Loading Events
  • This event has passed.

೨೮..೧೮೬೫ ೧೭..೧೯೬೯ ‘ಬ್ರೋಚೆವಾರೆವರುರಾ….’ ಕೃತಿ ರಚನಕಾರರಾದ ವಾಸುದೇವಾಚಾರ್ಯರು ಹುಟ್ಟಿದ್ದು ಮೈಸೂರು. ತಂದೆ ಸುಬ್ರಹ್ಮಣ್ಯಾಚಾರ್ಯ, ತಾಯಿ ಕೃಷ್ಣಾಬಾಯಿ, ಮೂರು ವರ್ಷ ತುಂಬುವುದರೊಳಗೆ ತಂದೆ ಪ್ರೀತಿಯಿಂದ ವಂಚಿತರು. ತಾತನಿಗೆ ಹುಡುಗನನ್ನು ಪೋಷಿಸುವ ಜವಾಬ್ದಾರಿ. ಸಂಸ್ಕೃತ ವಿದ್ವಾಂಸರಾಗಿದ್ದ ಪೆರಿಯಾಸ್ವಾಮಿ. ತಿರುಮಲಾಚಾರ್ಯರಲ್ಲಿ ಸಂಸ್ಕೃತ ಶಿಕ್ಷಣ. ಪ್ರೌಢ ಸಂಸ್ಕೃತಾಭ್ಯಾಸ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ. ಸಂಗೀತದತ್ತ ಒಲಿದ ಮನಸ್ಸು. ಗೌರವಸ್ಥ ಮನೆತನದವರು ಕಲಿಯಬಾರದೆಂದು ಹಿರಿಯರ ಕಟ್ಟಾಜ್ಞೆ. ಶಾಲೆಯಲ್ಲಿ ಚೀಟಿ ಬರೆದು ಪಠ್ಯವಿಷಯ ಆಯ್ದುಕೊಂಡಾಗ ಬಂದದ್ದು ಸಂಗೀತ ಮತ್ತು ಸಂಸ್ಕೃತ. ಪಟ್ಣಂ ಸುಬ್ರಹ್ಮಣ್ಯ ಅಯ್ಯರ್‌ ರವರ ಸಂಗೀತ ಕೇಳುವ ಸುಯೋಗ. ಸಂಗೀತ ಕಲಿಯ ಬೇಕೆಂದು ಆಸೆ ಪಟ್ಟಾಗ ಚಾಮರಾಜ ಒಡೆಯರಿಗೆ ವಿಷಯ ತಿಳಿದು ಮಾಡಿದ ಏರ‍್ಪಾಡು. ತಿರುವಯ್ಯಾರಿಗೆ ತೆರಳಿ ಆರು ವರ್ಷ ಕಾಲ ಸುಬ್ರಹ್ಮಣ್ಯ ಅಯ್ಯರ್‌ ರವರಲ್ಲಿ ಶಿಷ್ಯವೃತ್ತಿ. ಜೊತೆಗೆ ಕಲಿತದ್ದು ಕೃತಿ ರಚನೆ. ಸಂಸ್ಕೃತ ಶ್ಲೋಕಗಳ ರಸವತ್ತಾದ ಹಾಡುಗಾರಿಕೆ. ತೆಲುಗು ಮತ್ತು ಸಂಸ್ಕೃತದಲ್ಲಿ ಹಲವಾರು ಕೃತಿಗಳ ರಚನೆ. ರಚಿಸಿದ್ದು ನೂರ ನಲವತ್ತು ಕೃತಿಗಳು. ಎರಡು ಭಾಗಗಳಲ್ಲಿ ಪ್ರಕಟ. ವಾಸುದೇವ ‘ಕೀರ್ತನ ಮಂಜರಿ’ಯಲ್ಲಿ ಕೇಶವಾದಿ ದ್ವಾದಶನಾಮ ಕೃತಿಗಳು. ೨ನೇ ಭಾಗ- ಸಂಕರ್ಷಣಾದಿ ದ್ವಾದಶನಾಮಗಳು. ತ್ಯಾಗರಾಜರ ಪರಂಪರೆಗೆ ಸೇರಿರುವುದರಿಂದ ಸಂಪ್ರದಾಯ ಶುದ್ಧತೆ, ಭಾವಗಳು ರಚನೆಯ ಪ್ರಮುಖ ಅಂಶ. ಕನ್ನಡದಲ್ಲಿ ಕೃತಿ ರಚಿಸಿದ್ದು ಕಡಿಮೆ. ಇದಲ್ಲದೆ ಮೈಸೂರು ಸದಾಶಿವರಾಯರ ಕೃತಿಗಳು, ನಾ ಕಂಡ ಕಲಾವಿದರು, ಪಟ್ಣಂ ಸುಬ್ರಹ್ಮಣ್ಯ ಅಯ್ಯರ್‌, ನವರತ್ನ ರಾಗ ಮಾಲಿಕ, ವಾಲ್ಮೀಕಿ ರಾಮಾಯಣ, ಕರ್ನಾಟಕ ಸಂಗೀತದ ಲಕ್ಷಣ ಭಾಗ, ನೆನಪುಗಳು ಪುಸ್ತಕ ಪ್ರಕಟಣೆ. ವಾಸುದೇವ ಕೀರ್ತನ ಮಂಜರಿ ಸ್ವದೇಶ ಮಿತ್ರನ್ ರವರಿಂದ ತಮಿಳಿಗೂ ಭಾಷಾಂತರ. ಮದರಾಸಿನ ಅಡೆಯಾರಿನ ಕಲಾಕ್ಷೇತ್ರದಲ್ಲಿ ರುಕ್ಮಿಣಿದೇವಿ ಅರುಂಡೇಲರ ಆಹ್ವಾನದಂತೆ ಸಂಸ್ಥೆಯ ಉಪಾಧ್ಯಕ್ಷರಾಗಿ, ವಾಲ್ಮೀಕಿ ರಾಮಾಯಣದ ಭಾಗಗಳನ್ನುಪಯೋಗಿಸಿಕೊಂಡು ಹಲವಾರು ನೃತ್ಯ ನಾಟಕಗಳಿಗೆ ಮಾಡಿದ ರಾಗ ಸಂಯೋಜನೆ, ರುಕ್ಮಿಣಿದೇವಿ ಯವರ ನೇತೃತ್ವದಲ್ಲಿ ಪ್ರದರ್ಶಿಸಿದ ನೃತ್ಯ ನಾಟಕಗಳು. ಬಂದ ಪ್ರಶಸ್ತಿ ಬಹುಮಾನಗಳಿಗೆ ಲೆಕ್ಕವಿಲ್ಲ. ಜಲಂಧರ್‌ ಸಂಗೀತ ಸಮ್ಮೇಳನದಲ್ಲಿ ಬಹುಮಾನ, ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸಂಗೀತ ಶಾಸ್ತ್ರ ರತ್ನ, ಮದರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ, ಜಯಚಾಮರಾಜ ಒಡೆಯರಿಂದ ಸಂಗೀತ ಶಾಸ್ತ್ರ ವಿಶಾರದ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರ ಪ್ರಶಸ್ತಿ, ಭಾರತ ಸರಕಾರದ ಪದ್ಮಭೂಷಣ ಮುಖ್ಯವಾದುವುಗಳು.

* * *