ಸಪೋಟ ಮತ್ತು ಸೀಬೆ :ಭಾಗ-೧, ಸಪೋಟ-೭. ಕೊಯ್ಲು ಮತ್ತು ಇಳುವರಿ

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೧, ಸಪೋಟ-೭. ಕೊಯ್ಲು ಮತ್ತು ಇಳುವರಿ

  ಬಲಿತ ಕಾಯಿಗಳನ್ನು ಸಕಾಲದಲ್ಲಿ ಕೊಯ್ಲು ಮಾಡುವುದರೊಂದಿಗೆ ಅವುಗಳನ್ನು ಹಣ್ಣು ಮಾಡುವ ವಿಧಾನ, ವಿವಿಧ ದರ್ಜೆ ವರ್ಗೀಕರಣಗಳೂ ಮುಖ್ಯವಾಗಿರುತ್ತವೆ. ಹೀಗೆ ದೊರೆತ ಉತ್ತಮ ಇಳುವರಿ ಮೇರೆಗೆ ಬೆಳೆಗಾರನಿಗೆ ತಗುಲಿದ ಅಂದಾಜು ವೆಚ್ಚದ ಪ್ರಮಾಣದೊಂದಿಗೆ ದೊರಕಿದ ವರಮಾನವನ್ನು ಪರಿಗಣಿಸಬೇಕಾಗುತ್ತದೆ. ಇವುಗಳ ವಿವರವಾದ ಚಿತ್ರಣ ಇಲ್ಲಿದೆ. ಗಿಡಗಳನ್ನು ನೆಟ್ಟ ವರ್ಷವೇ ಸ್ವಲ್ಪ ಹೂವು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಕಿತ್ತು ಹಾಕಬೇಕು. ಅಪಕ್ವ ಕಾಯಿಗಳನ್ನು ಕೊಯ್ಲು ಮಾಡಬಾರದು. ಒಂದು ವೇಳೆ ಹಾಗೇನಾದರು ಕೊಯ್ಲು ಮಾಡಿದ್ದೇ ಆದರೆ ಅವು ಸರಿಯಾಗಿ ಪಕ್ವಗೊಳ್ಳುವುದಿಲ್ಲ ಮತ್ತು ತಿನ್ನಲು [...]

ಸಪೋಟ ಮತ್ತು ಸೀಬೆ : ಭಾಗ-೧,ಸಪೋಟ-೪. ತೋಟದ ನಿರ್ಮಾಣ ಮತ್ತು ಸಿದ್ಧತೆ

Wednesday, March 20th, 2013 ಸಪೋಟ ಮತ್ತು ಸೀಬೆ : ಭಾಗ-೧,ಸಪೋಟ-೪. ತೋಟದ ನಿರ್ಮಾಣ ಮತ್ತು ಸಿದ್ಧತೆ

ಹೊಸದಾಗಿ ತೋಟವನ್ನು ಮಾಡುವಾಗ ಬೇಲಿಯ ನಿರ್ಮಾಣ, ಗಾಳಿ ತಡೆಯನ್ನು ಎಬ್ಬಿಸುವುದು ಮತ್ತು ಭೂಮಿಯ ಸಿದ್ಧತೆ ಮುಂತಾದವುಗಳಿಗೆ ರೈತರು ಹೆಚ್ಚು ಗಮನ ಕೊಡಬೇಕು. ಸುಭದ್ರವಾದ ಬೇಲಿ ದನಕರುಗಳಿಗಷ್ಟೇ ಅಲ್ಲದೆ ದಾರಿಹೋಕರಿಂದಲೂ ರಕ್ಷಣೆ ದೊರಕಿಸಿಕೊಡುತ್ತದೆ. ಬೇಲಿಯ ಒಳ ಅಂಚಿನ ಉದ್ದಕ್ಕೆ ೨-೩ ಮೀಟರ್ ಅಂತರದಲ್ಲಿ ಎಬ್ಬಿಸಿದ ಗಾಳಿ ತಡೆ, ಬಿಸಿಗಾಳಿ ಮತ್ತ್ತು ಶೈತ್ಯ ಹವೆಯಿಂದ ಗಿಡಗಳನ್ನು ರಕ್ಷಿಸುತ್ತದೆ. ಅಲ್ಲದೆ ಸಿಲ್ವರ್ ಓಕ್, ಸರ್ವೆ, ನೇರಳೆ ಮುಂತಾದ ಮರಗಳನ್ನು ಗಾಳಿ ತಡೆಯಾಗಿ ಎಬ್ಬಿಸಿದಾಗ, ಅವು ಕಟಾವಿಗೆ ಬಂದಾಗ ರೈತನಿಗೆ ಸಾಕಷ್ಟು ಆದಾಯವನ್ನು [...]

ಸಪೋಟ ಮತ್ತು ಸೀಬೆ :ಭಾಗ-೧ ಸಪೋಟ-೮. ಸಪೋಟ ಹಣ್ಣಿನ ಉತ್ಪನ್ನಗಳು

Wednesday, March 20th, 2013

  ಚೆನ್ನಾಗಿ ಮಾಗಿದ ಹಣ್ಣನ್ನು ಹಾಗೆಯೇ ತಿನ್ನಬಹುದು ಇಲ್ಲವೇ ವಿವಿಧ ಉತ್ಪನ್ನಗಳನ್ನಾಗಿ ತಯಾರಿಸಿ ತಿನ್ನಬಹುದು. ಮಾಗಿದ ಹಣ್ಣು ಹೆಚ್ಚು ಕಾಲ ಇಡಲು ಬರುವುದಿಲ್ಲ. ಆದರೆ ಅವುಗಳಿಂದ ತಯಾರಿಸಿದ ಪದಾರ್ಥಗಳನ್ನು ಹೆಚ್ಚು ಕಾಲ ಸಂಗ್ರಹಿಸಿಟ್ಟು ಬೇಕಾದಾಗ ಬಳಸಬಹುದು. ಹೀಗೆ ತಯಾರಿಸಿದ ಪದಾರ್ಥಗಳು ತಿನ್ನಲು ರುಚಿಯಾಗಿರುತ್ತವೆ. ಸಪೋಟ ಹಣ್ಣಿನ ಪದಾರ್ಥಗಳಲ್ಲಿ ಜಾಮ್, ಜೆಲ್ಲಿ, ಸಾಲಡ್, ಒಣ ಹೋಳು ಮುಖ್ಯವಾದುವು. ಅವುಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿ ಸಲಕರಣೆಗಳು ಹಾಗೂ ವಿಧಾನಗಳ ಬಗ್ಗೆ ಸಹ ಈ ಅಧ್ಯಾಯದಲ್ಲಿ ಮಾಹಿತಿ ನೀಡಲಾಗಿದೆ. ಜಾಮ್ ಇದನ್ನು [...]

