ಪುಸ್ತಕಗಳಿಂದ : ಪ್ರಕಾಶನ : ಸಹಜ ಸಮೃದ್ಧ : ಲೇಖಕರು: ಜಿ. ಕೃಷ್ಣಪ್ರಸಾದ್, ಶಿವಾನಂದ ಕಳವೆ : ಅನ್ನ ಕೊಡುವ ಅನನ್ಯ ತೋಟ ತದ್ರೂಪಿ ಕಾಡು

Thursday, March 24th, 2011

ಕಾಡಿನಲ್ಲಿ ಕೃಷಿಕರು, ಭತ್ತದ ತೆನೆಯಲ್ಲಿ ಗಿಳಿಹಿಂಡುಹೊಲದಲ್ಲಿ ಗಿಡ ಬೆಳೆಸಿರಿ, ಕೃಷಿ ಅರಣ್ಯದಿಂದ ಅಭಿವೃದ್ಧಿ ಸಾಧಿಸಿರಿ ಎಂದು ಮಾತಾಡುತ್ತಿದ್ದೆ. ರೈತರೊಬ್ಬರು ತಕ್ಷಣ ಎದ್ದು ನಿಂತರು. ಹೊಲದಾಗ ಯಾವ ಗಿಡಾನೂ ಇರಬಾರ್‌ದ್ರಿ. ಅದ್ಕೆ ನಾನು ಎಲ್ಲಾ ಕಡಿದು ಹಾಕೇನ್ರೀ ಎಂದು ಹಸಿರು ಸಂಹಾರದ ಸಾಹಸ ಹೇಳಿದರು. ಉತ್ತರ ಕನ್ನಡದ ಬನವಾಸಿಯ ಅಂಡಗಿ ಹಳ್ಳಿಯ ಕೃಷಿಕರಿಗೆ ಕಾಡು ಗಿಳಿಗಳ ಮೇಲೆ ಸಿಟ್ಟು. ಹೊಲದ ಗಿಡದಲ್ಲಿ ಕುಳಿತ ಗಿಳಿಗಳು ಪಟ್ಟನೆ ಭತ್ತದ ಕದಿರನ್ನು ಹೊತ್ತು ಒಯ್ಯುತ್ತವೆ. ದಿನವಿಡೀ ಹೊಲದ ತೆನೆ ಗಿಳಿಪಾಲಾಗುತ್ತದೆ ಎಂಬ [...]

ಪುಸ್ತಕಗಳಿಂದ: ಪ್ರಕಾಶನ : ಸಹಜ ಸಮೃದ್ಧ: ಲೇಖಕರು: ಜಿ. ಕೃಷ್ಣಪ್ರಸಾದ್, ಶಿವಾನಂದ ಕಳವೆ : ಅನ್ನ ಕೊಡುವ ಅನನ್ಯ ತೋಟ ತದ್ರೂಪಿ ಕಾಡು

Thursday, March 24th, 2011

ಸಹ್ಯಾದ್ರಿಯನ್ನು ಮೀರುವ ಸಸ್ಯಾದ್ರಿ ಮತ್ತದೇ ತುತ್ತೂರಿ. ದೇಶದ ಕೃಷಿರಂಗ ಭಾರೀ ಬಿಕ್ಕಟ್ಟಿನಲ್ಲಿದೆ. ಒಂದು ಬಿಕ್ಕಟ್ಟಿನಿಂದ ಇನ್ನೊಂದು ಬಿಕ್ಕಟ್ಟಿನತ್ತ, ಒಂದು ಕಂಟಕದಿಂದ ಇನ್ನೊಂದು ಕಂಟಕದತ್ತ ಸಾಗುತ್ತಿದೆ. ಒಂದೆಡೆ ಜಾಗತೀಕರಣ ಹಾಗೂ ಮುಕ್ತ ಮಾರುಕಟ್ಟೆಯ ಉದಾರ ನೀತಿಯಿಂದಾಗಿ ಧನಾಡ್ಯ ದೇಶಗಳು ನಮ್ಮ ಕೃಷಿಕರಿಗೆ ಮಾರುಕಟ್ಟೆಯೇ ಇಲ್ಲದಂತೆ ಮಾಡುತ್ತಿವೆ. ಹೈಟೆಕ್ ಕೃಷಿ ಕಂಪನಿಗಳು ಕುಲಾಂತರಿ ತಳಿಗಳನ್ನು ಛೂಬಿಟ್ಟು ನಮ್ಮ ಸಾಂಪ್ರದಾಯಿಕ ರೈತರ ಬಳಿ ಸ್ಥಳೀಯ ತಳಿಗಳೇ ಇಲ್ಲದಂತೆ ಮಾಡುತ್ತಿವೆ. ಇನ್ನೇನು, ಉಚಿತ ನೀರೂ ರೈತರಿಗೆ ಸಿಗದಂತೆ ಅದನ್ನೂ ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಯತ್ನಗಳು [...]

ವಿಯಟ್ನಾಂ ಸ್ಫೂರ್ತಿ, ರಾಜ್ಯಕ್ಕೂ ಬೇಕು ಕೃಷಿ ಏಳ್ಗೆಯ ಕೀರ್ತಿ :ಲೇಖಕರು: ಶಿವಾನಂದ ಕಳವೆ

Sunday, March 20th, 2011

ಗೇರು ಸಮೃದ್ಧಿ ಯೋಜನೆಯಲ್ಲಿ ಐದು ವರ್ಷದ ಹಿಂದೆ ಗೇರು ಕೃಷಿಗೆ ಉತ್ತೇಜನ ನೀಡುವ ಕೆಲಸ  ಆರಂಭವಾಗಿತ್ತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೋಲಾರ,ಬೀದರ್‌ಗಳಲ್ಲಿ ೧೫ ಲಕ್ಷ ಕಸಿಗಿಡಗಳನ್ನು ರೈತರಿಗೆ ಉಚಿತವಾಗಿ ತರಿಸಲಾಯಿತು. ಉಲ್ಲಾಳ ಹಾಗೂ ವೆಂಗುರ್ಲಾ ತಳಿಯ ಸಸಿ ಕೃಷಿಗೇರಿದವು. ಜಲಾನಯನ ಇಲಾಖೆ, ತೋಟಗಾರಿಕಾ ಇಲಾಖೆಯ ತೋಟಗಾರಿಕಾ ಮಿಷನ್ ಯೋಜನೆಗಳಲ್ಲಿ  ಗೇರು ಸಸಿ ಒದಗಿಸುವ ಕೆಲಸ ನಡೆಯಿತು. ಸಸಿ ವಿತರಣೆ, ಕೃಷಿ ಮಾರ್ಗದರ್ಶನ, ಗೇರು ತೋಟಗಳಲ್ಲಿ ಮಣ್ಣು,ನೀರಿನ ಸಂರಕ್ಷಣೆಗೆ ಪ್ರೋತ್ಸಾಹ ದೊರೆತವು. ಒಣ ಭೂಮಿಗಳಲ್ಲಿ ತೋಟಗಾರಿಕೆ [...]

