Loading Events

೧೯೩೯ ನಾಟಕ, ಚಲನಚಿತ್ರ, ಸುಗಮ ಸಂಗೀತ, ಟ.ವಿ. ಧಾರಾವಾಹಿ ಮುಂತಾದ ಕ್ಷೇತ್ರಗಳ ವಿಶಿಷ್ಟ ಶೈಲಿಯ ಗಾಯಕ, ಸಂಗೀತ ನಿರ್ದೇಶಕರೆನಿಸಿರುವ ಸಿ. ಅಶ್ವತ್ಥ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಶ್ರೀಧರ ರಾಯರು, ತಾಯಿ ಶಾರದಮ್ಮ. ಕಾಲೇಜು ದಿನಗಳಿಂದಲೇ ಕವಿತೆಗಳಿಗೆ ನೀಡಿದ ಸ್ವರ ಸಂಯೋಜನೆ. ದೇವಗಿರಿ ಶಂಕರರಾವ್ ಜೋಶಿಯವರಲ್ಲಿ ಹಿಂದೂಸ್ತಾನಿ ಸಂಗೀತಾಭ್ಯಾಸ, ಬಿರುಕು, ಹಯವದನ, ಕಾಕನಕೋಟೆ, ತುಘಲಕ್ ಮುಂತಾದ ನಾಟಕಗಳಿಗೆ, ಶ್ರೀಸಾಮಾನ್ಯ, ತಿರುಗುಬಾಣ, ಗೆಳತಿ, ಓ ಬೆಳಕೆ, ಆಫೀಸಾಯಣ, ಮಾಯಾಮೃಗ, ಮನ್ವಂತರ, ಮುಕ್ತ, ಮಿಂಚು ಮುಂತಾದ ಟಿ.ವಿ. ಧಾರಾವಾಹಿಗಳಿಗೆ ನೀಡಿದ ವಿಶಿಷ್ಟ ರಾಗ ಸಂಯೋಜನೆ, ಸಂಗೀತ ನಿರ್ದೇಶನ. ಆಸ್ಫೋಟ, ಶಿಶುನಾಳ ಷರಿಫ್, ಮೈಸೂರು ಮಲ್ಲಿಗೆ, ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ನಾಗಮಂಡಲ, ಮತದಾನ, ಸಿಂಗಾರವ್ವ ಮುಂತಾದ ೨೨ ಚಲನಚಿತ್ರಗಳಲ್ಲಿ ೧೩ ಚಲನಚಿತ್ರಗಳಿಗೆ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ. ಸ್ಪಂದನ, ಚಿನ್ನಾರಿ ಮುತ್ತ ಚಲನಚಿತ್ರಕ್ಕೆ ರಾಜ್ಯ ಪ್ರಶಸ್ತಿ, ಮೈಸೂರು ಮಲ್ಲಿಗೆ ಚಲನಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಅಲ್ಲದೆ ಧ್ವನಿಸುರಳಿ ಬಿಡುಗಡೆ. ಮನುಜಮತ ವಿಶ್ವಪಥ, ಸಾವಿರಗಾಯಕ ಗಾಯಕಿಯರ ಸಮೂಹಗಾನದ, ಅರಮನೆ ಮೈದಾನದಲ್ಲಿ ಲಕ್ಷ ಶೋತೃಗಳ ಮುಂದೆ ಕನ್ನಡವೇ ಸತ್ಯ ಕಾರ್ಯಕ್ರಮ ನೀಡಿದ ಕೀರ್ತಿ. ವಿದೇಶದಲ್ಲೂ ನೀಡಿದ ಸುಗಮ ಸಂಗೀತ ಕಾರ್ಯಕ್ರಮಗಳು. ನಾಟಕ ಅಕಾಡಮಿ ಫೆಲೋಷಿಪ್, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಸಂತ ಶಿಶುನಾಳ ಷರಿಫ ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ ಪ್ರಶಸ್ತಿ ಮೊದಲ್ಗೊಂಡು ಹಲವಾರು ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು : ಕಲ್ಲೂರು ಶ್ರೀನಿವಾಸ್ – ೧೯೫೫ ರಂಗಧಾಮಯ್ಯ – ೧೯೫೫ ಚಂದ್ರಶೇಖರ್ ವಿ.ಆರ್. – ೧೯೫೯

* * *