Loading Events
  • This event has passed.

೦೪.೦೨.೧೯೩೮ ರಂಗಭೂಮಿಯ ಹಿರಿಯ ಕಲಾವಿದೆ, ದೂರದರ್ಶನ ಧಾರವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿಕ ಪಾತ್ರಧಾರಿ ಎಂದೇ ಪ್ರಸಿದ್ಧರಾಗಿರುವ ಭಾರ್ಗವಿ ನಾರಾಯಣ್ ರವರು ಹುಟ್ಟಿದ್ದು ಬೆಂಗಳೂರು. ತಂದೆ ಡಾ. ಎಂ. ರಾಮಸ್ವಾಮಿ, ತಾಯಿ ನಾಮಗಿರಿಯಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರು. ಮಹಾರಾಣಿ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ. ಇಂಗ್ಲಿಷ್‌ನಲ್ಲಿ ಎಂ.ಎ. ಪದವಿ. ಉದ್ಯೋಗಿಯಾಗಿ ಸೇರಿದ್ದು ಇ.ಎಸ್.ಐ. ಕಾರ್ಪೊರೇಷನ್ನಿನಲ್ಲಿ ವ್ಯವಸ್ಥಾಪಕರ ಹುದ್ದೆ. ೧೯೯೦ರಲ್ಲಿ ಪಡೆದ ಸ್ವಯಂ ನಿವೃತ್ತಿ. ಹೈಸ್ಕೂಲಿನಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ ಬೆಳೆದ ಆಸಕ್ತಿ. ಉಪಾಧ್ಯಾಯಿನಿಯಾಗಿದ್ದ ವಿಮಲಾರವರ ಪ್ರೋತ್ಸಾಹದಂತೆ ಗುಂಪುಕಟ್ಟಿ ನಡೆಸುತ್ತಿದ್ದ ಸಾಂಸ್ಕೃತಿ ಕಾರ್ಯಕ್ರಮಗಳು. ಶಾಲಾ ಕಾಲೇಜುಗಳ ನಾಟಕಗಳಲ್ಲಿ ಪ್ರಮುಖ ಪಾತ್ರವಹಿಸಿದ ನಾಟಕಕ್ಕೆ ಬಹುಮಾನ ಗ್ಯಾರಂಟಿ. ರಾಜ್ಯ ನಾಟಕ ಸ್ಪರ್ಧೆಯಲ್ಲಿ ಎರಡುಬಾರಿ ಪಡೆದ ‘ಉತ್ತಮ ನಟಿ’ ಪ್ರಶಸ್ತಿ. ರಾಜ್ಯಮಟ್ಟದ ಮಕ್ಕಳ ನಾಟಕ ಸ್ಪರ್ಧೆಗಾಗಿ ಬರೆದು ನಿರ್ದೇಶಿಸಿದ ಮಕ್ಕಳ ನಾಟಕ ‘ಭೂತಯ್ಯನ ಪೇಚಾಟ’ ನಾಟಕಕ್ಕೆ ೧೯೭೫ರಲ್ಲಿ ರಾಜ್ಯಮಟ್ಟದ ಪ್ರಶಸ್ತಿ. ೧೯೫೫ರಿಂದಲೂ ಆಕಾಶವಾಣಿಯ ಕಲಾವಿದೆಯಾಗಿ ಭಾಗವಹಿಸಿದ ನಾಟಕಗಳ ಜೊತೆಗೆ ಬರೆದು ನಿರ್ದೇಶಿಸಿದ್ದು ಹಲವಾರು ನಾಟಕಗಳು. ಪ್ರೊಫೆಸರ್ ಹುಚ್ಚೂರಾಯ ಚಲನ ಚಿತ್ರದಲ್ಲಿನ ನಟನೆಗಾಗಿ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ. ಜಿ ಟಿ.ವಿ. ದೈನಿಕ ಧಾರಾವಾಹಿ ಋತುಮಾನಕ್ಕಾಗಿ ರಚಿಸಿದ ಚಿತ್ರಕಥೆ, ಸಂಭಾಷಣೆ, ಬಾಳೇ ಬಂಗಾರ ಕಾರ್ಯಕ್ರಮಕ್ಕೆ ಕ್ರಿಯಾಶೀಲ ಸಲಹೆ ಮಾರ್ಗದರ್ಶನ. ಟಿ.ವಿ. ಧಾರವಾಹಿಗಳಿಗೂ ಬರೆದ ಚಿತ್ರಕತೆ, ಸಂಭಾಷಣೆ, ‘ಕವಲೊಡೆದ ದಾರಿ’ ಧಾರಾವಾಹಿಗಾಗಿ ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿ. ೧೯೯೮ರಲ್ಲಿ ಕರ್ನಾಟಕ ನಾಟಕ ಅಕಾಡಮಿಯಿಂದ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮುಂತಾದುವು. ನಾಟಕ ಅಕಾಡಮಿಯ ಸದಸ್ಯೆಯಾಗಿಯೂ ಸಲ್ಲಿಸಿದ ಸೇವೆ. ರಂಗಭೂಮಿಯಿಂದ ಪಡೆದ ಅನುಭವದಿಂದ ಅವಿಭಕ್ತ ಕುಟುಂಬವನ್ನು ಪ್ರೀತಿಸುವ, ಎಲ್ಲರೊಡನೆ ಬೆರೆತು ಸಂತೋಷಿಸುವ, ಇರದುದರೆಡೆಗೆ ಜೀವ ತುಯ್ಯದೆ, ಇರುವುದರೆಡೆಗೆ ಸಂತೃಪ್ತ ಭಾವ ತಾಳುವ ತೃಪ್ತ ಕಲಾವಿದೆ. ರಂಗಭೂಮಿಯಲ್ಲಿ ಮೇಕಪ್ ನಾಣಿ ಎಂದೇ ಪ್ರಸಿದ್ಧರಾಗಿದ್ದ ಬಿ.ಎನ್. ನಾರಾಯಣ್‌ರವರ ಪತ್ನಿ.   ಇದೇ ದಿನ ಹುಟ್ಟಿದ ಕಲಾವಿದರು : ವೆಂ.ಮು. ಜೋಶಿ – ೧೯೨೬ ಕಾಳೆ ಕೆ.ಬಿ. – ೧೯೨೦ ಸದಾಶಿವಗೌಡ ಸಿದ್ಧ ಗೌಡ – ೧೯೪೨ ಕೆ.ಬಿ. ಕುಲಕರ್ಣಿ – ೧೯೨೦ ಮೀರಾ ಎಚ್.ಎನ್. – ೧೯೫೮ ಮನು ಚಕ್ರವರ್ತಿ – ೧೯೭೭ ಗಣೇಶ ರಾಮಣ್ಣ ಮರೂರ – ೧೯೭೪

* * *