ಮಾತು ಸಾಕು, ನಾವು ಸಸಿ ಬೆಳೆಸಬೇಕು !:ಲೇಖಕರು: ಶಿವಾನಂದ ಕಳವೆ

Sunday, March 20th, 2011

ಜೂನ್  ಬಂದರೆ  ಎಲ್ಲೆಡೆ ಪರಿಸರ  ಮಂತ್ರ. ವಿಶ್ವ ಪರಿಸರ ದಿನಾಚರಣೆ ಬಳಿಕವಂತೂ ಇದಕ್ಕೆ ಹೊಸ ವೇಗ. ಭೂಮಿ ಬಿಸಿಯಾಗುತ್ತಿದೆ, ಜೈವಿಕ ಇಂಧನ ಬಳಕೆ, ಸಾಲುಮರ ಹೀಗೆ ಒಂದಿಲ್ಲೊಂದು  ಪರಿಸರ ಜಾಗೃತಿ ಮಾತು ಮೇಲೇಳುತ್ತವೆ. ನವೆಂಬರ್‌ದ ನಮ್ಮ ಕನ್ನಡದ ಎಚ್ಚರದಂತೆ ಜೂನ್‌ನ  ಹಸುರು ದಿನ!. ಆಚರಣೆ ಸಾಂಕೇತಿಕವಾದರೆ ಅರ್ಥವಿಲ್ಲ. ‘ನಮ್ಮ  ರಾಜ್ಯದಲ್ಲಿ  ಈ ವರ್ಷ ೧೮ಕೋಟಿ ಸಸಿ ನೆಡುತ್ತೇವೆ ‘ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ  ಮಾಧ್ಯಮ ಮುಖೇನ ಈಗಾಗಲೇ ಹೇಳಿದ್ದಾರೆ. ಸಸಿ ನೆಡುವ ಸಂಖ್ಯೆ [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಕೃಷಿ: ಕೃಷಿ ಸಂರಕ್ಷಣೆ:ಊಳುವವರು ಈಗ ಒಡೆಯರಲ್ಲ!

Tuesday, March 15th, 2011

೮೦ ಕಿಲೋ ಭಾರ ಹೊರುತ್ತಾರೆ, ಕಲ್ಲು ಕರಗಿಸುತ್ತಾರೆ, ನೇಗಿಲ ಜತೆ ಪಳಗಿ ಭೂಮಿ ಬಂಗಾರ ಮಾಡುತ್ತಾರೆಂದು ಹಾಡಿ ಹೊಗಳಿದ ಊರಲ್ಲಿ ಕೃಷಿ ದುಡಿಮೆಯ ಮಹತ್ವ ಅರಿಯದಷ್ಟು ನೌಕರಿ ನಂಬಿದ ವಿದ್ಯಾವಂತರಿಗೆ ಅಂಧತ್ವ ಬಂದಿದೆ. ಈಗ ಕೃಷಿ ಹೇಳಿಕೊಳ್ಳಲಾಗದ ವಿಚಿತ್ರ ಸಮಸ್ಯೆಯಲ್ಲಿ ತೊಳಲಾಡುತ್ತಿದೆ. ‘ಪಿತ್ರಾರ್ಜಿತ ಆಸ್ತಿ ಪಾಲು‘ ಎಂದು ಭೂಮಿ ಸಮಸ್ಯೆಯನ್ನು ಕಾನೂನು ದೃಷ್ಟಿಯಲ್ಲಿ ಮಾತ್ರ ನೋಡಲು ನಮ್ಮ ಶಿಕ್ಷಣ ಹೇಳುತ್ತಿದೆ. ಬೆವರಿಳಿಸುವ ಒಕ್ಕಲು ಇರುವ ಭೂಮಿಯಲ್ಲಿ ಈಗೀಗ ದಿನಬೆಳಗಾದರೆ ವಕೀಲರು, ಕೋರ್ಟುಗಳು ಬಂದು ನಿಂತಿವೆ! Blog this! [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಅರಣ್ಯ:ಅರಣ್ಯ:ಕಾಡು ನಾಶ: ಬ್ರಿಟಿಶ್ ಕಾಲದಲ್ಲಿ ಕಾಡು ಕಡಿತ:ಕಾಡುಮರ ಒಯ್ಯಲು ನದಿಯೇ ಮೋಟಾರು!

Tuesday, March 15th, 2011

ನಮಗೆ ಕಾಡೇ ನದಿಗಳ ತಾಯಿ, ಬ್ರಿಟೀಷರಿಗೆ ನದಿಯೇ ಮರ ಒಯ್ಯುವ ಮಾಯೆ! ನದಿಯಂಚಿನ ಕಾಡನ್ನು ದೇವರ ಕಾಡು ಎಂದು ನಾವು ಪೂಜಿಸಿದೆವು, ಮರ ಬೆಳೆದು ಕಟಾವಾದ ಬಳಿಕ ಸಾಗಣೆಗೆ ನದಿ ಅನುಕೂಲ ಎಂದು ಅವರು ಸಾಗವಾನಿ ನೆಡುತೋಪಿಗೆ ನೆಲ ಆಯ್ಕೆಗೆ ನದಿ ಕಣಿವೆಗೆ ಪ್ರಾಶಸ್ತ್ಯ ನೀಡಿದರು! ಹೀಗಾಗಿ ನಮ್ಮ ನದಿಯಂಚಿನಲ್ಲಿ  ಸಾಮಿಲ್, ನೆಡುತೋಪು ವ್ಯಾಪಿಸಿದವು. ಅರಣ್ಯ ಕಾರ್ಯ ಯೋಜನೆ ರೂಪಿಸುವಾಗ ಮುಂದಿನ ೪೦-೫೦ ವರ್ಷಕ್ಕೆ ಮರ ಎಷ್ಟು ಬೆಳೆಯುತ್ತದೆಂಬುದನ್ನು  ಲೆಕ್ಕ ಹಾಕಲು ಬ್ರಿಟೀಷರು ಜಾಣರಿದ್ದರು, ಆದರೆ ಮರ [...]

ಪುಸ್ತಕಗಳಿಂದ : ಶಿವಾನಂದ ಕಳವೆ: ಕೃಷಿ: ಕೃಷಿ: ತಳಿ ಸಂರಕ್ಷಣೆ: ವಿವಿಧ ತಳಿ ಸಂಗ್ರಹ:ಸಸ್ಯ ಸಂಪಾದನೆ, ಕೃಷಿ ಆರಾಧನೆ!

Tuesday, March 15th, 2011

ಕೃಷಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಲ್ಲಿ ಸಸ್ಯ ತಳಿ ಸಂಗ್ರಹ ಮಾಡುತ್ತಾರೆ. ಸರಕಾರಿ ಹಣದಲ್ಲಿ ಬೆಳೆಸಿದ ಆ ತೋಟದಲ್ಲಿ ಯೋಜನೆ ಬಂದಾಗಷ್ಟೇ ಕೃಷಿ ಆಸಕ್ತಿ ಕಾಣುತ್ತದೆ. ಭೇಟಿ ನೀಡಿದ ಕೃಷಿಕರಿಗೆ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆ ಕೂಡಾ ಹಲವೆಡೆ ಇರುವದಿಲ್ಲ. ಆದರೆ ಕೃಷಿ ಸಾಧಕರ ಮನೆಗೆ ಹೋದರೆ ಅಪರೂಪದ ಪಾಠದ ಜತೆಗೆ ಆತಿಥ್ಯವೂ ಇರುತ್ತದೆ. ಒಂದು ಒಳ್ಳೆಯ ಹವ್ಯಾಸಕ್ಕೆ ನಾಡಿನ ತುಂಬ ಗೆಳೆಯರನ್ನು ಸಂಪಾದಿಸುವ ಶಕ್ತಿಯಿರುತ್ತದೆ. ಯಾವುದೋ ಹಳ್ಳಿ ಮೂಲೆಯಲ್ಲಿ ಬದುಕಿದ್ದು ನಾಡು ಹೆಮ್ಮೆ ಪಡುವ ವರ್ಚಸ್ಸು ದೊರೆಯುತ್ತದೆ. [...]

