ಕೋಮಟಿಗರ ಸಂಸ್ಕೃತಿಯಲ್ಲಿ ಮಹಿಳೆ

Tuesday, August 16th, 2011

ಮುಹೂರ್ತದ ನಂತರ ಭೂಮ (ಭಾಮ) ಅಥವಾ ಪೂಬಮತ ಊಟದ ಪದ್ಧತಿ ಇದೆ. ವಧು-ವರರು ಎದುರು ಬದುರಾಗಿ ಅಥವಾ ಅಕ್ಕಪಕ್ಕದಲ್ಲಿ ಊಟಕ್ಕೆ ಕೂತು ಅವರು ಇವರಿಗೆ ಇವರು ಅವರಿಗೆ ತಿನ್ನಿಸುತ್ತಾರೆ. ನವದಂಪತಿಗಳಲ್ಲಿ ಆತ್ಮೀಯತೆಯನ್ನು ಸಲುಗೆಯನ್ನು ಬೆಳೆಸುವಲ್ಲಿ ಇಂತಹ ಕ್ರಿಯೆಗಳು ಸಹಾಯವಾಗುತ್ತವೆ. ತರುವಾಯ ವಸಂತ ಮಾಧವ ಪೂಜೆ ಅಥವಾ ಓಕಳಿ ಆಡುವುದು. ದೊಡ್ಡ ಕೊಳಗಳಲ್ಲಿ ವಸಂತೋದಕ ಅಂದರೆ ಬಣ್ಣದ ನೀರನ್ನು ತುಂಬಿರುತ್ತಾರೆ. ವಧು-ವರರು ಪರಸ್ಪರ ನೀರಾಟ ಆಡಿ, ಜಲಕ್ರೀಡೆ ಮಾಡಿ ಸ್ನಾನ ಮಾಡುತ್ತಾರೆ. ಹರೆಯದ ಹುಮ್ಮಸ್ಸು ಮತ್ತು ಹೆಣ್ಣು ಗಂಡಿನ [...]

ಕೋಮಟಿಗರ ಸಂಸ್ಕೃತಿಯಲ್ಲಿ ಮಹಿಳೆ

Tuesday, August 16th, 2011

ಅನಂತರ ಸಾಧ್ಯವಾದವರು ಪ್ರತಿ ತಿಂಗಳು ಮಾಸಿಕ ತಿಥಿಯನ್ನು ಮಾಡಲು ಬೇರೆ ಬೇರೆ ಪುಣ್ಯಕ್ಷೇತ್ರಗಳಿಗೆ ವರುಷವಾಗುವವರೆಗೆ ಹೋಗುತ್ತಾರೆ. ಅದರಲ್ಲಿ ೧) ಶ್ರೀಶೈಲ, ೨) ಹಂಪೆ, ೩) ಕಾಶಿ, ೪) ಗಯಾ, ೫) ಪ್ರಯಾಗ, ೬) ಶ್ರೀರಂಗಪಟ್ಟಣ, ೭) ತಿರುಪತಿ, ೮) ಕಾಳಹಸ್ತಿ, ೯) ಕೃಷ್ಣಾ,೧೦)ಗೋಕರ್ಣ, ೧೧) ಶೃಂಗೇರಿ, ೧೨) ಅಲ್ಲಂಪುರ ಮುಂತಾದ ಸ್ಥಳಗಳಿಗೆ ಹೋಗುತ್ತಾರೆ. ವರ್ಷದ ನಂತರ “ವಷಾಂತಿಕ” ತಿಥಿಯನ್ನು ಎಲ್ಲರೂ ಸೇರಿ ಮಾಡುತ್ತಾರೆ. ವೈಶ್ಯರು, ಹಿರಿಯರು ಗತಿಸಿದ ದಿನ ಮಾಡುವ ಕಾಲತಿಥಿ ಮತ್ತು ಕ್ಷಮಾನಸದಲ್ಲಿ ಮಾಡುತ ತಿಥಿಗಳನ್ನು [...]

