ಕೋಮಟಿಗರ ಸಂಸ್ಕೃತಿಯಲ್ಲಿ ಮಹಿಳೆ
Tuesday, August 16th, 2011ಮುಹೂರ್ತದ ನಂತರ ಭೂಮ (ಭಾಮ) ಅಥವಾ ಪೂಬಮತ ಊಟದ ಪದ್ಧತಿ ಇದೆ. ವಧು-ವರರು ಎದುರು ಬದುರಾಗಿ ಅಥವಾ ಅಕ್ಕಪಕ್ಕದಲ್ಲಿ ಊಟಕ್ಕೆ ಕೂತು ಅವರು ಇವರಿಗೆ ಇವರು ಅವರಿಗೆ ತಿನ್ನಿಸುತ್ತಾರೆ. ನವದಂಪತಿಗಳಲ್ಲಿ ಆತ್ಮೀಯತೆಯನ್ನು ಸಲುಗೆಯನ್ನು ಬೆಳೆಸುವಲ್ಲಿ ಇಂತಹ ಕ್ರಿಯೆಗಳು ಸಹಾಯವಾಗುತ್ತವೆ. ತರುವಾಯ ವಸಂತ ಮಾಧವ ಪೂಜೆ ಅಥವಾ ಓಕಳಿ ಆಡುವುದು. ದೊಡ್ಡ ಕೊಳಗಳಲ್ಲಿ ವಸಂತೋದಕ ಅಂದರೆ ಬಣ್ಣದ ನೀರನ್ನು ತುಂಬಿರುತ್ತಾರೆ. ವಧು-ವರರು ಪರಸ್ಪರ ನೀರಾಟ ಆಡಿ, ಜಲಕ್ರೀಡೆ ಮಾಡಿ ಸ್ನಾನ ಮಾಡುತ್ತಾರೆ. ಹರೆಯದ ಹುಮ್ಮಸ್ಸು ಮತ್ತು ಹೆಣ್ಣು ಗಂಡಿನ [...]