ಸಪೋಟ ಮತ್ತು ಸೀಬೆ : ಸಂಪಾದಕರ ಮಾತು

Wednesday, March 20th, 2013

ಕೃಷಿ ಜ್ಞಾನ ಭಂಡಾರ ರೈತರ ಜನಮನವನ್ನು ತಲುಪುವ ಉನ್ನತವಾದ ಉದ್ದೇಶದಿಂದ ಪ್ರಾರಂಭವಾದ ಒಂದು ಅಪೂರ್ವ ಜ್ಞಾನವಾಹಿನಿ. ಕೃಷಿತೋ ನಾಸ್ತಿ ದುರ್ಭಿಕ್ಷಂ ಇದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಲಾಂಛನದ ಹೊನ್ನುಡಿ. ಕೃಷಿ ವಿಜ್ಞಾನ ಪ್ರಗತಿಯಾದಂತೆ ನಾಡಿನಲ್ಲಿ ಸುಭಿಕ್ಷತೆ ನೆಲೆಯಾಗುತ್ತದೆ. ರೈತ ಸಂಸ್ಕೃತಿ ಬೆಳೆದಂತೆಲ್ಲಾ ಕೃಷಿ ವಿಜ್ಞಾನ ಭಂಡಾರವೂ ತುಂಬಿ ಹರಿಯುತ್ತದೆ. ಇದರಲ್ಲಿ ಕೃಷಿ ವಿಜ್ಞಾನಿಗಳ, ಚಿಂತಕರ ಪಾತ್ರ ಅಪಾರ. ವಿಶ್ವವಾಹಿನಿಯಾದ ವಿಚಾರ, ಚಿಂತನೆಗಳು ಮಾನವನ ಮುನ್ನಡೆಯ ದ್ಯೋತಕ. ಇದಕ್ಕೆ ಪೂರಕವಾದ ವೈಜ್ಞಾನಿಕ ಕಿರುಪುಸ್ತಕಗಳನ್ನು ಸರಳ, ಸುಂದರ, ವಿಚಾರ ಪೂರ್ಣ [...]

ಸಪೋಟ ಮತ್ತು ಸೀಬೆ :ಭಾಗ-೧,ಸಪೋಟ-೫. ಬೇಸಾಯ ಕ್ರಮಗಳು

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೧,ಸಪೋಟ-೫. ಬೇಸಾಯ ಕ್ರಮಗಳು

ಬೇಸಾಯ ಕ್ರಮಗಳಲ್ಲಿ ಗೊಬ್ಬರಗಳ ಪೂರೈಕೆ, ನೀರಾವರಿ, ಮಧ್ಯಂತರ ಬೆಳೆಗಳು, ಅಂತರ ಬೇಸಾಯ, ಕಳೆಹತೋಟಿ, ಗಿಡಗಳ ಆಕಾರ ನಿರ್ವಹಣೆ, ಸವರುವಿಕೆ ಮತ್ತು ಸಂಖ್ಯಾವೃದ್ಧಿಗೆ ಚೋದಕಗಳ ಬಳಕೆ ಮುಖ್ಯವಾದ ಪದ್ಧತಿಗಳು. ಮಣ್ಣಿನ ಫಲವತ್ತೆತೆಯ ಆಧಾರದ ಮೇಲೆ ಗಿಡಗಳಿಗೆ ಕೊಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಹೆಚ್ಚು-ಕಡಿಮೆ ಮಾಡಿಕೊಳ್ಳಬಹುದಾದರೂ, ಸಪೋಟ ಗಿಡಗಳಿಗೆ ಸಾಮಾನ್ಯ ಪರಿಸ್ಥಿತಿಯಲ್ಲಿ ಶಿಫಾರಸ್ಸು ಮಾಡಿರುವ ಒಂದು ನಿರ್ದಿಷ್ಟ ಪ್ರಮಾಣವಿದೆ. ಗೊಬ್ಬರಗಳನ್ನು ಈ ಪ್ರಮಾಣದಲ್ಲಿ ಸರಿಯಾದ ಪದ್ಧತಿಯಲ್ಲಿ ಗಿಡಗಳ ಸುತ್ತಲೂ ಉಂಗುರಾಕಾರದಲ್ಲಿ ಕೊಡಬೇಕು. ಸಪೋಟ ಗಿಡಗಳನ್ನು ಚಿಕ್ಕದರಿಂದಲೇ ಕ್ರಮಬದ್ಧವಾಗಿ ಸವರಿ ಒಂದು [...]

ಸಪೋಟ ಮತ್ತು ಸೀಬೆ : ಭಾಗ-೨, ಸೀಬೆ-೧೫. ಸೀಬೆಹಣ್ಣಿನ ಉತ್ಪನ್ನಗಳು

Wednesday, March 20th, 2013

  ಸೀಬೆ ಹಣ್ಣುಗಳನ್ನು ಹಾಗೆಯೇ ತಿನ್ನುವುದರ ಜೊತೆಗೆ ಅವುಗಳಿಂದ ಸ್ವಾದಿಷ್ಟ ಪದಾರ್ಥಗಳನ್ನು ತಯಾರಿಸಿ, ಬೇಕೆಂದಾಗ ತಿನ್ನಬಹುದು. ಈ ಪದಾರ್ಥಗಳಿಗೆ ಒಳ್ಳೆಯ ಬೇಡಿಕೆ ಇದೆ. ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರಿಗೆ ಎಲ್ಲರೂ ಇಷ್ಟಪಡುವ ಪದಾರ್ಥಗಳು ಇವಾಗಿವೆ. ಹಣ್ಣು ಅಗ್ಗವಾಗಿ ಲಭಿಸುವ ದಿನಗಳಲ್ಲಿ ಹಾಗೂ ಮಾರಾಟಕ್ಕೆ ಯೋಗ್ಯವಲ್ಲದ ತೀರಾ ಸಣ್ಣ ಗಾತ್ರದ ಹಣ್ಣುಗಳನ್ನು ಸಂಸ್ಕರಣೆಗೆ ಬಳಸಬಹುದು. ಈ ಪದಾರ್ಥಗಳನ್ನು ಬ್ರೆಡ್, ಬನ್, ಬಿಸ್ಕತ್, ರೊಟ್ಟಿ, ಚಪಾತಿ, ಪೂರಿ ಮುಂತಾಗಿ ಸೇರಿಸಿ ತಿಂದಲ್ಲಿ ರುಚಿಯಾಗಿರುತ್ತದೆ. ಅವುಗಳ ಪರಿಮಳ ಆಹ್ಲಾದಕರ. ಅವುಗಳನ್ನು ಬಹುದೀರ್ಘಕಾಲ [...]

