ – ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಆಸಕ್ತರಾಗಿದ್ದು ಕೃತಿ ರಚಿಸುತ್ತಾ ಬಂದಿರುವ ಚಂದ್ರಕಾಂತರು ಹುಟ್ಟಿದ್ದು ಗುಲಬರ್ಗ ಜಿಲ್ಲೆಯ ಕಲುಬುರ್ಗ ತಾಲ್ಲೂಕಿನ ಕುಸನೂರಿನಲ್ಲಿ. ತಂದೆ ಮಾಸ್ತರಿಕೆ ಉದ್ಯೋಗದಲ್ಲಿದ್ದ ಗುಂಡೇರಾವ್, ತಾಯಿ ರಂಗೂಬಾಯಿ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಮಾ.ನಾ. ಚೌಡಪ್ಪ

Monday, January 14th, 2013 ಮಾ.ನಾ. ಚೌಡಪ್ಪ

೨೯.೦೭.೧೯೦೯ ೨೦.೦೨ ೧೯೮೫ ಸಾಹಸಿ ಪತ್ರಕರ್ತ, ದೇಶಾಭಿಮಾನಿ, ಕನ್ನಡಪರ ಹೋರಾಟಗಾರಾಗಿದ್ದ ಚೌಡಪ್ಪನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತುರಿವೇಕರೆ ತಾಲ್ಲೂಕಿನ ಮಾಯಸಂದ್ರದಲ್ಲಿ. ತಂದೆ ಶಾನುಭೋಗ ವೃತ್ತಿಯಲ್ಲಿದ್ದ ನಾರಸೀದೇವಯ್ಯ, ತಾಯಿ ಲಕ್ಷ್ಮೀದೇವಮ್ಮ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಮ.ನ. ಮೂರ್ತಿ (ಎಂ. ನರಸಿಂಹಮೂರ್ತಿ)

Monday, January 14th, 2013 ಮ.ನ. ಮೂರ್ತಿ (ಎಂ. ನರಸಿಂಹಮೂರ್ತಿ)

೦೬.೦೬.೧೯೦೬ ೨೨.೦೪.೧೯೭೭ ಸಾಹಿತ್ಯ,  ಸಂಗೀತ ಪ್ರೇಮಿ, ಕಾದಂಬರಿಕಾರ, ಪತ್ರಿಕೋದ್ಯಮಿ ಮ.ನ. ಮೂರ್ತಿಯವರು ಹುಟ್ಟಿದ್ದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿ ಎಂಬಲ್ಲಿ. ತಂದೆ ಮಧ್ವರಾವ್, ತಾಯಿ ಭೀಮಕ್ಕ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಪ.ಗು. ಸಿದ್ಧಾಪುರ

Monday, January 14th, 2013 ಪ.ಗು. ಸಿದ್ಧಾಪುರ

೦೧.೦೬.೧೯೫೮ ಕುಂಚ ಹಿಡಿದು ಬಣ್ಣ ತುಂಬಿ ಬಿಡಿಸಿಟ್ಟ ಚಿತ್ರಗಳಲ್ಲಿ ಮಕ್ಕಳು ಆಕರ್ಷಿತರಾದಂತೆ ಸುಂದರವಾದ ಮಕ್ಕಳ ಪದ್ಯ ಬರೆದು, ಮಕ್ಕಳ ಮನಸ್ಸನ್ನು ಗೆದ್ದಿರುವ ಪರಗೊಂಡ ಗುರುಪಾದಪ್ಪ ಸಿದ್ಧಾಪುರರವರು ಹುಟ್ಟಿದ್ದು ವಿಜಾಪುರ ತಾಲ್ಲೂಕಿನ ಬಸವನ ಬಾಗೇವಾಡಿಯಲ್ಲಿ. ತಂದೆ ಗುರುಪಾದಪ್ಪ, ತಾಯಿ ಯಮುನಾ ಬಾಯಿ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಪ್ರೊ. ಡಿ.ಎ. ಶಂಕರ್

