‘ವಾಡಿ’ ಮಾಡಿದ ಮೋಡಿ

Saturday, December 8th, 2012 ‘ವಾಡಿ’ ಮಾಡಿದ ಮೋಡಿ

‘ವಾಡಿ’ ಎಂದರೆ ಮರಗಳನ್ನು ಆಧರಿಸಿದ ಹೊಲ ಎಂದರ್ಥ.  ಹೊಲದಲ್ಲಿ ಮಿಶ್ರ ಬೆಳೆಗಳೊಂದಿಗೆ ಮರಗಳನ್ನು ಬೆಳೆಸಿದರೆ ಹೊಲಕ್ಕೆ ಬೇಕಾದ ತರಗೆಲೆಗಳನ್ನು, ನೆರಳನ್ನೂ ನೀಡುತ್ತದೆ.  ಬೇಸಿಗೆಯ ಬಿರುಬಿಸಿಲಿನಿಂದ ಮಣ್ಣಿಗಾಗುವ ಹಾನಿಯನ್ನು ತಪ್ಪಿಸುತ್ತದೆ.  ಜೀವವೈವಿಧ್ಯ ಹೆಚ್ಚಿಸುತ್ತದೆ.  ನೀರಿಂಗಿಸುತ್ತದೆ.  ಗಾಳಿಯನ್ನು ನಿಯಂತ್ರಿಸುತ್ತದೆ.  ಹಕ್ಕಿಗಳನ್ನು ಆಕರ್ಷಿಸುತ್ತದೆ.  ಇದರಿಂದ ಕೀಟಗಳ ನಿಯಂತ್ರಣವಾಗುತ್ತದೆ.  ಹಣ್ಣಿನ ಮರಗಳು ಆದಾಯ ನೀಡುವುದರೊಂದಿಗೆ ಅಪೌಷ್ಟಿಕತೆಯನ್ನು ನಿವಾರಿಸುತ್ತದೆ.  ಮೇವಿನ ಮರಗಳು ಜಾನುವಾರುಗಳಿಗೆ ಮೇವನ್ನು ಒದಗಿಸುತ್ತವೆ.  ಮರಗಳೆಲ್ಲಾ ಮೋಪುಗಳಾದ ಮೇಲೆ ಆಪದ್ಧನದಂತೆ ಬೇಕಾದಾಗ ಕಡಿದು ಮಾರಾಟ ಮಾಡಬಹುದು.  ಇದೆಲ್ಲದರೊಂದಿಗೆ ಬದುಗಳು, ಟ್ರೆಂಚ್ಗಳು, ಕೃಷಿ ಹೊಂಡಗಳನ್ನು [...]

ಹಾಲು-ಬೆಣ್ಣೆ ತಕರಾರು

Thursday, December 6th, 2012

ನಾವೆಲ್ಲಾ ಹುಬ್ಬಳ್ಳಿಯ ಸಮೀಪದ ಹಳೇಗಬ್ಬೂರಿನ ಪಾರ್ವತಮ್ಮನವರ ಮನೆಯ ಜಗುಲಿಯಲ್ಲಿ ಕುಳಿತಿದ್ದೆವು.  ಭೈಪ್ ಸಂಸ್ಥೆಯ ಸಹಾಯದಿಂದ ಪಾರ್ವತಮ್ಮ ಒಂದು ಎಮ್ಮೆ ಕೊಂಡಿದ್ದಾರೆ.  ಎಮ್ಮೆಯ ಬೆಲೆ ೮,೬೦೦ ರೂಪಾಯಿಗಳು, ಬೈಫ್ ೩,೦೦೦ ರೂಪಾಯಿ ಸಹಾಯಧನ ನೀಡಿದೆ.  ಮುರ್ರಾ ಜಾತಿಯ ಎಮ್ಮೆ ದಿನಕ್ಕೆ ನಾಲ್ಕು ಲೀಟರ್ ಹಾಲು ನೀಡುತ್ತಿದೆ.  ಎಮ್ಮೆ ಕೊಂಡ ಮೇಲೆ ಆಕೆಯ ಬದುಕಿನ ರೀತಿ ಬದಲಾಗಿದೆಯೇ ಎನ್ನುವ ಮಾಹಿತಿಯನ್ನು ದಾಖಲಿಸಲು, ಬೆಂಗಳೂರಿನ ಬೆಸ್ಟ್ ಪ್ರಾಕ್ಟೀಸಸ್ ಸಂಸ್ಥೆಯ ಸಂಗೀತ ಅಲ್ಲಿಗೆ ಬಂದಿದ್ದರು. ಅವರ ಜೊತೆಗೆ ಆ ಊರಿನ ಸಾಮಾಜಿಕ ಆರ್ಥಿಕ [...]

ಅತ್ಯಲ್ಪ ನೀರಿನಿಂದ ಕಬ್ಬು ಬೆಳೆ ಸಾಧ್ಯವೇ?

Wednesday, November 7th, 2012 ಅತ್ಯಲ್ಪ ನೀರಿನಿಂದ ಕಬ್ಬು ಬೆಳೆ ಸಾಧ್ಯವೇ?

ಅತಿ ಹೆಚ್ಚು ನೀರು ಯಾವುದಕ್ಕೆ ಬೇಕು ಎಂದು ಕೇಳಿದರೆ ಕರ್ನಾಟಕದವರು “ಭತ್ತ”ಕ್ಕೆ ಎನ್ನುತ್ತಾರೆ.  ಮಹಾರಾಷ್ಟ್ರದವರು “ಕಬ್ಬು” ಎನ್ನುತ್ತಾರೆ.  ಜಲಾಶಯಗಳ ಶೇಕಡಾ ೬೦ ಪಾಲು ನೀರು ಇವುಗಳಿಗೆ ಮೀಸಲು.  ಭತ್ತಕ್ಕಾಗಲಿ, ಕಬ್ಬಿಗಾಗಲಿ ನಿಜವಾಗಿಯೂ ಇಷ್ಟು ನೀರು ಬೇಕೇ? ಅಥವಾ ನಮ್ಮ ಕೃಷಿ ವಿಧಾನ, ನೀರು ನಿರ್ವಹಣೆಯಲ್ಲಿ ತಪ್ಪಿದೆಯೇ? ಕಡಿಮೆ ನೀರು ಬಳಸುವ, ಹೆಚ್ಚು ಫಸಲು ಪಡೆಯುವ ಕೃಷಿ ತಂತ್ರಜ್ಞರನ್ನು ಹುಡುಕುವುದು ಸುಲಭವಲ್ಲ.  ಒಂದೊಮ್ಮೆ ಅವರು ಕಡಿಮೆ ನೀರು ಬಳಸಿ ಕೃಷಿ ಮಾಡುತ್ತಿದ್ದರೂ ಮಾದರಿಯಾಗಿರದೇ, ಜನಪ್ರಿಯರಾಗಿರದೇ ಇರುವ ಸಾಧ್ಯತೆ ಹೆಚ್ಚು. [...]

ಯಲಕುಂದ್ಲಿ : ನಾಟೀ ತಳಿಗಳ ಬೀಡು

Monday, September 17th, 2012

ಈ ಸಾರಿ ಸುರಿಯುತ್ತಿದ್ದ ಆಶ್ಲೇಷಾ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿರಲಿಲ್ಲ.  ಸಾಗರ ತಾಲ್ಲೂಕಿನ ಯಲದುಂದ್ಲಿ, ಶುಂಠಿಕೊಪ್ಪ, ಸೂರಗುಪ್ಪೆ, ತಡಗಳಲೆ, ಕಾನಲೆ, ಮಂಡಗಳಲೆ ಹೀಗೆ ಭತ್ತದ ಸಾಲಿನ ಊರುಗಳೆಲ್ಲಾ ನದಿಯಲ್ಲಿ ಮುಳುಗಿಹೋಗುವಷ್ಟು ಮಳೆ.  ಸಾಗರದಲ್ಲಿ ಹುಟ್ಟುವ ವರದಾನದಿ ಈ ಊರುಗಳ ದಾರಿಯಲ್ಲಿ ಹೋಗುವಾಗ ಹುಣಸೆಹೊಳೆ, ಮಾವಿನಹೊಳೆ ಹಾಗೂ ಕನ್ನೊಳೆಗಳು ಸೇರಿಕೊಳ್ಳುತ್ತವೆ.  ಈ ಎಲ್ಲಾ ಹೊಳೆಗಳ ಸಂಗಮ ಯಲಕುಂದ್ಲಿಯ ಸಮೀಪದಲ್ಲಿದೆ.  ಮಳೆಗಾಲ ಬಂತೆಂದರೆ ಈ ಊರುಗಳಲ್ಲಿ ನೆರೆ ಬಂದೇ ಬರುತ್ತದೆ. Blog this! Bookmark on Delicious Digg this [...]