ಸಪೋಟ ಮತ್ತು ಸೀಬೆ : ಭಾಗ-೨, ಸೀಬೆ-೧೪. ಕೊಯ್ಲು ಮತ್ತು ಇಳುವರಿ

Wednesday, March 20th, 2013 ಸಪೋಟ ಮತ್ತು ಸೀಬೆ : ಭಾಗ-೨, ಸೀಬೆ-೧೪. ಕೊಯ್ಲು ಮತ್ತು ಇಳುವರಿ

  ಪಕ್ವತೆಗೆ ಬಂದ ಕಾಯಿಗಳನ್ನು ಸೂಕ್ತ ಸಮಯದಲ್ಲಿ ಕೊಯ್ಲು ಮಾಡುವ ವಿಧಾನ, ಸೂಕ್ತ ನಿರ್ವಹಣೆಯಿಂದ ದೊರಕುವ ಇಳುವರಿ ಪ್ರಮಾಣ, ವರ್ಗೀಕರಣ, ಸಂಗ್ರಹಣಾ ವಿಧಾನ, ಮಾರಾಟ ಅನುಕೂಲತೆಗಳು, ಪ್ರತಿ ಹೆಕ್ಟೇರು ಇಳುವರಿ ಪ್ರಮಾಣ ಮತ್ತು ಅಂದಾಜು ಬೇಸಾಯ ವೆಚ್ಚದ ಅಂಶಗಳನ್ನು ಕುರಿತು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಸೀಬೆಯಲ್ಲಿ ಹೂವು ಬಿಟ್ಟದಿನದಿಂದಹಣ್ಣು ಕೊಯ್ಲಿಗೆ ಬರಲು ಸುಮಾರು ೧೫೦ ದಿನ ಹಿಡಿಸುತ್ತದೆ. ಈ ಅವಧಿ ಸಫೇದ ತಳಿಯಲ್ಲಿ ೧೩೭ ಮತ್ತು ಪೇರು ಆಕಾರದ ತಳಿಯಲ್ಲಿ ೧೧೦ ದಿನಗಳಷ್ಟಿದ್ದರೆ ಸರ್ದಾರ್ ತಳಿಯಲ್ಲಿ ೧೦೬ [...]

ಸಪೋಟ ಮತ್ತು ಸೀಬೆ : ಕುಲಪತಿಗಳ ಹಾರೈಕೆ

Wednesday, March 20th, 2013

ಕೃಷಿ ಗ್ರಾಮೀಣ ಪ್ರದೇಶಗಳ ಜನರ ಜೀವನಾಡಿ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದ ಆಹಾರ ಅಭಾವವನ್ನು ನೀಗಿಸಲು ಹೊರದೇಶಗಳಿಂದ ಗೋಧಿ, ಮೆಕ್ಕೆಜೋಳ ಮುಂತಾದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡು ಜನರ ಹೊಟ್ಟೆ ತುಂಬಿಸಬೇಕಾಗಿತ್ತು. ಈ ಪರಿಸ್ಥಿತಿಯನ್ನು ಎದುರಿಸಿ ಕಂಗೆಟ್ಟ ರೈತರು ಹಾಗೂ ವಿಜ್ಞಾನಿಗಳು ಕೃಷಿ ಉತ್ಪಾದಕತೆ ಹೆಚ್ಚಿಸುವ ಬಗ್ಗೆ ಸತತವಾಗಿ ಚಿಂತಿಸಲಾರಂಭಿಸಿದರು. ಕೃಷಿ ಉತ್ಪಾದನೆ ಹೆಚ್ಚಿಸಲು ವಿಜ್ಞಾನಿಗಳು ಸುಧಾರಿತ ಬೇಸಾಯ ಪದ್ದತಿಗಳು ಹಾಗೂ ತಳಿ ಸಂವರ್ಧನೆಗೆ ಹೆಚ್ಚಿನ ಗಮನ [...]

ಸಪೋಟ ಮತ್ತು ಸೀಬೆ : ಆಧಾರ ಗ್ರಂಥಗಳು

Wednesday, March 20th, 2013

ತೋಟಗಾರಿಕೆ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು, ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ೨೦೦೦. Aykroyd, W.R. 1951. The Nutritive Value of Indian Foods and The planning of Satisfactory Diets. Govt. of India. New Delhi. Bose, T.K. 1985, Fruits of India – Tropical and sub-tropical. Naya Prokash, Calcutta. Gandhi, S.R. 1960, Grape Growing in India. Farm Bull, Ministry of Food and [...]

ಸಪೋಟ ಮತ್ತು ಸೀಬೆ : ಅನುಬಂಧ

Wednesday, March 20th, 2013

ತೋಟಗಾರಿಕೆ ಬೆಳೆಗಳ ಬೇಸಾಯದಲ್ಲಿ ಕೆಲವು ಮುಖ್ಯಾಂಶಗಳು: ೧) ನಂಬಿಕೆಗೆ ಅರ್ಹವಿರುವ ಮೂಲಗಳಿಂದ ಮಾತ್ರವೇ ಸಸಿಗಳನ್ನು ಪಡೆದುಕೊಳ್ಳಬೇಕು. ೨) ಹೊಸದಾಗಿ ತೋಟ ಎಬ್ಬಿಸುವವರು ಹತ್ತಿರದ ತಜ್ಞರ ನೆರವನ್ನು ಪಡೆದು ಅನಂತರ ಕೆಲಸವನ್ನು ಪ್ರಾರಂಭಿಸಬಹುದು. ಹತ್ತಿರದ ತೋಟಗಳನ್ನು ಒಮ್ಮೆ ನೋಡುವುದು ಒಳ್ಳೆಯದು. ೩) ತೋಟದಲ್ಲಿನ ಮಣ್ಣು ಮತ್ತು ನೀರುಗಳನ್ನು ಪರೀಕ್ಷಿಸಿ ಕೊಳ್ಳುವುದು ಉತ್ತಮ. ೪) ತೋಟದ ಸುತ್ತ ಗಾಳಿ ತಡೆ ಎಬ್ಬಿಸುವುದು ಅಗತ್ಯ. ೫) ಸಸಿಗಳನ್ನು ಪ್ರಾರಂಭದಲ್ಲಿ ನೆಟ್ಟಿದ್ದೇ ಆದರೆ ಅವು ಮಳೆಗಾಲ ಮುಗಿಯುವ ಹೊತ್ತಿಗೆ ಚೆನ್ನಾಗಿ ಬೇರುಬಿಟ್ಟು ಸ್ಥಿರಗೊಳ್ಳುತ್ತವೆ. [...]

ಸಪೋಟ ಮತ್ತು ಸೀಬೆ :ಭಾಗ-೧, ಸಪೋಟ-೨. ಪ್ರಭೇದ ಮತ್ತು ತಳಿಗಳು

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೧, ಸಪೋಟ-೨. ಪ್ರಭೇದ ಮತ್ತು ತಳಿಗಳು

ಸಪೋಟ ಸಸ್ಯದ ಬೇರು, ಹೂವು, ಕಾಯಿ ಎಲ್ಲವೂ ವಿಶಿಷ್ಟ. ಸುಮಾರು ೫ ರಿಂದ ೨೦ ಮೀ. ಎತ್ತರ ಬೆಳೆಯುವ ಸಪೋಟ ಮರದ ಬೇರು ಮತ್ತು ಕಾಂಡಗಳು ಬಲಿಷ್ಠ. ಸರಳವಾದ ಎಲೆಗಳು ಗುಂಪು ಗುಂಪಾಗಿದ್ದು ಸಣ್ಣದಾದ ಹೂವುಗಳು ಬಿಡಿ ಬಿಡಿಯಾಗಿರುತ್ತವೆ. ಹಣ್ಣು ಉದ್ದ ಅಂಡಾಕಾರ ಅಥವಾ ಗುಂಡಗೆ. ತಳಿಗಳು ನೆಟ್ಟಗೆ ಬೆಳೆಯುವ ಅಥವಾ ಇಳಿಬಿದ್ದ ಅಥವಾ ಹರಡಿ ಬೆಳೆಯುವ ರೆಂಬೆಗಳನ್ನು ಹೊಂದಿವೆ. ಬೇಸಾಯಕ್ಕೆ ಬಿಡುಗಡೆ ಮಾಡಿದ ಸುಮಾರು ೨೧ ತಳಿಗಳು ಹಾಗೂ ೫ ಮಿಶ್ರ ತಳಿಗಳನ್ನು ಇಲ್ಲಿ ವಿವರಿಸಲಾಗಿದೆ. [...]

ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೯. ಬೆಳೆ ಪರಿಚಯ

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೯. ಬೆಳೆ ಪರಿಚಯ

ಸೀಬೆ ಒಂದು ಸ್ವಾದಿಷ್ಟ ಪೂರ್ಣ ಹಣ್ಣು. ಇದರಲ್ಲಿ ಹೇರಳವಾದ ಸಿ ಜೀವಸತ್ವ ಇದ್ದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟಪಡುವ ಹಣ್ಣು. ಸಪೋಟ ಮುಖ್ಯ ಬೆಳೆಯ ಜೊತೆ ಮೊದಲ ಕೆಲವು ವರ್ಷಗಳು ಮಿಶ್ರ ಬೆಳೆಯಾಗಿ ತೆಗೆಯಲು ಸೀಬೆ ಅತಿ ಸೂಕ್ತ ಬೆಳೆ. ಸೀಬೆ ಹಣ್ಣಿನ ವಿಶಿಷ್ಟ ರುಚಿಯೊಂದಿಗೆ ಅದರ ಪೌಷ್ಟಿಕ ಗುಣವೂ ಮಹತ್ವದ್ದಾಗಿದೆ. ಸೀಬೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಮುಖ್ಯವಾಗಿ ವಸಡುಗಳ ತೊಂದರೆ, ಅಪಸ್ಮಾರ, ಸಂಧಿವಾತ ನಿವಾರಣೆಗೆ ಬಳಸುತ್ತಾರೆ. ಬಹುಬೇಗ ಫಸಲಿಗೆ ಬಂದು ಆದಾಯ ತರುವ [...]

ಸಪೋಟ ಮತ್ತು ಸೀಬೆ :ಭಾಗ-೧, ಸಪೋಟ- ೧.ಬೆಳೆ ಪರಿಚಯ

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೧, ಸಪೋಟ- ೧.ಬೆಳೆ ಪರಿಚಯ

ಕಡಿಮೆ ಮಳೆ ಬೀಳುವ ಹಾಗೂ ಶುಷ್ಕ ಪ್ರದೇಶಗಳಲ್ಲಿಯೂ ಸಹ ಬೆಳೆಯಬಹುದಾದ ಸಪೋಟ ನೂರುವರ್ಷಗಳಿಗೂ ಹೆಚ್ಚು ಕಾಲ ಜೀವಿಸಿ ಫಸಲು ನೀಡುತ್ತದೆ. ಇದು ಒಂದು ಪೌಷ್ಟಿಕ ಮತ್ತು ಸ್ವಾದಿಷ್ಟ ಹಣ್ಣು. ಇದು ಉತ್ತರ ಅಮೆರಿಕದಲ್ಲಿ ಉಗಮವಾಗಿ ಉಷ್ಣವಲಯದ ಎಲ್ಲ ದೇಶಗಳಲ್ಲಿ ಹಬ್ಬಿದೆ. ಭಾರತದಲ್ಲಿ ಇದರ ಸಾಗುವಳಿ ಮಹಾರಾಷ್ಟ್ರದಲ್ಲಿ ಪ್ರಾರಂಭವಾಗಿ ಇಂದು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ (ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ತಮಿಳನಾಡು, ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ, ಹರಿಯಾಣ) ಕಂಡುಬರುತ್ತದೆ. ಇದು ಉಷ್ಣವಲಯದ ಬೆಳೆ. ಸಮುದ್ರತೀರ [...]

ಸಪೋಟ ಮತ್ತು ಸೀಬೆ :ಭಾಗ-೧, ಸಪೋಟ-೬. ಸಸ್ಯ ಸಂರಕ್ಷಣೆ

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೧, ಸಪೋಟ-೬. ಸಸ್ಯ ಸಂರಕ್ಷಣೆ

ಸಪೋಟ ಗಡುಸಾದ ಮರ. ಇದಕ್ಕೆ ಕೀಟ-ರೋಗಗಳ ಬಾಧೆ ಅಷ್ಟೇನೂ ಅಧಿಕವಾಗಿ ಕಂಡುಬರುವುದಿಲ್ಲ. ಅದರೂ ಸಹ ಯಾವುದೇ ಒಂದು ನಿರ್ದಿಷ್ಟವಾದ ಕೀಟ ಅಥವಾ ರೋಗದ ಬಾಧೆ ಕಾಣಿಸಿಕೊಂಡಾಗ, ಅದನ್ನು ಸರಿಯಾಗಿ ಗುರುತಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಉದಾಹರಣೆಗೆ, ಸಪೋಟ ಎಲೆಗಳ ಮೇಲೆ ಮೊದಲು ರಸ ಹೀರುವ ಹುಳುಗಳು ಕಾಣಿಸಿಕೊಂಡು. ಅವುಗಳು ಎಲೆಗಳಿಂದ ಹೇರಳವಾಗಿ ರಸವನ್ನು ಹೀರಿ ಜೇನಿನಂತಹ ಪದಾರ್ಥವನ್ನು ಬಿಡುತ್ತವೆ. ಇದರ ಮೇಲೆ ಕಪ್ಪುಬೂಷ್ಟು ಬೆಳೆದು ಎಲೆ ಹಣ್ಣುಗಳೆಲ್ಲ ಮಾಸಲು ಬಣ್ಣಕ್ಕೆ ತಿರುಗುತ್ತವೆ. ಇಂತಹ ಕೀಟ ರೋಗಗಳ ಬಾಧೆ [...]

ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೧೩. ಸಸ್ಯ ಸಂರಕ್ಷಣೆ

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೧೩. ಸಸ್ಯ ಸಂರಕ್ಷಣೆ

ಸೀಬೆ ಹಣ್ಣಿನ ಬೆಳೆಗಯಲ್ಲಿ ಹಲವಾರು ಕೀಟ ಮತ್ತು ರೋಗಗಳು ಹಾನಿಯನ್ನುಂಟು ಮಾಡುತ್ತವೆ. ಅದರಿಂದ ಫಸಲು ಕುಗ್ಗುತ್ತದೆ. ಕೀಟ-ರೋಗಗಳನ್ನು ಸಕಾಲದಲ್ಲಿ ಹತೋಟಿ ಮಾಡುವುದು ಅಗತ್ಯ . ಅಂತಹ ಪ್ರಮುಖ ಕೀಟಗಳು ಮತ್ತು ಹಣ್ಣು ಕೊಳೆಯುವ ರೋಗ ಅತಿ ಮುಖ್ಯವಾದವುಗಳು. ಟೀ ಸೊಳ್ಳೆ, ಹಣ್ಣಿನ ನೊಣ, ಬೂಷ್ಟು ತಗಣೆ, ಚಿಬ್ಬುರೋಗ ಮತ್ತು ಹಣ್ಣು ಕೊಳೆಯುವ ರೋಗ ಅತಿ ಮುಖ್ಯವಾದವುಗಳು. ಟೀ ಸೊಳ್ಳೆ ಹಣ್ಣನ್ನು ಬಾಧಿಸುವ ಪೀಡೆ. ಇದರ ಹಾವಳಿಯಿಂದ ಹಣ್ಣು ವಿಕಾರಗೊಂಡು ಅವುಗಳ ಮೇಲೆಲ್ಲಾ ಕಪ್ಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ [...]

ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೧೨. ಭೂಮಿಯ ಸಿದ್ಧತೆ ಮತ್ತು ಬೇಸಾಯ

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೧೨. ಭೂಮಿಯ ಸಿದ್ಧತೆ ಮತ್ತು ಬೇಸಾಯ

ಸೀಬೆಯನ್ನು ಇಡೀ ಬೆಳೆಯಾಗಿ ಅಥವಾ ಸಪೋಟ, ಮಾವು ಮುಂತಾದ ತೋಟಗಾರಿಕೆ ಬೆಳೆಗಳ ಮಧ್ಯೆ ಮಿಶ್ರಬೆಳೆಯಾಗಿ ತೆಗೆಯಬಹುದು. ಇದರಲ್ಲಿ ಭೂಮಿಯ ಸಿದ್ಧತೆ, ಗಿಡಗಳನ್ನು ನೆಡಬೇಕಾದ ಅಂತರ, ಗೊಬ್ಬರಗಳ ಪೂರೈಕೆ, ಕಳೆ ಹತೋಟಿ, ಮಧ್ಯಂತರ ಬೆಳೆಗಳ ಬಗ್ಗೆ ವಿವರಗಳನ್ನು ಕೊಡಲಾಗಿದೆ. ಇದನ್ನು ಕುಷ್ಕಿಯಲ್ಲಿ ಬೆಳೆದಾಗ ಮಳೆನೀರಿನ ಸಂರಕ್ಷಣೆ ಅತಿ ಮುಖ್ಯ. ಅಂತೆಯೇ ಗಿಡಗಳನ್ನು ಸರಿಯಾದ ಹಂತದಲ್ಲಿ ಸವರಿ ಸಮತೋಲನ ಬೆಳವಣಿಗೆ ಹಾಗೂ ಫಲ ಬಿಡಲು ಅನುವು ಮಾಡಿಕೊಡಬೇಕು. ಸೀಬೆ ಮೂರು ಋತು(ಅಂಬೆ ಬಹರ್, ಮೃಗ್ ಬಹರ್, ಹಸ್ತ ಬಹರ್)ಗಳಲ್ಲಿ ಹೂವು [...]

ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೧೧. ಸಸ್ಯಾಭಿವೃದ್ಧಿ

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೧೧. ಸಸ್ಯಾಭಿವೃದ್ಧಿ

ಬಹುತೇಕ ತೋಟಗಾರಿಕೆ ಬಳೆಗಳಂತೆ ಸೀಬೆಯಲ್ಲೂ ಬೀಜ ಹಾಗೂ ರೆಂಬೆಗಳಿಂದ ಸಸಿಗಳನ್ನು ಅಭಿವೃದ್ಧಿಪಡಿಸಬಹುದು. ಬೀಜಗಳಿಂದ ಪಡೆಯುವ ಸಸ್ಯಗಳು ಬಹು ಎತ್ತರಕ್ಕೆ ಬೆಳೆದು ತಡವಾಗಿಫಸಲಿಗೆ ಬರುತ್ತವೆ. ಆದರೆ ಗೂಟಿ, ಕಸಿ ಮುಂತಾದ ನಿರ್ಲಿಂಗ ಪದ್ಧತಿಗಳಿಂದ ಪಡೆಯುವ ಸಸಿಗಳು ಬೇಗ ಫಸಲಿಗೆ ಬಂದು ತಾಯಿಗಿಡಗಳನ್ನೇಹೋಲುತ್ತವೆ ಹಾಗೂ ಅಧಿಕ ಇಳುವರಿ ಕೊಡಬಲ್ಲವು. ರೈತರು ಅಧಿಕ ಇಳುವರಿ ಕೊಡುವ ಗಿಡಗಳನ್ನು, ತಮ್ಮ ತೋಟದಲ್ಲೇ ಗುರುತಿಸಿಕೊಂಡು ಈ ವಿಧಾನಗಳಿಂದ ಸಸಿಗಳನ್ನು ಪಡೆಯಬಹುದು. ಇವುಗಳಲ್ಲಿ ರೆಂಬೆಗಳಿಂದ ಬೇರುಬರಿಸುವ ವಿಧಾನ, ಗೂಟಿ ವಿಧಾನ, ರೆಂಬೆಗಳನ್ನು ಮಣ್ಣಿನಲ್ಲಿ ಊರಿ ಬೇರು [...]

ಸಪೋಟ ಮತ್ತು ಸೀಬೆ :ಭಾಗ-೧,ಸಪೋಟ-೩.ಸಸ್ಯಾಭಿವೃದ್ಧಿ

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೧,ಸಪೋಟ-೩.ಸಸ್ಯಾಭಿವೃದ್ಧಿ

ಸಪೋಟದಲ್ಲಿ ಅಧಿಕ ಇಳುವರಿ ಪಡೆಯಲು ಉತ್ತಮ ಗುಣಮಟ್ಟದ ಸಸಿಯ ಆಯ್ಕೆ ಅತಿ ಮುಖ್ಯ. ಸಸಿಗಳನ್ನು ಪಡೆಯಲು ಇರುವ ಎರಡು ಮುಖ್ಯ ವಿಧಾನಗಳೆಂದರೆ : ಬೀಜ ಪದ್ಧತಿ ಮತ್ತು ನಿರ್ಲಿಂಗ ಪದ್ಧತಿ. ಮೊದಲನೆಯ ವಿಧಾನದಿಂದ ನಿಧಾನವಾಗಿ ಫಲಕ್ಕೆ ಬರುವ ದೊಡ್ಡ ಮರಗಳನ್ನು ಪಡೆಯಬಹುದಾದರೆ ಎರಡನೆಯ ವಿಧಾನದಲ್ಲಿ ತಾಯಿ ಗಿಡಗಳನ್ನೇ ಹೋಲುವ, ಹೆಚ್ಚು ಇಳುವರಿ ಕೊಡಬಲ್ಲ, ಗಿಡ್ಡ ಮರಗಳನ್ನು ಪಡೆಯಬಹುದು. ಗೂಟಿ ಪದ್ಧತಿಯಲ್ಲಿ ರೆಂಬೆಗಳಲ್ಲಿ ಬೇರು ಬರುವಂತೆ ಮಾಡಲು ರೆಂಬೆಗಳನ್ನು ಬಗ್ಗಿಸಿ ನೆಲದಲ್ಲಿ ಊರಲಾಗುವುದು ಕಸಿ ಪದ್ಧತಿಯಲ್ಲಿ ಸಾಮೀಪ್ಯ ಕಸಿ, [...]

ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೧೦. ಪ್ರಭೇದ ಮತ್ತು ತಳಿಗಳು

Wednesday, March 20th, 2013 ಸಪೋಟ ಮತ್ತು ಸೀಬೆ :ಭಾಗ-೨, ಸೀಬೆ-೧೦. ಪ್ರಭೇದ ಮತ್ತು ತಳಿಗಳು

ಸೀಬೆ ಬಲಿಷ್ಟವಾದ ಮಧ್ಯಮ ಗಾತ್ರದ ಸಸ್ಯ. ವರ್ಷದಲ್ಲಿ ೩ ಸಾರಿ ಹೂ ಬಿಟ್ಟು ಕಾಯಾಗುವ ಇದರ ಹಣ್ಣಿನ ಗಾತ್ರ, ಬಣ್ಣ, ಆಕಾರ, ರುಚಿ, ವಾಸನೆಯಲ್ಲಿ ವೈವಿಧ್ಯತೆ ಇದೆ. ೧೫೦ ಕ್ಕಿಂತ ಹೆಚ್ಚು ಪ್ರಭೇದಗಳುಳ್ಳ ಇದರಲ್ಲಿ ಕಾಡು ಸೀಬೆಯಿಂದ ಹಿಡಿದು ಅಲಹಾಬಾದ್ ಸಫೇದ, ಸರ್ದಾರ್‌ (ಲಕ್ನೋ-೪೯) ಮುಂತಾದ ಹತ್ತಾರು ತಳಿಗಳು ಜನಪ್ರಿಯವಾಗಿವೆ. ವಿವಿಧ ರಾಜ್ಯಗಳಲ್ಲಿ ತಳಿಗಳ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದ್ದು ಸೀಬೆಯಲ್ಲಿ ಅಧಿಕ ಇಳುವರಿ ಕೊಡಬಲ್ಲ ಮಿಶ್ರತಳಿಗಳ ಕಾಲ ದೂರವೇನಿಲ್ಲ. ಸೀಬೆ ಗಿಡದ ನಾನಾ ಭಾಗಗಳ ವರ್ಣನೆಯೊಂದಿಗೆ ವಿವಿಧ [...]

ಜೇನು ಕೃಷಿ : ಆಧಾರ ಗ್ರಂಥಗಳು

Tuesday, January 10th, 2012

ಪುಟ್ಟರುದ್ರಯ್ಯ, ಎಂ., ಕೀಟವಿಂಗಡಣೆ, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರು, ೧೯೭೧. Abrol, D. P., Bees and Beekeeping in India, Kalyani Publishers, Ludhiana, India, 1996 Bailey, L., Honeybee Pathology, Academic Press, London, UK, 1981. Crance, E., Bees and Beekeeping Science, Practice and World Re – sources. Heinemann Newnes, Oxford. Uk. 1990 Grout, R. A., The Hive [...]

ಜೇನು ಕೃಷಿ : ಗ್ರಾಮೀಣ ಅಭಿವೃದ್ಧಿಯಲ್ಲಿ ಜೇನುಕೃಷಿ

Tuesday, December 13th, 2011

ಭಾರತದಲ್ಲಿ ಶೇಕಡಾ ೭೦ ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಕೃಷಿಯೇ ಗ್ರಾಮೀಣ ಜನರ ಮುಖ್ಯ ಕಸುಬು. ಭಾರತವು ಜೇನುಕೃಷಿಗೆ ಅಗತ್ಯವಾದ ಹವಾಮಾನ ಮತ್ತು ಸಸ್ಯ ಸಂಪತ್ತನ್ನು ಹೊಂದಿದ್ದು ಜೇನುಕೃಷಿಯನ್ನು ಉನ್ನತ ಮಟ್ಟದಲ್ಲಿ ಮಾಡಬಹುದಾಗಿದೆ. ಗ್ರಾಮೀಣ ಪ್ರದೇಶದ ಜನತೆಗೆ ತಮ್ಮ ಕೃಷಿ ಮತ್ತು ಇತರ ಕಸಬುಗಳಿಂದ ದೊರೆಯುವ ಆದಾಯವು ತಮ್ಮ ಜೀವನಕ್ಕೆ ಸಾಲದೆ ಅರ್ಥಿಕವಾಗಿ ತುಂಬಾ ಹಿಂದುಳಿಯಲು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ದಿನನಿತ್ಯದ ಕೃಷಿ ಕಸುಬುಗಳ ಜೊತೆಗೆ ಜೇನುಕೃಷಿಯನ್ನು ಉಪಕಸುಬಾಗಿ ಪ್ರಾರಂಭಿಸಿದಲ್ಲಿ ಆರ್ಥಿಕ ಮಟ್ಟ ಸ್ವಲ್ಪ ಮಟ್ಟಿಗಾದರೂ [...]

ಜೇನು ಕೃಷಿ : ಪಾರಿಭಾಷಿಕ ಶಬ್ದಕೋಶ

Tuesday, December 13th, 2011

  ಅಂಟುಪದಾರ್ಥ Serumen ಅಂಡಾಶಯ Ovary ಅಡಿಮಣೆ Bottom board ಅನುವಂಶೀಯ Herediary ಅನಿಶೇಚಕ Parthenogenesis ಆಧಾರ ಸ್ಥಂಭ Hivestand ಆಮ್ಲ Acid ಆಹಾರ ಬಟ್ಟಲು Feeder ಉಪಕುಟುಂಬ Sub Family ಉಪ್ಪಿನ ದ್ರಾವಣ Saline ಉಷ್ಣವಲಯ Tropical ಉಸಿರುನಾಳ Trachea ಎದೆ Thorax ಎರಿ Comb ಕಣ Cell ಕಡಜ Wasp ಕಶೇರುಕ Vertabrate ಕಳೇನಾಶಕ Weedicide ಕಾವಲುಗಾರ Guard ಕ್ಷಾರೀಯ Alkaline ಕಿಣ್ವ Enzyme ಜೇನು ಕುಟುಂಬ Bee colony ಕೀಟನಾಶಕ Insecticide ಕುಡಿಮೀಸೆ [...]