Monday, January 14th, 2013 ಪ್ರೊ. ಡಿ.ಎ. ಶಂಕರ್

೧೫.೦೫.೧೯೩೭ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ವಿಮರ್ಶಕರಾಗಿ, ಕವಿಯಾಗಿ, ನಾಟಕಕಾರರಾಗಿ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಕರಾಗಿ ಪ್ರಸಿದ್ಧರಾಗಿರುವ ಶಂಕರ್‌ರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ತಂದೆ ಡಿ. ಆಶ್ವತ್ಥ ನಾರಾಯಣರಾವ್, ತಾಯಿ ಲಕ್ಷ್ಮೀದೇವಮ್ಮ  Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಡಾ. ಬಿ.ಪಿ. ರಾಧಾಕೃಷ್ಣ

Monday, January 14th, 2013 ಡಾ. ಬಿ.ಪಿ. ರಾಧಾಕೃಷ್ಣ

೩೦.೦೪.೧೯೧೮ ೨೬.೦೧.೨೦೧೨ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಸಾಹಿತಿಗಳಷ್ಟೇ ಅಲ್ಲದೆ ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ದುಡಿದವರ ಪಾಲೂ  ಸಾಕಷ್ಟಿದೆ. ಹೀಗೆ ಅಂತಾರಾಷ್ಟ್ರೀಯ ಭೂವಿಜ್ಞಾನಿಯಾಗಿದ್ದ, ಕರ್ನಾಟಕದಲ್ಲಿನ ಖನಿಜ ನಿಕ್ಷೇಪಗಳನ್ನು ಗುರುತಿಸಿದ್ದಲ್ಲದೆ ಜಲಸಂಪತ್ತನ್ನು ಪರಿಣಾಮಕಾರಿಯಾಗಿ ಗ್ರಾಮೀಣ ಜನತೆಗೂ ಒದಗಿಸಲು ಯೋಜನೆಗಳನ್ನು ಕೈಗೊಂಡು ಕರ್ನಾಟಕದ ಏಳಿಗೆಗಾಗಿ ದುಡಿದ ರಾಧಾಕೃಷ್ಣರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಿ.ಪುಟ್ಟಯ್ಯ, ತಾಯಿ ವೆಂಕಮ್ಮ. Blog this! Bookmark on Delicious Digg this post Recommend on Facebook share via Reddit Share with Stumblers Tweet [...]

ಪಂ. ಕೇಶವಶರ್ಮ ಗಲಗಲಿ

Monday, January 14th, 2013 ಪಂ. ಕೇಶವಶರ್ಮ ಗಲಗಲಿ

೧೩.೦೩.೧೮೯೩ ೧೬.೦೬.೧೯೬೬ ಶಾಲಾ ಶಿಕ್ಷಕರಾಗಿ, ಸಾಹಿತ್ಯಾಭ್ಯಾಸಿಯಾಗಿದ್ದಂತೆ ಜ್ಯೋತಿಶಾಸ್ತ್ರದಲ್ಲೂ ಪಂಡಿತರೆನಿಸಿದ್ದ ಕೇಶವ ಶರ್ಮರು ಹುಟ್ಟಿದ್ದು ಇಂದಿನ ಬಾಗಲ ಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ನಾಗನೂರಿನಲ್ಲಿ. ತಂದೆ ರಂಗಭಟ್ಟರು, ತಾಯಿ ಜಾನಕೀಬಾಯಿ. ಗಲಗಲಿಯಲ್ಲಿ ಪ್ರಾರಂಭಿಕ ಶಿಕ್ಣಣ ಮುಗಿಸಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದನಂತರ ಶಿಕ್ಷಕರಾಗಿ ಸೇರಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಸಂಸ್ಕೃತ, ಕಾವ್ಯ, ನಾಟಕ, ವ್ಯಾಕರಣಗಳನ್ನು ಇವರಿಗೆ ಬೋಧಿಸಿದವರು ಕೂರ್ಮಾಚಾರ‍್ಯರು ಹಾಗೂ ಸುಬ್ಬಣ್ಣಾಚಾರ್ಯರು. Blog this! Bookmark on Delicious Digg this post Recommend on Facebook share via Reddit Share [...]

