Loading Events

೨೬-೧೨-೧೯೪೦ ಸಾಹಿತಿ, ಪ್ರಾಧ್ಯಾಪಕಿಯಾದ ಮಾಲತಿ ಪಟ್ಟಣ ಶೆಟ್ಟಿಯವರು ಹುಟ್ಟಿದ್ದು ಕೊಲ್ಹಾಪುರ. ತಂದೆ ಶಾಂತೇಶ ಬಸವಣ್ಣೆಪ್ಪ ಕೋಟೂರ, ತಾಯಿ ಶಿವಗಂಗಾ. ವಿದ್ಯಾಭ್ಯಾಸ ಧಾರವಾಡದಲ್ಲಿ. ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿ. ಬೆಳಗಾವಿಯ ರಾಣಿ ಪಾರ್ವತಿದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಬೋಧನ ವೃತ್ತಿ ಪ್ರಾರಂಭ. ನಂತರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ. ರಾಜ್ಯ ಸಾಹಿತ್ಯ ಅಕಾಡಮಿ, ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ‍್ಯಾಧ್ಯಕ್ಷೆಯಾಗಿ, ವಿದ್ಯಾವರ್ಧಕ ಸಂಘದ ಮಂಗಳಾಮಂಟಪದ ಕಾರ‍್ಯಾಧ್ಯಕ್ಷೆಯಾಗಿ, ಎಲ್.ಐ.ಸಿ.ಯ ಧಾರವಾಡ ಮಹಿಳಾ ಉದ್ಯೋಗಿಗಳ ದೌರ್ಜನ್ಯ ನಿಯಂತ್ರಕ ಕಮಿಟಿಯ ಸದಸ್ಯೆಯಾಗಿ ನಿರ್ವಹಿಸಿದ ಕಾರ‍್ಯಗಳು. ದೂರದರ್ಶನ ಆಕಾಶವಾಣಿಯಲ್ಲಿ ಕವಿಗೋಷ್ಠಿ, ಭಾಷಣ, ಸಂದರ್ಶನಗಳು ಪ್ರಸಾರ. ಹಲವಾರು ಕೃತಿಗಳು ಪ್ರಕಟಿತ. ಕಾವ್ಯ-ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ದಾಹ ತೀರ, ಮೌನ ಕರಗುವ ಹೊತ್ತು, ಇತ್ತೀಚಿನ ಕವಿತೆಗಳು, ಹೂದಂಡೆ (ಆಯ್ದ ಕವಿತಾ ಸಂಗ್ರಹ). ಕಥಾಸಂಗ್ರಹ-ಇಂದು ನಿನ್ನಿನ ಕಥೆಗಳು, ಸೂರ್ಯ ಮುಳುಗುವುದಿಲ್ಲ. ವಿಮರ್ಶೆ-ಬಸವರಾಜ ಕಟ್ಟೀಮನಿಯವರ ಬದುಕು ಬರೆಹ. ಸಂಪಾದಿತ-ಸಾಹಿತ್ಯ ಅಕಾಡಮಿಗಾಗಿ ಕಾವ್ಯ ಸಂಗ್ರಹ, ಪ್ರಶಾಂತ (ಶಾಂತಾದೇವಿ ಮಾಳವಾಡರ ಷಷ್ಟ್ಯಬ್ದಿ ಗ್ರಂಥ) ಪ್ರಕಟಣೆಗಾಗಿ ಕಾದಿರುವ ಹಲವಾರು ಕೃತಿಗಳು. ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ ಅನಾಮಿಕ ದತ್ತಿ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ, ಗುಲಬರ್ಗಾದ ಮಾಣಿಕ್ ಬಾಯಿ ಪಾಟೀಲ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾದೇಸಾಯಿ ಕಾವ್ಯ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೊರೂರ ಸಾಹಿತ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿ : ಟಿ.ಎನ್. ಮಹಾದೇವಯ್ಯ – ೧೯೧೪