ಜೇನು ಕೃಷಿ : ಜೇನುಕೃಷಿ ಪ್ರಾರಂಭಿಸುವಿಕೆ ಮತ್ತು ನಿರ್ವಹಣೆ

Tuesday, December 13th, 2011 ಹುತ್ತದ ಕೋವೆಯೊಂದರಿಂದ ಪೆಟ್ಟಿಗೆಗೆ ತುಡುವೆ ಜೇನನ್ನು ವರ್ಗಾಯಿಸುವ ಹಂತಗಳು

ಜೇನು ಕೃಷಿ ತರಬೇತಿ : ಜೇನುಕೃಷಿಯನ್ನು ಪ್ರಾರಂಭಿಸುವ ಪ್ರತಿಯೊಬ್ಬರಿಗೂ ಅವುಗಳ ನಡುವಳಿಕೆಗಳು, ಅವಶ್ಯಕ ಆಹಾರ ಸಸ್ಯಗಳು, ಮತ್ತು ನಿರ್ವಹಿಸುವ ಕ್ರಮಗಳ ಬಗ್ಗೆ ತಿಳಿದಿರಬೇಕು. ಈ ಮಾಹಿತಿಯನ್ನು ಹತ್ತಿರದ ಪರಿಣಿತ ಜೇನುಕೃಷಿಕರು ತಮ್ಮ ಪ್ರದೇಶದ ಜೇನುಕೃಷಿ ಅಧಿಕಾರಿಗಳಿಂದ ಪಡೆಯಬಹುದಾದರೂ ಸರ್ಕಾರ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ನಡೆಸುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಭವವನ್ನು ಪಡೆದುಕೊಳ್ಳಬಹುದು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನುಕೃಷಿ ವಿಭಾಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಡಿಯಲ್ಲಿ ಒಂದು ವಾರದ ಜೇನುಕೃಷಿ ವಿಭಾಗವು ಕೇಂದ್ರ [...]

ಜೇನು ಕೃಷಿ : ಜೇನುಕೃಷಿ ತಾಂತ್ರಿಕತೆಗಳು

Tuesday, December 13th, 2011 ಪಾಲಾಗಿರುವ ಒಂದು ಜೇನು ಕುಟುಂಬ

ಜೇನುನೊಣಗಳು ತಮ್ಮ ಕುಟುಂಬಗಳ ಕಾರ್ಯಗಳನ್ನು ತಾವೇ ನಿರ್ವಹಿಸಿದರೂ ಕೆಲವು ತಂತ್ರಜ್ಞಾನಗಳಿಂದ ಕುಟುಂಬಗಳ ಗುಣಮಟ್ಟವನ್ನು ಹೆಚ್ಚಿಸಬಹುದಾಗಿದೆ. ಅವುಗಳಲ್ಲಿ ಕುಟುಂಬ ಪಾಲಾಗುವಿಕೆಯ ನಿಯಂತ್ರಣ, ಆಹಾರ ನೀಡುವಿಕೆ, ಕುಟುಂಬಗಳ ವಿಭಜನೆ, ಕುಟುಂಬಗಳನ್ನು ಕುಡಿಸುವುದು. ಜೇನುನೊನಗಳು ಪರಾರಿಯಾಗುವುದು, ತಳಿ ಸುಧಾರಣೆ, ರಾಣಿ ನೊಣ ಬೆಳೆಸುವಿಕೆ, ಕೃತಕ ಗರ್ಭಧಾರಣೆ ಮುಂತಾದವು ಪ್ರಮುಖವಾದವು. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later [...]

ಜೇನು ಕೃಷಿ : ಜೇನುನೊಣಗಳಿಂದ ಪರಾಗಸ್ಪರ್ಶ ಕ್ರಿಯೆ

Tuesday, December 13th, 2011 ಜೇನುನೊಣಗಳಿಂದಾಗುವ ಪರಾಗಸ್ಪರ್ಶ ಕ್ರಿಯೆಯಿಂದ ಬೆಳೆಗಳ ಇಳುವರಿಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತದೆ

ಜೇನುನೊಣಗಳು ಮಾನವನಿಗೆ ನೀಡುತ್ತಿರುವ ವರದಾನವೆಂದರೆ ಜೇನುತುಪ್ಪ ಮತ್ತು ಪರಾಗಸ್ಪರ್ಶ ಸೇವೆ. ಪರಾಗಸ್ಪರ್ಶಕ್ರಿಯೆ ಪ್ರಕೃತಿಯ ದೈವದತ್ತ ಕೊಡುಗೆ. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಹೊಸ ತಳಿಗಳ ಉಪಯೋಗ, ರಸ ಗೊಬ್ಬರಗಳ ಬಳಕೆ, ಬೆಳೆಸಂರಕ್ಷಣೆಯ ವಿಧಾನಗಳು ಮುಂತಾದ ಅನೇಕ ಕೃಷಿ ಕಾರ್ಯಕ್ರಮಗಳು ಬಹಳ ಮುಖ್ಯವಾದುವು. ಅದೇ ರೀತಿ ಪರಾಗಸ್ಪರ್ಶ ಕ್ರಿಯೆಯ ಸೇವೆ ಕೃಷಿ ಉತ್ಪಾದನೆಯಲ್ಲ ಗಣನೀಯ ಪಾತ್ರವಹಿಸುತ್ತದೆ. Blog this! Bookmark on Delicious Digg this post Recommend on Facebook share via Reddit Share with Stumblers [...]

ಜೇನು ಕೃಷಿ : ಜೇನುನೊಣಗಳ ಆಹಾರ ಸಸ್ಯಗಳು

Tuesday, December 13th, 2011 ಆಹಾರ ಸಂಗ್ರಹಣೆಯಲ್ಲಿ ತೊಡಗಿರುವ ಜೇನುನೊಣಗಳು

ಜೇನುನೊಣಗಳು ಪ್ರಮುಖ ಆಹಾರವಾದ ಮಕರಂದ ಮತ್ತು ಪರಾಗವನ್ನು ಸಸ್ಯಗಳಿಂದ ಪಡೆಯುತ್ತವೆ. ಒಂದೊಂದು ಬಾರಿ ಹೂಗಳೇತರ ಭಾಗಗಳಿಂದಲೂ ಮಕರಂದ ಮತ್ತು ಕೆಲವು ಜಾತಿಯ ಕೀಟಗಳು ವಿಸರ್ಜಿಸುವ ಸಿಹಿ ಅಂಟನ್ನು ಸಹಾ ಶೇಖರಿಸುತ್ತವೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಜೇನು ಕೃಷಿ : ಜೇನುನೊಣಗಳ ಸ್ವಾಭಾವಿಕ ಶತ್ರುಗಳು ಮತ್ತು ರೋಗಗಳು

Tuesday, December 13th, 2011 ದೊಡ್ಡ ಮೇಣದ ಪತಂಗ ಮತ್ತು ಅದರ ಮರಿಹುಳು. ಇವುಗಳ ಹಾವಳಿಯಿಂದ ನಾಶವಾಗಿರುವ ಎರಿ

ಜೇನುನೊಣಗಳು ಇತರೆ ಪ್ರಾಣಿಗಳಂತೆ ಸ್ವಾಭಾವಿಕ ಶತ್ರುಗಳಿಗೆ ತುತ್ತಾಗುತ್ತಿರುವುದು ರೋಮನ್ನರ ಕಾಲದಿಂದಲೂ ತಿಳಿದುಬಂದಿದೆ. ಜೇನುನೊಣಗಳ ಶತ್ರುಗಳಲ್ಲಿ ಕಡಜ, ಮೇಣದ ಪತಂಗ, ಇರುವೆ, ಜೇಡ, ಪಕ್ಷಿಗಳು ಹಾಗೂ ಅನೇಕ ಬಗೆಯ ಪರಭಕ್ಷಕ ಕೀಟಗಳು ಸ್ವಾಭಾವಿಕ ಶತ್ರುಗಳಾಗಿದ್ದವೆಂಬ ವರದಿಗಳಿವೆ. ಜೇನುನೊಣಗಳಲ್ಲಿ ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ಏಕಾಣುಜೀವಿಗಳಿಂದಾಗುವ ಅನೇಕ ಬಗೆಯ ರೋಗಗಳನ್ನೂ ಗುರುತಿಸಲಾಗಿದೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about it [...]