ಹ.ಮ. ಪೂಜಾರ

Monday, January 14th, 2013 ಹ.ಮ. ಪೂಜಾರ

೧೩.೦೩.೧೯೪೩ ಶಿಶುಗೀತೆಗಳು, ಮಕ್ಕಳ ಪದ್ಯಗಳನ್ನು ಬರೆದು ಮಕ್ಕಳ ಮನಸ್ಸನ್ನು ಚೇತೋಹಾರಿಯಾಗಿದ್ದಷ್ಟೇ ಅಲ್ಲದೆ ಮನೆಯಂಗಳದಲ್ಲಿ ಚಿಲಿಪಿಲಿ ಶಬ್ದ, ಶಾಲೆಯ ಆವರಣದಲ್ಲಿ ಮಕ್ಕಳ ಕಲರವ, ಮಕ್ಕಳ ಮೇಳದಲ್ಲಿ ಮಕ್ಕಳ ಇಂಪಾದ ದನಿ, ಮಕ್ಕಳಿಗಾಗಿ ಶಿಬಿರ, ಮಕ್ಕಳ ಹಬ್ಬ ಮುಂತಾದವುಗಳನ್ನು ನಡೆಸಿಕೊಂಡು ಬಂದು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಸದಾ ತೊಡಗಿಸಿಕೊಂಡಿರುವ ಹ.ಮ.ಪೂಜಾರರವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ. ತಂದೆ ಮನ್ನೆಪ್ಪ ಪೂಜಾರ, ತಾಯಿ ಗುರುಬಾಯಿ. Blog this! Bookmark on Delicious Digg this post Recommend on Facebook share [...]

ಪ್ರೊ. ಎಚ್.ಎಸ್. ಹರಿಶಂಕರ್

Monday, January 14th, 2013 ಪ್ರೊ. ಎಚ್.ಎಸ್. ಹರಿಶಂಕರ್

೦೮.೧೨.೧೯೪೦ ಲೇಖಕರಾಗಿ, ಉತ್ತಮ ಭಾಷಾಂತರಕಾರರಾಗಿ ಅದರಲ್ಲೂ ರಷ್ಯನ್ ಭಾಷೆಯಲ್ಲಿ ಪ್ರಭುತ್ವಸಾಧಿಸಿ, ನೇರವಾಗಿ ರಷ್ಯನ್ ಭಾಷೆಯಿಂದಲೇ ಹಲವಾರು ರಷ್ಯನ್ ಕೃತಿಗಳನ್ನು ಅನುವಾದಿಸಿ ಕನ್ನಡಿಗರಿಗೆ ನೀಡಿರುವ ಹರಿಶಂಕರರು ಹುಟ್ಟಿದ್ದು ಹರಿಹರದಲ್ಲಿ. ತಂದೆ ಪ್ರಸಿದ್ಧ ಸಾಹಿತಿಗಳು, ಶಾರದಾಮಂದಿರದ ಪ್ರಕಾಶಕರೂ ಆದ ಎಚ್.ಎಂ. ಶಂಕರನಾರಾಯಣ ರಾಯರು, ತಾಯಿ ಲಕ್ಷ್ಮೀ ದೇವಮ್ಮ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later [...]

ಡಾ. ವಾಮನ ನಂದಾವರ

Monday, January 14th, 2013 ಡಾ. ವಾಮನ ನಂದಾವರ

೧೫.೧೧.೧೯೪೪ ತುಳುಭಾಷೆಯ ಜಾನಪದ ಸಂಶೋಧಕರಲ್ಲಿ ಅತಿ ಪ್ರಮುಖರಲ್ಲೊಬ್ಬರೆನಿಸಿರುವ ನಂದಾವರ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರದಲ್ಲಿ. ತಂದೆ ಬಾಬು ಬಾಳೆ ಪುಣಿ, ತಾಯಿ ಪೂವಮ್ಮ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಡಾ. ಮಳಲಿ ವಸಂತ ಕುಮಾರ್