ಕಾಲುವೆ ನೀರು ನಿರ್ವಹಣೆ: ಬಳಕೆದಾರರ ಪಾತ್ರ

Sunday, September 16th, 2012

ಸ್ವಾತಂತ್ರ್ಯಾನಂತರ ಭಾರತದಲ್ಲಿ ಆಹಾರ ಸಮಸ್ಯೆಯನ್ನು ಪರಿಹರಿಸಲು ನೆಹರೂರವರು ಅನೇಕ ಯೋಜನೆಗಳನ್ನು ರೂಪಿಸಿದರು.  ಆಹಾರ, ನಿರುದ್ಯೋಗ, ವಸತಿ, ನೀರು ಹೀಗೆ ಏನೆಲ್ಲಾ ಒಟ್ಟಾಗಿ ಪರಿಹರಿಸಲು ಆಗದಷ್ಟು ಸಮಸ್ಯೆಗಳು ಎದುರಾಗುತ್ತಿದ್ದವು.  ಆಗಲೇ ರಷ್ಯಾ ಮತ್ತು ಕೆಲವು ಯುರೋಪಿಯನ್‌ ದೇಶಗಳಲ್ಲಿ ಬೃಹತ್‌ ಅಣೆಕಟ್ಟುಗಳು ಹೆಚ್ಚು ಪ್ರಸಿದ್ಧವಾಗಿದ್ದವು.  ಭಾರತದಲ್ಲೂ ಬರಡುನೆಲ ಚಿಗುರಿಸಲು ಇರುವ ಏಕೈಕ ಉಪಾಯ ಅಣೆಕಟ್ಟುಗಳು ಎಂಬ ತೀರ್ಮಾನ.  ಅಂದು ಕಾಡಿಗೆ, ಬೆಟ್ಟಗುಡ್ಡಗಳಿಗೆ, ವನ್ಯಜೀವಿಗಳಿಗೆ ಏನೆಲ್ಲಾ ಜೀವವೈವಿಧ್ಯಗಳಿಗೆ ಮಾನ್ಯತೆಯಿರಲಿಲ್ಲ.  ನದಿಗಳೆಲ್ಲಾ ಹರಿದು ಸಮುದ್ರ ಸೇರಿ ವ್ಯರ್ಥವಾಗುತ್ತಿದೆ ಎನ್ನುವ ಯೋಚನೆ. Blog this! [...]

ಡಾ. ದಂಡಗಿಯವರ ತರಾವರಿ ನೀರಾವರಿ ನಮೂನೆಗಳು

Saturday, September 15th, 2012

ಧಾರವಾಡದ ಡಾ. ಗುರುಪಾದ ದಂಡಗಿಯವರು ಈಗ ನಿವೃತ್ತರು.  ಆದರೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸದಾ ನಿರತರು.  ನೆಲ-ಜಲ ಇವರ ಪ್ರಮುಖ ಗುರಿ.  ಕಳೆದ ೨೦ ವರ್ಷಗಳಲ್ಲಿ ೧೫ಕ್ಕೂ ಹೆಚ್ಚು ಸಂಶೋಧನೆಗಳನ್ನು ಮಾಡಿದ್ದಾರೆ.  ಎಲ್ಲವೂ ರೈತಪರ ಸಂಶೋಧನೆಗಳು.  ಅಷ್ಟೇ ಅಲ್ಲ, ಆ ಸಂಶೋಧನೆಗಳನ್ನು ಕಛೇರಿಯಲ್ಲೋ ಪೆಟ್ಟಿಗೆಯೊಳಗೋ ಇಟ್ಟು ಜಿರಲೆ ತಿನ್ನಲು ಬಿಡಲೇ ಇಲ್ಲ.  ತಾವೇ ಸ್ವತಃ ರೈತರ ಬಳಿಗೆ ಹೋದರು, ವಿವರಿಸಿದರು, ಅರ್ಥವಾಗುವವರೆಗೂ ತಾಳ್ಮೆಗೆಡದೇ ತಿಳಿಸಿದರು.  ಸಹಕಾರ ನೀಡಿದರು.  ಸ್ವತಃ ಮಾಡಿ ತೋರಿಸಿದರು. Blog this! Bookmark on Delicious [...]

ಪ್ಲಾಸ್ಟಿಕ್ ಕಸದಿಂದ ಏನು ಉಪಯೋಗ?

Friday, September 14th, 2012

ಪ್ಲಾಸ್ಟಿಕ್‌ ಮರುಬಳಕೆ ಹೇಗೆ ಮಾಡುತ್ತಾರೆ ಎನ್ನುವುದು ಕುತೂಲಹದ ವಿಚಾರ.  ಕೆಲವರಿಗಂತೂ ಇದರಿಂದಲೇ ವಾಯುಮಾಲಿನ್ಯವಾಗುತ್ತದೆ ಎನ್ನುವ ಅನುಮಾನ.  ಆದರೆ ಇಲ್ಲಿ ಪ್ಲಾಸ್ಟಿಕನ್ನು ಸುಡುವುದಿಲ್ಲ, ಕೇವಲ ಕರಗಿಸುತ್ತಾರೆ.  ಅಂದರೆ ದ್ರವರೂಪಕ್ಕೆ ತಿರುಗಿಸುತ್ತಾರೆ.  ಈ ಪ್ರಕ್ರಿಯೆಯಲ್ಲಿ ಹೊಗೆ ಬಾರದು.  ಇದೇ ಪ್ಲಾಸ್ಟಿಕ್‌ ಕಾರ್ಖಾನೆಗಳು ಮಾಡುವ ಕೆಲಸ.  ಕೆಲಸ ಸುಲಭ, ಆದಾಯ ಅಧಿಕ.  ಏಕೆಂದರೆ ತಯಾರಾಗಿದ್ದೆಲ್ಲಾ ತಕ್ಷಣ ಮಾರಾಟವಾಗುತ್ತಿರುತ್ತದೆ. ಬೆಂಗಳೂರಿನ ಪಾದರಾಯಣಪುರದ ಶಾಮಣ್ಣ ಗಾರ್ಡನ್‌ನಲ್ಲಿ ಪಾದವಿಟ್ಟರೆ ಬೆಂಕಿಪೊಟ್ಟಣದಂತಹ ಮನೆಗಳು.  ಕೊಳಚೆ ನದಿ, ರೈಲ್ವೆಹಳಿ, ಗೂಡಂಗಡಿಗಳು, ಆಟೋಗ್ಯಾರೇಜ್‌ಗಳು-ಹೀಗೆ ಸಂದಿಗೊಂದಿಗಳಲ್ಲಿ ಜನರನ್ನು ತಳ್ಳುತ್ತಾ, ನುಗ್ಗುವ ವಾಹನಗಳಿಂದ [...]