ಪುಸ್ತಕಗಳಿಂದ : ಶಿವಾನಂದ ಕಳವೆ: ಕೃಷಿ: ಬದುಕು:ಮಕ್ಕಳಿಗೆ ಕೃಷಿ ಜ್ಞಾನ:ಗ್ರಾಮೀಣ ಬದುಕು:ಅಡವಿ ಊರಿನ ಸಸ್ಯ ಪಾಠ

Tuesday, March 15th, 2011

ಕರ್ನಾಟಕದಲ್ಲಿ ಅರಣ್ಯ ಇಲಾಖೆ ದೊಡ್ಡ ಜಮೀನ್ದಾರ! ಸರಕಾರಿ ಹಣ ಖರ್ಚು ಮಾಡಿ ಗಿಡ ಬೆಳೆಸಿ ಕೋಟಿ ಆದಾಯ ತೋರಿಸಿದ್ದೇ ಅರಣ್ಯ ಇಲಾಖೆಯ ಸಾಧನೆಯಾಗುವದಿಲ್ಲ. ಮರ ಕಡಿದು ಲಾರಿ ಏರುವ ಮುಂಚೆ ಸಸಿ ಬೆಳೆಸಿದ ಅನುಭವ ಪಾಠ ಹೇಳಬೇಕು. ನಾಟಿಯಿಂದ ಕಟಾವುವರೆಗಿನ ಕತೆ ಈಚೆ ಬರಬೇಕು. ಕೃಷಿ ಸಾಧಕರ ಮನೆಗೆ ಹೋದರೆ ಸಿಗುವ ಮಾಹಿತಿಯ ಹಾಗೇ ಇಲಾಖೆಯ ವಲಯ ಕಚೇರಿಗಳಲ್ಲಿ, ನೆಡುತೋಪು ಫಲಕಗಳಲ್ಲಿ ಮಾಹಿತಿ ಪ್ರದರ್ಶನವಾಗಬೇಕು. ಇದರಲ್ಲಿ ನಿಜವಾದ ಹಸಿರು ಲಾಭವಿದೆ. Blog this! Bookmark on Delicious [...]

ಪುಸ್ತಕಗಳಿಂದ : ಶಿವಾನಂದ ಕಳವೆ: ವೈದ್ಯಕೀಯ: ವೈದ್ಯಕೀಯ: ಅರಣ್ಯ: ನಾಟಿ ವೈದ್ಯರು: ಗಿಡಮೂಲಿಕೆಗಳು:ಮೂಲಿಕಾ ವೈದ್ಯರ ಮಾ(ಗಾ)ಯದ ಕತೆಗಳು

Tuesday, March 15th, 2011

‘ಔಷಧದ ಗಿಡ ಎಲ್ಲರಿಗೂ ತೋರಿಸಿದ್ರೆ ಔಷಧದ ಗುಣ ಮಾಯವಾಗ್ತದೆ!‘ ಅಜ್ಜ, ಅಪ್ಪ ಹೇಳುತ್ತಿದ್ದ ಮಾತುಗಳು ನೆನಪಾದವು. ಯೋಚಿಸುತ್ತ ದಿಬ್ಬದಲ್ಲಿ ನಿಂತರು, ಮುಂದಿನ ಕ್ಷಣಾರ್ಧದಲ್ಲಿ ದನಕರುಗಳ ಔಷಧಕ್ಕೆ ಬೇಕಿದ್ದ ಶಿವಣೆ ಗಿಡ ಬುಲ್ಡೋಜರ್ ಅಲುಗಿಗೆ ಸಿಲುಕಿ ಬೇರು ಸಹಿತ ಕಿತ್ತು ಬಿತ್ತು! ‘ಹೊಟ್ಟೆಯೊಳಗೆ ಭಾರೀ ಸಂಕಟವಾಯ್ತು, ನನ್ನ ಎದೆ ಮೇಲೆ ಬುಲ್ಡೋಜರ್ ಬಂದಂಗೆ ಆಯ್ತು!‘ ಒಂದು ಕಾಡು ಗಿಡದ ಸಾವು ನೆನಪಿಸಿಕೊಂಡು ಗೌಡರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. Blog this! Bookmark on Delicious Digg this post [...]

ಪುಸ್ತಕಗಳಿಂದ : ಶಿವಾನಂದ ಕಳವೆ: ಕೃಷಿ: ಕೃಷಿ: ನಾಟಿ ಬೆಳೆಗಳು: ಬೆಳೆ ವೈವಿಧ್ಯ:ನಾಟಿ ಬೆಳೆಗಳಲ್ಲಿ ಪರ್ಯಾಯ ಹುಡುಕಾಟ

Tuesday, March 15th, 2011

ಎಲ್ಲೆಡೆಯೂ ಸಿಗುವ ಬಟಾಟೆ ಬೆಂಗಳೂರಿನಲ್ಲಿ, ಮೈಸೂರಿನಲ್ಲಿ, ಹರಪನಹಳ್ಳಿಯಲ್ಲೂ ಬೆಳೆಯುವದರಲ್ಲಿ ವಿಶೇಷವಿಲ್ಲ, ಬಯಲು ಸೀಮೆಯಲ್ಲಿ ದೊರೆಯುವ ಖಾರದ ಈರುಳ್ಳಿ, ಸಿಹಿಸಿಹಿ ರುಚಿಯ ಉತ್ತರ ಕನ್ನಡದ ಹಂದಿಗೋಣದ ಈರುಳ್ಳಿ ಪ್ರತ್ಯೇಕವಾಗಿ ಮಾರುಕಟ್ಟೆಯಲ್ಲಿ ನಿಲ್ಲುವಲ್ಲಿ ಧನಾತ್ಮಕ ಅಂಶವಿದೆ. ಕೃಷಿ ವಿಧಾನ, ಮಾರುಕಟ್ಟೆ ಆಧಾರಿತವಾಗಿ ಬೆಳೆ ಆಯ್ದುಕೊಳ್ಳುವಾಗ ಸಹಜವಾಗಿ ಎಲ್ಲರೂ ಒಪ್ಪಿಕೊಂಡ ಮೊನೋಕಲ್ಚರ್ ಕೃಷಿಗೆ ಅಂಕ ದೊರೆಯುತ್ತದೆ. ಈ ನೆಲದ ಸತ್ವ ಹೀರಿ ಬೆಳೆಯುವ ಬೆಳೆ ಇನ್ನುಳಿದ ತಳಿ ರುಚಿಗಳಿಗಿಂತ ಎದ್ದು ನಿಲ್ಲುವಾಗ ಪರ್ಯಾಯದ ದಾರಿಗಳನ್ನು ಇಂತಹ ಫಲಗಳಲ್ಲಿ ಹುಡುಕುವ ಯತ್ನ ಹೆಚ್ಚಬೇಕು. [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಕಂಪ್ಯೂಟರ್ ಊಟಃಊಟದ ತಟ್ಟೆಯಲ್ಲಿ ಸಾಲು ಸವಾಲು!

Tuesday, March 15th, 2011

ಶೈಕ್ಷಣಿಕ ಪ್ರಗತಿ ಏರುತ್ತಿರುವಂತೆ ಕೃಷಿಯೇತರ ಕ್ಷೇತ್ರಗಳೆಡೆಗೆ ನಗರ ವಲಸೆ ಹೆಚ್ಚಿದೆ. ಮಾಹಿತಿ ತಂತ್ರಜ್ಞಾನ ಕ್ರಾಂತಿ ಬಳಿಕವಂತೂ  ಗ್ರಾಮೀಣ ಯುವಪಡೆ ಸಾಫ್ಟವೇರ್ ಹಿಂದೆ ಓಡತೊಡಗಿತು. ಒಂದು ಎಕರೆ ಕೃಷಿಯಲ್ಲಿ ವರ್ಷಕ್ಕೆ ನಿವ್ವಳ ೫೦ ಸಾವಿರ ಉಳಿಯದಿದ್ದಾಗ ಮಾಸಿಕ ೪೫-೫೦ಸಾವಿರ ಏಣಿಸುವ ಕಂಪ್ಯೂಟರ್ ಮಕ್ಕಳು ಪರಂಪರೆ ಕೃಷಿಯನ್ನು ತೂಕಕ್ಕೆ ಒಡ್ಡಿದರು! ಒಟ್ಟೂ ಆದಾಯ, ಖರ್ಚಿನ ತುಲನೆಯಲ್ಲಿ ಬೇಸಾಯ ಬಡವಾಯಿತು. ಮುಗ್ದತೆ, ಪರಿಶ್ರಮ, ಸಹಬಾಳ್ವೆ ನೋಟ ಕ್ಷೀಣಿಸಿದವು, ಗೆಲ್ಲುವ ಜಿದ್ದಿನಲ್ಲಿ ಜಗಳ ಹುಟ್ಟಿದವು. ಗಿಡ ಗೆಳೆತನದಲ್ಲಿ ನೆಮ್ಮದಿ ಕಂಡವರು ಒತ್ತಡಗಳಲ್ಲಿ ನರಳಿದರು, [...]

