Loading Events

೩೦.೧೦.೧೯೫೨ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತರಾಗಿರುವ ರಾಧಾಕೃಷ್ಣರವರು ಹುಟ್ಟಿದ್ದು ದಾವಣಗೆರೆ. ತಂದೆ ಬಿ.ವೆಂಕಟಸುಬ್ಬಯ್ಯ, ತಾಯಿ ಎಸ್‌. ಕಮಲಮ್ಮ. ಸಂಗೀತದ ವಾತಾವರಣದ ಮನೆತನ. ಬಾಲ್ಯದಿಂದಲೂ ಸಂಗೀತದಲ್ಲಿ ಬೆಳೆದ ಆಸಕ್ತಿ. ಕರ್ನಾಟಕ ಸಂಗೀತ ವಿದ್ವಾಂಸರಾದ ನಾಗೇಶರಾಯರು, ಇ.ವೆಂ. ಮುನಿವೆಂಕಟಪ್ಪನವರಲ್ಲಿ ಪ್ರಾರಂಭಿಕ ಶಿಕ್ಷಣ. ಹಿಂದೂಸ್ತಾನಿ ಸಂಗೀತದಲ್ಲಿ ಆಸಕ್ತಿ ಬೆಳೆದು ಕೊಲ್ಲಾಪುರದ ಪಂಡಿತ ನಾರಾಯಣರಾವ್‌ ಮಿರಜಕರ್‌ರವರಲ್ಲಿ ಪ್ರಾಥಮಿಕ ಮತ್ತು ಪಂ.ಆರ್‌.ಶೇಷಾದ್ರಿ ಗವಾಯಿಯವರಲ್ಲಿ ಪಡೆದ ಪ್ರೌಢಶಿಕ್ಷಣ. ಭಾರತ ಗಾಂಧರ್ವ ಮಹಾವಿದ್ಯಾಲಯದಿಂದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಪಡೆದ ಪ್ರಥಮದರ್ಜೆ. ಕರ್ನಾಟಕ ಸರಕಾರದ ವಿದ್ವತ್‌ಪರಿಕ್ಷೆಯಲ್ಲಿ ರ‍್ಯಾಂಕ್‌, ಸ್ನಾತಕೋತ್ತರ ಸಂಗೀತ ಪದವಿ. ಆಕಾಶವಾಣಿ ಮತ್ತು ದೂರದರ್ಶನದ ಬಿ. ಹೈ ಶ್ರೇಣಿ ಕಲಾವಿದರು. ಹಲವಾರು ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ, ಭಾವಗೀತೆಗಳ ಗಾಯನ. ಅನೇಕ ಧ್ವನಿಸುರುಳಿಗಳ ಬಿಡುಗಡೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಗೀತ ನೃತ್ಯ ಅಕಾಡಮಿ, ಸಾಹಿತ್ಯ ಅಕಾಡಮಿ ಕಾರ್ಯಕ್ರಮಗಳಲ್ಲಿ ಭಾಗಿ. ಹೊರ ರಾಜ್ಯಗಳಾದ ನವದೆಹಲಿ, ಗೋವಾ, ಮುಂಬಯಿ, ಕೋಲ್ಕತ್ತಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಂಜಾಬ್‌, ಕಾಶಿ, ನೇಪಾಳದಲ್ಲೂ ಕಾರ್ಯಕ್ರಮ ನಡೆಸಿದ ಕೀರ್ತಿ. ಸುಗಮ ಸಂಗೀತದ ಹಲವಾರು ಗಾಯಕರೊಡನೆ ಹಾಡುಗಾರರಾಗಿ, ವಾದ್ಯ ಸಂಗೀತಗಾರರಾಗಿ ನೀಡಿದ ಸಹಕಾರ. ‘ತರಂಗಿಣಿ’ ವಾದ್ಯ ಸಂಗೀತದ ಆವಿಷ್ಕಾರದಿಂದ ಪಡೆದ ಖ್ಯಾತಿ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ, ಹೊಂಬಾಳೆ ಪ್ರತಿಭಾರಂಗ ಸಂಸ್ಥೆಯಿಂದ ಕಲಾಕೋವಿದ, ಪ್ರತಿಷ್ಠಿತ ಪಾಂಡೇಶ್ವರ ಕಾಳಿಂಗರಾವ್‌ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳಿಂದ ದೊರೆತ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು ಕೃಷ್ಣರಾವ್‌ ಡಿ. ಸವಕೂರ -೧೯೧೬ ವಿಂಜುಮುರಿ ರಾಜಗೋಪಾಲ ಅಯ್ಯಂಗಾರ್‌ – ೧೯೩೦

* * *