ಡಾ. ಕಲಾಂ ಬೈಫ್‌ಗೆ ಬಂದಿದ್ದರು

Thursday, September 13th, 2012

ಪುರಾದ ಹಾದಿಯಲ್ಲಿ ನವಚೇತನ…ಸಮೃದ್ಧ ಗ್ರಾಮ ಸೃಷ್ಟಿಯ ಮಹದುದ್ದೇಶದೊಂದಿಗೆ ರೂಪುಗೊಂಡ ನವಚೇತನ ಕಾರ್ಯಕ್ರಮ ನಾಡಿನಾದ್ಯಂತ ಸಂಚಲನ ಮೂಡಿಸುತ್ತಿದೆ.  ಡಾ. ಅಬ್ದುಲ್ ಕಲಾಂರವರ ದೃಷ್ಟಿಯಲ್ಲಿ ಗ್ರಾಮಗಳ ಅಭಿವೃದ್ಧಿ ಹೇಗೆ ಆದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೋ ಆ ದಿಶೆಯಲ್ಲಿ ಸಂಸ್ಥೆ ಸಾಗುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಚಾರ.  ಗ್ರಾಮದ ಪ್ರತಿ ಕುಟುಂಬಗಳ ಸಹಭಾಗಿತ್ವ, ಸಮರಸ, ಸಹಚಿಂತನಗಳಿಂದ ಕಾರ್ಯಕ್ರಮ ರೂಪಿಸುವುದು, ಗ್ರಾಮದ ಯುವಚೇತನಗಳನ್ನು ಗುರುತಿಸಿ ನಾಯಕತ್ವ ತರಬೇತಿ ನೀಡಿ ಆ ಮೂಲಕ ಗ್ರಾಮದ ಜಾಣ್ಮೆ ಗುರುತಿಸಿ ಕೃಷಿಪೂರಕ, ಕೃಷಿ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸುವುದು, ಜೊತೆಗೆ [...]

ಟ್ರೈಕೋಗ್ರಾಮ್ಮಾ ತಾಯಿತ ತಯಾರಿ ಹೇಗೆ? ಯಾಕೆ?

Wednesday, September 12th, 2012

ಕನ್ನಿವಾಡಿ ಹಳ್ಳಿಯ ಪೂಮಣಿ ಸ್ವಯಂ ಸಹಾಯ ತಂಡದಲ್ಲಿರುವ ಮಹಿಳೆಯರು ಹತ್ತು ಜನ.  ಗೀತಾರಾಣಿ (೧೭) ಇದರ ಮುಖ್ಯಸ್ಥೆ.  ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆ ಈ ರೀತಿಯ ನಲವತ್ತಕ್ಕೂ ಹೆಚ್ಚು ಸ್ವಸಹಾಯ ತಂಡಗಳಿಗೆ ಮಾರ್ಗದರ್ಶನ ಮಾಡುತ್ತಿದೆ.  ಈ ಪೂಮಣಿ ತಂಡ ತಯಾರಿಸುತ್ತಿರುವುದು ತಾಯಿತ.  ಅಲ್ಲಲ್ಲ ಒಂದೂಕಾಲು ಸೆಂಟಿಮೀಟರ್‍ ಅಗಲ ಹಾಗೂ ಐದು ಸೆಂಟಿಮೀಟರ್‍ ಉದ್ದದ ಅರಿಸಿನ ಬಣ್ಣದ ಕಾರ್ಡೇ ಟ್ರೈಕೊಗ್ರಾಮ್ಮಾ ಎನ್ನುವ ಪಿಡುಗು ನಿವಾರಕ, ಅಂದರೆ ಬಯೋ ಪೆಸ್ಟಿಸೈಡ್. Blog this! Bookmark on Delicious Digg this [...]

ವಿದೇಶಿ ಡ್ರಿಂಕ್ಸ್‌ಗೆ ಆದರ, ದೇಶೀ ಪಾನೀಯಕ್ಕೆ ಬೇಸರ

Tuesday, September 11th, 2012

ಕೋಕಾಕೋಲಾ, ಪೆಪ್ಸಿಗಳು ಸಣ್ಣಕರುಳಿನಲ್ಲಿ ಪಚನವಾಗುತ್ತಿರುವ ಆಹಾರವನ್ನು ಕೊಳೆಯುವಂತೆ ಮಾಡುತ್ತದೆ.  ಇದರಿಂದ ಉತ್ಪತ್ತಿಯಾದ ವಾಯುವು ಇಡೀ ದೇಹದಲ್ಲಿ ವಿಷವಾಯುವಾಗಿ ವ್ಯಾಪಿಸುತ್ತದೆ.  ಆಮೇಲೆ ಅಲ್ಸರ್, ಗ್ಯಾಸ್ಟ್ರಿಕ್, ಕ್ಷಯ, ಅಸ್ತಮಾ ಹಾಗೂ ಕ್ಯಾನ್ಸರ್‌ನಂತಹ ರೋಗಗಳು ಬರಬಹುದೆಂಬ ಸಾಧ್ಯತೆಯನ್ನು ತಜ್ಞರು ಪರಿಶೀಲಿಸಿದ್ದಾರೆ.ಇರಲಿ, ಈ ಪಾನೀಯಗಳನ್ನು ಹಿತ್ತಲಿನ ಟೊಮೆಟೋ, ಬದನೆ, ಮೆಣಸಿನಗಿಡಗಳಿಗೆ ಕೀಟನಾಶಕವಾಗಿ ಬಳಸಬಹುದು.  ಬಚ್ಚಲು, ಕಕ್ಕಸುಮನೆಗಳನ್ನು ಇದರಿಂದ ತೊಳೆದರೆ ಫಳಫಳವೆನ್ನುತ್ತದೆ.  ಬಟ್ಟೆಗಳು ಜಿಡ್ಡುಗಟ್ಟಿದ್ದರೆ, ಪಾತ್ರೆಗಳು, ಮಿಷನ್‌ಗಳು ತುಕ್ಕು ಹಿಡಿದಿದ್ದರೆ ಇದನ್ನು ಹಾಕಿ ತೊಳೆಯಿರಿ.  ಪರಿಣಾಮ ಅದ್ಭುತ.  ಇನ್ನೂ ಏನಾದರೂ ಹೊಸ ಪ್ರಯೋಗಗಳನ್ನು ಮಾಡಿದ್ದರೆ [...]

ಸುವಾಸನಾ ಸೊಪ್ಪಿನ ವೃತ್ತಾಂತ

Monday, September 10th, 2012

ಮಕ್ಕಳಿಗೆ ಅಜೀರ್ಣವಾದಾಗ ಕುಡಿಸುವ ಓಮ್‌ವಾಟರ್ ಗೊತ್ತಲ್ಲ, ಅದರಲ್ಲಿ ಮುಖ್ಯ ವಸ್ತು ಸಬ್ಬಸಿಗೆ.  ಸಬ್ಬಸಿಗೆಯನ್ನು ಕೊತ್ತಂಬರಿ, ಹರಿವೆಯಂತೆ ಹಿತ್ತಲಲ್ಲಿ ಬೆಳೆಯಲಾಗದು.  ಆದರೆ ಟೆರೇಸ್‌ನಲ್ಲಿ ಬೆಳೆಯಬಹುದು.  ಸುವಾಸನೆಯೇ ಸಬ್ಬಸಿಗೆಯ ಶತ್ರುವೂ ಹೌದು.  ಸೊಪ್ಪು ತರಕಾರಿಯಾಗಿ ಜನಪ್ರಿಯವಾಗದಿರಲು ಕಾರಣವೂ ಹೌದು.  ಇದರಲ್ಲಿ ಶೇ.೮೮ ತೇವಾಂಶ ಶೇ.೩ರಷ್ಟು ನಾರಿನಂಶಗಳಿವೆ.  ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಥಿಯಾಮಿನ್, ರಿಬೋಫ್ಲಾವಿನ್, ನಿಯಾಸಿನ್ ಮುಂತಾದ ಖನಿಜಗಳಿವೆ. ಕಾರ್ಬೋಹೈಡ್ರೇಟ್, ಸಾರಜನಕದ ಪ್ರಮಾಣವು ಹೆಚ್ಚಾಗಿದೆ. ಹೊಲಗದ್ದೆಗಳಲ್ಲಿ ಅಂತರಬೆಳೆ, ಉಪಬೆಳೆಗಾಗಿ ಬೆಳೆಯಬಹುದು.  ವಾರದ ಸಂತೆಯೊಂದಿಗೆ ಸಂಬಂಧವಿರಬೇಕು.  ಮಾರಾಟದ ವ್ಯವಸ್ಥೆಯಿರಬೇಕು. ಬೀಜದ ಮಾರುಕಟ್ಟೆಯ ವಿವರ, [...]

