Loading Events

೨೮.೧೦.೧೯೫೩ ರಂಗಭೂಮಿಯ ನಾಟಕ ಸ್ಪರ್ಧೆಗಳ ಮೂಲಕ ನಿರಂತರ ನಾಟಕಗಳನ್ನೇರ‍್ಪಡಿಸಿ ಗಿನ್ನಿಸ್‌ ದಾಖಲೆಗೆ ಪ್ರಯತ್ನಿಸಿದ ವಿಜಯರಾವ್‌ ಹುಟ್ಟಿದ್ದು ಹೊಸಕೋಟೆಯಲ್ಲಿ. ಪ್ರಾರಂಭಿಕ ಶಿಕ್ಷಣ ಹೊಸಕೋಟೆ. ನಂತರ ಸೇರಿದ್ದು ಎಸ್‌.ಜೆ.ಪಾಲಿಟೆಕ್ನಿಕ್‌. ಶಾಲೆಯಲ್ಲಿದ್ದಾಗಲೇ ನಾಟಕದ ಹುಚ್ಚಿಗೆ ಒಳಗಾಗಿ ‘ತ್ಯಾಗಿ’ ನಾಟಕದಲ್ಲಿ ಹುಡುಗಿಯ ಪಾತ್ರದ ಮೂಲಕ ರಂಗಭೂಮಿ ಪ್ರವೇಶ. ಡಿಪ್ಲೊಮ ಪಡೆದು ಉದ್ಯೋಗಕ್ಕೆ ಸೇರಿದ್ದು ಮೈಕೊ ಕಾರ್ಖಾನೆ. ಕಾರ್ಖಾನೆಯ ಲಲಿತ ಕಲಾ ಸಂಘದ ಸದಸ್ಯರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ. ಪ್ರಖ್ಯಾತ ರಂಗ ನಿರ್ದೇಶಕ ನಾಗಾಭರಣರ ಗಮನಕ್ಕೆ ಬಂದು ಮೃಚ್ಛಕಟಿಕ ನಾಟಕದಲ್ಲಿ ದೊರೆತ ಪಾತ್ರ. ಇಲ್ಲಿಂದ ಏರು ಮೆಟ್ಟಲಾಗಿ ಹಲವಾರು ಪ್ರಸಿದ್ಧ ನಿರ್ದೇಶಕರ ನಾಟಕಗಳಲ್ಲಿ ದೊರೆತ ಪಾತ್ರ. ಸಿ.ಜಿ.ಕೃಷ್ಣಸ್ವಾಮಿಯವರ ನಿರ್ದೇಶನದ ಭುಟ್ಟೋ, ಆರ್‌. ನಾಗೇಶ್‌ ನಿರ್ದೇಶನದ ಆಸ್ಫೋಟ, ಬೆನಕ ತಂಡಕ್ಕೆ ಸೇರಿ ಸತ್ತವರ ನೆರಳು, ಜೋಕುಮಾರಸ್ವಾಮಿ, ತದ್ರೂಪಿ ನಾಟಕಗಳಲ್ಲಿ ದೊರೆತ ಪಾತ್ರಗಳು, ಹಲವಾರು ತಂಡಗಳೊಂದಿಗೆ ಸಂಪರ್ಕ. ಸೂತ್ರಧಾರ ತಂಡದೊಂದಿಗೆ ಹಲವಾರು ನಾಟಕಗಳಲ್ಲಿ ಅಭಿನಯ. ಚೈತ್ರಕಲಾ ನಿಕೇತನ ತಂಡದ ಸ್ಥಾಪನೆ. ರಂಗ ಗಂಗೋತ್ರಿ ತಂಡದೊಂದಿಗೆ ಭಾರತದ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಂಡ ಜೋಕುಮಾರಸ್ವಾಮಿ, ಈಡಿಪಸ್‌, ಅಲಾಮನ ಅದ್ಭುತ ನ್ಯಾಯ ಮುಂತಾದ ನಾಟಕಗಳಲ್ಲಿ ನಟ. ೧೯೯೦ ರಲ್ಲಿ ಚೈತ್ರ ಕಲಾ ಕೇತನ ತಂಡದ ಮೂಲಕ ರಾಜ್ಯಮಟ್ಟದ ನಾಟಕ ಸ್ಫರ್ಧೆಗಳ ಆಯೋಜನೆ. ರಾಜಧಾನಿ ದೆಹಲಿಯಲ್ಲಿ ಕನ್ನಡ ಸಂಘದ ಆಶ್ರಯದಲ್ಲಿ ೩೦ ಘಂಟೆಗಳ ನಿರಂತರ ನಾಟಕಗಳನ್ನು ಪ್ರದರ್ಶಿಸಿ ಗಿನ್ನಿಸ್‌ ದಾಖಲೆಗಾಗಿ ಮಾಡಿದ ಪ್ರಯತ್ನ. ಇದೊಂದು ರಂಗ ಭೂಮಿಯ ಅನನ್ಯ ಪ್ರಯತ್ನ. ಹಲವಾರು  ಸಂಘ ಸಂಸ್ಥೆಗಳಿಂದ ದೊರೆತ ಸನ್ಮಾನ.     ಇದೇದಿನಹುಟ್ಟಿದಕಲಾವಿದ: ಭೀಮಪ್ಪಚೆಟ್ಟಿ – ೧೯೨೨

* * *