ಪುಸ್ತಕಗಳಿಂದ : ಶಿವಾನಂದ ಕಳವೆ: ಅರಣ್ಯ:ಅರಣ್ಯ: ಮರಗಳ ವಿವಿಧ ಉಪಯೋಗಗಳು: ಬಹೂಪಯೋಗಿ ಮರಗಳುಕಡಿದವರಿಗೆ ಒಲಿದ ಅಡ’ವಿ’ಜ್ಞಾನ!

Tuesday, March 15th, 2011

ಮನೆಯ ಪ್ರಧಾನ ಬಾಗಿಲಿಗೆ ಹಲಸು, ಅಡಿಪಟ್ಟಿಗೆ ಹುನುಗಲು, ಕಿಟಕಿ ಬಾಗಿಲಿಗೆ ಬೆಟ್ಟಹೊನ್ನೆ, ಕಂಬಕ್ಕೆ ಹಲಸು, ಬೀಟೆ, ತೊಲೆಗೆ ಮತ್ತಿ, ನಂದಿ ಮರದಿಂದ ಪಕಾಸು ಹಾಗೂ ರೀಪು ತಯಾರಿ. ಮನೆಯ ಕೋಳುಕಂಬ ಹಾಗೂ ಎಳೆಗೆ ಹುನಾಲು  ಮರ. ಮಲಗುವ ಮಂಚಕ್ಕೆ ಕಾಸರಕ ಹೀಗೆ  ಮಲೆನಾಡಿನಲ್ಲಿ ೩೦ ವರ್ಷಗಳ ಹಿಂದೆ ಒಂದು ಮನೆಗೆ ಬಳಸುತ್ತಿದ್ದ  ಕಟ್ಟಿಗೆಗಳ ವಿವರ ಸಂಗ್ರಹಿಸಿದರೆ ಅವು ಕಾಡಿನ ರಹಸ್ಯ ಹೇಳುವಷ್ಟು  ಪ್ರಭಾವಿಯಾಗಿವೆ. Blog this! Bookmark on Delicious Digg this post Recommend on [...]

ಪುಸ್ತಕಗಳಿಂದ : ಶಿವಾನಂದ ಕಳವೆ:ಕಂಪ್ಯೂಟರ್ ಊಟ: ಶಿಕ್ಷಣದ ಕನ್ನಡಿ, ಕೃಷಿ ಭವಿಷ್ಯದ ಮುನ್ನುಡಿ!

Tuesday, March 15th, 2011

ಸೋಲಿಗರ ಪೋಡಿನ ಅಜ್ಜ ಶಾಲೆಗೆ ಬಂದು ಗಿಡಮೂಲಿಕಾ ಜ್ಞಾನದ ಪಾಠ ಮಾಡುವಾಗ ಕಲಿಯುವ ಸಂಗತಿ ಪ್ಯಾಂಟು ಹಾಕಿದ ಮೇಷ್ಟ್ರಲ್ಲಿ ಮಾತ್ರವಲ್ಲ ಊರಿನ ಜನರಲ್ಲಿಯೂ ಇದೆ ಎಂಬ ಕಲ್ಪನೆ ಮೂಡಲು ಸಾಧ್ಯವಾಯಿತು. ಶಾಲಾ ಶಿಕ್ಷಣದಲ್ಲಿಯೂ ಈಗ ಆಗಬೇಕಾದುದು ಇದೇ ಕೆಲಸ, ಊರಿನ ಭೂಮಿಯಲ್ಲಿ ಅರಿಯುವ ಅವಕಾಶ ತೋರಿಸುವದು ಮುಖ್ಯ ಗುರಿ. ಆಗ ಅನ್ನದ ವೃತ್ತಿಯನ್ನು ಅಭಿಮಾನದಿಂದ ನೋಡಲು ಮನಸ್ಸಿಗೆ ಸಾಧ್ಯವಾಗುತ್ತದೆ. ‘ಭಾರತದ ಕೃಷಿಕರು ಬಡವರು……ಅವರು ಬೆವರಿಳಿಸಿ ದುಡಿಯುತ್ತಾರೆ‘ ಎಂದು ಕಾಲದ ಪಾಠ ಓದುತ್ತಿದ್ದರೆ ನೆಲದ ಪ್ರೀತಿ ರವಷ್ಟೂ ಹುಟ್ಟುವದಿಲ್ಲ, [...]

ಪುಸ್ತಕಗಳಿಂದ : ಶಿವಾನಂದ ಕಳವೆ: ಕೃಷಿ:ಕಂಪ್ಯೂಟರ್ ಊಟ: ಕೃಷಿ ಅರಿವಿನಲ್ಲಿ ಬಾಲ್ಯದ ನೆನಪುಗಳು

Tuesday, March 15th, 2011

ಎತ್ತಿನಗಾಡಿ ದುರಸ್ತಿ ಮಾಡಿಸಿ ಶಿವಣೆ ಮರದ ಹೊಸ ನೊಗ ಮಾಡಿಸಿದ್ದನ್ನು ಕೃಷಿ ವಕ್ತಾರರಂತೆ ಚೋಟುದ್ದದ ಮಕ್ಕಳು ಹೇಳುತ್ತಿದ್ದರು. ಕೂಲಿ ಕೆಲಸ ಮಾಡುವವರ ಹೆಸರು, ತೆಂಗಿನ ಮರದ ಬುಡಕ್ಕೆ ಕಾಸರಕದ ಸೊಪ್ಪು ತಂದವರ ವಿವರಗಳು ತಿಳಿದಿದ್ದವು. ಒಬ್ಬ ಆಳು ದಿನಕ್ಕೆ ಎಷ್ಟು ಹೊರೆ ಸೊಪ್ಪು ಕಡಿದು ದೊಡ್ಡಿಗೆ ತರಬಹುದು ಎಂಬ ಕಲ್ಪನೆಯಿತ್ತು. ಸೊಪ್ಪುಗತ್ತಿ, ಸದೆಗತ್ತಿ, ಹಲ್ಲುಗತ್ತಿ, ಕೈಗೊಡಲಿ, ಧಮಾಸು, ನೇಗಿಲು, ಕೊರಡು, ತಳೆ, ಕೊಕ್ಕೆ ಹೀಗೆ ನೂರಾರು ಕೃಷಿ ಉಪಕರಣ ಜ್ಙಾನವಂತೂ ತೀರ ಸಹಜ ಸಂಗತಿ. ಒಮ್ಮೆ ನಮ್ಮ [...]

ಪುಸ್ತಕಗಳಿಂದ : ಶಿವಾನಂದ ಕಳವೆ: ಕೃಷಿ: ಕೃಷಿ: ಕಬ್ಬು: ಕಬ್ಬು-ಬೆಲ್ಲ:ಸವಿ ಸವಿ ಬೆಲ್ಲಕ್ಕೆ ಸಂಕಷ್ಟದ ಭಾಗ್ಯ:ಸವಿ ಸವಿ ಬೆಲ್ಲಕ್ಕೆ ಸಂಕಷ್ಟದ ಭಾಗ್ಯ

Tuesday, March 15th, 2011

ಇಟಾಲಿಯನ್ ಪ್ರವಾಸಿ ಪಿಯೆತ್ರೊ ಡೆಲ್ಲಾವಲ್ಲೆ ಇಂದಿಗೆ ೩೬೦ ವರ್ಷದ ಹಿಂದೆ ಇಕ್ಕೇರಿ ಅರಸು ವೆಂಕಟಪ್ಪನ ಭೇಟಿಗೆ ಬಂದಿದ್ದರು, ಆಗ ರಾಯಭಾರಿ ವಿಠ್ಠಲ ಶೆಣೈ ಮುಖೇನ ರಾಜನಿಗೆ ಕಬ್ಬು ನೀಡಿದ ದಾಖಲೆಯಿದೆ. ಗಣೇಶ ಚೌತಿ, ಕಾರ್ತೀಕ ಉತ್ಸವಗಳಲ್ಲಿ ಕಬ್ಬು ಅರ್ಪಿಸುವ ನಮ್ಮ ಹಬ್ಬದ ಪರಂಪರೆ ಕೃಷಿ ಹಿನ್ನೆಲೆಯನ್ನು ಸಂಪ್ರದಾಯದ ಜತೆ  ಬೆಸೆದಿದೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about [...]