ಕೊನೇಗೌಡನ ಕರಾಮತ್ತು

Friday, September 7th, 2012

ಅಡಿಕೆಯಲ್ಲಿ ಗೊನೆಕೊಯ್ಲು ಎನ್ನುವುದೇ ಒಂದು ಸಂಭ್ರಮದ ಕೆಲಸ.  ಇಡೀ ವರ್ಷದ ಶ್ರಮ ಮನೆಯೊಳಗೆ ಬರುವ ಸಮಯ, ಅದಕ್ಕಾಗಿ ಗಡಿಬಿಡಿ, ಪರದಾಟ, ಪೇಚಾಟ, ಗಲಾಟೆ, ಲೆಕ್ಕಾಚಾರ, ಓಡಾಟ, ಸುದ್ದಿಸಂಗ್ರಹ, ಆತಂಕ ಏನೆಲ್ಲಾ. ಗೊನೆಕೊಯ್ಲು ಎನ್ನುವುದು ಕೇವಲ ಯಜಮಾನನಿಂದ ಆಗುವ ಕೆಲಸ ಏನಲ್ಲ.  ಸಿಪ್ಪೆ ಸುಲಿಯಲು ಜನ ಬೇಕು.  ಸಂಸ್ಕರಿಸಿ ಸೇರಿಸಲು ಎಲ್ಲರ ಸಹಕಾರ ಅಗತ್ಯ.  ಬೆಲೆ ಏರುಪೇರು, ಸಾಗಾಣಿಕೆ, ಫಸಲಿನ ಗುಣಮಟ್ಟ ಹೀಗೆ ಎಲ್ಲಾ ಸೇರಿ ಯಜಮಾನ ಹೈರಾಣ. ದೀಪಾವಳಿಯಿಂದಲೇ ಗೊನೆ ಕೊಯ್ಯುವ ಕೊನೆಗೌಡನ ಹುಡುಕಾಟ (ಗೊನೆ=ಅಡಿಕೆ ಗೊನೆ).  [...]

ತಿನ್ನಕ್ಕುಂಟು, ಮಾರಾಟಕ್ಕಲ್ಲದ ಸಿಹಿ ಅಡಿಕೆ

Thursday, August 23rd, 2012

ಇದು ಹಸಿಯಿರಲಿ, ಒಣಗಿರಲಿ, ಸಿಪ್ಪೆ ಸಹಿತವಾಗಿರಲಿ, ಸಿಪ್ಪೆರಹಿತವಾಗಿರಲಿ, ಬೇರೆ ಅಡಿಕೆಯೊಂದಿಗೆ ಹೋಲಿಸಿದರೆ ಯಾವುದೇ ವ್ಯತ್ಯಾಸ ಕಾಣದು.  ಮರವಾಗಲಿ, ಕೊನೆಯಾಗಲಿ ಯಾವ ವಿಶೇಷದಿಂದ ಕೂಡಿಲ್ಲ.  ತಿರುಳು ಅಚ್ಚ ಬಿಳಿ, ತೆಂಗಿನಕಾಯಿ ತಿಂದಷ್ಟು ರುಚಿ. ಇದೇ ಸಿಹಿ ಅಡಿಕೆ. “ಸ್ವಲ್ಪವೂ ಒಗರಿಲ್ಲ. ತಿನ್ನುತ್ತಾ ಕುಳಿತರೆ ಇಡೀ ಗೊನೆ ಬರಿದಾಗಿದ್ದೇ ತಿಳಿಯದು” ಎನ್ನುತ್ತಾರೆ ಬೇಳೂರಿನ ಬಿ.ಟಿ. ನರೇಂದ್ರ. Blog this! Bookmark on Delicious Digg this post Recommend on Facebook share via Reddit Share with Stumblers [...]

ಕನ್ನಡ ಚಹಾ !

Thursday, August 23rd, 2012

“ಚಹಾ ಖಂಡಿತಾ ಬೇಡ” ಎನ್ನುತ್ತಾರೆ ಶ್ರೀಪಡ್ರೆ. ಅದಕ್ಕೆ ಕನಿಷ್ಠ ೨೫ ಸಿಂಪಡಣೆಗಳಿವೆ. ನೀವೆಲ್ಲಾ ಕುಡಿಯುತ್ತಿರುವುದು ರಾಸಾಯನಿಕ ವಿಷವೇ ಹೊರತು ಸೊಪ್ಪಿನ ಚಹಾ ಅಲ್ಲ ಎನ್ನುವ ವಿವರಣೆ. ನೋಡಲು ದೂರದ ಅಸ್ಸಾಂಗೆ ಹೋಗಬೇಕಿಲ್ಲ. ಪಕ್ಕದ ಚಿಕ್ಕಮಗಳೂರಿಗೆ ಹೋದರೆ ಸಾಕು. ಮೂಡಿಗೆರೆ ತಾಲ್ಲೂಕಿನಲ್ಲಿ ಐದು ಚಹಾ ತೋಟಗಳು, ಕೊಪ್ಪ ತಾಲ್ಲೂಕಿನಲ್ಲಿ ಐದು, ಒಟ್ಟು ಮೂರು ಸಾವಿರದ ಮುನ್ನೂರು ಎಕರೆ. ಕಳಸದಿಂದ ಕುದುರೆಮುಖಕ್ಕೆ ಹೋಗುವ ರಸ್ತೆಯಲ್ಲಿ ಎಡಕ್ಕೆ ಹಿರೇಬೈಲು.  ಅಲ್ಲಿರುವುದು ಗುಮ್ಮಾನ್‌ಖಾನ್‌ ತೋಟ.  ಬೆಳಗಿನ ಇಬ್ಬನಿಯನ್ನು ಸರಿಸುತ್ತಾ ಚಹಾ ಚಿಗುರು ಕೊಯ್ಯುತ್ತಲೋ, [...]

ನವಲೂರ ಚೆಲುವೆ

Thursday, August 23rd, 2012

ಪ್ರತಿಸಾರಿ ಹುಬ್ಬಳ್ಳಿ ಧಾರವಾಡಕ್ಕೆ ಹೋಗುವಾಗಲೆಲ್ಲಾ ದಂತಿಯವರೊಂದಿಗೆ ಜಗಳ.  ಬೆಂಗಳೂರಿನ ಸೀಬೆ ಬಲು ರುಚಿ.  ಅದು ಕವಿಗಳ ಪದ್ಯಗಳಲ್ಲೂ ಬಂದಿದೆ ಎಂದರೆ ದಂತಿಯವರು ಒಪ್ಪುವುದೇ ಇಲ್ಲ.  ನವಲೂರಿನ ಪೇರಲವೇ ಹೆಚ್ಚು ರುಚಿ.  ಬೇಂದ್ರೆಯವರೂ ಇದನ್ನು ಹೇಳಿದ್ದಾರೆ ಎನ್ನುವ ಅಭಿಮಾನ, ಹೆಗ್ಗಳಿಕೆ. ಅದರಲ್ಲೂ ಹುಬ್ಬಳ್ಳಿಯಿಂದ ಹೊರಟು ಧಾರವಾಡಕ್ಕೂ ಮೊದಲು ಸಿಗುವ ರೈಲ್ವೇ ಸೇತುವೆ ಬಳಿಯಲ್ಲಿ  ಮಾರುವ ಬುಟ್ಟಿ ಬುಟ್ಟಿ ಪೇರಲವನ್ನು ತಿನ್ನಿಸಿ, ಪ್ರತಿವರ್ಷವೂ ಇದೇ ರುಚಿಯಾಗಿದೆ ಎನ್ನುವವರೆಗೂ ಬಿಡುವುದಿಲ್ಲ. Blog this! Bookmark on Delicious Digg this post [...]

