ಅಧ್ಯಾಯ 8 : ಸ್ವಾತಂತ್ರ್ಯೋತ್ತರ ಕರ್ನಾಟಕ ಒಂದು ನೋಟ*
Friday, April 1st, 2011[* ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 2007ರಲ್ಲಿ ಡಾ.ಹಿ.ಚಿ.ಬೋರಲಿಂಗಯ್ಯ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘‘ಅಭಿವೃದ್ದಿ ಪಥ’ ಎನ್ನುವ ಕೃತಿಯಿಂದ ಡಾ.ಎಸ್.ಚಂದ್ರಶೇಖರ ಅವರ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ. ಇದನ್ನು ಬಳಸಲು ಒಪ್ಪಿಗೆ ನೀಡಿದ ಸಂಪಾದಕರಿಗೆ ಹಾಗೂ ಲೇಖಕರಿಗೆ ಕೃತಜ್ಞತೆಗಳು -ಸಂ.] ಸ್ವಾತಂತ್ರ್ಯ ಗಳಿಸಿಕೊಂಡ ಭಾರತ ಅರವತ್ತರ ಹೊಸ್ತಿಲಿನಲ್ಲಿದೆ. ಕರ್ನಾಟಕ ರಾಜ್ಯವು ಭಾರತದ ಒಂದು ಭಾಗವಾಗಿ ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಭಾಗಿಯಾದರೂ ರಾಜ್ಯದ ಚರಿತ್ರೆಯ ಮೊದಲ ದಶಕ ವಿಚಿತ್ರ ಗೊಂದಲಗಳನ್ನು, ಅನಿಶ್ಚಿತತೆಗಳನ್ನು ಎದುರಿಸಬೇಕಾಯಿತು. ಬ್ರಿಟಿಷ್ ಸಂಕೋಲೆಗಳಿಂದ ಬಿಡಿಸಿಕೊಂಡ ಕರ್ನಾಟಕದ ಜನತೆ ವಿವಿಧ ಸಂಸ್ಥಾನ, ಪ್ರದೇಶಗಳಲ್ಲಿ [...]