Monday, January 14th, 2013 ಡಾ. ಮಳಲಿ ವಸಂತ ಕುಮಾರ್

೧೦.೦೮.೧೯೪೫ ತಮ್ಮ ಅಧ್ಯಯನ ಹಾಗೂ ಗ್ರಂಥ ರಚನೆಗಳಿಂದ ಜಾನಪದ ಕ್ಷೇತ್ರದಲ್ಲಿ ಪ್ರಖ್ಯಾತರಾಗಿರುವ ವಸಂತ ಕುಮಾರ್‌ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಳಲಿ ಎಂಬಲ್ಲಿ. ತಂದೆ ಪಟೇಲ್ ಚಿಕ್ಕೇಗೌಡರು, ತಾಯಿ ದೇವಮ್ಮ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಕೆ. ವಿರೂಪಾಕ್ಷಗೌಡ

Monday, January 14th, 2013 ಕೆ. ವಿರೂಪಾಕ್ಷಗೌಡ

೦೧.೦೭.೧೯೩೫ ೧೨.೧೨.೨೦೦೭ ಬಳ್ಳಾರಿ ಎಂದಾಕ್ಷಣ ನೆನಪಿಗೆ ಬರುವುದು ಗಣಿಧೂಳೇ ಆದರೂ ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ ಜಗತ್ತಿನ ಹಾಸ್ಯ ಬ್ರಹ್ಮಬೀಚಿ, ನಾಟಕಕಾರ ಬಳ್ಳಾರಿ ರಾಘವ, ಜನಪದ ಮೇರು ಎನಿಸಿದ್ದ ಜೋಳದರಾಶಿ ದೊಡ್ಡನ್ನ ಗೌಡರು, ಮುದೇನೂರು ಸಂಗಣ್ಣ ಮುಂತಾದವರುಗಳಂತೆ ಮತ್ತೊಬ್ಬ ಜಾನಪದ ವಿದ್ವಾಂಸರಾಧ ವಿರೂಪಾಕ್ಷಗೌಡರು ಸೇರ್ಪಡೆಯಾಗಿ ಸಾಂಸ್ಕೃತಿಕ ಜಗತ್ತನ್ನು ಕಣ್ಣುಮುಂದೆ ತಂದು ನಿಲ್ಲಿಸುತ್ತಾರೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about [...]

ವೈ.ಎಸ್. ಗುಂಡಪ್ಪ

Monday, January 14th, 2013 ವೈ.ಎಸ್. ಗುಂಡಪ್ಪ

೧೨.೦೬.೧೯೦೫ ೧೮.೦೬.೧೯೯೮ ಶಿಕ್ಷಕರಾಗಿ ಮಕ್ಕಳ ಸೂಕ್ಷ್ಮಮನಸ್ಸನ್ನರಿತು ಬೋಧಪ್ರದವಾದ ನಾಟಕಗಳನ್ನು ರಚಿಸಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾದಂತೆ ಸಾಹಿತ್ಯ, ಸಂಗೀತ, ನಾಟಕ ಮುಂತಾದವುಗಳ ಸಂಘಟಕರಾಗಿ ಸಮಾಜವು ಸನ್ಮಾರ್ಗದಲ್ಲಿ ನಡೆಯಲು ‘ಸಾಹಿತ್ಯ ಕೂಟ’ವನ್ನು ಸ್ಥಾಪಿಸಿ ಕಡೆಯ ಉಸಿರಿರುವವರೆವಿಗೂ ಕನ್ನಡದ ಪರಿಚಾರಿಕೆಯಲ್ಲಿ ತೊಡಗಿಕೊಂಡಿದ್ದ ವೈ.ಎಸ್. ಗುಂಡಪ್ಪನವರು ಹುಟ್ಟಿದ್ದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನಲ್ಲಿ. ತಂದೆ ಯಲಹಂಕದ ಸುಬ್ರಹ್ಮಣ್ಣಯ್ಯನವರು, ತಾಯಿ ಗೌರಮ್ಮ. Blog this! Bookmark on Delicious Digg this post Recommend on Facebook share via Reddit Share [...]

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