ಈ ಹಣ್ಣಿನೊಳಗೆ ಸೀತೆ ಹೇಗೆ ಬಂದಳು?

Thursday, August 23rd, 2012

’ಶೋಲೆ’ ಸಿನಿಮಾ ನೋಡಿದವರಿಗೆ ರಾಮನಗರದ ಬೆಟ್ಟಗಳಲ್ಲಿ ಅಬ್ಬರಿಸಿದ ಅಮ್ಜದ್‌ಖಾನ್‌, ಕುಣಿದ ಹೇಮಾಮಾಲಿನಿಯನ್ನು ಮರೆಯಲು ಸಾಧ್ಯವೇ?  ಅಂದಿನಿಂದ ಇಂದಿನವರೆಗೂ ಅವೆಲ್ಲಾ ಕಲ್ಲು ತುಂಬಿದ ಎರಡು ಬೆಟ್ಟಗಳು ಮಾತ್ರ ಎಂದು ತಿಳಿದು ಅಲ್ಲಿಗೆ ಹೋದರೆ ನಿಮಗೊಂದು ಅಚ್ಚರಿ ಕಾಣಿಸುತ್ತದೆ.  ಅಲ್ಲೆಲ್ಲಾ ಬಿರುಬಿಸಿಲಿನಲ್ಲಿ ನಿಮಗೋಸ್ಕರವೇ ಎಂಬಂತೆ ತಂಪು-ಸಿಹಿ ನೀಡಲು ಸೀತಾಫಲ ವೃಕ್ಷಗಳು ಹಣ್ಣು ತುಂಬಿ ತಲೆದೂಗಿ ಕರೆಯುತ್ತವೆ. ಹಿಂದೊಮ್ಮೆ ಮೆಹಬೂಬ ನಗರದ ಬಳಿಯಿರುವ ಪಂಪನ ಶಾಸನಗಳನ್ನು ನೋಡಲು ಬೆಟ್ಟ ಹತ್ತಿ ಚಾರಣ ನಡೆಸಿದ್ದೆವು.  ದಾರಿಯುದ್ದಕ್ಕೂ ನೂರಾರು ಗಿಡಗಳು ನಮ್ಮೆಲ್ಲರ ಹಸಿವು, ಬಾಯಾರಿಕೆಯನ್ನು [...]

ಹಿತ್ತಲಿನಿಂದಲೇ ಅಪಹರಣಕ್ಕೊಳಗಾದ ಕೆಂಪು-ಬಿಳಿ ಮುರುಗಲು

Thursday, August 23rd, 2012

ನಮ್ಮಲ್ಲಿ ಬೇವು, ಅರಿಸಿನಗಳಿಗೆ ವಿದೇಶದವರು ಪೇಟೆಂಟ್‌ ಪಡೆದರೆಂದು ಏನೆಲ್ಲಾ ಹುಯಿಲೆದ್ದಿತು.  ಆ ಗದ್ದಲಗಳ ಮಧ್ಯೆ ನಮ್ಮ ಹಿತ್ತಿಲೊಳಗೆ ಅವಿತುಕೊಂಡಿದ್ದ ಅಮೂಲ್ಯ ಸಸ್ಯವೊಂದರ ಹಣ್ಣು ವಿದೇಶಕ್ಕೆ ಹೋಗಿದ್ದು, ಅಲ್ಲಿ ಅದರ ಸಿಪ್ಪೆ, ರಸ, ಬೀಜ ಏನೆಲ್ಲಾ ಇದೆಯೋ ಅದರೊಳಗಿನ ರಾಸಾಯನಿಕಗಳು, ಅದರಿಂದ ತಯಾರಾಗಬಲ್ಲ ಔಷಧೀಯ ಗುಣಗಳೆಲ್ಲಾ ಅವರದೇ ಪಾಲಾಗಿತ್ತು.  ಸಧ್ಯಕ್ಕೆ ಅವರಿಗೆ ಬಿಳಿಮುರುಗಲು ಸಿಕ್ಕಿಲ್ಲ!  ಕೇವಲ ಕೆಂಪು ಮುರುಗಲು ಮಾತ್ರ ಸಿಕ್ಕಿದೆ. ಇದು ಕೃಷಿ ಮಾಡದೇ ಬೆಳೆಯಬಲ್ಲ ಗಿಡ.  ಬೀಜ, ಬೇರುಗಳಿಂದೆಲ್ಲಾ ಗಿಡ ಮಾಡಬಹುದು.  ಕಸಿ ಸಸಿಯಾದರೆ ನಾಲ್ಕನೇ [...]

ಕೋಟಿ ಬೆಲೆಯ ನೆಲದಲ್ಲಿ ಬೆಂಗಳೂರು ಬ್ಲೂ

Thursday, August 23rd, 2012

ಕಳೆದ ಶತಮಾನದಿಂದಲೂ ದೇವನಹಳ್ಳಿ, ಹೊಸಕೋಟೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಗಳಲ್ಲಿ ಮನೆತನದ ದ್ರಾಕ್ಷಿಯಿದು.  ವಾರಂಗಲ್‌ ಕಾಡಿನಿಂದ ತಂದು ಬೆಳೆಯುತ್ತಿದ್ದ ಈ ದೇಸೀ ತಳಿ ವಾರ್ನಿಯರ್‌ ಎಂಬ ಜನಾಂಗದ ಮೂಲ ಆಸ್ತಿಯೂ ಹೌದು.  ಇದಕ್ಕೆ ೮೦೦ ವರ್ಷಗಳ ಇತಿಹಾಸವಿದೆ. ಅವರ ತೋಟದ ಕೆಲಸದವರು, ಸ್ನೇಹತರು ಕ್ರಮೇಣ ದ್ರಾಕ್ಷಿ ಬೆಳೆಯುವುದನ್ನು ಕಲಿತರು.  ಆದರೆ ಈ ದ್ರಾಕ್ಷಿಯು ಬೆಂಗಳೂರು ನೆಲ ಬಿಟ್ಟ ಹೊರಹೋಗಲು ಒಲ್ಲೆ ಎಂದಿತು. ಕಾಯಿ ಹಸುರು, ಆಮೇಲೆ ನೇರಳೆ, ಆಮೇಲೆ ನೀಲಿ.  ಹಣ್ಣಾದಾಗ ಕಪ್ಪುನೀಲಿ.  ದೂರದ ರಸ್ತೆಗೂ ಪರಮಳದ ಸೋಂಕು. Blog [...]

ಅಡಿಕೆ ತೋಟದಲ್ಲಿ ಲವಂಗದ ಸುವಾಸನೆ

Thursday, August 23rd, 2012

ಅಡಿಕೆ ತೋಟದ ಸಾಲುಮರಗಳ ಮಧ್ಯೆ ೩೦ ಮಾರು ಅಂತರದಲ್ಲಿರುವ ಲವಂಗದ ಗಿಡಗಳು ಮೊಗ್ಗು ಬಿಟ್ಟು ತೋಟಕ್ಕೆ ಸುವಾಸನೆ ಹಚ್ಚಿದ್ದವು.  ಎರಡಾಳು ಎತ್ತರದ ಗಿಡಗಳು.  ಗಿಡದ ತುಂಬಾ ತುದಿಯಲ್ಲಿ ಎಲೆ ಕಾಣಿಸದಷ್ಟು ಗೊಂಚಲು ಗೊಂಚಲು ಮೊಗ್ಗುಗಳು.  ಕೃಷಿಕ ಪ್ರಭಾಕರರವರು ಆಚೀಚೆಗೆ ಅಡಿಕೆ ಮರ ಹತ್ತಿ ಕಷ್ಟಪಟ್ಟು ಮೊಗ್ಗುಗಳನ್ನು ಕೊಯ್ಯುತ್ತಿದ್ದರು.  ಗುಲಾಬಿ ತುಟಿಯ ಬಣ್ಣದ ಮೊಗ್ಗುಗಳು, ಗೊಂಚಲುಗಳು. ಎಷ್ಟು ಕೊಯ್ದರೂ ಚೀಲ ತುಂಬುತ್ತಿರಲಿಲ್ಲ.  ಇಡೀ ಮರದಲ್ಲಿ ನಾಲ್ಕೈದು ಕಿಲೋಗ್ರಾಂ ಸಿಗಬಹುದು. Blog this! Bookmark on Delicious Digg this [...]