ಜೇನು ಕೃಷಿ : ಜೇನುನೊಣಗಳಿಂದ ದೊರೆಯುವ ಉತ್ಪನ್ನಗಳು

Tuesday, December 13th, 2011 ಜೇನು ಕೃಷಿ : ಜೇನುನೊಣಗಳಿಂದ ದೊರೆಯುವ ಉತ್ಪನ್ನಗಳು

ಜೇನುನೊಣಗಳು ಮಾನವನಿಗೆ ನೈಸರ್ಗಿಕ ದ್ರರ ಬಂಗಾರವೆಂದೇ ಪರಿಗಣಿಸಲ್ಪಟ್ಟಿರುವ ಪೌಷ್ಟಿಕವಾದ ಜೇನುತುಪ್ಪವನ್ನು ನೀಡುತ್ತವೆ. ಸರ್ವವ್ಯಾಧಿ ನಿವಾರಕ ಗುಣಗಳುಳ್ಳ ಜೇನುತುಪ್ಪಕ್ಕೆ ಪರ್ಯಾಯವಾದ ಆಹಾರ ಪದಾರ್ಥ ಪ್ರಕೃತಿಯಲ್ಲಿ ಬೇರೊಂದಿಲ್ಲ. ಜೇನುಮೇಣವು ಜೇನುನೊಣಗಳಿಂದ ದೊರೆಯುವ ಮತ್ತೊಂದು ಬಹುಪಯೋಗಿ ವಸ್ತುವಾಗಿದ್ದು ಮೇಣದ ಬತ್ತಿ. ಸೌಂದರ್ಯವರ್ಧಕಗಳು ಮುಂತಾದವುಗಳಲ್ಲಿ ಬಳಸಲಾಗುತ್ತದೆಯಲ್ಲದೆ ಇವುಗಳ ಇತರ ಉತ್ಪನ್ನಗಳಾದ ಜೇನು ಅಂಟು, ಜೇನುವಿಷ, ಪರಾಗ ಮತ್ತು ರಾಜಶಾಹಿ ರಸಗಳೆಲ್ಲವೂ ಜೈವಿಕವಾಗಿ ಕ್ರಿಯಾಶೀಲವಾಗಿದ್ದು ಪರಿಣಾಮಕಾರಿ ಔಷಧೀ ಗುಣಗಳನ್ನು ಹೊಂದಿವೆ. Blog this! Bookmark on Delicious Digg this post Recommend on [...]

ಜೇನು ಕೃಷಿ : ಜೇನುನೊಣಗಳ ಸಂವಹನ ಮತ್ತು ರಕ್ಷಣೆ

Tuesday, December 13th, 2011 ಜೇನುನೊಣಗಳಲ್ಲಿ ಆಹಾರ ಮತ್ತು ಸೂರ್ಯನಿರುವ ದಿಕ್ಕಿನ ಸಂದರ್ಭಕ್ಕನುಗುಣವಾಗಿ ನಡೆಯುವ ಸಂವಹನ ನೃತ್ಯಗಳು

ಜೇನುನೊಣಗಳು ಕುಟುಂಬದ ದೈನಂದಿನ ಚಟುವಟಿಕೆಗಳನ್ನು ಸಂವಹನದ ಮೂಲಕ ನಡೆಸುತ್ತವೆ. ಈ ಕ್ರಿಯೆಯಿಂದ ಗೂಡಿನ ನೊಣಗಳನ್ನು ಪರಸ್ಪರ ಗುರುತಿಸಲು ಮತ್ತು ಆಹಾರದ ಸ್ಥಳಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ನೃತ್ಯಗಳ ಮೂಲಕ ಆಹಾರ ಸಿಗುವ ದೂರ, ದಿಕ್ಕು, ಆಹಾರದ ಗುಣಮಟ್ಟ ಮುಂತಾದವುಗಳನ್ನು ತಿಳಿಯುತ್ತವೆ. ಜೇನುನೊಣಗಳ ನೃತ್ಯಗಳನ್ನು  ಆಸ್ಟ್ರೀಯಾ ದೇಶದ ವಿಜ್ಞಾನಿ ಕಾರ್ಲ್‌ವೊನ್ ಫ್ರಿಶ್ ೧೯೬೭ ರಲ್ಲಿ ಯೂರೋಪಿಯನ್ ಜೇನುನೊಣ ಎಪಿಸ್ ಮೆಲ್ಲಿಫೆರಾ ಪ್ರಭೇದದಲ್ಲಿ ಮೊಟ್ಟ ಮೊದಲ ಬಾರಿಗೆ ತಿಳಿಸಿಕೊಟ್ಟರು. ಇ ವಿನೂತನ ಕೊಡುಗೆಗಾಗಿ ನೊಬಲ್ ಪ್ರಶಸ್ತಿಯನ್ನು ಪಡೆದರು. ಅನೇಕ ನೃತ್ಯಗಳ ಬಗೆಗಿನ [...]

ಜೇನು ಕೃಷಿ : ಜೇನುನೊಣದ ದೇಹ ರಚನೆ

Tuesday, December 13th, 2011 ಜೇನುನೊಣದ ಶರೀರದ ಮುಖ್ಯ ಭಾಗಗಳು

ಜೇನುನೊಣಗಳು ಪ್ರಮುಖವಾಗಿ ಹೂಗಳಿಂದ ಮಕರಂದವನ್ನು ಹೀರಲು ಅವಶ್ಯಕವಾದ ಬಾಯಿಯ ಭಾಗಗಳು, ಪರಾಗದ ಶೇಖರಣೆಗೆ ಕಾಲುಗಳಲ್ಲಿ ಪರಾಗ ಬುಟ್ಟಿಗಳು, ಸುಲಭವಾಗಿ ಹಾರಾಡಲು ಹಗುರವಾದ ದೇಹ, ಎರಡು ಜೊತೆ ಪಾರದರ್ಶಕ ರೆಕ್ಕೆಗಳು ಹಾಗೂ ಓಡಾಡಲು ಮೂರು ಕಾಲುಗಳನ್ನು ಹೊಂದಿವೆ (ಚಿತ್ರ ೯). Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