ಸಿಹಿನೀರು ಸೀಗಡಿ ಮತ್ತು ಮೀನು ಸಾಕಣೆ
Tuesday, January 24th, 2012
ಸಿಹಿನೀರು ಸೀಗಡಿ ಮತ್ತು ಮೀನು ಸಾಕಣೆ ಭಾರತದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಸಿಹಿನೀರು ಸೀಗಡಿ ಪ್ರಭೇದಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಮ್ಯಾಕ್ರೋಬೇಕಿಯಂ ರೋಸೆನ್ ಬರ್ಗಿ ಎಂಬ ತಳಿಯು ವಾಣಿಜ್ಯ ಬೆಳೆಗೆ ಸೂಕ್ತವಾಗಿ ಕಂಡುಬಂದಿರುತ್ತದೆ. ಇದು ತನ್ನ ಜೀವಿತದ ಹೆಚ್ಚು ಕಾಲ ಸಿಹಿ ನೀರಿನಲ್ಲಿ ಬೆಳಯಲ್ಪಟ್ಟರೂ ವಂಶಾಭಿವೃದ್ಧಿಯ ಸಮಯದಲ್ಲಿ ಉಪ್ಪುನೀರಿನ ಸಹಯೋಗದೊಂದಿಗೆ ಮರಿಮಾಡುವ ಗುಣಲಕ್ಷಣಗಳನ್ನು ಪಡೆದುಕೊಂಡಿರುತ್ತದೆ. ಇದರ ಕೋಶಾವಸ್ಥೆಯ ಮರಿಗಳು ಉಪ್ಪುನೀರಿನಲ್ಲಿ ಬೆಳೆಯಲ್ಪಟ್ಟು ಅವುಗಳು ಸಣ್ಣ ಮರಿಗಳಾಗುತ್ತಿದ್ದಂತೆ ಸಿಹಿನೀರಿನೊಂದಿಗೆ ಬೆಳೆಯುವ ಗುಣವಿಶೇಷತೆಗಳನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿಯೇ ಇದನ್ನು ಸಿಹಿನೀರು ಸೀಗಡಿ [...]