ಇವರಲ್ಲಿ ನೇರಳೆಯ ಬೀಜ ಬೇಕೆಂದು ಕೇಳಬೇಡಿ?!

Thursday, August 23rd, 2012

ಉಗುಳುವುದಕ್ಕಾಗಿಯೇ ತಿನ್ನುವ ಹಣ್ಣು ಎನ್ನುವ ಆರೋಪ ಈ ಹಣ್ಣಿಗೆ.  ಆದರೂ ನೇರಳೆ ಬಣ್ಣದ ಮಾಂಸಲ ಮಾಂಸಲವಾಗಿರುವ ಈ ಹಣ್ಣನ್ನು ಕಂಡರೆ ಯಾರಿಗೆ ಬಾಯಲ್ಲಿ ನೀರು ಬರದು ಹೇಳಿ? ನಾಲಿಗೆಯನ್ನು ಉದ್ದಕ್ಕೆ ಚಾಚಿ, ಕಣ್ಣುಗಳನ್ನು ಕೆಳಕ್ಕೆ ಕೀಲಿಸಿ, ಅಡ್ಡ ಬರುವ ಮೂಗನ್ನು ಓರೆ ಮಾಡಿಕೊಳ್ಳುತ್ತಾ ಆದರೂ ಕಾಣದಿದ್ದರೆ ಮುಖವನ್ನೇ ಅತ್ತಿತ್ತ ಆಡಿಸುತ್ತಾ ನೇರಳೆಯಾಗಿರುವ ನಾಲಿಗೆಯನ್ನು ನೋಡಿಕೊಳ್ಳದ ಮಕ್ಕಳು ಹಳ್ಳಿಯಲ್ಲಿ ಒಬ್ಬನೂ ಇರಲಿಕ್ಕಿಲ್ಲ. ನೇರಳೆಹಣ್ಣಿನ ರುಚಿಯೇ ಅಂತಹುದು.  ಅತಿಯಾಗಿ ತಿಂದು ಗಂಟಲು ನೋವು ಬರಿಸಿಕೊಂಡದ್ದೂ ಉಂಟು.  ಹಾಗೆ ವರ್ಷಕ್ಕೊಮ್ಮೆ ಸಿಗುವ [...]

ಬರಡು ನೆಲದಲ್ಲಿರುವ ಬಂಗಾರದ ಹಣ್ಣು ಬಾರೆ

Thursday, August 23rd, 2012

ದೀಪಾವಳಿ ಕಳೆಯುತ್ತಿದ್ದಂತೆ ಹಣ್ಣಿನಂಗಡಿಯ ಮುಂಭಾಗದಲ್ಲೆಲ್ಲಾ ಅರಿಸಿನದ ಸಣ್ಣ ಹಣ್ಣುಗಳು ಕುಳಿತಿರುತ್ತವೆ.  ದಾರಿಹೋಕರನ್ನೆಲ್ಲಾ ಬಾರೆ ಬಾರೆ ಎಂದು ಕರೆಯುತ್ತಿರುತ್ತವೆ. ಅರಿಸಿನ, ಹಸುರು, ಕಂದುಬಣ್ಣಗಳಲ್ಲಿ ಕೆಂಪು ನೈಲಾನ್‌ ಜಾಳಿಗೆಯಲ್ಲಿ ತುಂಬಿದ ಈ ಹಣ್ಣು ಅಪ್ಪಟ ಮುರಕಲ್ಲು, ಗೊರಚು, ಬರಡುನೆಲದ ಬೆಳೆ.  ಏನೂ ಸತ್ವವೇ ಇರದ ಮಣ್ಣಿನಿಂದಲೂ ಸಿಹಿ ಎತ್ತುವ ಛಾತಿ.  ಸುಡುವ ಬಿಸಿಲು, ಹೆಪ್ಪುಗಟ್ಟುವ ಚಳಿ, ಸುಳಿದುಹೋಗುವ ಮಳೆಪ್ರದೇಶದಲ್ಲಿ ಅರಳುವ ಮುಗುಳು. ಮೊಟ್ಟೆ ಆಕಾರ, ಗುಂಡಗೆ ಹಾಗೂ ಚಪ್ಪಟೆ ಮೂರು ರೀತಿಗಳಿವೆ.  ಅನೇಕ ಜಾತಿಗಳಿವೆ. ನಾಟಿ ತಳಿಗಳೂ ಇವೆ.  ಹೈಬ್ರಿಡ್‌ಗಳೂ [...]

ಕೆಳದಿ-ಕ್ಯಾಸನೂರಿನ ದೇಸೀ ತಳಿ

Friday, July 20th, 2012

ಕೆಳದಿ ಸೀಮೆ ಹಾಗೂ ಕ್ಯಾಸನೂರು ಸೀಮೆ ಅವಳಿ ಸೀಮೆಗಳು. ಸುಮಾರು ನೂರು ಹಳ್ಳಿಗಳನ್ನೊಳಗೊಂಡಿದೆ. ನೂರಾರು ಎಕರೆ ಅಡಿಕೆ ತೋಟವೂ ಸಹ ಕೆಳದಿ ರಾಜ್ಯಕ್ಕಿಂತ ಹಳೆಯದು. ಇಲ್ಲಿ ಅಡಿಕೆಯ ಎಕರೆವಾರು ಇಳುವರಿ ಕನಿಷ್ಠ ೩೦ ಕ್ವಿಂಟಾಲು! ಗರಿಷ್ಠ ೪೦ ಕ್ವಿಂಟಾಲು!!! ಈ ಸೀಮೆಗಳ ಪ್ರತಿ ಊರು ಏಕಪ್ರಕಾರವಾಗಿದೆ. ಎರಡು ಗುಡ್ಡಗಳ ಮಧ್ಯೆ ಕಣಿವೆ. ಕಣಿವೆ ಇಳಿಯುತ್ತಿದ್ದಂತೆ ಕೆರೆ. ಕೆರೆಯ ಕೆಳಗೆ ತೋಟ. ತೋಟದ ಎರಡೂ ಕಡೆಗಳಲ್ಲಿ ನೀರು ಹರಿದುಹೋಗಲು ಹೆಗ್ಗಾದಿಗೆಗಳು. ಮಧ್ಯದಲ್ಲಿ ಕೆರೆಯ ತೂಬಿನಿಂದ ಹರಿದುಹೋಗುವ ವ್ಯವಸ್ಥೆ. ಈ [...]

ಮಂಗಗಳಿಗೆ ‘ಸುಗಂಧಿ’ ಮಾತ್ರ ಬೇಡಂತೆ

Friday, July 20th, 2012

ಇತ್ತೀಚೆಗೆ ಮಲೆನಾಡಿನಲ್ಲಿ ಮಂಗಗಳ ಅಭಿಯಾನ ಶುರುವಾಗಿತ್ತು. ಯಾವ ಊರಿನಲ್ಲಿ ನೋಡಿದರೂ ೫೦-೬೦ ಮಂಗಗಳ ಹಿಂಡು. ಹಿತ್ತಲಿನ ತರಕಾರಿಗಳು, ದೀವಿಗುಜ್ಜೆ, ಪೇರಲ, ಸೀತಾಫಲ, ಮಾವು ಇನ್ನು ತೋಟಕ್ಕೆ ನುಗ್ಗಿದರೆ ಬಾಳೆ, ಹಲಸು, ಕೊನೆಗೆ ಅಡಿಕೆ, ತೆಂಗುಗಳೂ ಹಿಂಡಿನ ಕೈಗೆ ಸಿಕ್ಕ ಮಾಣಿಕ್ಯವಾಗುತ್ತಿದ್ದವು. ಹಿಡಿಯಲು ಹೋದರೆ ಗಡವಾ ಅಟ್ಟಿಸಿಕೊಂಡು ಬರುತ್ತಿತ್ತು. ಕೆಲವರು ಪರಚಿಸಿಕೊಂಡದ್ದೂ ಆಯಿತು. ಕೊಲ್ಲಲು ಮುಜುಗರ. ಕೆಲವರು ದೊಡ್ಡಮರದ ಬೋನು ಮಾಡಿಸಿ ಹಿಡಿದು ಭಟ್ಕಳದ ಕಾಡು, ಕೊಲ್ಲೂರಿನ ಕಾಡಿಗೆ ಬಿಟ್ಟದ್ದೂ ಆಯಿತು. ಸ್ವಲ್ಪ ದಿನಗಳಲ್ಲೇ ಮತ್ತೊಂದು ಹಿಂಡು ಬಂದಿದ್ದೂ [...]

