Loading Events
  • This event has passed.

೧೪.೭.೧೯೬೪ ನಟ, ನಿರ್ದೇಶಕ, ಸಂಘಟಕರಾಗಿ ರಂಗಭೂಮಿಯ ಅತಿಪ್ರಮುಖ ವ್ಯಕ್ತಿ ಎನಿಸಿರುವ ಮಂಡ್ಯರಮೇಶ್ ರವರು ಹುಟ್ಟಿದ್ದು ನಾಗಮಂಗಲ. ತಂದೆ ಎನ್‌. ಸುಬ್ರಹ್ಮಣ್ಯ, ತಾಯಿ ನಾಗಲಕ್ಷ್ಮೀ. ಓದಿದ್ದು ಬಿ.ಎಸ್ಸಿ ಪದವಿ. ಬೆಳೆದದ್ದು ರಂಗಭೂಮಿಯ ಒಡನಾಟದಲ್ಲಿ. ನಿನಾಸಂ ನಾಟಕಶಾಲೆಯಲ್ಲಿ ಪದವಿ, ರಂಗಾಯಣದ ಕಲಾವಿದರಾಗಿ ಪಡೆದ ಅನುಭವ. ಮಂಕ, ಮಂಡ್ಯದ ಗೆಳೆಯರ ಬಳಗ, ಮಾಂಡವ್ಯ ಕಲಾ ಸಂಘ, ವೇದಿಕೆ ಮುಂತಾದ ಹಲವಾರು ಸಂಘ ಸಂಸ್ಥೆಗಳೊಡನಾಟ, ಮೈಸೂರಿನ ನಟನ ನಾಟಕಶಾಲೆ, ಸಂಸ್ಥಾಪಕ, ಮುಖ್ಯಸ್ಥರಾಗಿ ಹೊತ್ತ ಜವಾಬ್ದಾರಿ. ದೇಸಿ ಶೈಲಿಯ ‘ನಟನರಂಗ ಮಂಟಪದ’ ರೂವಾರಿ. ನಿನಾಸಂ ತಿರುಗಾಟಯೋಜನೆ, ಕೊಡಗಿನ ಪ್ರಾದೇಶಿಕ ರೆಪರ್ಟರಿಯ ಸ್ಥಾಪಕ, ನಿರ್ದೇಶಕರಾಗಿ, ರಾಜ್ಯ, ಹೊರರಾಜ್ಯಗಳಾದ ಭೂಪಾಲ್‌, ದೆಹಲಿಯ ಅಂತಾರಾಷ್ಟ್ರೀಯ ನಾಟಕೋತ್ಸವಗಳಲ್ಲಿ ನಟರಾಗಿ, ತಂತ್ರಜ್ಞರಾಗಿ, ಮಂಡ್ಯದ ರಂಗಚಳುವಳಿಯ ನಟ, ನಿರ್ದೇಶಕ, ಸಂಘಟಿಕರಾಗಿ ಕಾರ್ಯನಿರ್ವಹಣೆ. ರಂಗಾಯಣ ತಂಡದೊಂದಿಗೆ ನ್ಯೂಯಾರ್ಕ್‌, ಜರ್ಮನಿ, ಆಸ್ಟ್ರಿಂಗಳಲ್ಲಿ ನಾಟಕ ಪ್ರದರ್ಶನ. ನಾಗಮಂಗಲ ಕನ್ನಡ ಸಂಘ ಮುಂತಾದುವುಗಳಿಗಾಗಿ ಮಣ್ಣಿನ ಗಾಡಿ, ಡಾ. ಸಿದ್ರಾಜು ಸಾಹೇಬರು ಬರುತ್ತಿದ್ದಾರೆ, ಅಗ್ನಿ ಮತ್ತು ಮಳೆ, ಮಾರನಾಯಕ, ಈ ಕೆಳಗಿನವರು ನಾಟಕಗಳ ಪ್ರದರ್ಶನ. ಜನುಮದ ಜೋಡಿ ಮೂಲಕ ಚಿತ್ರರಂಗ ಪ್ರವೇಶ. ೭೫ ಕ್ಕೂ ಹೆಚ್ಚು ಚಲನಚಿತ್ರಗಳು; ಜನನಿ, ಮನೆತನ, ಫೋಟೋಗ್ರಾಫರ್ ಪರಮೇಶಿ ಮುಂತಾದ ಧಾರಾವಾಹಿಗಳ ನಟ. ಉಡುಪಿಯ ರಂಗಭೂಮಿ ನಾಟಕಸ್ಪರ್ಧೆ (೩ ಬಾರಿ) ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಚಲನಚಿತ್ರ ಪ್ರೇಮಿಗಳ ಸಂಘದ ಉದಯೋನ್ಮುಖ ನಟ ಪ್ರಶಸ್ತಿ, ಉದಯ ಟಿ.ವಿ. ನಾಕೌಟ್‌ ಶ್ರೇಷ್ಠ ಪೋಷಕನಟ ಪ್ರಶಸ್ತಿ, ಈ ಟಿವಿ ಡಾಬರ್ ವಾಟಿಕ ಪ್ರಶಸ್ತಿ ಮುಂತಾದ ಪುರಸ್ಕಾರಗಳು.   ಇದೇ ದಿನ ಹುಟ್ಟಿದ ಕಲಾವಿದರು ಬಾಬುರಾವ್‌ ಬಿ. ದೇಸಾಯಿ – ೧೯೧೬ ಮಂಜುಳ ಬಿ. ಜಾನೆ – ೧೯೬೦ ಅಕ್ಮಲ್‌ ಪಾಷಾ.- ೧೯೬೧ ವಿಶ್ವನಾಥ್‌ ನಾಕೋಡ್‌ – ೧೯೬೧

* * *