ಕೋಮಟಿಗರ ಸಂಸ್ಕೃತಿಯಲ್ಲಿ ಮಹಿಳೆ

Tuesday, August 16th, 2011

ಒಡಪುಗಳು : ೧. ಶ್ರೀ ಮನ್ನಾರಾಯಣಿಗೆ ದೈವನು ಭೆಟ್ಟಿಯಾದದ್ದು ಅಶೋಕ ವನದಲ್ಲಿ ನಮ್ಮ ರಾಯರು ಶ್ರೀ………………………. ………………………….. ಹೆಸರು ಹೇಳುವೆನು ಮಹಿಳಾ ಸಮಾಜದಲ್ಲಿ. ೨. ಭಗೀರಥನ ತಪಸ್ಸಿಗೆ ಭಾಗೀರಥಿ ಬಂದಳು ಕಾಶಿಗೆ ರಾಯರಾದ ಶ್ರೀ………………………………………… ಅವರ ಸೇವೆಗೆ ನಾನಾದೆ ದಾಸಿ. ೩. ಸೂರ್ಯ ನಾರಾಯಣನಿಂದ ಆರೋಗ್ಯ ನನ್ನ ಪತಿರಾಯರಾದ ಶ್ರೀ………………………………. ಅವರಿಂದ ನನಗೆ ಸಕಲ ಸೌಭಾಗ್ಯ.   ನುಡಿಗಟ್ಟುಗಳು: ೧. ಬಟ್ಟಿಗೊಂದು ಮುರಕಾಸಿಗೊಂಡು. ೨. ದುಡೀಲಿಲ್ಲ ದುಕ್ಕಪಡಲಿಲ್ಲ. ೩. ಉಣ್ಣಲಿಲ್ಲ ಉಡಲಿಲ್ಲ. ೪. ಕಸಬರಿಗೆ ಸುಳಿಯ ಹೆಣ್ಣು. [...]

ಕೋಮಟಿಗರ ಸಂಸ್ಕೃತಿಯಲ್ಲಿ ಮಹಿಳೆ

Tuesday, August 16th, 2011

ಹಿಂದಿನ ಗಣರಾಜ್ಯ (ರಿಪಬ್ಲಿಕ್‌) ಯೌಧೇಯರು: ಉತ್ತರ ಹಿಂದೂಸ್ಥಾನದಲ್ಲಿ ಚಕ್ರವರ್ತಿ ಸಮುದ್ರ ಗುಪ್ತನ ಕಾಲದಲ್ಲಿ ಪ್ರಜೆಗಳಿಂದ ಆರಿಸಲ್ಪಟ್ಟ ಪ್ರತಿನಿಧಿಗಳಿಂದ ರಚಿಸಿದ ಗಣರಾಜ್ಯ (ರಿಪಬ್ಲಿಕ್‌) ಆಡಳಿತ ನಡೆಸಿತು. ಮಂತ್ರಿಗಳು: (ರಾಜ ಮಹಾರಾಜರುಗಳ ಕಾಲದಲ್ಲಿ ಒಬ್ಬೊಬ್ಬರೇ ಮಂತ್ರಿಗಳು ಇರುತ್ತಿದ್ದರು) ೧. ತೇಜಪಾಲ ೨. ವಸ್ತುಪಾಲ ೩. ಬಾಮಷಹಾ ೪. ವಿಮಲ ಮಂತ್ರಿ ೫. ಉದಯನ ಮಂತ್ರಿ ೬. ವಾಗ್ಭಟ್ಟ ೭. ಅಮರ ಭಟ್ಟ ೮. ಅಭಡ ಮಂತ್ರಿ   ಕವಿಗಳು ಮತ್ತು ವಿದ್ವಾಂಸರು ೧        ಮಹಾಕವಿ ಮಾಘ ೨        ಭಕ್ತ ತುಕಾರಾಮ್ [...]

ಕೋಮಟಿಗರ ಸಂಸ್ಕೃತಿಯಲ್ಲಿ ಮಹಿಳೆ

Saturday, August 13th, 2011

ಸನಾತನ ಧರ್ಮ ಅಥವಾ ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೂರನೇ ವರ್ಣವೇ ಆರ್ಯವೈಶ್ಯ ಜನಾಂಗ. ಪುರುಷ ಸೂಕ್ತದ ಪ್ರಕಾರ ಆರ್ಯವೈಶ್ಯರು ಶ್ರೀಮನ್ನಾರಾಯಣನ ತೊಡೆಗಳಿಂದ ಜನಿಸಿದರು. ವೈದಿಕ ವಾಜ್ಞಯದಲ್ಲಿ ಈ ವರ್ಣದವರನ್ನು “ವೈಶ್ಯವರ್ಣ”ವೆಂದು ಕರೆಯಲಾಗಿದೆ. ವಿಶಃಗೋಮತಿ ಗೋಯರ ಎಂಬ ಪರ್ಯಾಯ ಹೆಸರುಗಳೂ ಲಭ್ಯವಾಗುತ್ತವೆ. ವಿಶಃ ಎಂದರೆ ಗುಂಪು ಎಂದರ್ಥ. ಪ್ರಾಯಶಃ ವೇದಕಾಲದಲ್ಲಿ ಬ್ರಹ್ಮ ಕ್ಷತ್ರಿಯರಿಗಿಂತ ವೈಶ್ಯರ ಸಂಖ್ಯೆ ಹೆಚ್ಚಿರಬೇಕು. ಗೋಮತಿಃ ಗೋಮಠಃ ಎಂಬ ಸಂಬೋಧನೆಗಳು ಪಶು ಸಂವರ್ಧನೆ, ಕೃಷಿ ಕರ್ಮಗಳನ್ನು ಸೂಚಿಸುತ್ತವೆ. ವೈಶ್ಯರು ಸ್ವಭಾವತಃ ಈ ಉದ್ಯೋಗಗಳಲ್ಲಿ ತೊಡಗಿದ್ದರು. [...]

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