ಗಮ್ಲೆಸ್ ಹಲಸು

Friday, July 20th, 2012

ವಿಲಿಯಂ ಲುಸ್ರಾದೋ ಅವರದು ಒಂದೇ ಹಠ. ಭಟ್ಟರೆ, ನಮ್ಮ ಮಾವನ ಮನೆಯ ಹಿತ್ತಲಿನಲ್ಲಿ ಒಂದು ಹಲಸಿನ ಮರವಿದೆ. ಅದರಲ್ಲಿ ಮೇಣವೇ ಇಲ್ಲ. ಅದರದ್ದೊಂದು ಕಸಿ ಮಾಡಿಕೊಡಿ ಮಾರಾಯ್ರೇ. ಅಂತೂ ಒಂದು ದಿನ ಮಂಗಳೂರಿನ ಕುದುಪ್ಪಾಡಿಯಲ್ಲಿರುವ ತಿಮೋತಿ, ಮೆನೆಂಜಿಸ್‌ರವರ ಮನೆಗೆ ಹೋದದ್ದು, ಅಲ್ಲಿ ಹಲಸಿನಹಣ್ಣು ನೋಡಿದ್ದು, ತಿಂದದ್ದು, ಒಂದಿಷ್ಟು ಗೆಲ್ಲುಗಳನ್ನು ತಂದದ್ದು ಎಲ್ಲಾ ಆಯಿತು. ಮೆನೆಂಜಿಸ್‌ ಹೇಳುವಂತೆ, ಅವರ ನೆಂಟರಾರೋ ಮಲೇಸಿಯಾದಿಂದ ತಂದ ಹಣ್ಣಿನಲ್ಲಿರುವ ಬೀಜ ಹೀಗೆ ಆದದ್ದು. ಅಷ್ಟೆ, ಬೇರೆ ಮಾಹಿತಿ ಇಲ್ಲ. ಮರ ಕಾಂಪೌಂಡ್‌ ಪಕ್ಕ [...]

ಪರಂಪರೆಯ ಕೊಂಡಿ ಮಾಳಂಜಿ

Friday, July 20th, 2012

ಉತ್ತರಕನ್ನಡದ ಮಾಳಂಜಿಯ ಅಪ್ಪೆಮರದ ಕೆಳಗೆ ಅಂದು ಜನಜಾತ್ರೆ. ಬೆಳಗ್ಗೆ ಆರಕ್ಕೆ ಬಂದು ಕುಳಿತವರು ನೂರಕ್ಕೂ ಹೆಚ್ಚು ಜನ. ಆಮೇಲಾಮೇಲೆ ಲೆಕ್ಕಕ್ಕೆ ಸಿಗಲಿಲ್ಲ. ಅವರೆಲ್ಲಾ ಯಾರದೋ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದಾರೆ. ಕುಡುಗೋಲು ಹಿಡಿದು ಲುಂಗಿ ಉಟ್ಟು ಬರುತ್ತಿರುವವರನ್ನು ನೋಡಿ ಅವರೆಲ್ಲಾ ಪಿಸುಗುಟ್ಟುತ್ತಾರೆ. ನಾಗಪ್ಪನಾಯ್ಕ ಬಂದ ನಾಗಪ್ಪನಾಯ್ಕ. ಅವನೊಂದಿಗೆ ಇನ್ನೂ ನಾಲ್ಕು ಜನ ಸಿದ್ಧರಾಗಿ ಬಂದಿದ್ದಾರೆ. ಮರಕ್ಕೆ ಪೂಜೆ ಮೊದಲು. ಎಲ್ಲರೂ ಸರಸರನೆ ಮರ ಹತ್ತಿ ಚಕಚಕನೆ ಮಿಡಿಗಳನ್ನು ಕೊಯ್ಯುತ್ತಾರೆ. ಗೊಣಿಚೀಲ, ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ತುಂಬಿ ಇಳಿಸುತ್ತಾರೆ. ನಾಲ್ಕಾರು [...]

ಟನ್ ಟನ್ ಮಾವಿನಮರಗಳು

Friday, July 20th, 2012

ರಾಮನಗರ ಯಾವುದಕ್ಕೆ ಪ್ರಸಿದ್ಧಿ ಎಂದರೆ ಬಂಡೆಗಳು, ಬೆಟ್ಟಗಳು, ದೇವೇಗೌಡ, ಕುಮಾರಸ್ವಾಮಿ ಹೀಗೆಲ್ಲಾ ಉತ್ತರ ಬರಬಹುದು. ಆದರೆ ಇಲ್ಲಿ ಬ್ರಿಟಿಷ್ ಕಾಲದಿಂದಲೂ ಅಚಲವಾಗಿ ನಿಂತು ಇನ್ನೂ ಫಸಲು ನೀಡುತ್ತಿರುವ ಮಾವಿನತೋಪುಗಳ ಸುದ್ದಿಯನ್ನು ಯಾರಿಗೆ ಕೇಳಿದರೂ ಗೊತ್ತಿಲ್ಲ.` ಬಾದಾಮಿ, ರಸಪೂರಿ, ನೀಲಂ, ತೋತಾಪುರಿ, ಮಿಡಿಮಾವು, ಗೊಲ್ಟೆಮಾವು ಹೀಗೆ ಕಸಿ ಮಾಡಿದ್ದು, ಒಲ್ಞೆಯಿಂದ ಎಬ್ಬಿಸಿದ್ದು ಮುಂತಾದ ಹತ್ತಾರು ತೋಪುಗಳು ನೂರು ವರ್ಷಗಳ ಹಿಂದಿನ ಕತೆಯನ್ನು ಹೇಳುತ್ತವೆ. ಕೇಳುವವರಿಲ್ಲ! ’ಶಾನುಭೋಗನ ಹಳ್ಳಿಯ ಮೂಡು ತಿಮ್ಮೇಗೌಡರ ತೋಪು, ಡಾ||ವೆಂಕಟೇಗೌಡ, ಡಾ|| ರಾಜು, ಗುಂಡಪ್ಪ ಮುಂತಾದವರ [...]