ಪುಸ್ತಕಗಳಿಂದ : ಶಿವಾನಂದ ಕಳವೆ: ಸಂಸ್ಕೃತಿ: ಕೃಷಿ: ಕೋರ್ಟ್‌ ವ್ಯಾಜ್ಯಗಳು: ಕೋರ್ಟ್‌ ವ್ಯಾಜ್ಯಗಳು:ಕೋರ್ಟ್‌ ಕಲಾಪಕ್ಕೆ ಹೊಲದ ಕಾಳುಗಳು!

Tuesday, March 15th, 2011

‘ಊರಾಗ ಹೊಲ ಊಳಾಕ…. ಆಳು ಸಿಗಂಗಿಲ್ರೀ…. ಕೋರ್ಟ್ ಕೇಸ್ ನೆಡಸಾಕ ಯಜಮಾನ್ರಾಗಿ ನಾವೇ ಬರ್ಬೇಕಲ್ರೀ!‘ ಕಟಕಟೆಯಲ್ಲಿ ನಿಂತವರಿಗೆ ಸಂದಿಗ್ಧವಿದೆ. ”ಹೊಲಕ್ಕೆ ಹೋಗೋದ್‌ಕ್ಕಿಂತ ಬರ್ತಾ ಬರ್ತಾ ಕೋರ್ಟ್ ತಿರುಗೋದು ಜಾಸ್ತಿ ಆತ್ರಿ!‘ ೧೫ ವರ್ಷಗಳಿಂದ ಅಲೆದಾಡಿದ ಹಾನಗಲ್ ರೈತನಿಗೆ ಜ್ಞಾನೋದಯವಾಗಿದೆ. ಆದರೆ ಕೇಸ್ ಬಿಡಲು ಮನಸ್ಸಿಲ್ಲ! ನ್ಯಾಯದ ನಿರೀಕ್ಷೆ, ಗೆದ್ದೇ ಗೆಲ್ಲಬೇಕೆಂಬ ಛಲವಿದೆ. ವಕೀಲರ ವಿಶ್ವಾಸ  ಮತ್ತೆ ಮತ್ತೆ ವಾಯಿದೆಗೆ ಎಳೆಯುತ್ತಿದೆ. ಮಕ್ಕಳ ಶಿಕ್ಷಣ, ಹಿರಿಮಗಳ ಮದುವೆ ಕೂಡಾ ಮರೆತು ನ್ಯಾಯದ ಬಾಗಿಲಲ್ಲಿ ವೃದ್ಧರಾದವರಿದ್ದಾರೆ! Blog this! Bookmark [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಅರಣ್ಯ: ಕೃಷಿ: ಜೇನು: ಜೇನು :ರೈತ ಮಕ್ಕಳಿಗೆ ಹೆಜ್ಜೇನು ಪತ್ರ

Tuesday, March 15th, 2011

ಕಾಡಿನ ದಟ್ಟಣೆ, ವೈವಿಧ್ಯ ಕಡಿಮೆಯಾದ ಈ ಘಳಿಗೆಯಲ್ಲಿ ಹತ್ತಿ ಹೂವುಗಳ ಪರಾಗ, ಪುಷ್ಪರಸದ ಭರ್ಜರಿ ಅಂಗಡಿಗೆ ಜೇನು ದೊಡ್ಡ ಗಿರಾಕಿ. ಹತ್ತಿಯ ಹತ್ತೆಂಟು ಕುತ್ತು ಬಿಡಿಸಿದರೆ ಮಾತ್ರ ಬೆಳೆ ಬಚಾವು. ಜಿಗಿನೊಣ, ಕಾಯಿಕೊರಕ, ಮುರುಟು ರೋಗ ಎಂದು ಪ್ರತಿ ಹಂತವೂ ರೋಗ ರಂಗಸ್ಥಳ. ಬೆಳೆ ಗೆಲ್ಲಲು ಇಲ್ಲಿ ಮಳೆ ಸ್ನಾನದ ಹಾಗೇ ರಾಸಾಯನಿಕಗಳ ಸಿಂಚನ. ಅವನ್ತ್, ಎಡ್‌‌ಮಿಟ್, ಎಂಡೋಸಲ್ಪಾನ್, ಸೂಪರ್ ಕಿಲ್ಲರ್, ಮೊನೊಸಿಲ್, ಎಂಡೋಸಿಲ್, ಪಿನಾಲ್‌ಪಾಸ್‌ಗಳೆಂಬ ಬಜಾರಿನ ಹೊಸಹೊಸ  ಭರವಸೆ! ಅಲ್ಲಿ ನಮ್ಮ ಪುಟ್ಟ ಜೇನಿಗೆ ಸಾವಿನ [...]

ಪುಸ್ತಕಗಳಿಂದ : ಶಿವಾನಂದ ಕಳವೆ :ಸಂಸ್ಕೃತಿ: ಸಂಸ್ಕೃತಿ: ಅರಣ್ಯ: ಭೂತದೈವಗಳ ಆರಾಧನೆ:ಮೌಢ್ಯ-ವಿಜ್ಞಾನ: ಕೀಟಗಳ ಸಮಸ್ಯೆ:ಕಾಡುಗರ್ಭದಲ್ಲಿ ಕೀಟಾರಾಧನೆ!

Tuesday, March 15th, 2011

ಪುಟ್ಟ ಕೀಟಗಳನ್ನು, ಬೆಳೆ ಹಾನಿ ಮಾಡುವ ವನ್ಯ ಜೀವಿಗಳನ್ನು ನಿಯಂತ್ರಿಸುವುದಕ್ಕೆ ಭೂತ ದೈವಗಳ ಆರಾಧನೆಯನ್ನು ಇಂದಿನ ವಿಜ್ಞಾನಯುಗದಲ್ಲಿ ಒಪ್ಪಲು ಸಾಧ್ಯವಿಲ್ಲ. ಅಪ್ಪಟ ಸೈಟಿಂಫಿಕ್ ಜೀವಿಗಳಿಗೆ ಇಂತಹ ವಿಚಾರಗಳ ಪ್ರಸ್ತಾಪ ಕೂಡಾ ಸಿಟ್ಟೇರಿಸಬಹುದು. ಕೀಟನಾಶಕಗಳ ಮುಖೇನ ನಿಯಂತ್ರಿಸಬಹುದಾದುದನ್ನು ಕಲ್ಲು ದೇವರ ಮುಖೇನ ಹೇಗೆ ನಿಯಂತ್ರಿಸುತ್ತಾರೆಂಬ ಪ್ರಶ್ನೆ ಉದಯಿಸಬಹುದು. ಕಾರ್ಯ-ಕಾರಣಗಳನ್ನು ನಂಬಿ ನಡೆಯುವ ವಿಜ್ಞಾನ ಇವು ಮೌಢ್ಯಗಳೆಂದು ಸುಲಭದಲ್ಲಿ ಬದಿಗೆ ತಳ್ಳಬಹುದು. ವಿಜ್ಞಾನ, ತಂತ್ರಜ್ಞಾನ ಎಷ್ಟೇ  ಮುಂದುವರಿದಿದ್ದರೂ ಅದು ಹಳ್ಳಿಯ ರಸ್ತೆ ಬದಲಿಸಬಹುದು, ವಾಹನಗಳಲ್ಲಿ ಮಾರ್ಪಾಟು ಮಾಡಬಹುದು, ಆದರೆ ಹಳ್ಳಿಮನೆಗಳನ್ನು [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಸಂಸ್ಕೃತಿ:ಪರಂಪರೆ:ಹಸು – ಪವಿತ್ರ: ಗೋಪೂಜೆ:ಇಂಗ್ಲೀಷರ ಕಡತದಲ್ಲಿ ‘ಗೋ’ಪುರಾಣ!

