Loading Events

೫-೧೧-೧೯೧೪ ೧೦-೧-೨೦೦೭ ಪ್ರೊ. ಯು.ಎಸ್. ಕೃಷ್ಣರಾವ್ ಹುಟ್ಟಿದ್ದು ಉತ್ತರ ಕನ್ನಡದ ಮಲ್ಲಾಪುರದಲ್ಲಾದರೆ ಈ ಕೃಷ್ಣರಾವ್ ಹುಟ್ಟಿದ್ದು ಉಡುಪಿಯ ಸಮೀಪದ ಉಚ್ಚಲದಲ್ಲಿ. ತಂದೆ ಸುಬ್ಬರಾಯರು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಕನ್ನಡ ಪಂಡಿತರಾಗಿದ್ದ ಎಂ.ಎನ್. ಕಾಮತ್‌ರವರ ಪ್ರೋತ್ಸಾಹದಿಂದ ನಾಟಕಗಳಲ್ಲಿ ಅಭಿನಯ. ನೃತ್ಯ ಕಲಾವಿದರಾಗಿದ್ದ ಕೆ.ಕೆ. ಶೆಟ್ಟಿಯವರು ಮಂಗಳೂರಿಗೆ ಬಂದ ಸಮಯದಲ್ಲಿ ಅವರಿಂದ ಪ್ರೇರಿತರಾಗಿ ಪಡೆದ ನೃತ್ಯ ಶಿಕ್ಷಣ. ಶಾಲಾ ಇನ್‌ಸ್ಪೆಕ್ಟರಾಗಿದ್ದ ಮಹಾಲಿಂಗಂ ರವರಿಂದ ಕಲಿತ ಕಥಕ್ಕಳಿ, ತಾವು ಕಲಿತದ್ದಲ್ಲದೆ ಪಾಲಕರ ಮನೆಗೆ ಹೋಗಿ ಪ್ರೇರೇಪಿಸಿ ವಿದ್ಯಾರ್ಥಿಗಳಿಗೂ ಕಲಿಸಿದ ನೃತ್ಯ. ಕದ್ರಿಯಲ್ಲಿ ಕಲಾ ಅಧ್ಯಾಪಕರಾಗಿ ಸಲ್ಲಿಸಿದ ಸೇವೆ. ಮನೆಯಲ್ಲೇ ನೃತ್ಯ ವಿದ್ಯಾಲಯ ಸ್ಥಾಪಿಸಿ ಸಾವಿರಾರು ಶಿಷ್ಯರಿಗೆ ನೀಡಿದ ನೃತ್ಯ ಶಿಕ್ಷಣ. ಮಂಗಳೂರು, ಬೆಂಗಳೂರು, ಮೈಸೂರು, ಮುಂಬಯಿ, ದೆಹಲಿ ಮುಂತಾದೆಡೆ ನೀಡಿದ ನೃತ್ಯ ಕಾರ್ಯಕ್ರಮ. ಧರ್ಮಸ್ಥಳದ ಮಂಜಯ್ಯ ಹೆಗಡೆ, ಜಯಚಾಮರಾಜೇಂದ್ರ ಒಡೆಯರ್ ಕಾಮರಾಜನಾಡಾರ್ ನೆಹರು ಸಮ್ಮುಖದಲ್ಲಲ್ಲದೆ, ಯುದ್ಧನಿಧಿ, ಸಂಘ ಸಂಸ್ಥೆಗಳಿಗಾಗಿ ಸಹಾಯಾರ್ಥ ನೃತ್ಯ ಕಾರ್ಯಕ್ರಮಗಳು. ರಾಷ್ಟ್ರಪತಿ ಭವನದಲ್ಲಿ ರಾಧಾಕೃಷ್ಣನ್‌ರವರ ಸಮುಖದಲ್ಲಿ ನೀಡಿದ ನೃತ್ಯಕ್ಕೆ ರಾಷ್ಟ್ರಪತಿಗಳಿಂದ ಮೆಚ್ಚುಗೆ, ನಗದು ಬಹುಮಾನ, ಪ್ರಶಸ್ತಿಪತ್ರ, ಶಿಕ್ಷಣ ಕ್ಷೇತ್ರದ ಸೇವೆಗಾಗಿ ರಾಜ್ಯಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ನೃತ್ಯರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ರಾಜ್ಯದ ಪ್ರತಿಷ್ಠಿತ ‘ನಾಟ್ಯರಾಣಿ ಶಾಂತಲ ಪ್ರಶಸ್ತಿ’ ಮುಂತಾದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಮಧುಗಿರಿ ರಾಮು – ೧೯೧೯ ಯಲ್ಲಪ್ಪ ಅಮರಗೋಳ – ೧೯೩೪ ಪ್ರಭಾಕರ ಸಾತಖೇಡ – ೧೯೪೬ ಮಾಲಾಬಾಯಿ ಬೀಳಗಿ – ೧೯೫೨