ಪುರುಷಚೋದಕ ಟೆಸ್ಟೋಸ್ಟೆರಾನ್ ಆಟ

Wednesday, July 4th, 2012

ಹೃತಿಕ್ ರೋಷನ್, ಸಲ್ಮಾನ್ ಖಾನ್, ಸಂಜಯ್ ದತ್, ಅಕ್ಷಯ್ ಕುಮಾರ್, ಅಮೀರ್ ಖಾನ್ ಇವರಿಗೆಲ್ಲ ಅಗಲವಾದ ಭುಜ, ಹುರಿಗಟ್ಟಿದ ತೋಳು, ಗಟ್ಟಿ ಎದೆ, ಚಿಕ್ಕ ಸೊಂಟ ಸಾಮಾನ್ಯವಾಗಿರುವುದನ್ನು ಕಾಣುತ್ತೇವೆ.  ಹೀಗಾಗಲು ಅವರು ಯಾರೂ   ವರ್ಷಗಟ್ಟಲೆ ಖಂಡಿತ ಕಷ್ಟಪಟ್ಟಿಲ್ಲ (ಅವರೆಲ್ಲಾ ಸಿನಿಮಾಕ್ಕೆ ಬಂದ ಪ್ರಾರಂಭದಲ್ಲಿ ಹೇಗಿದ್ದರು ನೆನಪಿಸಿಕೊಳ್ಳಿ).  ಅದಕ್ಕೆ ಬದಲು ಟೆಸ್ಟೋಸ್ಟೆರಾನ್‌ನ ಮೊರೆ ಹೋಗಿದ್ದಾರೆ. ಟೆಸ್ಟೋಸ್ಟೆರಾನ್ ಅಡ್ರಿನಲ್ ಗ್ರಂಥಿಯಲ್ಲಿ ಸ್ರವಿಸುತ್ತದೆ.  ಅದು ಹೆಂಗಸರಲ್ಲಿ ೪೦ರಿಂದ ೬೦ ನ್ಯಾನೋಗ್ರಾಂ, ಗಂಡಸರಲ್ಲಿ ೩೦೦ರಿಂದ ೧೩೦೦ ನ್ಯಾನೋಗ್ರಾಂನಷ್ಟು ಸ್ರವಿಸುತ್ತದೆ.  ೧೯೩೫ರಲ್ಲಿ ಟೆಸ್ಟೋಸ್ಟೆರಾನ್ ಬಗ್ಗೆ [...]

ಔಷಧಗಳ ಬೆಲೆ ನಿಯಂತ್ರಿಸುವವರು ಯಾರು?

Wednesday, July 4th, 2012

ಬೆಂಗಳೂರಿನ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರೊಬ್ಬರು ಮೊನ್ನೆ ನಡೆದ ವಿಚಾರಸಂಕಿರಣವೊಂದರಲ್ಲಿ ಮಾತನಾಡುತ್ತ, ನಾನು ಕ್ಯಾನ್ಸರ್‌ಗೆ ಬಳಸುವ ಔಷಧಗಳು ೨೦ರಿಂದ ೨೨.  ಆದರೆ ಮಾರುಕಟ್ಟೆಯಲ್ಲಿ ೨೦೦ಕ್ಕೂ ಹೆಚ್ಚು ಔಷಧಿಗಳಿವೆ.  ಪ್ರತಿದಿನ ಔಷಧ ಕಂಪೆನಿಯ ಪ್ರತಿನಿಧಿಗಳು ಭೇಟಿಯಿತ್ತು ತಮ್ಮ ಕಂಪೆನಿಯ ಔಷಧವನ್ನೇ ರೋಗಿಗಳಿಗೆ ಸೂಚಿಸಲು ಹೇಳುತ್ತಾರೆ.  ಅದಕ್ಕಾಗಿ ಆಮಿಷಗಳನ್ನು ಒಡ್ಡುತ್ತಾರೆ.  ಇದಕ್ಕೆ ಬಲಿಯಾಗಿ ಅವಶ್ಯವಿದ್ದೋ, ಇಲ್ಲದೆಯೋ ಅವರು ನೀಡುವುದನ್ನೆಲ್ಲಾ ರೋಗಿಗಳಿಗೆ ನೀಡುವ ವೈದ್ಯರೂ ನಮ್ಮಲ್ಲಿದ್ದಾರೆ.  ಅವುಗಳ ಬೆಲೆ ಕುರಿತು ಹೇಳಹೊರಟರೆ ಅದೇ ಒಂದು ವಿಚಾರಸಂಕಿರಣವಾದೀತು ಎಂದರು. Blog this! Bookmark [...]

ಅತಿಯಾದರೆ ವಿಷವಾಗುವ ಅಮೃತ : ವಿಟಮಿನ್

Wednesday, July 4th, 2012

ಕಳೆದ ಮಾರ್ಚ್‌ನಲ್ಲಿ ಸರಕಾರ ಒಂದಿಷ್ಟು ವಿಟಮಿನ್ ಮಾತ್ರೆಗಳನ್ನು ನಿಷೇಧಿಸಿತು.  ಇದಕ್ಕೆ ಕಾರಣ ವಿಟಮಿನ್ ಬಿ೬ ಹಾಗೂ ಬಿ೧೨ ಮಾತ್ರೆಗಳಿಂದ ಅಡ್ಡ ಪರಿಣಾಮಗಳು ಹೆಚ್ಚುತ್ತಿರುವುದು.  ಆದರೆ ಸರಕಾರದ ಒಂದು ಇಲಾಖೆಯ ಕೆಲಸ ಇನ್ನೊಂದು ಇಲಾಖೆಗೆ ತಿಳಿದಿರುವುದಿಲ್ಲ.  ಇದರಿಂದಾಗಿ ಸರಕಾರಿ ಆಸ್ಪತ್ರೆಗಳಿಗೆ ಈಗಲೂ ಈ ನಿಷೇಧಿಸಲ್ಪಟ್ಟ ಮಾತ್ರೆಗಳು ಬರುತ್ತಲೇ ಇವೆ. ಇಂದಿನ ಆಹಾರಪದ್ಧತಿಯನ್ನು ನೋಡಿದರೆ ವಿಟಮಿನ್ ಸೇವನೆ ಅನಿವಾರ್ಯ.  ಭಾರತದಲ್ಲಿ ವಿಟಮಿನ್ ಕೊರತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ.೮೦ಕ್ಕೇರಿದೆ.  ಅಂತೆಯೇ ನಮ್ಮ ಆಹಾರದಲ್ಲಿ ವಿಟಮಿನ್ ಎಷ್ಟಿದೆ ಎಂದು ತಿಳಿದುಕೊಂಡು ಕೊರತೆಯಿರುವುದನ್ನು ತುಂಬಿಕೊಳ್ಳಬೇಕಾದ್ದು [...]

ಉರುವಲು ಉಳಿತಾಯಕ್ಕೆ ಬೇನಾ ಒಲೆ, ಬೇಸು ಒಲೆಗಳು

Wednesday, July 4th, 2012

ಇಂಧನ, ಉರುವಲು ಉಳಿತಾಯ ಮಾಡಲೇಬೇಕಾದ ಅನಿವಾರ್ಯ ಇಂದು ಮಲೆನಾಡಿನ ಕೃಷಿಕರ ಸಮಸ್ಯೆ.  ಅನಿವಾರ್ಯಗಳೇ ಆವಿಸ್ಕಾರಗಳಿಗೆ ಕಾರಣ.  ಆವಿಷ್ಕಾರಗಳು ಸುಧಾರಣೆಯಾದಂತೆಲ್ಲಾ ಜನರಿಗೆ ಹೆಚ್ಚು ಪ್ರಿಯವಾಗುತ್ತಾ ಸಾಗುತ್ತವೆ.  ಜನರು ಬಳಸಿದಂತೆಲ್ಲಾ ಉಳಿತಾಯ ಸಾಧ್ಯವಾಗುತ್ತದೆ.  ಇದೇ ಆವಿಷ್ಕಾರವೊಂದರ ಯಶಸ್ಸು ಕೂಡ.  ಇದಕ್ಕೆ ಸೂಕ್ತ ಬೆಂಬಲ, ಸಹಾಯಗಳು, ಸಹಕಾರ ಸಂಘಸಂಸ್ಥೆಗಳಿಂದ, ಸರ್ಕಾರದಿಂದ ದೊರೆತರೆ ಬಡವರಿಗೂ ತಲುಪುತ್ತದೆ.  ಹೀಗೆ ಬೇರುಮಟ್ಟಕ್ಕೆ ತಲುಪಿದಾಗ ಮಾತ್ರ ಮಾಡಿದ ಕೆಲಸ ಸಾರ್ಥಕ. ಮಲೆನಾಡಿನ ಮನೆಮನೆಗಳಲ್ಲಿ ಈಗ ಬೇನಾ ಒಲೆಗಳಿವೆ. Blog this! Bookmark on Delicious Digg this [...]

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