Tuesday, March 15th, 2011

ಹಸು  ಎಂದರೆ ಹಿಂದೂಗಳಿಗೆ  ಅಪಾರ ಭಕ್ತಿ, ಎಲ್ಲ ಸಾಕುಪ್ರಾಣಿಗಳಿಗಿಂತ  ಇವಕ್ಕೆ  ಮಹತ್ವದ ಸ್ಥಾನ. ಕಾಮದೇನು ಎಂದು ಗುರುತಿಸಲ್ಪಡುವ ಈ ಪ್ರಾಣಿ  ನಿತ್ಯ  ಪೂಜಿಸಲ್ಪಡುತ್ತದೆ, ವರ್ಷದ ಕೆಲದಿನಗಳಲ್ಲಿ  ವಿಶೇಷ ಉತ್ಸವ ಆಚರಣೆಯಿದೆ. ಬ್ರಿಟಿಶ್ ದಾಖಲೆಯ ಈ ಸಾಲು ಓದಿದರೆ  ಆಕಳ  ಬಗೆಗೆ ಆಂಗ್ಲರು ಏಕೆ ನಿಬಂಧ ಬರೆದಿದ್ದರು ಎಂಬ ಪ್ರಶ್ನೆ ಉದಯಿಸಬಹುದು. ಗೋವಿನ ಬಗೆಗೆ ನಮಗೆ ಭಕ್ತಿ, ಇಂಗ್ಲೀಷರಿಗೆ ಭಯವಿತ್ತು! ನಾಡಿಗೆ ಬರುವವರಿಗೆ ಹಿಂದೂ ಸಂಸ್ಕೃತಿಯಲ್ಲಿನ ಹಸುವಿನ ಸ್ಥಾನ ಪರಿಚಯಿಸುವ ಅನಿವಾರ್ಯತೆ  ಅವರನ್ನು  ಆಗಾಗ ಕಾಡುತ್ತಿತ್ತು. Blog this! [...]

ಪುಸ್ತಕಗಳಿಂದ : ಶಿವಾನಂದ ಕಳವೆ :ಕೃಷಿ: ಕೃಷಿ:ಕೃಷಿ ವಿವಿ ತಜ್ಞರು: ಸಂಶೋಧನೆ ನಿಜಾಂಶ:ಪ್ರಾಧ್ಯಾಪಕರ ದಂಡು ಫಂಡಿನ ಹಿಂದೆ!

Tuesday, March 15th, 2011

‘ನಮ್ಮ ಪ್ರೊಪೆಸರ್‌ಗಳು ಪ್ರಾಜೆಕ್ಟ್ ಮಾಡಬೇಕು‘ ಎಂದು ಪ್ರಾದ್ಯಾಪಕರ ದಂಡನ್ನು ಫಂಡಿನ ಹಿಂದೆ ಓಡಲು ಬಿಟ್ಟ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಿದ್ದಾರೆ. ಆಚೆ ಕಲಿಸಲು ಸಮಯವಿಲ್ಲ, ಸಂಶೋಧನೆ ಕ್ಷೇತ್ರಕಾರ್ಯಕ್ಕೆ ಬಿಡುವಿಲ್ಲದವರು ಕೃಷಿ ಉತ್ಸವ, ಮೇಳಗಳಲ್ಲಿ ಮಾಹಿತಿಗೆ ಗಾಳ ಹಾಕಲು ಹಾಜರಾಗುತ್ತಾರೆ. ಮಧ್ಯಾಹ್ನ ಊಟದ ಖರ್ಚಿಗೆ ದುಡ್ಡಿಲ್ಲವೇನೋ ಎಂಬಂತೆ ವರ್ತಿಸುವ ಈ ಸಂಶೋಧಕರ ಪ್ರೊಜೆಕ್ಟ್ ರಿಪೋರ್ಟ್ ಕಸಿದು ನೋಡಿದರೆ ಹಣ ಬಿಡುವ ಹೈಬ್ರಿಡ್ ತಳಿ ಕಾಣುತ್ತದೆ! Blog this! Bookmark on Delicious Digg this post Recommend on [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಆರ್ಥಿಕತೆ: ಗ್ರಾಮೀಣ ಆರ್ಥಿಕತೆ: ಸಹಕಾರಿ ಸಂಘ:ಸ್ವಸಹಾಯ ಸಂಘಗಳ ಮಾದರಿ:ದೇವರ ಹಣದಲ್ಲಿ ಭಕ್ತರಿಗೆ ಸಾಲ!

Tuesday, March 15th, 2011

ಬಾಂಗ್ಲಾದಲ್ಲಿ ರಿಕ್ಷಾ ಎಳೆಯುವವರ ಸ್ಥಿತಿ ಸುಧಾರಣೆಗೆ ಅಲ್ಲಿನ ಗ್ರಾಮೀಣ ಬ್ಯಾಂಕ ೧೯೮೦ ರಲ್ಲಿ ಸ್ವಸಹಾಯ ಸಂಘ ಸ್ಥಾಪಿಸಿದ್ದನ್ನು ಕೇಳುತ್ತೇವೆ. ಕರಾವಳಿಯ ಸಣ್ಣಪುಟ್ಟ ಗುಡಿಗಳು ಶತಮಾನಗಳಿಂದ ಭಕ್ತರಿಗೆ  ಸಾಲ ನೀಡುತ್ತ ಬಡವರ ಕಷ್ಟ ಪರಿಹರಿಸುತ್ತಿದ್ದ  ವಿಶಿಷ್ಟ ಪರಂಪರೆ ಇಲ್ಲಿದೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಪುಸ್ತಕಗಳಿಂದ : ಶಿವಾನಂದ ಕಳವೆ : ಕಂಪ್ಯೂಟರ್ ಊಟ : ಗ್ರಾಮೀಣ ಆಹಾರ:ಹೈಟೆಕ್ ಸಿಟಿಯಲ್ಲಿ ದೇಸೀ ಜ್ಞಾನಪಾಠ

Tuesday, March 15th, 2011

ಹಳ್ಳಿಯಲ್ಲಿ ತಯಾರಾಗುವ ಮಿಡಿಮಾವಿನ ಉಪ್ಪಿನಕಾಯಿ, ಹಲಸಿನ ಸಂಡಿಗೆ, ತೊಡೆದೇವು, ಹಪ್ಪಳ, ಶ್ಯಾವಿಗೆ, ಅಕ್ಕಿರೊಟ್ಟಿ, ದ್ರವರೂಪದ ಬೆಲ್ಲ, ಹುಣಸೆ ತೊಕ್ಕು ಹೀಗೆ ಆಹಾರ ಉತ್ಪನ್ನಗಳಿಗೆ ಹೆಸರು ಮಾತ್ರದಿಂದ ಜನರನ್ನು ಗೆಲ್ಲುವ ತಾಕತ್ತಿದೆ. ಹಳ್ಳಿಗಾಡಿನ ಮಹಿಳೆಯರು ಅನುಭವ ಮಾರ್ಗದಲ್ಲಿ ಕಂಡುಕೊಂಡ ಆಹಾರ ರುಚಿ ಯಾವ ಪ್ರಚಾರದ ಅಗತ್ಯವಿಲ್ಲದೇ ಮತ್ತೆ ಮತ್ತೆ ಜನರನ್ನು ಸೆಳೆಯಬಲ್ಲದು. ಕೋಕಂ ಜ್ಯೂಸ್, ನೆಲ್ಲಿ ಜ್ಯೂಸ್, ಕರಬೂಜ್ ಜ್ಯೂಸ್, ಎಳ್ಳುನೀರು, ಒಂದೆಲಗದ ತಂಬಳಿ ಸೇರಿದಂತೆ ನೂರಾರು ವಿಧದ ಪಾನೀಯಗಳು ಹಳ್ಳಿಯಲ್ಲಿವೆ. ವಿವಿಧ ಋತುಮಾನಗಳಲ್ಲಿ ಬಳಸುವ ಪಾನೀಯಗಳ ಹಿಂದೆ [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಅರಣ್ಯ: ಅರಣ್ಯ: ಬಿದಿರು-ಹೂ: ಬಿದಿರು:ಹಸುರು ಹೊನ್ನಿಗೆ ಸುಗ್ಗಿ ಸಂಭ್ರಮ

