ವಿ. ಸುಬ್ರಹ್ಮಣ್ಯ ಕೌಶಿಕ್
Friday, April 8th, 2011ಕ್ರಿ.ಪೂ. ಎರಡನೆಯ ಶತಮಾನಕ್ಕೂ ಪೂರ್ವದಲ್ಲಿ ವೈವಿಧ್ಯಮಯವಾದ ನರ್ತನ ಕ್ರಮವೊಂದು ಕರ್ನಾಟಕದ ಸಂಪ್ರದಾಯವಾಗಿದ್ದು, ಕನ್ನಡ ಕವಿ ಪೊನ್ನನು ಅದನ್ನು ಕೈಶಿಕಿ ವೃತ್ತಿಯೆಂದು ಹೆಸರಿಸಿದ್ದಾನೆ. ಕ್ರಿ.ಶ. ಎರಡನೆಯ ಶತಮಾನದಲ್ಲಿ ಚೇರ ರಾಜ ಶೆಂಗುಟ್ಟವನ್ ಎಂಬುವನು ಕನ್ನಡಿಗರ ವೈವಿಧ್ಯ ಪೂರ್ಣವಾದ ನರ್ತನವೊಂದನ್ನು ವೀಕ್ಷಿಸಿದನೆಂದು ಶಾಂತಿ ಪುರಾಣದಲ್ಲಿ ಉಲ್ಲೇಖವಾಗಿದೆ. ಅಂದೆ ಮೇಲೆ ಭರತಾಚಾರ್ಯನ ಕಾಲದಿಂದ ಕ್ರಿ.ಶ. ಹದಿನೇಳನೆಯ ಶತಮಾನದವರೆಗೂ, ಸುಮಾರು ಸಾವಿರದ ಆರುನೂರು ವರ್ಷಗಳವರೆಗೂ, ಏಕ ಪ್ರಕಾರವಾಗಿ, ದಕ್ಷಿಣ ಭಾರತದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ನೃತ್ಯ ಪ್ರಕಾರಗಳು ಸಹ ಕರ್ನಾಟಕ ನೃತ್ಯ [...]



