Loading Events
  • This event has passed.

೧೩-೬-೧೮೫೮ ೪-೫-೧೯೫೯ ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಕನ್ನಡಕ್ಕಾಗಿ ದುಡಿದು, ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡಿದ್ದ ಇವರ ಪೂರ್ಣ ಹೆಸರು ಶಿವಮೂರ್ತಿ ಬುದ್ಧಯ್ಯ ಸ್ವಾಮಿ ಮಗಿಪ್ರಭುದೇವ ಪುರಾಣಿಕ. ಹುಟ್ಟಿದ್ದು ಬಿಜಾಪುರ ಜಿಲ್ಲೆಯ ತೇರದಾಳದಲ್ಲಿ. ತಂದೆ ಮಗಿ ಪ್ರಭುದೇವರು, ತಾಯಿ ಲಿಂಗಮ್ಮ. ಮಾತೃಭಾಷೆ ಕನ್ನಡವಾಗಿದ್ದರೂ ತೇರದಾಳ ಆವಾಗ  ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದರಿಂದ ವಿಯಿಲ್ಲದೆ ಕಲಿತದ್ದು ಮರಾಠಿ. ತೇರದಾಳ, ಮುಧೋಳ, ಜಮಖಂಡಿ, ಸೊಲ್ಲಾಪುರ ಹಾಗೂ ಪುಣೆಯಲ್ಲಿ ನಡೆದ ವ್ಯಾಸಂಗ. ಉದ್ಯೋಗಕ್ಕೆ ಆರಿಸಿಕೊಂಡದ್ದು ಉಪಾಧ್ಯಾಯ ವೃತ್ತಿ ಕೆಲಕಾಲ. ನಂತರ ಆರಿಸಿಕೊಂಡ ಹುದ್ದೆ ೧೯೦೪ರಿಂದ ೧೯೨೭ರವರೆವಿಗೂ ಹಲಗಲಿ, ಹುನಗುಂದ, ಸೊನ್ನ, ಗಲಗಲಿ ಮೊದಲಾದ ಪ್ರದೇಶಗಳಲ್ಲಿ ದೇಸಗತಿಗಳ ಆಡಳಿತಗಾರರ ಜವಾಬ್ದಾರಿ. ವಿಶ್ವಾಸಪೂರ್ಣ ಅಕಾರ ಚಲಾವಣೆ, ಪ್ರಾಮಾಣಿಕ ಬದುಕು, ಹಲವಾರು ದೇಸಾಯಿಯವರಿಂದ ಸಂದ ಗೌರವ, ಇನಾಮು, ಸನ್ಮಾನಗಳು. ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡ ಬದುಕು. ಬಿಜಾಪುರ ಜಿಲ್ಲೆಯ ರಾಯಲ್ ಲೀಗಿನ ಸದಸ್ಯರಾಗಿ, ರೆಡ್‌ಕ್ರಾಸ್‌ಗಾಗಿ ನಿ ಕೂಡಿಸಿದರು. ಕೊಲ್ಲಾಪುರದ ವೀರಶೈವ ಬೋರ್ಡಿಂಗ್, ಬಾಗಲಕೋಟೆಯು ವಾರದ ಬೋರ್ಡಿಂಗ್ ಸ್ಥಾಪಕರಲ್ಲೊಬ್ಬರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಭಿವೃದ್ಧಿ, ಬಾದಾಮಿಯ ಶಿವಯೋಗ ಮಂದಿರ, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಸಾಹಿತ್ಯ ಸಮಿತಿ ಮತ್ತು ಈ ಸಮಿತಿಯ ತ್ರೈಮಾಸಿಕ ಪತ್ರಿಕೆಯ ಸಂಪಾದಕ ಮಂಡಲದಲ್ಲಿ ಹೊತ್ತ ಜವಾಬ್ದಾರಿಯುತ ಪಾತ್ರ. ಕಿತ್ತೂರ ರಾಣಿ ಚೆನ್ನಮ್ಮ ಇತಿಹಾಸ ಸಂಶೋಧನಾ ಮಂಡಲದಲ್ಲೂ ಜವಾಬ್ದಾರಿಯುತ ಹುದ್ದೆ. ಕನ್ನಡ, ಮರಾಠಿ, ಇಂಗ್ಲಿಷ್, ಸಂಸ್ಕೃತದಲ್ಲಿ ವಿಶೇಷ ಪಾಂಡಿತ್ಯ. ಕನ್ನಡ ಹಾಗೂ ಮರಾಠಿಯಲ್ಲಿ ಕೃತಿ ರಚನೆ. ಲಿಂಗ ನಿರೀಕ್ಷಣೆ, ಪಾದೋದಕ, ಸ್ತ್ರೀ ಶಿಕ್ಷಣ ಮುಂತಾದ ಲೇಖನ ಮಾಲೆಗಳು ‘ವೀರಶೈವ ಸಂಜೀವಿನಿ’ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡು ಗಳಿಸಿದ ಜನಪ್ರಿಯತೆ. ‘ಸುಖ ಸಾಮ್ರಾಜ್ಯ’ ಎಂಬ ಮರಾಠಿ ಗ್ರಂಥ ೧೯೧೩ರಲ್ಲಿ ಪ್ರಕಟ. ಅಲ್ಲಮಪ್ರಭುವನ್ನು ಕುರಿತ ಸಂಶೋಧನಾತ್ಮಕ ಗ್ರಂಥ. ೧೯೩೬ರಲ್ಲಿ ಪ್ರಕಟಿತ. ನಂತರ ಹರಿಹರೇಶ್ವರ ಕೃತ ಪ್ರಭುದೇವರ ಪುರಾಣವನ್ನು ಸಂಪಾದಿಸಿ, ಶಬ್ದಕೋಶ, ಟೀಕೆ, ಟಿಪ್ಪಣಿಗಳೊಡನೆ ಪ್ರಕಟಿಸಿ ವಿದ್ವತ್ ಪ್ರಪಂಚದಲ್ಲಿ ಗಳಿಸಿದ ಖ್ಯಾತಿ. ಇವರು ಬರೆದ ಹಲವಾರು ಪ್ರೌಢಲೇಖನಗಳು ಪತ್ರಿಕೆಗಳಲ್ಲೂ ಪ್ರಕಟಿತ. ಈ ಲೇಖನಗಳನ್ನು ಎಂ.ಜಿ.ವಿರೂಪಾಕ್ಷನ್ ರವರು ಸಂಗ್ರಹಿಸಿ, ‘ವಿಚಾರ ವಾಹಿನಿ’ ಎಂಬ ಗ್ರಂಥ ೧೯೫೩ರಲ್ಲಿ ಪ್ರಕಟಿಸಿದ್ದಾರೆ. ಬುದ್ಧಯ್ಯ ಪುರಾಣಿಕರು ತೀರಿಕೊಂಡದ್ದು ೧೯೫೯ರ ಮೇ ತಿಂಗಳ ೪ರಂದು.   ಇದೇ ದಿನ ಹುಟ್ಟಿದ ಸಾಹಿತಿಗಳು : ಜ.ಹೋ ನಾರಾಯಣಸ್ವಾಮಿ – ೧೯೪೧ ಸುರೇಶ್ ಅಂಗಡಿ – ೧೯೬೨ ಜಯರಾಮ ಕಾರಂತ – ೧೯೫೮