Tuesday, March 15th, 2011

ಮಲೆನಾಡಿಗೆ ಬಂದಿದೆ  ಒಂದು ಬಿದಿರಿನ ಕಾಗದ, ಕಾಡು ಮನೆಯಲ್ಲೀಗ ದುಃಖದ ಸಾಗರ ಎಂಬುದು ಸದ್ಯದ ಸ್ಥಿತಿ. ಹೂವರಳಿ ಒಣಗಿ ಸಾಯುವ ಇದೇ ಬಿದಿರು ಗಳುಗಳು ಮಣ್ಣು ಮೆತ್ತಿಕೊಂಡು ಬಯಲು ಸೀಮೆಯಲ್ಲಿ ಶತಮಾನಗಳಿಂದ ಉಳಿದಿವೆ, ಎಳೆ ಶಿಶುಗಳ ಅಳು ನಿಲ್ಲಿಸುವ ತೊಟ್ಟಿಲಾಗಿವೆ.  ವಿಚಿತ್ರವೆಂದರೆ ಪಶ್ಚಿಮ ಘಟ್ಟದ ಜೀವಜಾಲದ ತೊಟ್ಟಿಲಲ್ಲಿ  ನಕ್ಕು ನಲಿದಾಡಿ ಬೆಳೆದ  ಹೆಮ್ಮೆಯ ಬಿದಿರು ಈಗ ಅಲ್ಲಯೇ  ಹೆಣವಾಗಿ ಮಲಗುತ್ತಿದೆ. Blog this! Bookmark on Delicious Digg this post Recommend on Facebook share [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಕಂಪ್ಯೂಟರ್ ಊಟ: ಅರಣ್ಯೀಕರಣ:ಬೇರು ಬದುಕಿನ ಭೂಗತ ಮುಖಗಳು!

Tuesday, March 15th, 2011

ಜಮಖಂಡಿ, ಬೀಳಗಿ, ರಾಮದುರ್ಗ, ಸವದತ್ತಿ ಪ್ರದೇಶದ ಕಾಡುಗುಡ್ಡ ಅಲೆಯುವಾಗ ರೈತರು  ಬೇರಿನ ಬಗೆಗೆ ಮಾತಾಡುತ್ತಿದ್ದರು. ಕಲ್ಲುಗುಡ್ಡದಲ್ಲಿ ಬೆಳೆಯುವ ಇಲ್ಲಿನ ನೈಸರ್ಗಿಕ ಸಸಿಗಳು ಕಾಂಡ ಬೆಳೆಸುವದಕ್ಕಿಂತ ಹೆಚ್ಚಿನ ಕಾಳಜಿ ಬೇರು ಬೆಳೆಸಲು ನೀಡುತ್ತವೆ! ಆಳಕ್ಕೆ ಬೇರಿಳಿಸಿ ಸದೃಢ ಬೇರು ಹೊಂದಿದ ತರುವಾಯದಲ್ಲಿ ಭೂಗತದಿಂದ ಹೊರಕ್ಕೆ ತಲೆಯಾಡಿಸುತ್ತವೆ. ಬರಗಾಲ, ಬಿಸಿಲಿನ ಪ್ರಖರತೆ ಮಧ್ಯೆ ಬದುಕಿ ಬೆಳೆಯುವ ಸಸ್ಯಜಾಣ್ಮೆ ಇದು. Blog this! Bookmark on Delicious Digg this post Recommend on Facebook share via Reddit Share [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಕಂಪ್ಯೂಟರ್ ಊಟ: ಕೂಡಿ ಬಾಳುವ ಕುಟುಂಬ ಶಕ್ತಿ

Tuesday, March 15th, 2011

ಹತ್ತು ವರ್ಷ ಹಿಂದೆ ಉತ್ತರ ಕನ್ನಡದ ಜೊಯಿಡಾ ತಾಲೂಕಿನ ಡೇರಿಯೇ ಹಳ್ಳಿಗೆ ಹೋಗಿದ್ದೆ. ಅಲ್ಲಿನ ಮನೆಯ ಯಜಮಾನ ಗಣಬಾ ಗಾವಡೆಯಲ್ಲಿ ಕುಟುಂಬದ ಸದಸ್ಯರ ಹೆಸರು ಹೇಳಲು ವಿನಂತಿಸಿದೆ. ಆತ ತಡಬಡಿಸಿದ…. ಏಕೆಂದರೆ ೧೧೪ ಜನರ ಮಹಾ ಕುಟುಂಬ ಅದು! ಇವರ ಮನೆಯ ಮಕ್ಕಳಿಗಾಗಿಯೇ ಅಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿಗಳಿದ್ದವು. ೫೦ ಎಕರೆ ಭತ್ತದ ಗದ್ದೆ, ವರ್ಷಕ್ಕೆ ಮನೆ ಮಂದಿಯ  ಊಟಕ್ಕೆ ೩೫೦ ಕ್ವಿಂಟಾಲ್ ಅಕ್ಕಿ ಬೇಕು. ಮನೆಗೆ ಬಟ್ಟೆ ತರಬೇಕೆಂದರೆ ಯಜಮಾನ ಒಂದೇ ಬಣ್ಣದ [...]

ಪುಸ್ತಕಗಳಿಂದ : ಶಿವಾನಂದ ಕಳವೆ : ಕಂಪ್ಯೂಟರ್ ಊಟ: ‘ಅವಳ’ ಕಣ್ಣೀರು ಒರೆಸಿದ ಸಗಣಿ ತಂ(ಮ)ತ್ರ

Tuesday, March 15th, 2011

ಇಂದು ಗೋಬರ್ ಅನಿಲ ಸ್ಥಾವರ ಸ್ಥಾಪನೆ ಬಳಿಕ ಹೊಗೆ ರಹಿತ ವಾತಾವರಣದಿಂದ ಗ್ರಾಮೀಣ ಮಹಿಳೆಯರ ಶ್ವಾಸಕೋಶಗಳು ಕೊಂಚ ಸುಧಾರಿಸಿಕೊಂಡಿವೆ, ಕಟ್ಟಿಗೆ ಹೊರೆ ಭಾರಕ್ಕೆ ಕ್ಷಯ ಬಡಿದ ಅರಣ್ಯಗಳಿಗೆ ಒತ್ತಡ ಕಡಿಮೆಯಾಗಿ ಪರಿಸರ ಸಂರಕ್ಷಣೆಯ ರಚನಾತ್ಮಕ ಮಾರ್ಗ ಹಳ್ಳಿಗಳಲ್ಲಿ ತೆರೆದುಕೊಂಡಿದೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಪುಸ್ತಕಗಳಿಂದ : ಶಿವಾನಂದ ಕಳವೆ :ದಾಟ್‌ಸಾಲು : ಮಳೆಗಾಲದಲ್ಲಿ ನದಿ ದಾಟುವ ‘ಸಾರ’, ಇದು ಮಲೆನಾಡಿನ ಸಂಪರ್ಕ ಸೇತು

