Loading Events

೧೫.೦೮.೧೯೪೦ ಹಿಂದೂಸ್ತಾನಿ ಸಂಗೀತದ ಬಾನ್ಸುರಿ ವಾದನದಲ್ಲಿ ಪ್ರಖ್ಯಾತರೆನಿಸಿರುವ ವೆಂಕಟೇಶ ಗೋಡಕಿಂಡಿಯವರು ಹುಟ್ಟಿದ್ದು ಧಾರವಾಡ. ತಂದೆ ರಾಮಚಂದ್ರ ಕುಲಕರ್ಣಿ, ತಾಯಿ ಅನಸಕ್ಕ. ಓದಿದ್ದು ಅರ್ಥಶಾಸ್ತ್ರದ ಬಿ.ಎ. ಸಂಗೀತ ಗಾಯನ, ಹಾರ್ಮೋನಿಯಂ ವಾದನದಲ್ಲಿ ಪಡೆದ ಪರಿಣತಿ. ಹಾರ್ಮೋನಿಯಂ ವಾದಕರಾಗಿ ಹಿಂದೂಸ್ಥಾನಿ ಸಂಗೀತದ ದಿಗ್ಗಜರಿಗೆಲ್ಲಾ ನೀಡಿದ ಸಹಕಾರ. ಕೊಳಲು ವಾದನದತ್ತ ಆಕರ್ಷಿತರಾಗಿ ಏಕಲವ್ಯನಂತೆ ಅಭ್ಯಾಸ. ತಾವೇ ವಿನ್ಯಾಸಗೊಳಿಸಿ ತಯಾರಿಸುತ್ತಿರುವ ಕೊಳಲು ವಾದ್ಯಗಳು. ಧಾರವಾಡದ ಆಕಾಶವಾಣಿಯಲ್ಲಿ ಉದ್ಯೋಗ. ಯುವವಾಣಿ, ಪರಾಗ , ಮುಂತಾದ ವಿನೂತನ ಕಾರ್ಯಕ್ರಮ ನಿರೂಪಿಸಿ ಪಡೆದ ಖ್ಯಾತಿ, ಉದ್ಘೋಷಕರಾಗಿ, ಸಂಗೀತ ಸಂಯೋಜಕರಾಗಿ, ಆಕಾಶವಾಣಿ ಕೇಂದ್ರದ ನಿರ್ದೇಶಕರವರೆಗೂ ಹಂತ ಹಂತವಾಗಿ ಮೇಲೇರಿ ಹೈದರಾಬಾದ್‌, ಮುಂಬಯಿ, ಗೋವಾ ಮುಂತಾದೆಡೆ ಸಲ್ಲಿಸಿದ ಸೇವೆ. ಸಂಗೀತ, ನಾಟಕ ಎಲ್ಲ ಪ್ರಕಾರಗಳಲ್ಲೂ ಆಕಾಶವಾಣಿಗೆ ತಂದ ಹೊಸ ಕಳೆ. ವೃತ್ತಿ ರಂಗಭೂಮಿ ಕಲಾವಿದರನ್ನು ಕರೆಸಿ, ಅದೇ ಹಾಡುಗಳನ್ನು ಉದಯೋನ್ಮುಖರಿಂದ ಹಾಡಿಸಿ ಆಕಾಶವಾಣಿ ಭಂಡಾರಕ್ಕೆ ದಾಖಲೆಗಳ ಸಂಗ್ರಹ, ಹೋದೆಡೆಯಲ್ಲೆಲ್ಲಾ ಹೊಸ ಕಾರ್ಯಕ್ರಮಗಳನ್ನು ನಿರ್ಮಿಸಿ ಪಡೆದ ಜನ ಮೆಚ್ಚುಗೆ. ಕರ್ನಾಟಕ ಸಂಗೀತ ನಾಟಕ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ೧೯೯೯ ರ ಗಮಕ ಕಲಾ ಸಮ್ಮೇಳನದಲ್ಲಿ ಗೌರವ, ಸ್ಕೂಲ್‌ ಆಫ್‌ ಆರ್ಟ್ಸ್ ಧಾರವಾಡ, ಲಕ್ಕುಂಡಿ ಉತ್ಸವ, ಪಂಚಾಕ್ಷರಿ ಗವಾಯಿಗಳ ಸ್ಮರಣ ಸಂದರ್ಭ, ಹಂಪಿ ಉತ್ಸವ ಮುಂತಾದೆಡೆಯಲ್ಲೆಲ್ಲಾ ಸನ್ಮಾನ ಪ್ರಶಸ್ತಿಗಳು. ಹಿರಿಯ ಮಗ ಕಿರಣ ತಬಲ ವಾದನದಲ್ಲಿ ಪ್ರಖ್ಯಾತಿ ಪಡೆದಿದ್ದರೆ, ಕಿರಿಯ ಮಗ ಪ್ರವೀಣ್‌ ಕೊಳಲು ವಾದನದಲ್ಲಿ ತಂದೆಯನ್ನು ಮೀರಿಸಿದ ಪ್ರತಿಭೆ.   ಇದೇ ದಿನ ಹುಟ್ಟಿದ ಕಲಾವಿದರು ಅಲಮೇಲು ಬಿ. ಆರ್ – ೧೯೩೩ ಪ್ರೇಮಾ ಕಾರಂತ್‌ – ೧೯೩೬ ಫಕೀರಪ್ಪ  ಎಚ್‌ – ೧೯೩೮ ಲಲಿತಾ ನವಿಲೆ – ೧೯೪೪ ಉಮಾ ಗೋಪಾಲಸ್ವಾಮಿ – ೧೯೪೮

* * *