Tuesday, March 15th, 2011

ನಮ್ಮ  ಕಳವೆ ಗ್ರಾಮದ ಅಂಚಿನಲ್ಲಿ ದಬ್ಬೆಹಳ್ಳ ಹರಿದಿದೆ. ಶಿರಸಿ ಲಿಂಗದಕೋ(ಣ)ಳದಲ್ಲಿ ಹುಟ್ಟಿದ ಪುಟ್ಟ  ತೊರೆ, ಇದಕ್ಕೆ ದಬ್ಬೆಹಳ್ಳ ಎಂಬ ಹೆಸರು ಏಕೆ ಬಂತು ಎಂಬುದಕ್ಕೆ ಅಧಿಕೃತ ದಾಖಲೆಗಳಿಲ್ಲ. ಜಲಪಾತದಂತೆ ನೀರು ಧುಮ್ಮಿಕ್ಕುವ ಕೆಲವು ಪ್ರದೇಶಗಳಿದ್ದು ‘ದಬದಬೆ ಹಳ್ಳ’ ಜನರ ಬಾಯಲ್ಲಿ  ದಬ್ಬೆ ಹಳ್ಳವಾಗಿರುವ ಸಾಧ್ಯತೆಯಿದೆ. ಇನ್ನೊಂದು ವಿಶೇಷವೆಂದರೆ ಶತಮಾನಗಳ ಹಿಂದಿನಿಂದಲೂ ಇಲ್ಲಿ ಮಳೆಗಾಲದ ಓಡಾಟಕ್ಕೆ ಹಳ್ಳಕ್ಕೆ ಹಳ್ಳಿಗರು ಬಿದಿರು, ಅಡಿಕೆ ದಬ್ಬೆಯಿಂದ ಸಾರ ನಿರ್ಮಿಸುತ್ತಿದ್ದರು. ದಡದಿಂದ ದಡಕ್ಕೆ ಸುಮಾರು ೮೦-೧೦೦ ಅಡಿ ಉದ್ದಕ್ಕೆ ನಿರ್ಮಿಸುತ್ತಿದ್ದ ಈ ದಬ್ಬೆಸಾರ [...]

ವನ್ಯಲೋಕದಲ್ಲಿ ಕೃಷಿ ದಾಳಿಗೆ ಹೊಸ ತಂತ್ರ!:ಲೇಖಕರು: ಶಿವಾನಂದ ಕಳವೆ

Saturday, March 12th, 2011

ಉತ್ತರ ಕನ್ನಡದ ಜೊಯಿಡಾದ ಶಿವಪುರವೆಂಬ ಕಾಡು ಹಳ್ಳಿಯಲ್ಲಿ ಚಾರಣ ಮಾಡುವಾಗ  ಮುಳ್ಳಂದಿ ಗುಹೆಗೆ ಹೋಗೋಣವೆಂದು ಊರ ಗೆಳೆಯರು  ಒತ್ತಾಯಿಸಿದರು. ಅಲ್ಲಿನ ಕತ್ತಲೆಯ ಕಲ್ಲುಗುಹೆ ಮುಳ್ಳು ಹಂದಿಗಳ ವಾಸದ ನೆಲೆ. ಅಷ್ಟಕ್ಕೂ ಮುಳ್ಳು ಹಂದಿ ನೋಡಲು ಹೋಗಿ ಮೈಗೆ ಮುಳ್ಳು ಚುಚ್ಚಿಸಿಕೊಳ್ಳುವ ಅಪಾಯಕಾರಿ ಹುಚ್ಚು ಸಾಹಸ ನಮ್ಮದಲ್ಲ.  ಈ ವನ್ಯಜೀವಿ ಹಳ್ಳಿಯ ತೋಟದಿಂದ ತೆಂಗಿನ ಕಾಯಿಗಳನ್ನು  ಒಯ್ಯುತ್ತದೆಂಬ ಸಂಗತಿ ಕುತೂಹಲದ ಮೂಲ. ರಾತ್ರಿ ತೆಂಗಿನ ತೋಟಕ್ಕೆ ಬರುವ ಮುಳ್ಳುಹಂದಿಗಳು  ತೋಟದಲ್ಲಿ ಬಿದ್ದ  ತೆಂಗಿನಕಾಯಿ ಹೆಕ್ಕಿ ಸಿಪ್ಪೆಸುಲಿದು ತಿನ್ನುವದನ್ನು ಹಳ್ಳಿಗರು [...]

ತೋಟದಂಚಿನ ಕಾಡುಮರದಲ್ಲಿ ಎಲೆಮರೆಯ ಸೇವಕರು:ಲೇಖಕರು: ಶಿವಾನಂದ ಕಳವೆ

Saturday, March 12th, 2011

ಕಾಡಿಗೂ ಹತ್ತಿರದ ನಮ್ಮ ಕೃಷಿ ಭೂಮಿಗೂ  ಜೀವದಾರಿ (Physical Corridar) ಇದೆ. ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಸೇರಿದಂತೆ ಕಾಡಿನ ಪಕ್ಕ ಕೃಷಿಯಿರುವ ಎಲ್ಲೆಡೆ ಇದನ್ನು ಗುರುತಿಸಬಹುದು. ಹಗಲು ರಾತ್ರಿ ಇಲ್ಲಿ ಸಂಚರಿಸುವ ಹಾವು, ಕಪ್ಪೆ, ಪಕ್ಷಿ, ಪ್ರಾಣಿ, ಜೇನುಗಳಿವೆ.  ಪರಾಗಸ್ಪರ್ಶ, ಫಲವತ್ತಾದ ಹಿಕ್ಕೆ ವಿಸರ್ಜನೆ,  ಬೀಜ ಬಿತ್ತನೆ ಕಾರ್ಯಕ್ಕೆ ಜೀವ ಲೋಕದ ನೆರವಿದೆ. ನಮ್ಮ ನೆಲದ ಕಾಡಿನ (Indigenous forests)  ಆವಾಸಿಗಳಾದ ಇವು ಇಡೀ ಪರಿಸರದ ಅಮೂಲ್ಯ ಅವಿ ಭಾಜ್ಯ ಅಂಶಗಳು. ನಮ್ಮ ತೋಟದ ಮಾದರಿ ಸ್ಥಳೀಯ [...]

ತೋಯ್ ಹಾಳೆ, ಒಡ್ಡುಗಳಲ್ಲಿ ಕರಾವಳಿ ನೀರಿನ ನೀತಿ:ಲೇಖಕರು: ಶಿವಾನಂದ ಕಳವೆ

Saturday, March 12th, 2011

ಭಟ್ಕಳದ ಕಟಗಾರ್‌ನ  ಗೋವಿಂದ ಗೊಂಡ ಅಡಿಕೆ ತೋಟಕ್ಕೆ ತೋಯ್‌ಹಾಳೆ ಮುಖೇನ ನೀರು ಹಾಯಿಸುತ್ತಾರೆ. ತೋಟದ  ಪಕ್ಕದ ಹೊಳೆಗೆ ಬೇಸಿಗೆ ಆರಂಭದಲ್ಲಿ ಒಡ್ಡು ಹಾಕಿ ಕಾಲುವೆಗಳಲ್ಲಿ ನೀರು ನಿಲ್ಲಿಸುವದು,  ಅಡಿಕೆ/ಬಗಿನೆ ಮರದ  ಹಾಳೆಯಿಂದ ನೀರು ಮೊಗೆದು ಮರದ ಬುಡಕ್ಕೆ ಸುರಿಯುವದು ನೀರಾವರಿ ಕ್ರಮ. ವಾರಕ್ಕೆ ಒಮ್ಮೆ  ಮಾತ್ರ ನೀರು ನೀಡುತ್ತಾರೆ. ತೋಟ ಹಸಿರಾಗಿಡುವ ಈ ನೀರಾವರಿ ವಿಧಾನದಲ್ಲಿ  ರಟ್ಟೆಬಲ ಆಧಾರ, ನೀರವರಿಗೆ ವಿದ್ಯುತ್ ಪಂಪ್‌ಗೆ  ಬದಲಾಗದೇ ಒಂದೂವರೆ ಎಕರೆ ತೋಟ  ಸ್ವಂತ ಶ್ರಮದಲ್ಲಿ ಈಗಲೂ ಬೆಳೆಸುತ್ತಿದ್ದಾರೆ!. Blog this! [...]

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